Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ

Oil Price Hike: ಇರಾನ್ ಮೇಲೆ ಇಸ್ರೇಲ್-ಯುಎಸ್ ದಾಳಿ ವೈಮಾನಿಕ ದಾಳಿ ಮುಂದುವರಿದಿದೆ. ಯುದ್ಧವು ಇವತ್ತು ಮಂಗಳವಾರಕ್ಕೆ (ಮಾರ್ಚ್ 3) ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಇದರ ಪರಿಣಾಮವಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗಿದೆ. ಇರಾನ್-ಇಸ್ರೇಲ್ ಮಧ್ಯದಲ್ಲಿರುವ ಹಾರ್ಮುಜ್ ಜಲಸಂಧಿ (Strait of Hormuz) ಮೂಲಕ ತೈಲ ಟ್ಯಾಂಕರ್‌ಗಳು ಸಾಗಿ ಬರುತ್ತವೆ. ಈ ಯುದ್ಧದಿಂದಾಗಿ ಈ ಮಾರ್ಗವನ್ನು ಬಂದ್ ಮಾಡಲಾಗಿದ್ದು, ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಯುದ್ಧದ ಕಾರಣದಿಂದಾಗಿ ರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಸುಮಾರು ಶೇಕಡಾ 9 ರಿಂದ 10ರಷ್ಟು ಹೆಚ್ಚಾಗಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹೊತ್ತಿನಲ್ಲಿ ತೈಲಗಳ ದರ ಏರಿಕೆ ಆಗುತ್ತಿದೆ. ಹಾರ್ಮುಜ್ ಜಲಸಂಧಿ (Strait of Hormuz) ಇರಾನ್ ಮತ್ತು ಓಮನ್ ನಡುವೆ ಇರುವ, ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುವ ವಿಶ್ವದ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗ. ಈ ಮಾರ್ಗವಾಗಿ ಜಾಗತಿಕ ಕಚ್ಚಾ ತೈಲದ ಶೇಕಡಾ 20ರಷ್ಟು ಪೂರೈಕೆ ಆಗುತ್ತದೆ. ಈ ಮಾರ್ಗದ ಸಂಚಾರವನ್ನು ಇರಾನ್ ನಿಷೇಧಿಸಿದ ಕಾರಣ ತೈಲ ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಇದರಿಂದ ಪೆಟ್ರೋಲ್, ಡೀಸೆಲ್ ದರ ಏರಿಕೆ ಆಗಿದೆ.

Fuel Price

ಕಚ್ಚಾ ತೈಲ ಬೆಲೆ ಎಷ್ಟಿದೆ?

ಅಂತಾರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲವು ಬ್ಯಾರೆಲ್‌ಗೆ ದರ 80 ಡಾಲರ್ ಸಮೀಪಕ್ಕೆ ಸಾಗಿತು, ಆದರೆ ಯುಎಸ್ ಕಚ್ಚಾ ತೈಲವು ಶೇ. 8.6 ರಷ್ಟು ಹೆಚ್ಚಾಗಿ 67 ರಿಂದ 72.79 ಡಾಲರ್ ತಲುಪಿತು. ಇಂಧನಗಳಾಗಿ ಪರಿವರ್ತನೆ ಆಗುವ ಮೊದಲೇ ಕಚ್ಚಾ ತೈಲಕ್ಕೆ ಇಷ್ಟೊಂದು ಹಣ ನೀಡಬೇಕಾದರೆ ಅದು ಪೆಟ್ರೋಲ್ ಮತ್ತು ಡೀಸೆಲ್ ಆದ ಬಳಿಕ ಪೂರೈಕೆ ಹೊತ್ತಿಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಶೇ. 88ರಷ್ಟು ಕಚ್ಚಾ ತೈಲ ಪೂರೈಕೆ ಮಾಡುತ್ತಿದ್ದು, ಬೆಲೆ ಹೆಚ್ಚಾದರೆ ಭಾರತವು ಅಮದ ಹೊರೆ ಹೊರಬೇಕಾಗುತ್ತದೆ.

ಭಾರತದಲ್ಲಿ ಇಂಧನ ಚಿಲ್ಲರೆ ದರ ಏರಿಕೆ ಆಗುತ್ತಾ?

ಸದ್ಯದ ಮಾಹಿತಿ ಪ್ರಕಾರ, ಜಾಗತಿಕ ತೈಲ ಬೆಲೆಗಳಲ್ಲಿ ತೀವ್ರ ಏರಿಕೆ ಆಗುತ್ತಿವೆ. ಭಾರತದಲ್ಲಿ ಚಿಲ್ಲರೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಈ ತಕ್ಷಣದ ಹೆಚ್ಚಾಗುವ ಸ್ಥಿತಿ ಇಲ್ಲ. ಯುದ್ಧ ಮುಂದುವರಿದರೆ ಭವಿಷ್ಯದಲ್ಲಿ ದರ ಪರಿಷ್ಕರಣೆ ಆಗಲಿವೆ. ತೈಲ ಮಾರುಕಟ್ಟೆ ಕಂಪನಿಗಳಿಂದ ಅಂತಾರಾಷ್ಟ್ರೀಯ ಬೆಲೆಗಳು ಕಡಿಮೆಯಾದಾಗ ಲಾಭವನ್ನು ಸುಧಾರಿಸಲು ಮತ್ತು ಜಾಗತಿಕ ದರಗಳು ಹೆಚ್ಚಾದಾಗ ಗ್ರಾಹಕರನ್ನು ರಕ್ಷಿಸಲು ಸರ್ಕಾರವು ಮಹತ್ವದ ಕ್ರಮ ಕೈಗೊಳ್ಳಲಿದೆ ಎಂದು ಪಿಟಿಐ ವರದಿ ಮಾಡಿದೆ.

2022ರ ಮಧ್ಯ ಭಾಗದಿಂದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಚಿಲ್ಲರೆ ವ್ಯಾಪಾರಿಗಳು ಕಚ್ಚಾ ತೈಲ ಬೆಲೆಗಳು ಏರಿಕೆ ಆಗಿ ನಷ್ಟ ಎದುರಿಸುವಂತಾಗಿದೆ. ಲಾಭದ ಪ್ರಮಾಣ ಗಣನೀಯವಾಗಿ ಇಳಿಕೆ ಆಗಿದೆ. ಜಾಗತಿಕವಾಗಿ ಕಚ್ಚಾ ತೈಲ ವೆಚ್ಚ ಏರಿಕೆ ಆಗಿದ್ದರೂ ಸಹಿತ ದೇಶೀಯ ಪೆಟ್ರೋಲ್, ಡೀಸೆಲ್ ದರ ಹೆಚ್ಚಾಗಿಲ್ಲ. ಹೀಗಾಗಿ ಈ ಕಂಪನಿಗಳಿಗೆ ಆದಾಯ ಕುಸಿತವಾಗಿದೆ.

ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿವೆ. ಇನ್ನೂ ದಿನಾಂಕ ಘೋಷಣೆ ಆಗಿಲ್ಲ. ಪ್ರಚಾರ ವೇಳೆ ಕಚ್ಚಾ ತೈಲ ಬೆಲೆ ಏರಿಕೆ ವಿಚಾರ ರಾಜಕೀಯಕ್ಕೆ ಬಳಕೆ ಆಗಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+