Bagalkot Election: ಈ ಬಾರಿ ಬಿಜೆಪಿ ಎದುರು ಕಾಂಗ್ರೆಸ್ ಗೆಲುತ್ತಾ?
ಬೆಂಗಳೂರು, ಮಾರ್ಚ್ 24: ಉತ್ತರ ಕರ್ನಾಟಕದ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಒಂದಾಗಿರು ಬಾಗಲಕೋಟೆಯು ವಿಧಾನಸಭಾ ಕ್ಷೇತ್ರವೂ ಹೌದು. ಈ ಜಿಲ್ಲೆ ವಿಜಯಪುರ, ಕೊಪ್ಪಳ, ಗದಗ, ರಾಚಯೂರ ಮತ್ತು ಗದಗ ಜಿಲ್ಲೆಯ ಗಡಿಯನ್ನು ಹಂಚಿಕೊಂಡಿದ್ದು, ಘಟಪ್ರಭ ನದಿತೀರದಲ್ಲಿದೆ.
ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ (1997) ಬಾಗಲಕೋಟೆ ಜಿಲ್ಲೆಯಾಗಿ ಉದಯಿಸಿತು. ಮೊದಲು ಆರು ತಾಲೂಕುಗಳನ್ನು ಹೊಂದಿದ್ದ ಜಿಲ್ಲೆ 2018ರಲ್ಲಿ ಮತ್ತೆ ಹೊಸ ಮೂರು ತಾಲೂಕು ಸೇರಿದವು. ಸ್ವಾತಂತ್ರ್ಯ ನಂತರ ಇಷ್ಟು ವರ್ಷಗಳಲ್ಲಿ ಬಾಗಲಕೋಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಸಾಕಷ್ಟು ಚುನಾವಣೆ ಎದುರಿಸಿದೆ. ಹಲವು ಬಾರಿ ಗೆದ್ದಿದೆಯಾದರೂ ಸಹ ಕ್ಷೇತ್ರದಲ್ಲಿ ಪರಿಪೂರ್ಣ ಅಸ್ತಿತ್ವ ಹೊಂದಲು ಆಗಿಲ್ಲ.

ಬಾಗಲಕೋಟೆ ಕ್ಷೇತ್ರದಲ್ಲಿ ಹಿಂದಿನಿಂದಲೂ ಪಕ್ಷೇತ್ರ, ಜೆಡಿ, ಎನ್‌ಸಿಓ, ಜೆಎನ್‌ಪಿ ಪಕ್ಷಗಳು ತೀವ್ರ ಎದೆಗಾರಿಕೆ ತೋರಿಸುತ್ತಲೆ ಬಂದಿದ್ದವು. ಕಾಂಗ್ರೆಸ್ ಇಲ್ಲಿ ಬಹುಮತ ಪಡೆದು ಗೆದ್ದು ಬೀಗಿದ್ದು ಇತಿಹಾಸ. 1994 ರಿಂದ ಈಚೆಗೆ ಸಂಘಟಿತವಾಗುತ್ತ ಬಂದ ಬಿಜೆಪಿ ಪಕ್ಷವು ಕಾಂಗ್ರೆಸ್‌ಗೆ ಟಕ್ಕರ್ ಕೊಡುತ್ತಲೆ ಬಂದಿದೆ.
ಕ್ಷೇತ್ರದ ರಾಜಕೀಯ ಇತಿಹಾಸ
ಬಿಜೆಪಿಯು 1999ರಲ್ಲಿ ಸ್ಪರ್ಧಿಸಿ ಸೋಲು ಕಂಡಿತು. ಆದಾದ ಬಳಿಕ ನಿರಂತರವಾಗಿ ಗೆಲ್ಲುತ್ತಲೇ ಬಂದು ಇಂದಿಗೂ ಬಾಗಲಕೋಟೆಯಲ್ಲಿ ಭದ್ರ ಬನಾದಿಯನ್ನೇ ಹಾಕಿದೆ. ಈ ಮಧ್ಯೆ 2013ರ ವಿಧಾನಸಭಾ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ಒಡ್ಡಿದರೂ ಸಹ ಕಾಂಗ್ರೆಸ್ ಅಭ್ಯರ್ಥಿ ಹುಲ್ಲಪ್ಪ ಯಮುನಪ್ಪ ಮೇಟಿ ಅವರು ವಿಜಯ ಪತಾಕೆ ಹಾರಿಸಿದರು. ನಂತರದ ವರ್ಷದ (2018) ಚುನಾವಣೆಯಲ್ಲಿ ಮತ್ತದೇ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಬಿಜೆಪಿಯ ವೀರಣ್ಣ ಚರಂತಿಮಠ ಅವರು ಬಹುಮತಗಳಿಂದ ಗೆಲುವಿನ ನಗೆ ಬೀರಿದರು.

