Daily Horoscope: ಈ ರಾಶಿಯವರಿಗೆ ಸಮೃದ್ಧಿಯ ದಿನ, ಕೈ ತುಂಬಾ ಸಿಗುವುದು ಹಣ, ಸಮಸ್ಯೆಗಳಿಂದ ಮುಕ್ತಿ
Horoscope July 9: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.
ಮೇಷ ರಾಶಿ (Aries)
ಇಂದು ನಿಮ್ಮ ದಿನವು ಸಂತೋಷದಾಯಕವಾಗಿರುತ್ತದೆ. ಕಲೆ ಮತ್ತು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಹೊಸ ಉದ್ಯೋಗಾವಕಾಶಗಳು ದೊರೆಯುವ ಸಾಧ್ಯತೆಯಿದೆ. ವ್ಯಾಪಾರದಲ್ಲಿ ಉತ್ತಮ ಯಶಸ್ಸು ಸಿಗಲಿದೆ. ಕೌಟುಂಬಿಕ ವಾತಾವರಣವು ಆಹ್ಲಾದಕರವಾಗಿರುತ್ತದೆ. ಆರೋಗ್ಯ ಸಮಸ್ಯೆಯಿಂದ ಪರಿಹಾರ ಸಿಗಲಿದೆ.

ವೃಷಭ ರಾಶಿ (Taurus)
ಇಂದಿನ ದಿನವು ನಿಮಗೆ ಅದೃಷ್ಟ ತರಲಿದೆ. ಹೊಸ ವ್ಯವಹಾರ ಆರಂಭಿಸಬಹುದು. ವ್ಯಾಪಾರದಲ್ಲಿ ದುಪ್ಪಟ್ಟು ಯಶಸ್ಸು ಸಿಗಲಿದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರ್ಥಿಕ ಸ್ಥಿತಿ ಸುಧಾರಿಸುವುದು.
ಮಿಥುನ ರಾಶಿ (Gemini)
ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ವೃತ್ತಿಪರ ಜೀವನವು ಅದ್ಭುತವಾಗಿರುತ್ತದೆ. ಆರ್ಥಿಕವಾಗಿ ಸದೃಢರಾಗುವಿರಿ. ಆದರೂ, ಹಣಕಾಸು ಖರ್ಚಾಗುವ ಸಾಧ್ಯತೆ ಇದೆ. ಕೌಟುಂಬಿಕ ವಾತಾವರಣ ಸುಖಕರವಾಗಿರುತ್ತದೆ. ಕೋಪವನ್ನು ನಿಯಂತ್ರಿಸಿ.
ಕಟಕ ರಾಶಿ (cancer)
ವ್ಯಾಪಾರವನ್ನು ವಿಸ್ತರಿಸಲು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವುದು. ಮಕ್ಕಳ ಭವಿಷ್ಯದ ಬಗ್ಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುವಿರಿ. ಕೆಲಸ ಕಾರ್ಯಗಳಿಗೆ ಎದುರಾಗಿದ್ದ ಅಡೆತಡೆ ನಿವಾರಣೆಯಾಗುವುದು. ಆದಾಯಕ್ಕೆ ತಕ್ಕಂತೆ ಖರ್ಚೂ ಇರುವುದು.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ಇಂದಿನ ದಿನವು ಸಂತೋಷದಿಂದ ಕೂಡಿರುತ್ತದೆ. ವೃತ್ತಿ ಕ್ಷೇತ್ರದಲ್ಲಿ ಅವಕಾಶಗಳು ಸಿಗಲಿವೆ. ಉನ್ನತ ಅಧಿಕಾರಿಗಳ ಬೆಂಬಲ ನಿಮಗಿರುವುದು. ಹಣಕಾಸಿನ ಸಮಸ್ಯೆ ನಿವಾರಣೆಯಾಗುವುದು. ಹಣ ಉಳಿತಾಯದ ಬಗ್ಗೆ ಯೋಚನೆ ಮಾಡಬಹುದು. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ.
ಕನ್ಯಾ ರಾಶಿ (Virgo)
ಇಂದು ನಿಮ್ಮ ದಿನ ಉತ್ತಮವಾಗಿರಲಿದೆ. ವ್ಯಾಪಾರ ಕ್ಷೇತ್ರಕ್ಕೆ ಸಂಬಂಧಿಸಿದ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಸಂಗಾತಿಯೊಂದಿಗಿನ ಮನಸ್ತಾಪ ಸರಿಯಾಗುವುದು. ಮನೆ ಮಂದಿಯೊಂದಿಗೆ ಪ್ರವಾಸಕ್ಕೆ ತೆರಳುವ ಸಾಧ್ಯತೆ ಇದೆ. ಹಣಕ್ಕೆ ಸಂಬಂಧಿಸಿದಂತೆ ಎಚ್ಚರದಿಂದ ಇರುವ ಅಗತ್ಯವಿದೆ.
