Get Updates
Get notified of breaking news, exclusive insights, and must-see stories!

Mahalakshmi Layout Constituency: ಮತ್ತೆ ಗೆಲ್ಲುವ ಉಮೇದಿನಲ್ಲಿ ಗೋಪಾಲಯ್ಯ

ಮೂಲ ವಸತಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಮತ್ತು ಕೊಳೆಗೇರಿಗಳ ಮಿಶ್ರಣವನ್ನು ಹೊಂದಿರುವ ಮಹಾಲಕ್ಷ್ಮೀ ಲೈಔಟ್‌ ವಿಧಾನಸಭಾ ಕ್ಷೇತ್ರವು ಪ್ರಧಾನವಾಗಿ ನಗರ ಪ್ರದೇಶವಾಗಿದೆ.

ಬೆಂಗಳೂರು, ಫೆಬ್ರವರಿ 23: ಬೆಂಗಳೂರು ನಗರದ ವಿಧಾನಸಭಾ ಕ್ಷೇತ್ರಗಳಲ್ಲಿ 2008ರಲ್ಲಿ ರಚನೆಯಾದ ಮಹಾಲಕ್ಷ್ಮೀ ಲೈಔಟ್‌ ಕೇತ್ರ ಬಹಳ ಪ್ರಮುಖವಾದ ಕ್ಷೇತ್ರವಾಗಿದೆ. ಇಲ್ಲಿ ಸತತ ಮೂರು ಬಾರಿಯಿಂದಲೂ ಗೋಪಾಲಯ್ಯ ಅವರು ಗೆಲ್ಲುತ್ತಾ ಬಂದಿದ್ದಾರೆ. ಇದು ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಗೆ ಬರುತ್ತದೆ.

ಮೂಲ ವಸತಿ ಪ್ರದೇಶಗಳು, ಕೈಗಾರಿಕಾ ಪ್ರದೇಶಗಳು ಮತ್ತು ಕೊಳೆಗೇರಿಗಳ ಮಿಶ್ರಣವನ್ನು ಹೊಂದಿರುವ ಕ್ಷೇತ್ರವು ಪ್ರಧಾನವಾಗಿ ನಗರ ಪ್ರದೇಶವಾಗಿದೆ. ಇದು ಪಶ್ಚಿಮ ಬೆಂಗಳೂರಿನ ಉತ್ತರ ಭಾಗಗಳಾದ ಮಹಾಲಕ್ಷ್ಮೀ ಲೇಔಟ್, ನಂದಿನಿ ಲೇಔಟ್, ಯಶವಂತಪುರ ಎಪಿಎಂಸಿ ಯಾರ್ಡ್, ಗೊರಗುಂಟೆಪಾಳ್ಯ, ಕಂಠೀರವ ನಗರ, ಶಂಕರ್ ನಗರ, ಸರಸ್ವತಿಪುರ, ನಾಗಾಪುರ, ಕುರುಬರಹಳ್ಳಿ, ಕಮಲಾನಗರ, ವೃಷಭಾವತಿ ನಗರ ಮತ್ತು ಬಸವೇಶ್ವರನಗರ ಮತ್ತು ಕಾಮಾಕ್ಷಿಪಾಳ್ಯ ಭಾಗಗಳನ್ನು ಒಳಗೊಂಡಿದೆ.

ಅಲ್ಲದೆ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಯ) ಯ ಕೆಳಗಿನ 7 ವಾರ್ಡ್‌ಗಳನ್ನು ಒಳಗೊಂಡಿದೆ. 2008ರಲ್ಲಿ ಕಾಂಗ್ರೆಸ್‌ನ ಎನ್‌ಎಲ್‌ ನಾಗೇಂದ್ರ ಬಾಬು ಅವರು ಇಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ 2013ರಿಂದ 2018, 2019ರಲ್ಲಿ ಗೋಪಾಲಯ್ಯನವರು ಆಯ್ಕೆಯಾಗುತ್ತಾ ಬಂದಿದ್ದಾರೆ. ಮೊದಲು ಜೆಡಿಎಸ್‌ನಲ್ಲಿ ಇದ್ದ ಗೋಪಾಲಯ್ಯ ಅವರು ಬಳಿಕ ಬಿಜೆಪಿಯಿಂದ ಆಯ್ಕೆಯಾಗುತ್ತಾ ಬಂದಿದ್ದಾರೆ, ಇಲ್ಲಿ ಒಕ್ಕಲಿಗರ ಮತಗಳು ಅಧಿಕವಾಗಿದೆ.