ಬಿಜೆಪಿ ಹೈಕಮಾಂಡ್ ನಾಯಕರು/ವರಿಷ್ಠರು ಒಗ್ಗಟ್ಟಿನ ಮಂತ್ರಿ ಜಪಿಸಿದರೆ, ಬಾಗಲಕೋಟೆಯಲ್ಲಿ ಹಿರಿಯ ಬಿಜೆಪಿ ನಾಯಕ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನಲಾಗುತ್ತಿದೆ. ಹೀಗಾಗಿಯೇ ಇಲ್ಲಿನ ಕಾರ್ಯಕ್ರಮಗಳಿಗೆ ಒಬ್ಬರು ಬಂದರೆ ಮತ್ತೊಬ್ಬರು ಬರುವುದಲ್ಲ. ಆಗಾಗ ಕೋಪ ಜೊತೆಗೆ ಅರೋಪ, ಪರೋಕ್ಷ ವಾಗ್ದಾಳಿ ನಡೆಸುತ್ತಿರುತ್ತಾರೆ. ಆಡಳಿತದ ಜೊತೆಗೆ ಇಂತಹ ವಿಷಯಗಳು ಸಹ ಕ್ಷೇತ್ರದಲ್ಲಿ ಕಮಲ ಅರಳಲು ತೊಡಕಾಗುವ ಸಾಧ್ಯತೆ ಇದೆ.
ಬಿಜೆಪಿ ಬೇಗುದಿ-ಕಾಂಗ್ರೆಸ್‌ಗೆ ವರದಾನ
ಜಿಲ್ಲೆಯಲ್ಲಿ ಹೊಸ ಕೈಗಾರಿಕೆಗಳು, ವೈದ್ಯಕೀಯ ಕಾಲೇಜು ಸ್ಥಾಪನೆ ಆಶ್ವಾಸನೆಯಾಗೇ ಉಳಿದಿವೆ. ಇನ್ನೂ ಕೆಲವು ಯೋಜನೆಗಳು ನೆನೆಗೂದಿಗೆ ಬಿದ್ದಿವೆ. ಪಕ್ಷ ಸಂಘಟನೆಗಾಗಿ ನಾಯಕರಲ್ಲಿ ಉತ್ಸಾಹ ಕುಂದಿದಂತಿದೆ. ಆಗಾಗ ವರಿಷ್ಠರು ಬಂದಾಗ ಮಾತ್ರವೇ ಎಲ್ಲ ಒಟ್ಟಾಗಿದ್ದೇವೆ ಎಂಬಂತೆ ತೋರಿಸಿಕೊಳ್ಳುತ್ತಾರೆ. ಕಾರ್ಯಕ್ರಮ ಮುಗಿದ ಮೇಲೆ ಮತ್ತದೆ ರಾಗ, ಅದೇ ಹಾಡು. ನಾಯಕರೇ ಹೀಗಿರುವಾಗ ಇನ್ನೂ ಪಕ್ಷ ಬಲವರ್ಧನೆ ಹೇಗೆ ಎನ್ನುವಂತಾಗಿದೆ. ಇದರ ಲಾಭ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದುಕೊಳ್ಳಲಿದೆ.
ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬ ಮಾತಿನಂತೆ ಕಮಲದೊಳಗಿನ ಸಣ್ಣ ಮನಸ್ತಾಗಳು, ಆಗದ ಅಭಿವೃದ್ಧಿ ಕಾರ್ಯಗಳು, ಬಿಜೆಪಿ ಆಡಳಿತವ ವೈಫಲ್ಯ ಕಾಂಗ್ರೆಸ್‌ಗೆ ವರದಾನವಾಗಲಿದೆ.

ಸದ್ಯ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಿಜೆಪಿಯಿಂದ ವೀರಣ್ಣ ಚರಂತಿಮಠ, ಮಲ್ಲಿಕಾರ್ಜುನ ಚರಂತಿಮಠ ಮತ್ತು ಬಾಗಲಕೋಟೆ ವಿಧಾನಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಇನ್ನು ಕಾಂಗ್ರೆಸ್‌ನಿಂದ ಯಮುನಪ್ಪ ಮೇಟಿ ಮತ್ತು ಅಜಯಕುಮಾರ್ ಸರ್‌ನಾಯ್ಕ ಅವರು ಟಿಕೆಟ್ ಬಯಸಿದ್ದಾರೆ. ಒಂದು ವೇಳೆ ಇಲ್ಲಿ ಕಾಂಗ್ರೆಸ್ ಲಿಂಗಾಯರಿಗೆ ಟಿಕೆಟ್ ನೀಡಿದ್ದರೆ ತುಸು ಅನುಕೂಲವಾಗುತ್ತಿತ್ತು. ಅದು ಬಿಜೆಪಿಗೆ ಮುಳುವಾಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು.
ಬಾಗಲಕೋಟೆ ಜಿಲ್ಲೆ
ಒಟ್ಟು ಮತದಾರರು - 15,17,756
ಹೊಸ ಸೇರ್ಪಡೆ - 31,650
ಪುರಷರು - 15,203
ಮಹಿಳೆಯರು - 16,349
ಬಾಲಕೋಟೆ ಫಲಿತಾಂಶ ಪಟ್ಟಿ
2018 ವೀರಣ್ಣ ಚರಂತಿಮಠ 85,653 ಹುಲ್ಲಪ್ಪ.ಯ.ಮೇಟಿ 69,719
2013 ಹುಲ್ಲಪ್ಪ.ಯ.ಮೇಟಿ 68,216 ವೀರಣ್ಣ ಚರಂತಿಮಠ 65,316












Click it and Unblock the Notifications