ವೀಲ್‌ಚೇರ್‌ನಲ್ಲೇ ಜೊಮ್ಯಾಟೋ ಡೆಲಿವರಿ ಮಾಡ್ತಿರೋ ಮಹಿಳೆ; ಈಕೆಯ ಸ್ವಾಭಿಮಾನ ನೋಡಿ ಕಣ್ಣೀರಿಟ್ಟ ಜನ

"ನನ್ನ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ" ಎಂದು ಕಷ್ಟ ಬಂದಾಗ ಸುಲಭವಾಗಿ ಸೋಲೊಪ್ಪಿಕೊಳ್ಳುವವರೇ ಈ ಜಗತ್ತಿನಲ್ಲಿ ಹೆಚ್ಚು. ಆದರೆ, ವಿಧಿ ತನಗೆ ಕೊಟ್ಟಿರುವ ದೈಹಿಕ ಸವಾಲುಗಳನ್ನೇ ಮೆಟ್ಟಿ ನಿಂತು, ಸಮಾಜದಲ್ಲಿ ಯಾರ ಮುಂದೆಯೂ ಕೈಚಾಚದೆ, ಸ್ವಾಭಿಮಾನದಿಂದ ಬದುಕಿ ತೋರಿಸುತ್ತಿರುವ ಮಹಿಳೆಯೊಬ್ಬರ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಕೋಟ್ಯಂತರ ಜನರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ. ಬೆನ್ನಿಗೆ ಜೊಮ್ಯಾಟೋ (Zomato) ಬ್ಯಾಗ್ ತಗುಲಿಸಿಕೊಂಡು, ವೀಲ್‌ಚೇರ್ ಮೂಲಕವೇ ಮನೆ ಮನೆಗೆ ತೆರಳಿ ಆರ್ಡರ್ ತಲುಪಿಸುತ್ತಿರುವ ಈಕೆಯ ದಿಟ್ಟತನಕ್ಕೆ ಇಡೀ ದೇಶವೇ ಸಲಾಂ ಎನ್ನುತ್ತಿದೆ.

ಸವಾಲುಗಳನ್ನೇ ಮೆಟ್ಟಿ ನಿಂತ ಮಹಿಳೆ

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಮಹಿಳೆಯೊಬ್ಬರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಬ್ಯಾಟರಿ ಚಾಲಿತ ವೀಲ್‌ಚೇರ್‌ನಲ್ಲಿ ಕುಳಿತು ರಸ್ತೆಯಲ್ಲಿ ಸಾಗುತ್ತಿದ್ದಾರೆ. ಸಾಮಾನ್ಯವಾಗಿ ಇಂತಹ ವೀಲ್‌ಚೇರ್‌ಗಳನ್ನು ಜನರು ಕೇವಲ ಓಡಾಟಕ್ಕೆ ಬಳಸುತ್ತಾರೆ. ಆದರೆ ಈ ಮಹಿಳೆ, ಅದನ್ನು ತನ್ನ ಅನ್ನದ ದಾರಿಯನ್ನಾಗಿ ಮಾಡಿಕೊಂಡಿದ್ದಾರೆ.

