Deepti Sharma: 279ನೇ ಪಂದ್ಯದಲ್ಲಿ ವಿಶ್ವದಾಖಲೆ ಮಾಡಿದ ಟೀಮ್ ಇಂಡಿಯಾ ದೀಪ್ತಿ ಶರ್ಮಾ

Deepti Sharma World Record: ಲಾರ್ಡ್ಸ್ ಮೈದಾನದಲ್ಲಿ ಭಾನುವಾರ (ಜೂನ್ 28) ನಡೆದ ಮಹಿಳಾ ಟಿ20 ವಿಶ್ವಕಪ್‌ 2026ರ ನಿರ್ನಾಯಕ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಸೋಲುಭವಿದೆ. ಈ ಮೂಲಕ ಭಾರತದ ಸೆಮಿಫೈನಲ್ ಕನಸು ಭಗ್ನವಾಗಿದೆ. ಸೋತರೂ ಸಹ ಇದೇ ಪಂದ್ಯದ ಮೂಲಕ ದೀಪ್ತಿ ಶರ್ಮಾ ಅವರು ವಿಶ್ವದಾಖಲೆ ಮಾಡಿ ಗಮನ ಸೆಳೆದಿದ್ದಾರೆ.

ಭಾರತದ ಸ್ಟಾರ್ ಮಹಿಳಾ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರು ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಲಾರ್ಡ್ಸ್‌ನಲ್ಲಿ ನಡೆದ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಆಸ್ಟ್ರೇಲಿಯಾ ವಿರುದ್ಧದ ಗ್ರೂಪ್ 'ಎ' ಪಂದ್ಯದಲ್ಲಿ ದೀಪ್ತಿ ಈ ಐತಿಹಾಸಿಕ ಮೈಲಿಗಲ್ಲನ್ನು ತಲುಪಿದ್ದಾರೆ. ಆಸಿಸ್‌ನ ಆರಂಭಿಕ ಆಟಗಾರ್ತಿ ಬೆತ್ ಮೂನಿ ಅವರ ವಿಕೆಟ್ ಪಡೆಯುವ ಮೂಲಕ ಅವರು ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕ ವಿಕೆಟ್ ಕಬಳಿಸಿದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ವಿಶ್ವ ದಾಖಲೆ ಪುಟಕ್ಕೆ ಸೇರಿದ್ದಾರೆ.

Deepti Sharma Creates World Record Becomes Highest Wicket-Taker in Women s International Cricket

ಜೂಲಾನ್ ಗೋಸ್ವಾಮಿ ದಾಖಲೆ ಅಳಿಸಿದ ದೀಪ್ತಿ

ಈ ಪಂದ್ಯಕ್ಕೂ ಮುನ್ನ ಭಾರತದ ಮಾಜಿ ಸ್ಟಾರ್ ಆಟಗಾರ್ತಿ ಜೂಲಾನ್ ಗೋಸ್ವಾಮಿ ಅವರ ಹೆಸರಿನಲ್ಲಿದ್ದ 355 ವಿಕೆಟ್‌ಗಳ ಸಾರ್ವಕಾಲಿಕ ದಾಖಲೆಯನ್ನು ಸರಿಗಟ್ಟಲು ದೀಪ್ತಿಗೆ ಕೇವಲ 1 ವಿಕೆಟ್‌ನ ಅವಶ್ಯಕತೆ ಇತ್ತು. ಆಸ್ಟ್ರೇಲಿಯಾ ತಂಡವು ರನ್ ಬೆನ್ನಟ್ಟುತ್ತಿದ್ದ ವೇಳೆ ಇನಿಂಗ್ಸ್‌ನ 10ನೇ ಓವರ್‌ನ ಮೊದಲ ಎಸೆತದಲ್ಲೇ ಬೆತ್ ಮೂನಿ ಅವರನ್ನು ಔಟ್ ಮಾಡುವ ಮೂಲಕ ದೀಪ್ತಿ ಶರ್ಮಾ ತಮ್ಮ 356ನೇ ವಿಕೆಟ್ ಪಡೆದು ಜೂಲಾನ್ ಗೋಸ್ವಾಮಿ ಅವರ ಸುದೀರ್ಘ ದಾಖಲೆಯನ್ನು ಮುರಿದರು.

279ನೇ ಪಂದ್ಯದಲ್ಲಿ ದೀಪ್ತಿ ವಿಶ್ವದಾಖಲೆ

ಲಾರ್ಡ್ಸ್ ಮೈದಾನದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಈ ಐಸಿಸಿ ಮಹಿಳಾ ಟಿ20 ವಿಶ್ವಕಪ್ 2026ರ ಗ್ರೂಪ್ 'ಎ' ಪಂದ್ಯವು ಭಾರತ ತಂಡದ ಪರ ದೀಪ್ತಿ ಅವರ 279ನೇ ಪಂದ್ಯವಾಗಿದೆ. ಇದರೊಂದಿಗೆ ಅವರು ಈಗ ತಮ್ಮ ಹೆಸರಿನಲ್ಲಿ ಒಟ್ಟು 356 ವಿಕೆಟ್‌ಗಳನ್ನು ಹೊಂದಿದ್ದಾರೆ.

