Cyclone Akvan: ಗೋಪಾಲಪುರ ಭೂಸ್ಪರ್ಶಿಸಿದ 'ಅಕ್ವಾನ್' ಚಂಡಮಾರುತ: ಪೂರ್ವಕ್ಕೆ ಭಾರೀ ಮಳೆ, ಉತ್ತರಕ್ಕೆ ಒಣಹವೆ

IMD Weather Forecast: ದೇಶದ ಹವಾಮಾನದಲ್ಲಿ ಇಂದು (ನವೆಂಬರ್ 20) ಎರಡು ರೀತಿಯ ಬದಲಾವಣೆ ಕಾಣಬಹುದಾಗಿದೆ. ಪೂರ್ವ ಕರಾವಳಿಯಲ್ಲಿ ' ಅಕ್ವಾನ್' (Cyclonic Storm Akvan)
ಚಂಡಮಾರುತವು ಆರ್ಭಟ ಜೋರಾಗಿದ್ದು, ಭೂಮಿಯತ್ತ ಆಗಮಿಸುತ್ತಿದೆ. ಇತ್ತ ಉತ್ತರ ಭಾರತದಾದ್ಯಂತ ಮೈಕೊರೆವ ಚಳಿ ವ್ಯಾಪಿಸಿದೆ. ಕಳೆದೊಂದು ತಿಂಗಳಲ್ಲಿ ಅಪ್ಪಳಿಸುತ್ತಿರುವ ಮೂರನೇ ಚಂಡಮಾರುತ ಇದಾಗಿದ್ದು, ಅದರ ಪ್ರಭಾವದಿಂದ ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳ ಸೇರಿ ಕರಾವಳಿ ಭಾಗದಲ್ಲಿ ಜೋರು ಮಳೆ ಆಗುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆಯ (IMD) ತಿಳಿಸಿದೆ.

'ಅಕ್ವಾನ್' (Akvan) ಚಂಡಮಾರುತವು ಬಂಗಾಳಕೊಲ್ಲಿ ಭಾಗದಿಂದ ಭೀಕರ ಸ್ವರೂಪ ಪಡೆದು ಇಂದು ಬೆಳಗ್ಗೆ 11:30ರ ಸುಮಾರಿಗೆ ಒಡಿಶಾದ ಗೋಪಾಲಪುರ ಹಾಗೂ ಉತ್ತರ ಆಂಧ್ರಪ್ರದೇಶದ ಕರಾವಳಿ ಭಾಗಕ್ಕೆ ಮತ್ತಷ್ಟು ಹತ್ತಿರವಾಗಲಿದೆ. ಹವಾಮಾನ ತಜ್ಞರ ಪ್ರಕಾರ, ಇಂದು ಭೂಮಿಗೆ ಅಪ್ಪಳಿಸಲಿದೆ. ಈಗಗಾಗಲೇ ಇದರ ಪ್ರಭಾವದಿಂದ ಪಶ್ಚಿಮ ಬಂಗಾಳದ ಕೊಲ್ಕತ್ತಾ ಸೇರಿ ಅನೇಕ ಕಡೆಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿದೆ..

Cyclone Akvan

ಭೀಕರ ಗಾಳಿ ಸಹಿತ ಭಾರೀ ಮಳೆ

ಕೋಲ್ಕತ್ತಾ ನಗರಾದ್ಯಂತ ಭೀಕರ ಗಾಳಿ ಸಹಿತ ಭಾರೀ ಮಳೆ ಆಗುತ್ತಿದೆ. ತಾಪಮಾನದಲ್ಲಿಯೂ ತೀವ್ರ ಕುಸಿತ ಉಂಟಾಗಿದ್ದು, ಮಬ್ಬು ಕವಿದಿದೆ. ಇಂದು ಆರೆಂಜ್ ಅಲಟ್‌ ನೀಡಿದ್ದು, ಕಳೆದ 24 ಗಂಟೆಗಳಲ್ಲಿ ಸುಮಾರು 35 ಮಿ.ಮೀ ಮಳೆ ದಾಖಲಾಗಿದೆ. ಕೊಲ್ಕತ್ತಾ ಸೇರಿ ವಿವಿಧ ಭಾಗಗಳಲ್ಲಿ ಧಾರಾಕಾರ ಮಳೆ ಆಗಲಿದೆ. ಇಲ್ಲಿ ಗಾಳಿಯ ವೇಗ ಪ್ರತಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಬೀಸುತ್ತಿದೆ.