Zomato

ಟ್ರಾಫಿಕ್ ಜಾಂ, ಸುಡುವ ಬಿಸಿಲು, ಅಥವಾ ಹಠಾತ್ ಬರುವ ಮಳೆಯನ್ನೂ ಲೆಕ್ಕಿಸದೆ ಈಕೆ ನಗರದ ರಸ್ತೆಗಳಲ್ಲಿ ಸಾಗುವ ದೃಶ್ಯ, ನೋಡುವ ಪ್ರತಿಯೊಬ್ಬರಲ್ಲೂ ಕಣ್ಣೀರು ತರಿಸುವಂತಿದೆ. ನಾವೆಲ್ಲೋ ಮನೆಯಲ್ಲಿ ಆರಾಮವಾಗಿ ಕುಳಿತು ಮೊಬೈಲ್‌ನಲ್ಲಿ ಆರ್ಡರ್ ಮಾಡುವ ಒಂದೊಂದು ಹೊತ್ತಿನ ಊಟದ ಹಿಂದೆಯೂ ಇಂತಹ ಕಷ್ಟಜೀವಿಗಳ ಕಣ್ಣೀರು ಮತ್ತು ಬೆವರಿನ ಹೋರಾಟ ಅಡಗಿದೆ ಎಂಬುದನ್ನು ಈ ವಿಡಿಯೋ ನೆನಪಿಸುತ್ತದೆ. ಕೈ-ಕಾಲು ಚೆನ್ನಾಗಿದ್ದರೂ ಕೆಲಸವಿಲ್ಲ, ಬದುಕಲು ದಾರಿಯಿಲ್ಲ ಎಂದು ಹಣೆಬರಹವನ್ನು ದೂಷಿಸುವ ಜನರಿಗೆ ಈ ಮಹಿಳೆ ಒಂದು ಜೀವಂತ ಮಾದರಿಯಾಗಿದ್ದಾರೆ.

Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್‌ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ

ವಿಡಿಯೋ ನೋಡಿ ಜನ ಏನಂದ್ರು?

ಈ ಅಪರೂಪದ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಭಾರಿ ಸಂಚಲನ ಸೃಷ್ಟಿಸಿದೆ. ಲಕ್ಷಾಂತರ ಜನರು ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದು, ಈಕೆಯ ಛಲಕ್ಕೆ ಬೆರಗಾಗಿದ್ದಾರೆ. ಇದಕ್ಕೆ ಕಾಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ. "ಕೈ ಕಾಲುಗಳು ಚೆನ್ನಾಗಿದ್ದರೂ ಕೆಲಸ ಮಾಡಲು ಸೋಮಾರಿಗಳಾಗಿ ರಸ್ತೆಯಲ್ಲಿ ಭಿಕ್ಷೆ ಬೇಡುವವರು ಮತ್ತು ನಕಲಿ ದಂದೆ ಮಾಡುವವರ ಮಧ್ಯೆ, ಈ ತಾಯಿ ದೇವತೆಯಂತೆ ಕಾಣುತ್ತಾಳೆ. ಇವಳ ಪ್ರಾಮಾಣಿಕತೆಗೆ ನನ್ನದೊಂದು ದೊಡ್ಡ ಸಲ್ಯೂಟ್" ಎನ್ನುತ್ತಿದ್ದಾರೆ.

A differently-abled woman delivering Zomato orders on a battery-powered wheelchair has gone viral, inspiring millions with her determination, self-respect and hard work.

ಸೋತವರಿಗೆ ಈಕೆ ದೊಡ್ಡ ಪಾಠ

ಮತ್ತೊಬ್ಬ ಬಳಕೆದಾರರು, "ನನಗೆ ತುಂಬಾ ಕಷ್ಟವಿದೆ ಎಂದು ದಿನವೂ ದೇವರ ಮುಂದೆ ಕಣ್ಣೀರು ಹಾಕುತ್ತಿದ್ದೆ. ಆದರೆ ಇವರನ್ನು ನೋಡಿದ ಮೇಲೆ ನನ್ನ ಕಷ್ಟಗಳೆಲ್ಲ ತುಂಬಾ ಸಣ್ಣದಾಗಿ ಕಾಣಿಸುತ್ತಿವೆ. ಜೀವನದಲ್ಲಿ ಮುನ್ನಡೆಯಲು ಇವರಿಗಿಂತ ದೊಡ್ಡ ಸ್ಫೂರ್ತಿ ಬೇಕಿಲ್ಲ" ಎಂದು ಕಾಮೆಂಟ್‌ ಮಾಡಿದ್ದಾರೆ. ಈ ಮಹಿಳೆಯ ಹೋರಾಟ ಕೇವಲ ಹೊಟ್ಟೆಪಾಡಿಗಾಗಿ ಮಾತ್ರವಲ್ಲ, ಇದು ಸಮಾಜಕ್ಕೆ ನೀಡುತ್ತಿರುವ ದೊಡ್ಡ ಸಂದೇಶ. ದೈಹಿಕ ನ್ಯೂನತೆ ಇರಲಿ ಅಥವಾ ಕೌಟುಂಬಿಕ ಪರಿಸ್ಥಿತಿ ಇರಲಿ, ಮನಸ್ಸಿನಲ್ಲಿ ಏನನ್ನಾದರೂ ಸಾಧಿಸಬೇಕು ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂಬ ಹಠವಿದ್ದರೆ ಯಾವುದೇ ಕಷ್ಟವೂ ದೊಡ್ಡದಲ್ಲ ಎಂಬುದನ್ನು ಈಕೆ ಸಾಬೀತುಪಡಿಸಿದ್ದಾರೆ. ಜೀವನದಲ್ಲಿ ಸಣ್ಣ ಸೋಲು ಅಥವಾ ನಿರಾಸೆ ಎದುರಾದಾಗ ಧೃತಿಗೆಟ್ಟು ಕೂರುವ ಯುವ ಪೀಳಿಗೆಗೆ ಈ ಜೊಮ್ಯಾಟೋ ಡೆಲಿವರಿ ಮಹಿಳೆ ರೋಲ್ ಮಾಡೆಲ್ ಆಗಿ ಮೂಡಿಬಂದಿದ್ದಾರೆ.

