Bengaluru Weather: ಬಿಸಿಲಿಗೆ ಬ್ರೇಕ್, ನಗರದಲ್ಲಿಂದು 60 ವಾರ್ಡ್‌ಗಳಲ್ಲಿ ಮಳೆ, 3ದಿನ ಮಳೆ ಮುಂದುವರಿಕೆ

ಬೆಂಗಳೂರು: ರಾಜ್ಯದ ಮಲೆನಾಡು, ಕರಾವಳಿ ಭಾಗದಲ್ಲಿ ಸುರಿದ ಮರೆಯಾದ ಮುಂಗಾರು ಮಳೆರಾಯ ಬೆಂಗಳೂರಿನಲ್ಲಿ ಪ್ರತ್ಯಕ್ಷವಾಗಿದ್ದಾನೆ. ಕಳೆದ 24 ಗಂಟೆಗಳಿಂದ ನಗರದ ವಿವಿಧ ಕಡೆಗಳಲ್ಲಿ ಮಳೆ ದಾಖಲಾಗಿದೆ. ಇಂದು ಶುಕ್ರವಾರ ಮಧ್ಯಾಹ್ನ ನಂತರ ಸುಮಾರು 60ಕ್ಕೂ ಅಧಿಕ ಬಡಾವಣೆಗಳಲ್ಲಿ ಮಳೆ ದಾಖಲಾಗಿದೆ. ಮುಂದಿನ ಮೂರು ದಿನ ಬೆಂಗಳೂರಿನಲ್ಲಿ ಮಳೆ ಸಕ್ರಿಯವಾಗಿರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ.

ಇಂದು ಬೆಳಗ್ಗೆಯಿಂದ ಕೊಂಚ ಬಿಸಿಲು, ಹೆಚ್ಚಾಗಿ ಮಬ್ಬು ಕವಿದ ತಂಪು ವಾತಾವರಣವೇ ಕಂಡು ಬಂದಿದ್ದು, ಸಂಜೆ 4 ಗಂಟೆ ಸುಮಾರಿಗೆ ಅಲ್ಲಲ್ಲಿ ಹಗುರಿಂದ ಜೋರು ಮಳೆ ದಾಖಲಾಯಿತು. ಈ ಮೂಲಕ ಜುಲೈ ತಿಂಗಳಲ್ಲಿ ಎರಡನೇ ಭಾರಿಗೆ ಉದ್ಯಾನ ನಗರಿ ಮಳೆಯಿಂದಾಗಿ ತಂಪಾಗಿದೆ.

Bengaluru Rains

ಕೆಲವೇ ನಿಮಿಷಗಳಲ್ಲಿ ಜೋರು ಮಳೆ!

ಯಲಹಂಕ, ರಾಜರಾಜೇಶ್ವರಿ ನಗರ, ಮಹಾದೇವಪುರ ಮತ್ತು ಪೂರ್ವ ವಲಯದ ವ್ಯಾಪ್ತಿಯಲ್ಲಿ ಜೋರು ಮಳೆ ಆಗಿದೆ. ಸಂಜೆ 5.30ಗಂಟೆವರೆಗಿನ ಲಭ್ಯ ಮಾಹಿತಿ ಪ್ರಕಾರ, ನಂದಿನಿ ಬಡಾವಣೆ, ಕೆಂಪಾಪುರ, ಎಚ್‌ಎಎಲ್ ವಿಮಾನ ನಿಲ್ದಾಣ, ಬಿನ್ನಿಪೇಟೆಯಲ್ಲಿ 17 ಮಿಲಿ ಮೀಟರ್ ಮಳೆ ದಾಖಲಾಗಿದೆ. ವಿದ್ಯಾರಣ್ಯಪುರ, ದೊಡ್ಡಬಿದರಕಲ್ಲು, ಚೌಡೇಶ್ವರಿ, ಎಸ್‌.ಕೆ ಗಾರ್ಡ್, ಕೊಟ್ಟಿಗೆಪಾಳ್ಯ, ಸಂಪಂಗಿ ರಾಮನಗರ 16.5 ಮಿಲಿ ಮೀಟರ್ ಮಳೆ ಆಗಿದೆ. ಕೆಲವೇ ನಿಮಿಷಗಳಲ್ಲಿ ಹಲವು ಕಡೆಗಳಲ್ಲಿ ಜೋರು ಮಳೆ ಆಯಿತು.