Karnataka Dry Weather: ಉತ್ತರ ಕರ್ನಾಟಕದಾದ್ಯಂತ ತೀವ್ರ ಥಂಡಿ! ಒಣಹವೆ ಎಚ್ಚರಿಕೆ: ಭೂಮಿಯತ್ತ 'ಅಕ್ವಾನ್' ಚಂಡಮಾರುತ
Karnataka Dry Weather: ಉತ್ತರ ಕರ್ನಾಟಕದಾದ್ಯಂತ ತೀವ್ರ ಥಂಡಿ! ಒಣಹವೆ ಎಚ್ಚರಿಕೆ: ಭೂಮಿಯತ್ತ 'ಅಕ್ವಾನ್' ಚಂಡಮಾರುತ

ಕೋಲ್ಕತ್ತಾ, ಹೌರಾ, ಹೂಗ್ಲಿ, ಉತ್ತರ - ಪಶ್ಚಿಮ ಮಿಡ್ನಾಪುರ ಮತ್ತು ಜಾರ್ಗ್ರಾಮ್ ಜಿಲ್ಲೆಗಳಲ್ಲಿ 7 ರಿಂದ 11 ಸೆಂ.ಮೀ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತವು ಆಂಧ್ರ ಕರಾವಳಿ ಭಾಗ ಹಾದು ಒಡಿಶಾ, ಪಶ್ಚಿಮ ಬಂಗಾಳದತ್ತ ಸಾಗಲಿದೆ. ಕರಾವಳಿ ಭಾಗದ ಅನೇಕ ಜಿಲ್ಲೆಗಳಲ್ಲಿ ಹಾನಿ, ಪ್ರವಾಹ, ಭಾರೀ ಮಳೆಯ ಆತಂಕ ಎದುರಾಗಿದೆ. ಈಗಾಗಲೇ ಆಂಧ್ರ ಪ್ರದೇಶದಲ್ಲಿ ರಾಜ್ಯ ಸರ್ಕಾರ ಹೈ ಅಲರ್ಟ್ ಆಗಿದೆ.

ಚಂಡಮಾರುತ "ಅಕ್ವಾನ್" ಬಂಗಾಳಕೊಲ್ಲಿಯ ಪೂರ್ವ-ಆಗ್ನೇಯಕ್ಕೆ ಸುಮಾರು 420 ಕಿ.ಮೀ, ಕಳಿಂಗಪಟ್ಟಣಂ (ಆಂಧ್ರಪ್ರದೇಶ) ದಿಂದ ದಕ್ಷಿಣ-ಆಗ್ನೇಯಕ್ಕೆ 400 ಕಿ.ಮೀ, ಗೋಪಾಲ್‌ಪುರ (ಒಡಿಶಾ) ದಿಂದ ದಕ್ಷಿಣಕ್ಕೆ 490 ಕಿ.ಮೀ, ಪುರಿ (ಒಡಿಶಾ) ದಿಂದ ದಕ್ಷಿಣಕ್ಕೆ 550 ಕಿ.ಮೀ ಮತ್ತು ಚೆನ್ನೈ (ತಮಿಳುನಾಡು) ನಿಂದ ಪೂರ್ವ-ಈಶಾನ್ಯಕ್ಕೆ 590 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದ ಸೈಕ್ಲೋನ್ ಇದೀಗ ಭೂಮಿಗೆ ಅಪ್ಪಳಿಸಿದ್ದು, ಇಂದು ಪೂರ್ತಿ ಭೂ ಭಾಗ ಹಾದು ಹೋಗಲಿದೆ ಐಎಂಡಿ ತಿಳಿಸಿದೆ.

ಚಂಡಮಾರುತ ಗಾಳಿಯ ವೇಗ 90-110 ಕಿ.ಮೀ!

