Get Updates
Get notified of breaking news, exclusive insights, and must-see stories!

Hubballi-dharwad Elections : ಬಿಜೆಪಿ ಭದ್ರಕೋಟೆಯನ್ನು ವಶಪಡಿಸಿಕೊಳ್ಳಲು "ಕೈ"ಪಡೆ ಪ್ಲಾನ್‌

ಧಾರವಾಡ, ಮಾರ್ಚ್‌, 24: ರಾಜ್ಯದಲ್ಲಿ ವಿಧಾನಸಭೆ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದ್ದು, ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ಏರ್ಪಟಿದೆ. ಹಾಗಾದರೆ ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದ ರಾಜಕೀಯ ಸ್ಥಿತಿಗತಿ ಹೇಗಿದೆ ಎಂದು ಇಲ್ಲಿ ತಿಳಿಯಿರಿ.

ಮತ್ತೊಮ್ಮೆ ಚುನಾವಣಾ ಸಮರಕ್ಕೆ ಸಜ್ಜಾಗಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರ ಕರ್ನಾಟಕ ರಾಜ್ಯದ 224 ಕ್ಷೇತ್ರಗಳ ಪೈಕಿ ಒಂದಾಗಿದೆ. 2018ರ ಕಳೆದ ಚುನಾವಣೆಯಲ್ಲಿ ಇಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಜಯಗಳಿಸಿದ್ದರು. ಇಲ್ಲಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಚುನಾವಣಾ ಇತಿಹಾಸ, ಈಗಿನ ಬೆಳವಣಿಗೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

dharwad constituency map

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಪರಿಚಯ

ಇಲ್ಲಿ 2018ರಲ್ಲಿ ಬಿಜೆಪಿಯ ಅರವಿಂದ್ ಬೆಲ್ಲದ್‌ ಅವರು ವಿಜಯಪತಾಕೆ ಹಾರಿಸಿದ್ದರು. ಇವರ ವಿರುದ್ಧ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ 40,487 ಮತಗಳ ಅಂತರದಿಂದ ಸೋಲನುಭವಿಸಿದ್ದರು. ಅವಳಿ ನಗರದ ಎರಡು ಪ್ರಮುಖ ಧಾರ್ಮಿಕ ಕೇಂದ್ರಗಳಾದ ಸಿದ್ಧಾರೂಡ ಮಠ ಹಾಗೂ ಮುರುಘಾಮಠ ನಡುವಿನ ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರ ಪ್ರಬುದ್ಧರ, ಸುಶಿಕ್ಷಿತರ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದಿದೆ.

1957ರಿಂದ ಈವರೆಗೂ ನಡೆದಿರುವ ವಿಧಾನಸಭಾ ಚುನಾವಣೆಯಲ್ಲಿ 8 ಬಾರಿ ಕಾಂಗ್ರೆಸ್‌, ಒಂದು ಬಾರಿ ಜೆಎನ್‌ಪಿ ಗೆಲುವು ಸಾಧಿಸಿದೆ. ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಚಂದ್ರಕಾಂತ್‌ ಬೆಲ್ಲದ್‌ ಒಂದು ಬಾರಿ ವಿಧಾನಸಭೆಗೆ ಆಯ್ಕೆ ಆಗಿದ್ದಾರೆ. ಅವರು ಬಿಜೆಪಿ ಸೇರಿದ ನಂತರ ಎರಡು ಬಾರಿ ವಿಧಾನಸಭೆಗೆ ಆಯ್ಕೆ ಆದರು. ರಾಜಕೀಯ ನಿವೃತ್ತಿ ಬಳಿಕ ಅವರ ಪುತ್ರ ಅರವಿಂದ ಬೆಲ್ಲದ್‌ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆ ಆಗಿದ್ದಾರೆ.

congress bjp logo

ಅರವಿಂದ ಬೆಲ್ಲದ್‌ ರಾಜಕೀಯ ಜೀವನ

ಇಂಜಿನಿಯರಿಂಗ್‌ ಪದವೀಧರ ಹಾಗೂ ಉದ್ಯಮಿಯಾಗಿರುವ ಅರವಿಂದ ಬೆಲ್ಲದ್‌, 2013 ಹಾಗೂ 2018ರ ವಿಧಾನಸಭೆ ಚುನಾವಣೆಯಲ್ಲಿ ಕ್ಷೇತ್ರವನ್ನು ಪ್ರತಿನಿಧಿಸಿ ಭರ್ಜರಿ ಗೆಲುವು ಸಾಧಿಸಿದ್ದರು. 2018ರ ಚುನವಾಣೆ ಸಂದರ್ಭದಲ್ಲಿ ಕೈಗೊಂಡ ಕೆಲ ಅಭಿವೃದ್ಧಿ ಕಾಮಗಾರಿಗಳ ಭೂಮಿಪೂಜೆ ಹಾಗೂ ಶಂಕುಸ್ಥಾಪನೆಗಳು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿವೆ. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಪ್ರತಿಷ್ಠಿತ ಸಂಸ್ಥೆಗಳು ಸ್ಥಾಪನೆಗೊಂಡಿರುವುದೂ ಸೇರಿದಂತೆ ಹಿಂದಿನ ಅವಧಿಯ ಅಭಿವೃದ್ಧಿ ಕಾರ್ಯಗಳೇ ಈ ಬಾರಿ ಮುನ್ನೆಲೆಗೆ ಬರುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಿಂದಿನ ಎರಡು ಅವಧಿಗಳಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ಕೊಟ್ಟಿತ್ತು. ಆದರೆ ಹಲವು ಅಭಿವೃದ್ಧಿ ಕಾರ್ಯಗಳು ಮತ್ತು ಬಡವರಿಗೆ ಸೂರು ಒದಗಿಸಿದ್ದ ಎಸ್‌.ಆರ್‌.ಮೋರೆಯವರ ಅಗಲಿಕೆ ನಂತರ ಕಾಂಗ್ರೆಸ್‌ನಲ್ಲಿ ನಾಯಕತ್ವ ಕೊರತೆ ಉಂಟಾಗಿತ್ತು. ಇದನ್ನು ನೀಗಿಸುವ ನಿಟ್ಟಿನಲ್ಲಿ ಈ ಬಾರಿ ಬರೊಬ್ಬರಿ 10 ಅಭ್ಯರ್ಥಿಗಳು ಕಾಂಗ್ರೆಸ್‌ ಪಕ್ಷದ ಆಕಾಂಕ್ಷಿಗಳಾಗಿ ಗಮನ ಸೆಳೆದಿದ್ದಾರೆ.

