ಅಂದು ಸ್ಕೂಟರ್ ಓಡಿಸುವಾಗ ನಕ್ಕವರು ಇಂದು ತಲೆಬಾಗುತ್ತಿದ್ದಾರೆ: ಆಕಾಶದಲ್ಲಿ ಹಾರಾಡುತ್ತಿರುವ ಭಾರತೀಯ ಮಹಿಳಾ ಪೈಲಟ್‌ಗಳ ಯಶೋಗಾಥೆ

"ಓ ಹೆಣ್ಣ ಮಗು, ಹೆಣ್ಣು ಮಗು","ಹೆಣ್ಣು ಮಕ್ಕಳಿಗೆ ಸರಿಯಾಗಿ ಗಾಡಿ ಓಡಿಸಲು ಬರುದಿಲ್ಲ" - ರಸ್ತೆಯಲ್ಲಿ ಯಾವುದಾದರೂ ಸಣ್ಣ ಅಪಘಾತವಾದಾಗ ಅಥವಾ ಮಹಿಳೆಯರು ಗಾಡಿ ಓಡಿಸಿಕೊಂಡು ಹೋಗುವಾಗ ನಮ್ಮ ಸಮಾಜದಲ್ಲಿ ಸಾಮಾನ್ಯವಾಗಿ ಕೇಳಿಬರುವ ವ್ಯಂಗ್ಯದ ಮಾತುಗಳಿವು. ಆದರೆ, ಹೀಗೆ ರಸ್ತೆಯಲ್ಲಿ ಸ್ಕೂಟರ್ ಓಡಿಸುವಾಗ ಜನರ ಹಂಗಿಸುವಿಕೆಗೆ, ಟೀಕೆಗಳಿಗೆ ಗುರಿಯಾದ ಅದೇ ಮಹಿಳೆ ಇಂದು ಬಾನೆತ್ತರದಲ್ಲಿ ವಿಮಾನದ ಕಾಕ್‌ಪಿಟ್‌ನಲ್ಲಿ ಕುಳಿತು ಸಾವಿರಾರು ಪ್ರಯಾಣಿಕರನ್ನು ಅತ್ಯಂತ ಸುರಕ್ಷಿತವಾಗಿ ಕರೆದೊಯ್ಯುತ್ತಿದ್ದಾಳೆ ಎಂದರೆ ನೀವು ನಂಬುತ್ತೀರಾ? ಖಂಡಿತವಾಗಿಯೂ ನಂಬಲೇಬೇಕು.

ಹೌದು, ನಿನ್ನೆ ಮೊನ್ನೆಯವರೆಗೂ ರಸ್ತೆಯಲ್ಲಿ ಟ್ರಾಫಿಕ್ ನಡುವೆ ಭಯ, ಆತಂಕದಿಂದ ಸ್ಕೂಟರ್ ಓಡಿಸುತ್ತಿದ್ದ ಆಕೆಯನ್ನು ನೋಡಿ ಗೇಲಿ ಮಾಡಿದವರೇ, ಇಂದು ಆಕೆ ಆಕಾಶದಲ್ಲಿ ವಿಮಾನವನ್ನು ಲೀಲಾಜಾಲವಾಗಿ ಹಾರಿಸುತ್ತಿರುವುದನ್ನು ನೋಡಿ ಅಚ್ಚರಿಯಿಂದ ತಲೆದೂಗುತ್ತಿದ್ದಾರೆ.

Scooty Rider

ಸ್ಕೂಟರ್‌ ಸವಾರಿಯಿಂದ ವಿಮಾನದ ಕಾಕ್‌ಪಿಟ್‌ವರೆಗಿನ ಪಯಣ

ಆರಂಭದಲ್ಲಿ ಆಕೆ ಸ್ಕೂಟರ್ ಓಡಿಸುವಾಗ ಅನೇಕರು ಅವಳ ಆತ್ಮವಿಶ್ವಾಸವನ್ನು ಪ್ರಶ್ನಿಸಿದ್ದರು. "ಇದೆಲ್ಲಾ ನಿನ್ನಿಂದ ಆಗುವ ಕೆಲಸವಲ್ಲ, ಇದು ನಿನಗೆ ಒಗ್ಗುವುದಿಲ್ಲ, ಹೆಣ್ಣುಮಕ್ಕಳು ಇಷ್ಟು ರಿಸ್ಕ್ ತೆಗೆದುಕೊಳ್ಳಬಾರದು" ಎಂದು ಹೇಳಿ ಆಕೆಯ ಕನಸುಗಳಿಗೆ ತಣ್ಣೀರು ಎರಚುವ ಪ್ರಯತ್ನ ಮಾಡಿದ್ದರು. ಆದರೆ, ಜಗತ್ತಿಗೆ ಕೇವಲ ಅವರ ಟೀಕೆಗಳು ಮಾತ್ರ ಕೇಳಿಸಿದವು ಹೊರತು, ಆಕೆಯ ಒಳಗಿದ್ದ ಛಲ, ದೃಢನಿಶ್ಚಯ ಹಾಗೂ ಗುರಿಯ ಬಗೆಗಿನ ಕನಸುಗಳು ಯಾರಿಗೂ ಕಾಣಿಸಲಿಲ್ಲ. ಯಾರು ಆಕೆಯನ್ನು ನಂಬಲಿಲ್ಲವೋ, ಅವರೇ ಬೆರಗಾಗುವಂತೆ ರಾತ್ರಿಹಗಲೆನ್ನದೆ ಆಕೆ ವಿಮಾನಯಾನದ ಕಠಿಣ ಪರೀಕ್ಷೆಗಳಿಗಾಗಿ ಓದಿದಳು. ಜನರ ಮಾತುಗಳನ್ನೇ ಯಶಸ್ಸಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಸದ್ದಿಲ್ಲದೆ ತನ್ನ ಗುರಿಯತ್ತ ಹೆಜ್ಜೆ ಹಾಕಿದಳು.