2019ರ ವಿಧಾನಸಭಾ ಉಪ ಚುನಾವಣೆಯಲ್ಲಿ ಕೆ. ಗೋಪಾಲಯ್ಯನವರಿಗೆ 85,889 ಮತಗಳು ಬಂದಿದ್ದವು. ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಎಂ ಶಿವರಾಜು ಅವರಿಗೆ 31,503 ಮತಗಳು ಬಂದಿದ್ದವು. ಇದೇ 2018ರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಿದ್ದ ಗೋಪಾಲಯ್ಯ ಅವರು 88,218 ಮತಗಳು ಬಂದರೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಎನ್‌ಎಲ್‌ ನಾಗೇಂದ್ರ ಬಾಬು ಅವರಿಗೆ 47,118 ಮತಗಳು ಬಂದಿದ್ದವು. ಕಾಂಗ್ರೆಸ್‌ಮ ಮಂಜುನಾಥ್‌ ಎಚ್‌ಎಸ್‌ ಅವರಿಗೆ 20,496 ಮತಗಳು ಸಿಕ್ಕಿದ್ದವು.

ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರ

ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರ

ಇನ್ನೂ 2013ರ ವಿಧಾನಸಭಾ ಚುನಾವಣೆಯಲ್ಲಿ ಗೋಪಾಲಯ್ಯ ಅವರಿಗೆ 66,127 ಮತಗಳು, ಕಾಂಗ್ರೆಸ್‌ನಲ್ಲಿದ್ದ ಎನ್‌ಎಲ್‌ ನಾಗೇಂದ್ರ ಬಾಬು ಅವರಿಗೆ 50,757 ಮತಗಳು ಹಾಗೂ ಬಿಜೆಪಿಯ ಎಚ್‌ ಹರೀಶ್‌ ಅವರಿಗೆ 23,545 ಮತಗಳು ಬಂದಿದ್ದವು. ಈಗ ಬಿಜೆಪಿಯಲ್ಲಿರವ ಕೆ. ಗೋಪಾಲಯ್ಯನವರಿಗೆ ಬಿಜೆಪಿ ಟಿಕೆಟ್‌ ಮತ್ತೆ ಸಿಗುವ ಸಾಧ್ಯತೆ ಇದೆ. ಆದರೆ ಶಂಕರ ಮಠದ ವಾರ್ಡಿನ ಎನ್ ಶಿವರಾಜು ಅವರು 2019 ರ ಡಿಸೆಂಬರ್‌ನಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡ ಕೆ ಗೋಪಾಲಯ್ಯ ವಿರುದ್ಧ ಸೋತಿದ್ದ ಮಹಾಲಕ್ಷ್ಮೀ ಲೇಔಟ್‌ನಿಂದ ಟಿಕೆಟ್‌ಗಾಗಿ ಲಾಬಿ ನಡೆಸುತ್ತಿದ್ದಾರೆ.

ಹಿರಿಯರ ಸ್ಥಾನಗಳನ್ನು ಬದಲಾಯಿಸಲು ಮಾತು

ಹಿರಿಯರ ಸ್ಥಾನಗಳನ್ನು ಬದಲಾಯಿಸಲು ಮಾತು

ಈ ಮಧ್ಯೆ ಬಿಜೆಪಿಯಲ್ಲಿ ಆರ್ ಅಶೋಕ (ಪದ್ಮನಾಭನಗರ), ಎಸ್‌ಆರ್ ವಿಶ್ವನಾಥ್ (ಯಲಹಂಕ), ಸಿಎನ್ ಅಶ್ವಥ್ ನಾರಾಯಣ (ಮಲ್ಲೇಶ್ವರಂ), ಅರವಿಂದ ಲಿಂಬಾವಳಿ (ಮಹದೇವಪುರ), ಕೆ ಗೋಪಾಲಯ್ಯ (ಮಹಾಲಕ್ಷ್ಮೀ ಲೇಔಟ್) ಅವರಂತಹ ಹಿರಿಯರ ಸ್ಥಾನಗಳನ್ನು ಬದಲಾಯಿಸಲು ಪಕ್ಷದ ನಾಯಕತ್ವ ಯೋಜಿಸುತ್ತಿದೆ ಎಂಬ ಮಾತುಗಳು ಇವೆ.