ಮಹಿಳೆಗೆ ಕಚೇರಿ ಕೆಲಸ ಕೊಡಿ

"ನೀನು ನನಗಿಂತ ವಯಸ್ಸಿನಲ್ಲಿ ಚಿಕ್ಕವಳಿದ್ದರೂ, ನಿನ್ನ ಛಲಕ್ಕೆ ನನ್ನ ತಲೆ ಬಾಗಿಸಿ ನಮಿಸುತ್ತೇನೆ ಸಹೋದರಿ. ದೇವರು ನಿನಗೆ ಒಳ್ಳೆಯದು ಮಾಡಲಿ" ಎಂದು ಹಿರಿಯರೊಬ್ಬರು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ. "ಕೆಲವರು ಸರ್ಕಾರ ಕೊಡುವ ಉಚಿತ ಸೌಲಭ್ಯಗಳನ್ನು ನೆಚ್ಚಿಕೊಂಡು ಅಥವಾ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಾ ಕಾಲ ಕಳೆಯುತ್ತಾರೆ. ಆದರೆ ಇವರು ಉಚಿತ ಕೊಡುಗೆಗಳಿಗೆ ಕೈಚಾಚದೆ ಕಷ್ಟಪಟ್ಟು ದುಡಿಯುವ ಹಾದಿ ಆರಿಸಿಕೊಂಡಿದ್ದಾರೆ, ಇವರ ಬಗ್ಗೆ ಹೆಮ್ಮೆಯಾಗುತ್ತಿದೆ" ಎಂದಿದ್ದಾರೆ. "ಭಾರತದ ರಸ್ತೆಗಳಲ್ಲಿ ಯಾವುದೇ ಸಸ್ಪೆನ್ಷನ್ ಇಲ್ಲದ ಇಂತಹ ವೀಲ್‌ಚೇರ್‌ಗಳಲ್ಲಿ ಸಂಚರಿಸುವುದು ಸಾವಿನ ಬಲೆಗೆ ಬಿದ್ದಂತೆ! ಜೊಮ್ಯಾಟೋ ಕಂಪನಿ ತನ್ನ ಪಬ್ಲಿಸಿಟಿಗಾಗಿ ಇವರ ಜೀವನ ರಿಸ್ಕ್‌ಗೆ ತಳ್ಳಬಾರದು. ತಕ್ಷಣ ಇಂತಹ ಡೆಲಿವರಿ ಪ್ರೋಗ್ರಾಂ ನಿಲ್ಲಿಸಿ, ಈ ಮಹಿಳೆಗೆ ಸುರಕ್ಷಿತವಾದ ಕಚೇರಿ ಕೆಲಸ ನೀಡಬೇಕು" ಎಂದು ಎಂದು ಬೇಡಿಕೆಯೂ ಇಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+