ದೀಪಕ ಚಿಂಚೋರೆ, ಪಿ.ಎಚ್‌.ನೀರಲಕೇರಿ, ನಾಗರಾಜ ಗೌರಿ, ಬಸವರಾಜ ಮಲಕಾರಿ, ಆರ್‌.ಕೆ.ಪಾಟೀಲ ಹಾಗೂ ಮೋರೆಯವರ ಪುತ್ರಿ ಕೀರ್ತಿ ಮೋರೆ, ಪಾಲಿಕೆಯ ಯುವ ಸದಸ್ಯ ಹಾಗೂ ಡಾ.ಮಯೂರ ಮೋರೆ ಸೇರಿದಂತೆ ಹಲವರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಇವರೆಲ್ಲರೂ ಪಾದಯಾತ್ರೆ, ಮುಷ್ಕರಗಳಿಗೆ ಬೆಂಬಲ, ಆರೋಗ್ಯ ಶಿಬಿರ, ಬಡವರಿಗೆ ನೆರವು ಸೇರಿದಂತೆ ಹಲವು ಕಾರ್ಯಗಳ ಮೂಲಕ ಮತದಾರರನ್ನು ತಮ್ಮತ್ತ ಸೆಳೆಯುತ್ತಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ನುಡುವೆ ನೇರ ಪೈಪೋಟಿ

ಹಿಂದಿನಿಂದಲೂ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನುಡುವೆ ನೇರ ಪೈಪೋಟಿಯ ಕಣವಾಗಿ ಮಾರ್ಪಟ್ಟಿದೆ. ಆದರೆ ಅಭಿವೃದ್ಧಿ ವಿಷಯದಲ್ಲಿ ಧಾರವಾಡವನ್ನು ತೀವ್ರವಾಗಿ ಕಡೆಗಣಿಸಲಾಗಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಆದ್ದರಿಂದ ಧಾರವಾಡ ಪ್ರತ್ಯೇಕ ಪಾಲಿಕೆ ಹೋರಾಟ ಸಮಿತಿಯೂ ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದೆ. ಇದರ ಜೊತೆಗೆ ಎಎಪಿ ಮತ್ತು ಜೆಡಿಎಸ್‌ ಕೂಡ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎನ್ನುವ ಮಾತುಗಳು ಕೇಳಿಬರುತ್ತುವೆ. ಈ ಮೂಲಕ ಚುನಾವಣಾ ಅಖಾಡ ಮತ್ತಷ್ಟು ಕುತೂಹಲ ಕೆರಳಿಸಿದೆ.

ವರ್ಷ ವಿಜೇತರು ಮತಗಳು ಸೋತವರು ಮತಗಳು
2018 ಅರವಿಂದ್ ಬೆಲ್ಲದ (ಬಿಜೆಪಿ) 96462 ಇಸ್ಮಾಯಿಲ್ ತಮಟಗಾರ (ಕಾಂಗ್ರೆಸ್‌) 55975
2013 ಅರವಿಂದ್ ಬೆಲ್ಲದ (ಬಿಜೆಪಿ) 42003 ಎಸ್.ಆರ್. ಮೋರೆ (ಕಾಂಗ್ರೆಸ್‌) 30821
2008 ಬೆಲ್ಲದ ಚಂದ್ರಕಾಂತ್ ಗುರಪ್ಪ (ಬಿಜೆಪಿ) 60800 ಜಬ್ಬಾರ್ ಖಾನ್ (ಕಾಂಗ್ರೆಸ್‌) 27453

ಟಿಕೆಟ್‌ ಕೊಡುವಂತೆ ಪತ್ರ ಬರೆದಿದ್ದ ಮೇಯರ್‌

ಇತ್ತೀಚೆಗಷ್ಟೇ ಮೇಯರ್‌ ಈರೇಶ ಅಂಚಟಗೇರಿ ಹುಬ್ಬಳ್ಳಿ-ಧರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್‌ಗೆ ಪತ್ರ ಬರೆದು ಗಮನ ಸೆಳೆದಿದ್ದರು. ಮುಂಬರುವ ಚುನಾವಣೆಯಲ್ಲಿ ನನ್ನನ್ನು ಪರಿಗಣಿಸಬೇಕೆಂದು ಪತ್ರದಲ್ಲಿ ನಮೂದಿಸಿದ್ದರು. ಕಳೆದ ಮೂವತ್ತು ವರ್ಷಗಳಿಂದ ಬಿಜೆಪಿಯಲ್ಲಿದ್ದೇನೆ. ಹೀಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಕ್ಷೇತ್ರದ ಅಭ್ಯರ್ಥಿಯಾಗಿ ಪರಿಗಣಸಬೇಕೆಂದು ಪತ್ರ ಬರೆದು ಗಮನ ಸೆಳೆದಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+