ಒಕ್ಕಲಿಗ ಮತದಾರರು ಹೆಚ್ಚಿರುವ ಪ್ರದೇಶ

ಒಕ್ಕಲಿಗ ಮತದಾರರು ಹೆಚ್ಚಿರುವ ಪ್ರದೇಶ

ಅಭಿವೃದ್ಧಿ ಹೊಂದಿದ, ಕೊಳಗೇರಿ ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳ ಮಿಶ್ರಣವಾಗಿರುವ ಇಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾ ಬಿಸಿ ಏರಿದೆ. ಮೊದಲೇ ಹೇಳಿದಂತೆ ಒಕ್ಕಲಿಗ ಮತದಾರರು ಹೆಚ್ಚಿರುವ ಪ್ರದೇಶ. ಅವರೇ ಇಲ್ಲಿ ನಿರ್ಣಯಕ ಮತದಾರರು. ಇಲ್ಲಿ ಸಾಮಾನ್ಯವಾಗಿ ಜಾತಿ ವಿಚಾರ ಚುನಾವಣಾ ಫಲಿತಾಂಶದ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಜನರ ಜೊತೆಗಿನ ಸಂಪರ್ಕವು ಪ್ರಮುಖ ಪಾತ್ರ ವಹಿಸಲಿದೆ.

ಡಾ. ನಾರಾಯಣಸ್ವಾಮಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಡಾ. ನಾರಾಯಣಸ್ವಾಮಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿ

ಮಹಾಲಕ್ಷ್ಮೀಯಲ್ಲಿ ಈಗ ಮತ್ತೊಮ್ಮೆ ಕೆ. ಗೋಪಾಲಯ್ಯ ಅವರು ಕಣಕ್ಕೆ ಇಳಿಯಲು ಉತ್ಸುಹಕರಾಗಿದ್ದಾರೆ. ಇಲ್ಲಿ 2019ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕಾರ್ಪೊರೇಟರ್‌ ಎಂ ಶಿವರಾಜು ಅವರು ಹಾಗೂ ಜೆಡಿಎಸ್‌ನ ಡಾ. ಗಿರೀಶ್‌ ಕೆ. ನಾಶಿ ಇಬ್ಬರೂ ಈ ಬಾರಿ ಕಣಕ್ಕೆ ಇಳಿಯವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಗೋಪಾಲಯ್ಯಗೆ ಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ಒಕ್ಕಲಿಗ ಸಂಘದ ನಿರ್ದೇಶಕರು ಆಗಿರುವ ಮಲ್ಲೇಶ್ವರದ ವೇಗಸ್‌ ಆಸ್ಪತ್ರೆಯ ವೈದ್ಯ ಡಾ. ನಾರಾಯಣಸ್ವಾಮಿ ಅವರು ಕಾಂಗ್ರೆಸ್‌ನಿಂದ ಟಿಕೆಟ್‌ ಕೋರಿ ಅರ್ಜಿ ಹಾಕಿದ್ದಾರೆ. ಜೆಡಿಎಸ್‌ನಿಂದ ಸಿ. ರಾಜಣ್ಣ ಮತ್ತು ಬಿಬಿಎಂಪಿ ಮಾಜಿ ಉಪ ಮೇಯರ್‌ ಭದ್ರೇಗೌಡ ಆಕಾಂಕ್ಷಿಗಳಾಗಿದ್ದಾರೆ. ಎಎಪಿಯಿಂದ ಶಾಂತಾಲಾ ದಾಮ್ಲೆ ಅವರು ತಯಾರಿ ನಡೆಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+