ದೀಪ್ತಿ ಶರ್ಮಾ ಸಾಧನೆಗಳು

ಜೂನ್ 14 ರಂದು ಬರ್ಮಿಂಗ್ಹ್ಯಾಮ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಟಿ20 ವಿಶ್ವಕಪ್ 2026ರ ಆರಂಭಿಕ ಪಂದ್ಯದಲ್ಲಿ 5 ವಿಕೆಟ್‌ಗಳ ಸಾಧನೆ ಮಾಡಿದ್ದ ಆಗ್ರಾ ಮೂಲದ ಈ ಕ್ರಿಕೆಟರ್, ಇದುವರೆಗೆ 6 ಟೆಸ್ಟ್‌ ಪಂದ್ಯಗಳಲ್ಲಿ 22 ವಿಕೆಟ್, 124 ಏಕದಿನ ಪಂದ್ಯಗಳಲ್ಲಿ 166 ವಿಕೆಟ್ ಹಾಗೂ 149 ಟಿ20 ಪಂದ್ಯಗಳಲ್ಲಿ 168 ವಿಕೆಟ್‌ಗಳನ್ನು ಕಬಳಿಸಿದ್ದಾರೆ.

ಮತ್ತೊಂದೆಡೆ ಜುಲಾನ್ ಗೋಸ್ವಾಮಿ ಅವರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಆಡಿದ 284 ಪಂದ್ಯಗಳಿಂದ ಒಟ್ಟು 355 ವಿಕೆಟ್‌ಗಳನ್ನು ಕಬಳಿಸಿ ನಿವೃತ್ತಿ ಹೊಂದಿದ್ದರು. ಅವರು 12 ಟೆಸ್ಟ್‌ ಪಂದ್ಯಗಳಲ್ಲಿ 44, 204 ಏಕದಿನ ಪಂದ್ಯಗಳಲ್ಲಿ 255 ಹಾಗೂ 68 ಟಿ20 ಪಂದ್ಯಗಳಲ್ಲಿ 56 ವಿಕೆಟ್‌ಗಳನ್ನು ಉರುಳಿಸಿದ್ದರು.

ಹೀಗೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯರ ಪಟ್ಟಿಯಲ್ಲಿ ದೀಪ್ತಿ ಮತ್ತು ಜೂಲಾನ್ ಅವರ ನಂತರದ ಸ್ಥಾನಗಳಲ್ಲಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರ್ರಿ (336), ಇಂಗ್ಲೆಂಡ್‌ನ ಕ್ಯಾಥರಿನ್ ಸೈವರ್-ಬ್ರಂಟ್ (335), ಇಂಗ್ಲೆಂಡ್‌ನ ಸೋಫಿ ಎಕ್ಲಿಸ್ಟೋನ್ (333) ಮತ್ತು ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ (323) ಇದ್ದಾರೆ.

ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರಲ್ಲಿ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಪ್ರಶಸ್ತಿ ಗೆದ್ದಿದ್ದ ದೀಪ್ತಿ ಈಗಾಗಲೇ ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಅವರು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಥೈಲ್ಯಾಂಡ್‌ನ ಸ್ಪಿನ್ನರ್ ತಿಪಾಟ್ಚಾ ಪುತ್ತವಾಂಗ್ ಅವರಿಗಿಂತ ಎರಡು ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ. ಪುತ್ತವಾಂಗ್ ಇದುವರೆಗೆ ಆಡಿರುವ 105 ಪಂದ್ಯಗಳಿಂದ 165 ವಿಕೆಟ್‌ಗಳನ್ನು ಪಡೆದೊದ್ದಾರೆ.

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ವಿಕೆಟ್ ಪಡೆದವರು

* ದೀಪ್ತಿ ಶರ್ಮಾ (ಭಾರತ) - 356 ವಿಕೆಟ್‌ಗಳು

* ಜೂಲಾನ್ ಗೋಸ್ವಾಮಿ (ಭಾರತ) - 355 ವಿಕೆಟ್‌ಗಳು

* ಎಲ್ಲಿಸ್ ಪೆರ್ರಿ (ಆಸ್ಟ್ರೇಲಿಯಾ) - 336 ವಿಕೆಟ್‌ಗಳು

* ಕ್ಯಾಥರಿನ್ ಸೈವರ್-ಬ್ರಂಟ್ (ಇಂಗ್ಲೆಂಡ್) - 335 ವಿಕೆಟ್‌ಗಳು

* ಸೋಫಿ ಎಕ್ಲಿಸ್ಟೋನ್ (ಇಂಗ್ಲೆಂಡ್) - 333 ವಿಕೆಟ್‌ಗಳು

* ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ) - 323 ವಿಕೆಟ್‌ಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+