ತುಲಾ ರಾಶಿ (Libra)
ಮನೆಯ ವಾತಾವರಣ ಸಂತೋಷದಿಂದ ಕೂಡಿರುತ್ತದೆ. ಬಹಳ ದಿನಗಳಿಂದ ಖರೀದಿಸಬೇಕು ಅಂದುಕೊಂಡಿದ್ದ ಐಶಾರಾಮಿ ವಸ್ತುವಿಗಾಗಿ ಹಣ ಖರ್ಚು ಮಾಡುವಿರಿ. ಹೊಸ ಉದ್ಯೋಗದ ಅವಕಾಶ ಸಿಗುವುದು. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುವಿರಿ.
ವೃಶ್ಚಿಕ ರಾಶಿ (Scorpio)
ಇಂದು ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಿರಿ. ವ್ಯಾಪಾರ ವಿಸ್ತರಣೆಗೆ ಸರಿಯಾದ ಸಮಯ. ಬಾಕಿ ಹಣ ಕೈ ಸೇರುವುದು. ಅರಿವಿಲ್ಲದ ಮೂಲದಿಂದ ಹಣ ಬರುವುದು. ದಾಂಪತ್ಯ ಜೀವನವು ಅತ್ಯುತ್ತಮವಾಗಿರಲಿದೆ.
ಧನು ರಾಶಿ (Sagitarius)
ನಿಮ್ಮ ಮನಸ್ಸಿನ ಆಸೆಯಂತೆ ಒಳ್ಳೆಯ ಕಂಪನಿಯಲ್ಲಿ ಉದ್ಯೋಗ ಸಿಗುವುದು. ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ. ಬೇರೆ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ವೇತನ ಹೆಚ್ಚಳವಾಗುವ ಸಾಧ್ಯತೆ ಇದೆ.
ಮಕರ ರಾಶಿ (Capricorn)
ಕಚೇರಿಯಲ್ಲಿ ನಿಮ್ಮ ವಿರುದ್ದ ಕೆಲಸ ಮಾಡುವವರು ಹೆಚ್ಚಾಗುವರು. ಇಂಥವರಿಂದ ಎಚ್ಚರಿಕೆಯಿಂದ ಇರಿ. ಯಾರೊಂದಿಗೂ ವಾದಕ್ಕೆ ಇಳಿಯಬೇಡಿ. ಹಣದ ಬಗ್ಗೆ ನಿರ್ಲಕ್ಷ್ಯ ಬೇಡ. ಮನೆಯವರ ಬೆಂಬಲ ನಿಮ್ಮ ಜೊತೆಗಿರುವುದು.
ಕುಂಭ ರಾಶಿ (Aquarius)
ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶಗಳು ಸಿಗಲಿವೆ. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವುದು. ರಿಯಲ್ ಎಸ್ಟೇಟ್ ವ್ಯಾಪಾರಿಗಳಿಗೆ ಲಾಭವಾಗುವುದು. ಕೌಟುಂಬಿಕ ಪ್ರೀತಿ ಹೆಚ್ಚಾಗಲಿದೆ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ.
ಮೀನ ರಾಶಿ (Pisces)
ಅಂದುಕೊಂಡ ಕೆಲಸಗಳು ಪೂರ್ಣವಾಗುವುದು. ಹೊಸ ವ್ಯವಹಾರ ಆರಂಭಿಸುವ ಬಗ್ಗೆ ಮೊದಲ ಹೆಜ್ಜೆ ಇಡುವಿರಿ. ಆರ್ಥಿಕ ಲಾಭವಾಗಲಿದೆ ಆದರೆ ಖರ್ಚುಗಳ ಮೇಲೆ ಹಿಡಿತವಿರಲಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಾಗಬಹುದು. ಅನಗತ್ಯ ಕೋಪವನ್ನು ತಪ್ಪಿಸಿ.
(ಬರಹ: ರಂಜಿತಾ ಆರ್.ಕೆ.)












Click it and Unblock the Notifications