Smriti Mandhana: ಕೊನೆಗೂ ಟೀಮ್ ಇಂಡಿಯಾ ನಾಯಕತ್ವದ ಬಗ್ಗೆ ಮೌನ ಮುರಿದ ಸ್ಮೃತಿ ಮಂಧಾನ

Smriti Mandhana: ಭಾರತೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಇದೀಗ ನಾಯಕತ್ವದ ಬದಲಾವಣೆಯ ಸದ್ದು ಕೇಳಿಬಂದಿದೆ. ಈ ಬಗ್ಗೆ ಸ್ಟಾರ್ ಆರಂಭಿಕರ ಆಟಗಾರ್ತಿ ಹಾಗೂ ಉಪನಾಯಕಿ ಸ್ಮೃತಿ ಮಂಧಾನಾ ಅವರು ಪ್ರತಿಕ್ರಿಯಿಸಿ ಮಹತ್ವದ ಹೇಳಿಕೆ ನೀಡಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ವೈರಲ್‌ ಆಗುತ್ತಿದೆ.

ಪ್ರಸ್ತುತ ಭಾರತೀಯ ಮಹಿಳಾ ಕ್ರಿಕೆಟ್‌ ತಂಡವನ್ನು ಹರ್ಮನ್‌ಪ್ರೀತ್ ಕೌರ್ ಅವರಯ ಮುನ್ನಡೆಸುತ್ತಿದ್ದಾರೆ. ಇವರ ನಂತರ ಮುಂದಿನ ದಿನಗಳಲ್ಲಿ ನಾಯಕತ್ವ ಯಾರು ವಹಿಸಿಕೊಳ್ಳಲಿದ್ದಾರೆ ಎನ್ನುವ ಪ್ರಶ್ನೆಗಳು ಎದ್ದಿದ್ದವು. ಈ ಪ್ರಶ್ನೆಗೆ ಇದೀಗ ಸ್ಮೃತಿ ಮಂಧಾನ ಅವರು ಉತ್ತರಿಸಿದ್ದು, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಹರ್ಮನ್‌ಪ್ರೀತ್ ಕೌರ್ ನಂತರ ತಾವು ಆ ಸ್ಥಾನ ತುಂಬುವುದಾಗಿ ಮಂಧಾನ ಸ್ಪಷ್ಟಪಡಿಸಿದ್ದಾರೆ.

Smriti Mandhana Ready to Lead India After Harmanpreet Kaur Star Opener Breaks Silence Viral

ಅಪಾರ ಅನುಭವ ಹೊಂದಿರುವ ಮಂಧಾನ

ಇದೀಗ ಸದ್ಯ ಸ್ಮೃತಿ ಮಂಧಾನ ಭಾರತ ತಂಡದ ಉಪನಾಯಕಿ ಆಗಿದ್ದು, ಕಳೆದ ಕೆಲವು ವರ್ಷಗಳಿಂದ ಹರ್ಮನ್‌ಪ್ರೀತ್ ಕೌರ್ ಅವರ ನಾಯಕತ್ವದಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಅಲಭ್ಯರಿದ್ದ ಸಂದರ್ಭಗಳಲ್ಲಿ ಹಂಗಾಮಿ ನಾಯಕಿಯಾಗಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಹೊಂದಿದ್ದಾರೆ.

ನಾಯಕತ್ವದ ಬಗ್ಗೆ ಮೌನ ಮುರಿದ ಮಂಧಾನ

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ ಬೆನ್ನಲ್ಲೇ ಸ್ಮೃತಿ ಮಂಧಾನ ಮಹತ್ವದ ಹೇಳಿಕೆ ನೀಡಿದ್ದಾರೆ. 'ಮುಂದಿನ ದಿನಗಳಲ್ಲಿ ಭಾರತ ತಂಡದ ನಾಯಕತ್ವದ ಜವಾಬ್ದಾರಿ ಸಿಕ್ಕರೆ ಅದನ್ನು ವಹಿಸಿಕೊಳ್ಳಲು ತಾವು ಸಂಪೂರ್ಣವಾಗಿ ಸಿದ್ಧ,' ಅವರು ಸ್ಪಷ್ಟನೆ ನೀಡಿದ್ದಾರೆ.

ಡಬ್ಲ್ಯೂಪಿಎಲ್‌ ಬಗ್ಗೆ ಸ್ಮೃತಿ ಹೇಳಿದ್ದೇನು?

ಡಬ್ಲ್ಯೂಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸಿ ಸತತ ಯಶಸ್ಸು ಕಂಡಿರುವ ಸ್ಮೃತಿ ಮಂಧಾನ ತಮ್ಮ ನಾಯಕತ್ವದ ಶೈಲಿಯ ಬಗ್ಗೆ ಮಾತನಾಡಿದ್ದಾರೆ. 'ನನ್ನ ಪಾಲಿಗೆ ತಂಡದಲ್ಲಿ ಸಕಾರಾತ್ಮಕ ವಾತಾವರಣವನ್ನು ನಿರ್ಮಿಸುವುದು ಅತ್ಯಂತ ಮುಖ್ಯ. ಪ್ರತಿಯೊಬ್ಬ ಆಟಗಾರ್ತಿಯೂ ಯಾವುದೇ ಹಿಂಜರಿಕೆ ಇಲ್ಲದೆ ತನ್ನ ಆಟವನ್ನು ಆಡುವಂತಾಗಬೇಕು. ಆಟಗಾರ್ತಿಯರಿಗೆ ಗೌರವ ಮತ್ತು ನಂಬಿಕೆ ಸಿಕ್ಕಾಗ ಅವರು ಸಹಜವಾಗಿಯೇ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ,' ಎಂದು ಅವರು ಹೇಳಿದರು.