ಇಂದು (ನವೆಂಬರ್ 20) ಮಧ್ಯಾಹ್ನದ ವೇಳೆಗೆ ನರಸಾಪುರ ಮತ್ತು ಪುರಿ ನಡುವೆ (ಗೋಪಾಲ್‌ಪುರದ ಪೂರ್ವ ಭಾಗದ ಹತ್ತಿರ) ಉತ್ತರ ಆಂಧ್ರಪ್ರದೇಶ, ಯಾನಂ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ದಾಟುವ ಸಂಭವವಿದೆ. ಈ ವೇಳೆ ಸೈಕ್ಲೋನ್ ಗಾಳಿಯ ವೇಗವು ಗಂಟೆಗೆ 90-110 ಕಿ.ಮೀ ನಷ್ಟು ಇರಲಿದೆ. ಮುಂದಿನ 24 ಗಂಟೆ ಆಂಧ್ರ, ಒಡಿಶಾ, ಪಶ್ಚಿಮ ಬಂಗಾಳದ ಕೆಲವು ಜಿಲ್ಲೆಗಳು ತೀವ್ರ ಮಳೆ, ಹಾನಿಗೆ ಸಾಕ್ಷಿಯಾಗಲಿವೆ ಎಂದು ವರದಿ ಆಗಿದೆ.

ಮತ್ತೊಂದು ಹವಾಮಾನ ವೈಪರೀತ್ಯ ಸೃಷ್ಟಿ

ಆಗ್ನೇಯ ಅರಬ್ಬಿ ಸಮುದ್ರ ಮತ್ತು ಅದನ್ನು ಹೊಂದಿಕೊಂಡಿರುವ ದಕ್ಷಿಣ ಲಕ್ಷದ್ವೀಪ ಪ್ರದೇಶದ ಮೇಲೆ, ಸಮುದ್ರ ಮಟ್ಟದಿಂದ 3.1 ಕಿ.ಮೀ ಎತ್ತರದವರೆಗೆ ವಿಸ್ತರಿಸಿರುವ ವಾಯುಮಂಡಲದ ಮೇಲ್ಭಾಗದ ಚಂಡಮಾರುತ ಪರಿಚಲನೆಯು ಮುಂದುವರಿದಿದೆ.

Cyclone Update: ತೀವ್ರ ಸ್ವರೂಪ ಪಡೆದ 'ಅಕ್ವಾನ್' ಚಂಡಮಾರುತ ನ.20ಕ್ಕೆ ಕರಾವಳಿಗೆ! ಭಾರೀ ಮಳೆ ಮುನ್ಸೂಚನೆ
Cyclone Update: ತೀವ್ರ ಸ್ವರೂಪ ಪಡೆದ 'ಅಕ್ವಾನ್' ಚಂಡಮಾರುತ ನ.20ಕ್ಕೆ ಕರಾವಳಿಗೆ! ಭಾರೀ ಮಳೆ ಮುನ್ಸೂಚನೆ

ಕರ್ನಾಟಕ, ಉತ್ತರ ಭಾರತದಲ್ಲಿ ಚಳಿ, ದಟ್ಟ ಮಂಜು

ದಕ್ಷಿಣ ಭಾರತದ ಪೂರ್ವ ಭಾಗದಲ್ಲಿ ಸೈಕ್ಲೋನ್, ಮಳೆ ಆರ್ಭಟ ಕಂಡು ಬಂದರೆ, ಉತ್ತರದ ದೆಹಲಿ, ಉತ್ತರ ಪ್ರದೇಶ, ಹರಿಯಾಣ ಮತ್ತು ಪಂಜಾಬ್‌ನಲ್ಲಿ ಒಣಹವೆ ಮುಂದುವರಿದಿದೆ. ಬೆಳಗ್ಗೆ ದಟ್ಟ ಮಂಜು ಕವಿಯುತ್ತಿದ್ದು, ವಾಹನ ಸವಾರರಿಗೆ ಗೋಚರತೆ ಸಮಸ್ಯೆ ಎದುರಾಗಿದೆ. ದೆಹಲಿ ಕನಿಷ್ಠ ತಾಪಮಾನ 11 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ. ಎಲ್ಲೆಡೆ ಚಳಿ ಮುಂದುವರಿದೆ.

ಕರ್ನಾಟಕದ ಉತ್ತರ ಒಳನಾಡಿನಲ್ಲಿ ತೀವ್ರ ಚಳಿ ಸೃಷ್ಟಿಯಾಗಿದ್ದು, ಮಧ್ಯಾಹ್ನ ಶಾಖದ ಅಲೆ, ಬೆಳಗ್ಗೆ ಮಂಜಿನ ವಾತಾವರಣ ಕಂಡು ಬಂದಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಒಣಹವೆ ಮುಂದುವರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+