Ben Stokes Retirement: ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ ಬೆನ್ ಸ್ಟೋಕ್ಸ್ ದಿಢೀರ್ ನಿವೃತ್ತಿ ಘೋಷಣೆ

Ben Stokes Retirement: ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಹಾಗೂ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಬಿಗ್ ಶಾಕ್‌ ನೀಡಿದ್ದಾರೆ. ಹಾಗಾದ್ರೆ ಕಾರಣ ಏನು ಹಾಗೂ ಸಾಧನೆಗಳ ವಿವರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಉತ್ತಮ ನಾಯಕತ್ವ ಹಾಗೂ ಅದ್ಭುತ ಆಟದ ಮೂಲಕ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನ ಚಿತ್ರಣವನ್ನೇ ಬದಲಾಯಿಸಿದ್ದ ಸ್ಟೋಕ್ಸ್ ಅವರ ಈ ನಿರ್ಧಾರ ಅಭಿಮಾನಿಗಳು ಮತ್ತು ಕ್ರಿಕೆಟ್ ದಿಗ್ಗಜರನ್ನ ಆಶ್ಚರ್ಯಗೊಳಿಸಿದೆ. ತಮ್ಮ ನಿವೃತ್ತಿ ನಿರ್ಧಾರದ ಕುರಿತು ಭಾವುಕರಾಗಿ ಮಾತನಾಡಿರುವ ಬೆನ್ ಸ್ಟೋಕ್ಸ್, 'ಮೂರು ಮಾದರಿಯ (ಟೆಸ್ಟ್, ಏಕದಿನ ಮತ್ತು ಟಿ20) ಕ್ರಿಕೆಟ್‌ನಲ್ಲಿ ನಿರಂತರವಾಗಿ ಆಡುವುದು ಪ್ರಸ್ತುತ ಸಂದರ್ಭದಲ್ಲಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ತಮಗೆ ತುಂಬಾ ಕಷ್ಟವಾಗುತ್ತಿದೆ,' ಎಂದು ಹೇಳಿದ್ದಾರೆ.

Ben Stokes Retirement England Test Captain Announces Retirement from International Cricket

ನಿವೃತ್ತಿಗೆ ಕಾರಣ ಏನು?

'ಗಾಯದ ಸಮಸ್ಯೆಗಳು ಮತ್ತು ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯಿಂದಾಗಿ ದೇಹದ ಮೇಲಿನ ಒತ್ತಡ ಹೆಚ್ಚುತ್ತಿದೆ. ಟೆಸ್ಟ್ ಕ್ರಿಕೆಟ್‌ಗೆ ನನ್ನ ನೂರಕ್ಕೆ ನೂರರಷ್ಟು ಶ್ರಮವನ್ನು ನೀಡಲು ಸಾಧ್ಯವಾಗುತ್ತಿಲ್ಲ ಎಂದು ನನಗೆ ಅನಿಸುತ್ತಿದೆ. ಹೀಗಾಗಿ ಬೇರೊಬ್ಬ ಯುವ ಆಟಗಾರನಿಗೆ ಅವಕಾಶ ಮಾಡಿಕೊಡಲು ಇದು ಸೂಕ್ತ ಸಮಯ. ತಾವೊಬ್ಬ ನಾಯಕನಾಗಿ ತಂಡವನ್ನು ಕೊಂಡೊಯ್ದ ರೀತಿಯ ಬಗ್ಗೆ ನನಗೆ ಹೆಮ್ಮೆಯಿದೆ,' ಎಂದು ಅವರು ಹೇಳಿದ್ದಾರೆ.

ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಕೈಜೋಡಿಸಿ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ 'ಬಾಜ್‌ಬಾಲ್' ಎಂಬ ಆಕ್ರಮಣಕಾರಿ ಶೈಲಿಯ ಆಟವನ್ನು ಪರಿಚಯಿಸಿದ ಕೀರ್ತಿ ಬೆನ್ ಸ್ಟೋಕ್ಸ್ ಅವರಿಗೆ ಸಲ್ಲುತ್ತದೆ. ಟೆಸ್ಟ್ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿದ ಇವರ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಹಲವು ಐತಿಹಾಸಿಕ ಜಯಗಳನ್ನು ಸಾಧಿಸಿತ್ತು. ಕಠಿಣ ಪರಿಸ್ಥಿತಿಗಳಲ್ಲೂ ಪಂದ್ಯದ ಗತಿಯನ್ನು ಬದಲಾಯಿಸುವ ಇವರ ನಾಯಕತ್ವದ ಶೈಲಿಗೆ ವಿಶ್ವದಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು.

ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ ವೃತ್ತಿಜೀವನ

ಇಂಗ್ಲೆಂಡ್ ಪರ ಹಲವು ಅದ್ಭುತ ಇನಿಂಗ್ಸ್‌ಗಳನ್ನು ಆಡಿರುವ ಬೆನ್ ಸ್ಟೋಕ್ಸ್, ವಿಶೇಷವಾಗಿ 2019ರ ಆಶಸ್ ಸರಣಿಯ ಹೆಡಿಂಗ್ಲಿ ಟೆಸ್ಟ್‌ನಲ್ಲಿ ಅಜೇಯ ಶತಕ ಬಾರಿಸಿ ತಂಡಕ್ಕೆ ತಂದುಕೊಟ್ಟ ರೋಚಕ ಜಯ ಕ್ರಿಕೆಟ್ ಇತಿಹಾಸದ ಸಾರ್ವಕಾಲಿಕ ಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದಾಗಿದೆ. ಬ್ಯಾಟಿಂಗ್ ಮಾತ್ರವಲ್ಲದೆ ಅತ್ಯುತ್ತಮ ಬೌಲಿಂಗ್ ಹಾಗೂ ಅದ್ಭುತ ಫೀಲ್ಡಿಂಗ್ ಮೂಲಕ ಅವರು ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟ ಕೀರ್ತಿ ಹೊಂದಿದ್ದಾರೆ.

ಬೆನ್ ಸ್ಟೋಕ್ಸ್ ಅವರ ಈ ದಿಢೀರ್ ನಿರ್ಧಾರದಿಂದ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ದೊಡ್ಡ ಆಘಾತವಾಗಿದೆ. ಅವರ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕ ಹಾಗೂ ಆಲ್‌ರೌಂಡರ್ ಹುಡುಕಾಟ ಈಗ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ದೊಡ್ಡ ಸವಾಲಾಗಿದೆ. ಇನ್ನುಂದೆ ಅವರು ಏಕದಿನ ಮತ್ತು ಟಿ20 ಕ್ರಿಕೆಟ್‌ ಹಾಗೂ ವಿವಿಧ ಟಿ20 ಲೀಗ್‌ಗಳತ್ತೆ ತಮ್ಮ ಗಮನ ಹರಿಸಲಿದ್ದಾರೆ ಎನ್ನಲಾಗುತ್ತಿದೆ.

ಬೆನ್ ಸ್ಟೋಕ್ಸ್ ಕ್ರಿಕೆಟ್‌ ಪಯಣ

2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಬೆನ್ ಸ್ಟೋಕ್ಸ್, ಕಳೆದ 15 ವರ್ಷಗಳಲ್ಲಿ ಇಂಗ್ಲೆಂಡ್ ತಂಡದ ಹಲವು ಐತಿಹಾಸಿಕ ಯಶಸ್ಸುಗಳ ರೂವಾರಿಯಾಗಿದ್ದಾರೆ.

* 2019ರ ಏಕದಿನ ವಿಶ್ವಕಪ್‌ ಹಿರೋ: ನ್ಯೂಜಿಲೆಂಡ್ ವಿರುದ್ಧ ಫೈನಲ್ ಪಂದ್ಯದಲ್ಲಿ ಅಜೇಯ 84 ರನ್ ಬಾರಿಸಿ ಪಂದ್ಯವನ್ನು ಸೂಪರ್ ಓವರ್‌ಗೆ ಕೊಂಡೊಯ್ಯುವ ಮೂಲಕ ಇಂಗ್ಲೆಂಡ್ ಮೊದಲ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು.

* ಹೆಡಿಂಗ್ಲಿ ಟೆಸ್ಟ್‌ನಲ್ಲಿ ಅದ್ಭುತ ಆಟ: 2019ರ ಆಶಸ್ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡವನ್ನು ತಮ್ಮ ಅಜೇಯ 135 ರನ್‌ಗಳ ಐತಿಹಾಸಿಕ ಇನಿಂಗ್ಸ್ ಮೂಲಕ ಗೆಲುವಿನ ದಡ ಮುಟ್ಟಿಸಿದ್ದರು.

* 2022ರ ಟಿ20 ವಿಶ್ವಕಪ್ ಗೆಲುವು: ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವವಿನಲ್ಲೂ ಇವರ ಪಾತ್ರ ಪ್ರಮುಖವಾಗಿತ್ತು.

2022 ರಲ್ಲಿ ಜೋ ರೂಟ್ ಅವರಿಂದ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಬೆನ್ ಸ್ಟೋಕ್ಸ್, ಮುಖ್ಯ ಕೋಚ್ ಬ್ರೆಂಡನ್ ಮೆಕಲಮ್ ಅವರೊಂದಿಗೆ ಸೇರಿ 'ಬಾಜ್‌ಬಾಲ್' ಎಂಬ ಆಕ್ರಮಣಕಾರಿ ಆಟದ ಶೈಲಿಯನ್ನು ಪರಿಚಯಿಸಿದರು. ಟೆಸ್ಟ್ ಕ್ರಿಕೆಟ್ ಆಡುವ ಸಾಂಪ್ರದಾಯಿಕ ಶೈಲಿಯನ್ನೇ ಬದಲಾಯಿಸಿದ ಇವರ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ವಿರುದ್ಧ ಭರ್ಜರಿ ಸರಣಿ ಜಯ ದಾಖಲಿಸಿತ್ತು. ಇನ್ನೂ ಅವರ ಈ ದಿಢೀರ್ ನಿರ್ಧಾರ ಇಂಗ್ಲೆಂಡ್ ಟೆಟ್ಸ್‌ ಕ್ರಿಕೆಟ್‌ಗೆ ದೊಡ್ಡ ಆಘಾತ ಆದಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+