ಸಂತಸ ವ್ಯಕ್ತಪಡಿಸಿದ ಮಂಧಾನ

ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್‌ ಗೆಲುವಿನ ಬಗ್ಗೆ ಮಂಧಾನ ಬಗ್ಗೆ ಮಾತನಡಿ ಸಂತಸ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ ಎರಡು ಇನಿಂಗ್ಸ್‌ಗಳಲ್ಲಿ ಭರ್ಜರಿ ಅರ್ಧಶತಕಗಳನ್ನು (83 ಮತ್ತು 70 ರನ್) ಬಾರಿಸುವ ಮೂಲಕ ಮಂಧಾನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

'ಲಾರ್ಡ್ಸ್‌ನಲ್ಲಿ ನಡೆದ ಮೊದಲ ಮಹಿಳಾ ಟೆಸ್ಟ್ ಪಂದ್ಯದ ಭಾಗವಾಗಿರುವುದು ಮತ್ತು ಜಯ ಸಾಧಿಸಿದ್ದು ಅದ್ಭುತ ಅನುಭವ. ಬಾಲ್ಯದಲ್ಲಿ ನಾವೆಲ್ಲರೂ ಟೆಸ್ಟ್ ಕ್ರಿಕೆಟ್ ಆಡುವ ಕನಸು ಕಾಣುತ್ತಿದ್ದೆವು, ಅದನ್ನು ಲಾರ್ಡ್ಸ್‌ನಲ್ಲಿ ನನಸು ಮಾಡಿಕೊಂಡಿದ್ದು ಎಂದಿಗೂ ಮರೆಯಲಾಗದ ಕ್ಷಣ,' ಎಂದು ಸಂತಸ ವ್ಯಕ್ತಪಡಿಸಿದರು. ಇನ್ನು ಇದೇ ಪಂದ್ಯದ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಪಂದ್ಯಗಳನ್ನು ಪೂರೈಸಿದ ಅತ್ಯಂತ ಕಿರಿಯ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ಇತ್ತೀಚಿನ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಬೇಗನೇ ಟೂರ್ನಿಯಿಂದ ಹೊರಬಿದ್ದ ಕುರಿತು ಪ್ರತಿಕ್ರಿಯಿಸಿ, 'ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿಯುವುದು ಬಹಳ ಮುಖ್ಯ. ನಾವು ಹಳೆಯ ತಪ್ಪುಗಳನ್ನೇ ಪುನರಾವರ್ತಿಸುತ್ತಿದ್ದೇವೆ. 2028ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ನಾವು ಯಾವ ರೀತಿ ಆಡಬೇಕು ಮತ್ತು ತಂಡವಾಗಿ ಏನು ಮಾಡಬೇಕು ಎಂಬುದರ ಬಗ್ಗೆ ಒಂದು ಸ್ಪಷ್ಟವಾದ ಯೋಜನೆ ಸಿದ್ಧಪಡಿಸಿಕೊಳ್ಳಬೇಕಾಗಿದೆ,' ಎಂದು ಹೇಳಿದರು.

ಡಬ್ಲ್ಯೂಪಿಎಲ್‌ನಲ್ಲಿ ನಾಲ್ಕು ಸೀಸನ್‌ಗಳನ್ನ ಪೂರೈಸಿರುವ ಕುರಿತು ಮಾತನಾಡಿದ ಅವರು, 'ಈ ಲೀಗ್‌ನಿಂದಾಗಿ ಸಾಕಷ್ಟು ಹೊಸ ಪ್ರತಿಭೆಗಳು ಭಾರತ ತಂಡಕ್ಕೆ ಸಿಗುತ್ತಿದ್ದಾರೆ. ಆದರೆ ಈ ಯುವ ಆಟಗಾರ್ತಿಯರ ಸಾಮರ್ಥ್ಯವನ್ನು ಭಾರತ ತಂಡದಲ್ಲಿ ಇನ್ನೂ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಲಾಗಿಲ್ಲ,' ಎಂದು ಬೇಸರ ವ್ಯಕ್ತಪಡಿಸಿದರು. ದೊಡ್ಡ ಮಟ್ಟದ ಟೂರ್ನಿಗಳಲ್ಲಿ ತಮ್ಮ ಮೇಲಿರುವ ನಿರೀಕ್ಷೆಗಳ ಒತ್ತಡವನ್ನು ತಾವು ಸದಾ ಆನಂದಿಸುತ್ತೇವೆ ಎಂದು ಹೇಳಿದ್ದಾರೆ. ಇದೇ ವೇಳೆ ಬಿಸಿಸಿಐ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರು ಮಹಿಳಾ ಕ್ರಿಕೆಟ್‌ಗೆ ನೀಡುತ್ತಿರುವ ಪ್ರೋತ್ಸಾವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಒಟ್ಟಿನಲ್ಲಿ ತಾವು ನಾಯಕತ್ವದ ಜವಾಬ್ದಾರಿ ವಹಿಸಿಕೊಳ್ಳುವುದಾಗಿ ಸ್ಮೃತಿ ನೀಡಿರುವ ಹೇಳಿಕೆಗೆ ಅಭಿಮಾನಿಗಳು ಕೂಡ ಸಾಥ್ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+