ಪರಿಣಾಮ, ಇಂದು ಆಕೆ ನೆಲದ ಮೇಲಿನ ಟ್ರಾಫಿಕ್‌ಗೆ ಹೆದರುವ ಸಾಮಾನ್ಯ ಹುಡುಗಿಯಲ್ಲ, ಬದಲಿಗೆ ಮುಗಿಲೆತ್ತರದಲ್ಲಿ ಹವಾಮಾನದ ಸವಾಲುಗಳನ್ನು ಎದುರಿಸುತ್ತಾ, ವಿಮಾನವನ್ನು ನಿಯಂತ್ರಿಸುವ ಶಕ್ತಿಯುತ ಪೈಲಟ್ ಆಗಿ ರೂಪುಗೊಂಡಿದ್ದಾಳೆ.

ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮಹಿಳಾ ಪೈಲಟ್‌ಗಳು

ಇದು ಕೇವಲ ಒಬ್ಬ ಅನಾಮಿಕ ಮಹಿಳೆಯ ಸಾಧನೆ ಮಾತ್ರವಲ್ಲ. ಇಡೀ ಭಾರತ ಹೆಮ್ಮೆಪಡುವಂತಹ ವಿಚಾರವಿದು. ಜಾಗತಿಕ ಮಟ್ಟದಲ್ಲಿ ಆಕಾಶಯಾನ ಕ್ಷೇತ್ರದಲ್ಲಿ ಭಾರತೀಯ ಮಹಿಳಾ ಪೈಲಟ್‌ಗಳು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದಾರೆ ಹಾಗೂ ಹೊಸ ಇತಿಹಾಸವನ್ನು ಬರೆಯುತ್ತಿದ್ದಾರೆ.

ಪ್ರಪಂಚದ ಇತರ ಮುಂದುವರಿದ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಮಹಿಳಾ ಪೈಲಟ್‌ಗಳ ಪ್ರಮಾಣ ಅತಿ ಹೆಚ್ಚಾಗಿದೆ. ಪ್ರಸ್ತುತ ಭಾರತದಲ್ಲಿರುವ ಒಟ್ಟು ವಾಣಿಜ್ಯ ಪೈಲಟ್‌ಗಳ ಪೈಕಿ ಶೇಕಡಾ 12 ರಿಂದ 15 ರಷ್ಟು ಮಹಿಳೆಯರಿದ್ದಾರೆ. ಅಮೆರಿಕದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಈ ಪ್ರಮಾಣ ಕೇವಲ 5-6% ಇರುವಾಗ, ನಮ್ಮ ದೇಶದ ಸಾಧನೆ ಜಗತ್ತಿನಲ್ಲೇ ಅತಿ ಹೆಚ್ಚು ಎಂಬುದು ಪ್ರತಿಯೊಬ್ಬ ಕನ್ನಡಿಗನಿಗೂ ಹಾಗೂ ಭಾರತೀಯನಿಗೂ ಅತ್ಯಂತ ಹೆಮ್ಮೆಯ ಸಂಗತಿ.

ಪುರುಷರ ಪ್ರಾಬಲ್ಯವಿದ್ದ ವೈಮಾನಿಕ ಕ್ಷೇತ್ರದಲ್ಲಿ ಮಹಿಳೆಯರು ತಮ್ಮ ನಾಯಕತ್ವದ ಗುಣವನ್ನು ಹಾಗೂ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ಸಾಬೀತುಪಡಿಸುತ್ತಿದ್ದಾರೆ.

ಬಡತನ, ಸಮಾಜದ ಟೀಕೆಗಳು ಹಾಗೂ ಕೌಟುಂಬಿಕ ಸವಾಲುಗಳನ್ನು ಎದುರಿಸಿ, ತಮ್ಮನ್ನು ತಾವೇ ರೂಪಿಸಿಕೊಂಡು, ಇಂದು ಕಾಕ್‌ಪಿಟ್‌ನಲ್ಲಿ ಕ್ಯಾಪ್ಟನ್‌ಗಳಾಗಿರುವ ಈ ಮಹಿಳೆಯರ ಕಥೆ ಪ್ರತಿಯೊಬ್ಬ ಯುವತಿಗೂ ಸ್ಫೂರ್ತಿದಾಯಕ.

ನೆನಪಿರಲಿ, ನಿಮ್ಮ ಆರಂಭಿಕ ಹೆಜ್ಜೆಗಳನ್ನು ನೋಡಿ ನಗುವ ಇದೇ ಜಗತ್ತು, ನಾಳೆ ನೀವು ಎತ್ತರಕ್ಕೆ ಬೆಳೆದಾಗ ಖಂಡಿತವಾಗಿಯೂ ಎದ್ದು ನಿಂತು ಚಪ್ಪಾಳೆ ತಟ್ಟುತ್ತದೆ ಎಂಬುದಕ್ಕೆ ನಮ್ಮ ದೇಶದ ಈ ದಿಟ್ಟ ಮಹಿಳಾ ಪೈಲಟ್‌ಗಳೇ ಉದಾಹರಣೆ. ಯಶಸ್ಸಿಗೆ ಯಾವುದೇ ಲಿಂಗಭೇದವಿಲ್ಲ, ಕೇವಲ ಛಲ ಮತ್ತು ಇಚ್ಛಾಶಕ್ತಿ ಬೇಕು ಎಂಬುದನ್ನು ಇವರು ಜಗತ್ತಿಗೆ ಸಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+