Bengaluru property: ಬೆಂಗಳೂರು ಆಸ್ತಿದಾರರಿಗೆ ಬೆಸ್ಕಾಂ ಭರ್ಜರಿ ಗುಡ್‌ನ್ಯೂಸ್, ಹೊಸ ಅಪ್ಡೇಟ್ಸ್‌

Bengaluru property: ಬೆಂಗಳೂರಿನ ಹೊಸ ಆಸ್ತಿದಾರರಿಗೆ ಬೆಸ್ಕಾಂ ಭರ್ಜರಿ ಗುಡ್‌ನ್ಯೂಸ್ ಕೊಟ್ಟಿದೆ. ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆಗಸ್ಟ್‌ 15ರವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಅಲ್ಲದೆ ಸ್ವಾಧೀನಾನುಭವ ಪತ್ರ (OC) ಸಲ್ಲಿಕೆಗೆ ಒಂದು ಬಾರಿ ವಿನಾಯಿತಿ ಪಡೆದು ವಿದ್ಯುತ್ ಸಂಪರ್ಕ ಪಡೆಯಲು ವಿಶೇಷ ಅವಕಾಶವನ್ನೂ ಕಲ್ಪಿಸುವುದಾಗಿ ಬೆಸ್ಕಾಂ ಹೇಳಿದೆ. ಇದರಿಂದ ಬೆಂಗಳೂರಿನಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಎಂದು ಕಾಯುತ್ತಿರುವವರಿಗೆ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಈ ವಿಚಾರವಾಗಿ ಬೆಸ್ಕಾಂ ಹೇಳಿರುವುದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಹೊಸ ವಿದ್ಯುತ್ ಸಂಪರ್ಕ ಪಡೆಯಲು ಆಗಸ್ಟ್‌ 15ರ ವರೆಗೆ ಗಡುವು ವಿಸ್ತರಣೆ ಮಾಡಲಾಗಿದೆ. ಸ್ವಾಧೀನಾನುಭವ ಪತ್ರ (OC)ಸಲ್ಲಿಕೆಗೆ ಒಂದು ಬಾರಿ ವಿನಾಯಿತಿ ಪಡೆದು ವಿದ್ಯುತ್ ಸಂಪರ್ಕ ಪಡೆಯಲು ವಿಶೇಷ ಅವಕಾಶ ಇರಲಿದೆ ಎಂದು ಬೆಸ್ಕಾಂ ತಿಳಿಸಿದೆ. ಮುಂದುವರಿದು ಆದೇಶ ಹೊರಡಿಸಿದ್ದ ದಿನಾಂಕ ಜೂನ್ 22, 2026 ರಿಂದ 15 ದಿನಗಳ ಅವಧಿಯನ್ನು ಇದೀಗ ಆಗಸ್ಟ್‌ 15 ರವರೆಗೆ ವಿಸ್ತರಿಸಲಾಗಿದೆ.

Bengaluru property

Bengaluru property: ಯಾವುದಕ್ಕೆ ಅನ್ವಯವಾಗಲಿದೆ ?

2,400 ಚದರ ಅಡಿವರೆಗಿನ (+20% ಹೆಚ್ಚುವರಿ ವ್ಯತ್ಯಾಸದ), ನಿವೇಶನದಲ್ಲಿ ನಿರ್ಮಿಸಲಾಗಿರುವ ಜಿ+3 ಅಥವಾ ಸ್ಟಿಲ್ಟ್ + 4 ಮಹಡಿಗಳ ವಸತಿ ಕಟ್ಟಡಗಳಿಗೆ ಓಸಿ ಸಲ್ಲಿಸುವುದರಿಂದ ವಿನಾಯಿತಿ ಇರಲಿದೆ.

ಈ ವಿನಾಯಿತಿ ಪಡೆಯಲು ಯಾವ ಅರ್ಹತೆ ಇರಬೇಕು ?

ದಿನಾಂಕ 31ರ ಮೇ 2026ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆದು ಕಟ್ಟಡ ನಿರ್ಮಿಸಿರುವ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆಯದೆ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಅನ್ವಯಿಸಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ತಿಳಿಸಿದೆ.

Gruha Jyothi Scheme: ಗೃಹಜ್ಯೋತಿ ಅರ್ಜಿ ಸಲ್ಲಿಕೆ ವಿಚಾರದಲ್ಲಿ ಬೆಸ್ಕಾಂ ಬಿಗ್ ಗುಡ್‌ನ್ಯೂಸ್: ಇನ್ಮುಂದೆ ಈ ದಾಖಲೆ ಬೇಕಿಲ್ಲ
Gruha Jyothi Scheme: ಗೃಹಜ್ಯೋತಿ ಅರ್ಜಿ ಸಲ್ಲಿಕೆ ವಿಚಾರದಲ್ಲಿ ಬೆಸ್ಕಾಂ ಬಿಗ್ ಗುಡ್‌ನ್ಯೂಸ್: ಇನ್ಮುಂದೆ ಈ ದಾಖಲೆ ಬೇಕಿಲ್ಲ

ಹೊಸ ವಿದ್ಯುತ್ ಸಂಪರ್ಕ ಪಡೆಯುವುದಕ್ಕೆ ಎಲ್ಲೆಲ್ಲಿ ಅವಕಾಶ ಇರಲಿದೆ ?

ಇನ್ನು ಬೆಂಗಳೂರಿನಲ್ಲಿ ಹೊಸ ವಿದ್ಯುತ್ ಸಂಪರ್ಕವನ್ನು ಆಸ್ತಿದಾರರು ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಮಹಾನಗರ ಪಾಲಿಕೆಗಳು, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮ ಪಂಚಾಯಿತಿ ಸೇರಿದಂತೆ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.

1. ನಿಮ್ಮ ಪ್ರದೇಶದ ವಿದ್ಯುತ್ ವ್ಯತ್ಯಯದ ಮಾಹಿತಿ ಇದೀಗ ಬೆಸ್ಕಾಂ ಮಿತ್ರ ಆ್ಯಪ್‌ನಲ್ಲಿ ಲಾಗಿನ್ ಆಗಿ.

2. ವಿದ್ಯುತ್ ನಿಲುಗಡೆಗಳು ಐಕಾನ್ ಕ್ಲಿಕ್ ಮಾಡಿ.

3. ನಿಮ್ಮ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗುವ ದಿನಾಂಕ ಮತ್ತು ಸಮಯದ ಜೊತೆಗೆ ಮುಂದಿನ 7 ದಿನಗಳ ಮಾಹಿತಿ ಪಡೆಯಬಹುದು ಎಂದು ಬೆಸ್ಕಾಂ ಹೇಳಿದೆ.

ಇಂದೇ ಲಾಗಿನ್ ಮಾಡಿ ಹಾಗೂ ಆ್ಯಪ್‌ನ ವಿವಿಧ ಆಯ್ಕೆಗಳ ಸೌಲಭ್ಯ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಬೆಸ್ಕಾಂ 24 *7 ಸಹಾಯವಾಣಿ 1912ಕ್ಕೆ ಕರೆ ಮಾಡಿ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Gruha Jyothi Scheme: ಉಚಿತ ವಿದ್ಯುತ್ ಯೋಜನೆ: ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ, ಹೊಸ ದಾಖಲೆಗಳ ವಿವರ
Gruha Jyothi Scheme: ಉಚಿತ ವಿದ್ಯುತ್ ಯೋಜನೆ: ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸುವುದು ಹೇಗೆ, ಹೊಸ ದಾಖಲೆಗಳ ವಿವರ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+