Bengaluru Rains: ಕೊನೆಗೂ ಮುಂಗಾರು ದರ್ಶನ, ಇಂದು ಅನೇಕ ಬಡಾವಣೆಗಳಲ್ಲಿ ಮಳೆ ದಾಖಲು, ಜುಲೈ 20ರವರೆಗೆ ಮಳೆ
Bengaluru Rains: ಕೊನೆಗೂ ಮುಂಗಾರು ದರ್ಶನ, ಇಂದು ಅನೇಕ ಬಡಾವಣೆಗಳಲ್ಲಿ ಮಳೆ ದಾಖಲು, ಜುಲೈ 20ರವರೆಗೆ ಮಳೆ

ಇನ್ನುಳಿದಂತೆ ಕೋರಮಂಗಲ, ಆಗರ, ಎಚ್‌ ಎಸ್ ಆರ್ ಲೇಔಟ್, ಹೆಬ್ಬಾಳ, ಅಮೃತಹಳ್ಳಿ, ಹಂಪಿನಗರ, ಕೇಂಗೇರಿ, ಮೈಸೂರು ರಸ್ತೆ, ಜಕ್ಕೂರು, ಆಡುಗೋಡಿ, ವೈಟ್‌ಫಿಲ್ಡ್, ಜಕ್ಕಸಂದ್ರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಜಿಟಿ ಜಿಟಿ ಮಳೆ ದಾಖಲಾಗಿದೆ. ರಸ್ತೆ ಸಂಚಾರ, ಸಂಜೆ ವ್ಯಾಪಾರಕ್ಕೆ ಕೊಂಚ ಕಿರಿ ಕಿರಿ ಆಯಿತು.

ಅರ್ಧ ರಾಜ್ಯಕ್ಕೆ ಬರಗಾಲ ಭೀತಿ ಎದುರಾಗಿದೆ. ಬೆಂಗಳೂರಿಗೆ ಕಳೆದ ಕೆಲವು ವಾರಗಳಿಂದ ಮಳೆ ಆಗಿರಲಿಲ್ಲ. ಕರಾವಳಿ, ಮಲೆನಾಡಿ, ಉತ್ತರ ಒಳನಾಡು ಭಾಗದಲ್ಲಿ ಸಕ್ರಿಯವಾಗಿದ್ದ ಮಳೆ, ಬೆಂಗಳೂರಿನ ಪಾಲಿಗೆ ಕನಸಾಗಿತ್ತು. ಜುಲೈ ಮೂರನೇ ವಾರದಲ್ಲಿ ಮಳೆ ಆಗಮಿಸಿದ್ದು, ಗುರುವಾರದಿಂದ ಸುರಿಯುತ್ತಿದೆ.

ಬೆಂಗಳೂರು ಮಳೆ, ತಾಪಮಾನ ಮುನ್ಸೂಚನೆ

ವಾಸ್ತವದಲ್ಲಿ ಇಂದು ಶುಕ್ರವಾರ ಮಳೆ ನಿರೀಕ್ಷೆ ಕೊಟ್ಟಿರಲಿಲ್ಲ. ಆದರೂ ಜೋರು ಮಳೆ ಆಗಿದ್ದು, ನಾಳೆಯಿಂದ ಜುಲೈ 20ರವರೆಗೆ ಮಳೆ ಮುನ್ಸೂಚನೆ ನೀಡಲಾಗಿದೆ. ಇವತ್ತಿಗಿಂತಲೂ ಹೆಚ್ಚಿನ ಪ್ರದೇಶಗಳಲ್ಲಿ ಅಧಿಕ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Dengue: ಬೆಂಗಳೂರಲ್ಲಿ 46 ಡೆಂಗ್ಯೂ ಪ್ರಕರಣಗಳ ಎಚ್ಚರಿಕೆ: ಸಾರ್ವಜನಿಕರಿಗೆ ಪಾಲಿಕೆಯ ಮಹತ್ವದ ಸೂಚನೆ
Dengue: ಬೆಂಗಳೂರಲ್ಲಿ 46 ಡೆಂಗ್ಯೂ ಪ್ರಕರಣಗಳ ಎಚ್ಚರಿಕೆ: ಸಾರ್ವಜನಿಕರಿಗೆ ಪಾಲಿಕೆಯ ಮಹತ್ವದ ಸೂಚನೆ

ಮುಂದಿನ ಮೂರು ದಿನ ಬೆಳಗ್ಗೆ ಬಿಸಿಲಿನ ವಾತಾವರಣ ಕಂಡರೂ ಸಹಿತ ಮಧ್ಯಾಹ್ನದ ನಂತರ ಮಬ್ಬು ಕವಿಯಲಿದೆ. ತಂಪು ಗಾಳಿ ಬೀಸಲಿದ್ದು, ಸಂಜೆಗೆ ಅಲ್ಲಲ್ಲಿ ಹಗುರ ಮಳೆ, ಕೆಲವೆಡೆ ಜೋರು ಮಳೆಯ ನಿರೀಕ್ಷೆ ಇದೆ. ಈ ಅವಧಿಯಲ್ಲಿ ನಗರದ ತಾಪಮಾನ ಗರಿಷ್ಠ 32-33ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 21-22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇದರ ಹೊರತು ಗಂಭೀರ ಸ್ವರೂಪದ ಬದಲಾವಣೆಗಳು, ಭಾರೀ ಮಳೆ ಎಚ್ಚರಿಕೆ ಸದ್ಯಕ್ಕಿಲ್ಲ ಎಂದು ಹವಾಮಾನ ಕೇಂದ್ರವು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+