ಪ್ರಭಾಸ್ 'ಫೌಜಿ' ಚಿತ್ರದ ಸೆಟ್‌ನಲ್ಲಿ ದುರಂತ: ವಿಷಕಾರಿ ಕೀಟ ಕಚ್ಚಿ ಐಸಿಯು ಸೇರಿದ ಖ್ಯಾತ ನಟ ರಾಜೇಶ್ ಶರ್ಮಾ

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಮುಂಬರುವ 'ಫೌಜಿ' ಚಿತ್ರದ ಸೆಟ್‌ನಲ್ಲಿ ಖ್ಯಾತ ಪೋಷಕ ನಟ ರಾಜೇಶ್ ಶರ್ಮಾ ಅವರಿಗೆ ವಿಷಕಾರಿ ಕೀಟವೊಂದು ಕಚ್ಚಿದ್ದು, ಸದ್ಯ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೈದರಾಬಾದ್‌ನಲ್ಲಿ ನಡೆದ ಈ ಘಟನೆ ಇಡೀ ಚಿತ್ರತಂಡವನ್ನು ಬೆಚ್ಚಿಬೀಳಿಸಿದೆ.

ಹೈದರಾಬಾದ್‌ನ ಪ್ರಸಿದ್ಧ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪ್ರಭಾಸ್ ಅಭಿನಯದ 'ಫೌಜಿ' ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಬಾಲಿವುಡ್ ಸೇರಿದಂತೆ ಹಲವು ಭಾಷೆಗಳಲ್ಲಿ ತಮ್ಮ ಅದ್ಭುತ ನಟನೆಯ ಮೂಲಕ ಮನೆಮಾತಾಗಿರುವ ಹಿರಿಯ ನಟ ರಾಜೇಶ್ ಶರ್ಮಾ ಅವರು ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

Prabhas

ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಅವರು, ತಮ್ಮ ದಿನದ ಶೂಟಿಂಗ್ ಮುಗಿಸಿ ಬಿಡುವಾದಾಗ ಸೆಟ್‌ನಲ್ಲಿದ್ದ ತಂತ್ರಜ್ಞರೊಂದಿಗೆ ಕುಳಿತು ಮಾತನಾಡುತ್ತಿದ್ದರು. ಇದೇ ವೇಳೆ, ಯಾರು ಗಮನಿಸದ ಕ್ಷಣದಲ್ಲಿ ಅತ್ಯಂತ ವಿಷಕಾರಿಯಾದ ಕೀಟವೊಂದು ಅವರ ಬಲಗಾಲಿಗೆ ಕಚ್ಚಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಸೊಳ್ಳೆ ಅಥವಾ ಹುಳದ ಕಡಿತವಿರಬಹುದು ಎಂದು ಭಾವಿಸಿದ ನಟ ರಾಜೇಶ್ ಶರ್ಮಾ ಅವರು, ಕೀಟ ಕಚ್ಚಿದ ತಕ್ಷಣವೇ ಯಾವುದೇ ಪ್ರಾಥಮಿಕ ಚಿಕಿತ್ಸೆ ಪಡೆಯದೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಸಣ್ಣ ನಿರ್ಲಕ್ಷ್ಯವೇ ಅವರ ಜೀವಕ್ಕೆ ಅಪಾಯ ತಂದೊಡ್ಡಿದೆ.

ಕೀಟ ಕಚ್ಚಿದ ಆರು ಗಂಟೆಗಳ ಅಂತರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ನಟನಿಗೆ ವಿಪರೀತ ಜ್ವರ ಹಾಗೂ ಸಹಿಸಲಸಾಧ್ಯವಾದ ನೋವು ಕಾಣಿಸಿಕೊಂಡಿತು. ಕೀಟದ ವಿಷ ಶರವೇಗದಲ್ಲಿ ದೇಹವನ್ನು ಆವರಿಸುತ್ತಿರುವುದನ್ನು ಅರಿತ ಅವರು, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಹೈದರಾಬಾದ್‌ನಿಂದ ಕೋಲ್ಕತ್ತಾಗೆ ತುರ್ತು ವಿಮಾನವನ್ನು ಏರಿದರು. ಆದರೆ, ವಿಮಾನದಲ್ಲಿ ಪ್ರಯಾಣಿಸುತ್ತಿದ್ದಂತೆಯೇ ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು.

ರಕ್ತದಲ್ಲಿನ ಸಕ್ಕರೆ ಪ್ರಮಾಣ ಅಸಹಜವಾಗಿ ಏರಿಕೆಯಾಗಿದ್ದು, ತೀವ್ರ ಉಸಿರಾಟದ ತೊಂದರೆ ಎದುರಾಯಿತು. ವಿಮಾನದಲ್ಲಿ ಎದುರಾದ ಈ ದಿಢೀರ್ ವೈದ್ಯಕೀಯ ತುರ್ತು ಪರಿಸ್ಥಿತಿ ಅವರ ಜೊತೆಯಿದ್ದವರಿಗೂ ಹಾಗೂ ಸಿಬ್ಬಂದಿಗೂ ಆತಂಕವನ್ನು ಸೃಷ್ಟಿಸಿತ್ತು.

ಐಸಿಯುನಲ್ಲಿ ನಟ ರಾಜೇಶ್ ಶರ್ಮಾ

ಹೇಗೋ ಕಷ್ಟಪಟ್ಟು ವಿಮಾನ ಕೋಲ್ಕತ್ತಾ ನಿಲ್ದಾಣ ತಲುಪಿದ ತಕ್ಷಣ, ವಿಳಂಬ ಮಾಡದೆ ರಾಜೇಶ್ ಶರ್ಮಾ ಅವರನ್ನು ಅಲ್ಲಿನ ಪ್ರಮುಖ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ತಕ್ಷಣವೇ ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ.

ಆಸ್ಪತ್ರೆಯ ವೈದ್ಯಕೀಯ ವರದಿಗಳ ಪ್ರಕಾರ, ಕೀಟದ ವಿಷವು ಅವರ ಪಾದದಿಂದ ಮೊಣಕಾಲಿನವರೆಗೆ ಬಹಳ ವೇಗವಾಗಿ ಹರಡಿದ್ದು, ಜ್ವರ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಪರಿಣಿತ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದ್ದು, ತುರ್ತು ಚಿಕಿತ್ಸೆಗಳನ್ನು ನೀಡಲಾಗುತ್ತಿದೆ.

ಪ್ರಸ್ತುತ ನಟನ ಸ್ಥಿತಿ ಗಂಭೀರವಾಗಿಯೇ ಮುಂದುವರಿದಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಚಿತ್ರರಂಗದ ಗಣ್ಯರು ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಸೆಟ್‌ನಲ್ಲಿ ನಡೆದ ಈ ಅನಿರೀಕ್ಷಿತ ಘಟನೆ ಚಿತ್ರೀಕರಣದ ಸ್ಥಳಗಳಲ್ಲಿನ ಸುರಕ್ಷತೆಯ ಬಗ್ಗೆಯೂ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+