ರಾಜಕೀಯ ಪಕ್ಷಗಳೊಂದಿಗೆ SIR ಸಮಾಲೋಚನೆ: 3 ಹಂತಗಳಲ್ಲಿ ಹೆಸರು ಸೇರ್ಪಡೆಗೆ ಅವಕಾಶ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಒಂದಷ್ಟು ಗೊಂದಲಗಳ ನಡುವೆ SIR ನಡೆಯುತ್ತಿದೆ. ಒಂದಷ್ಟು ಗೊಂದಲ ಪರಿಹರಿಸುವ ಯತ್ನವಾಗಿದೆ. ಇದೀಗ ಬೆಂಗಳೂರು ದಕ್ಷಿಣ ನಗರದ ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಕೆ.ಎನ್. ರಮೇಶ್ ಅವರು ರಾಜಕೀಯ ಪಕ್ಷಗಳೊಂದಿಗೆ ಎಸ್ಐಆರ್ ಕುರಿತು ಮಹತ್ವದ ಸಭೆ ನಡೆಸಿದರು. ಈವರೆಗೆ ಶೇ. 76.64 ಎನ್ಯುಮರೇಷನ್ ಫಾರಂಗಳ ವಿತರಣೆ ಮಾಡಲಾಗಿದೆ ಎಂದು ಮಾಹಿತಿ ಕೊಟ್ಟರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಯಶಸ್ವಿಗೊಳಿಸಲು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಪದಾಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಈ ವೇಳೆ ಪ್ರತಿ ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲೂ ಮತದಾರರ ವಿವರಗಳನ್ನು ಪರಿಶೀಲಿಸಲು ಕನಿಷ್ಠ 1 ರಿಂದ 2 RWA ಪ್ರತಿನಿಧಿಗಳನ್ನು ನೇಮಿಸಲು ತಿಳಿಸಲಾಗಿದೆ. ಈ ಪ್ರತಿನಿಧಿಗಳು ಎನ್ಯೂಮರೇಷನ್ ಫಾರಂಗಳನ್ನು ಭರ್ತಿ ಮಾಡಲು ಹಾಗೂ ಹಿಂಪಡೆಯಲು ಬಿಎಲ್ಒ ಗಳಿಗೆ ನೆರವಾಗಲಿದ್ದಾರೆ.

Bengaluru South

ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಜೊತೆಗೂಡಿ ಪ್ರತಿಯೊಂದು ಮನೆಗೆ ಭೇಟಿ ನೀಡಿ, ಸಾರ್ವಜನಿಕರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಹಾಗೂ ವಿವರಗಳನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ನೆರವು ನೀಡಲಿದ್ದಾರೆ ಎಂದು ತಿಳಿಸಿದರು.

ಮಹಿಳೆಯರಿಗೆ ಬೆಂಗಳೂರು ಸೇಫ್: ರಾತ್ರಿ 2ಕ್ಕೆ ಓಡಾಡಿದ್ರು ತೊಂದ್ರೆ ಇಲ್ಲ: ನೊಯ್ಡಾ ಬಿಟ್ಟು ಇಲ್ಲಿಗೇ ಬರ್ತಿನಿ: ವಿಡಿಯೋ ವೈರಲ್
ಮಹಿಳೆಯರಿಗೆ ಬೆಂಗಳೂರು ಸೇಫ್: ರಾತ್ರಿ 2ಕ್ಕೆ ಓಡಾಡಿದ್ರು ತೊಂದ್ರೆ ಇಲ್ಲ: ನೊಯ್ಡಾ ಬಿಟ್ಟು ಇಲ್ಲಿಗೇ ಬರ್ತಿನಿ: ವಿಡಿಯೋ ವೈರಲ್

3 ರೀತಿಯಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ

ಮೊದಲಿಗೆ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆ ಮಾಡಲು ಬಯಸುವವರು ನಿಗದಿತ ಫಾರಂ-6 ಅನ್ನು ಕಡ್ಡಾಯವಾಗಿ ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ ನೀಡುವುದು. 2002ರ ನಂತರದ ಮತದಾರರ ಪಟ್ಟಿಯಲ್ಲಿರುವವರು 2002ರ ಪಟ್ಟಿಯಲ್ಲಿರುವ ಸಂಬಂಧಿಗಳ ವಿವರ ನಮೂದಿಸುವುದು.

2002ರ ಪಟ್ಟಿಯಲ್ಲಿರುವಂತಹ ಮತದಾರರು ಆಗಿನ ಮತದಾರರ ಪಟ್ಟಿಯಲ್ಲಿನ ವಿವರಗಳನ್ನು ಭರ್ತಿ ಮಾಡುವ ಮೂಲಕ SIR ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸಬಹುದಾಗಿದೆ. ಎಸ್ ಐ ಆರ್ ನಂತರ ಕರಡು ಮತದಾರರ ಪಟ್ಟಿ ಪ್ರಕಟಣೆಗೊಂಡ ನಂತರವೂ ನಮೂನೆ 6 ಸಲ್ಲಿಸಲು ಅವಕಾಶ ಇರುತ್ತದೆ ಎಂದರು.

ಆನ್‌ಲೈನ್ ಸಲ್ಲಿಕೆಗೆ ಮನವಿ

ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ಚುರುಕುಗೊಳಿಸಲು ಬಿಎಲ್‌ಒಗಳ ಜೊತೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದರೊಂದಿಗೆ ಎಲ್ಲಾ ರಾಜಕೀಯ ಪಕ್ಷಗಳು ಸಹ ತಮ್ಮ ಬೂತ್ ಮಟ್ಟದ ಏಜೆಂಟರನ್ನು ಬಿಎಲ್‌ಒಗಳ ಜೊತೆಗೆ ಸಕ್ರಿಯವಾಗಿ ತೊಡಗಿಸಿಕೊಂಡು ಮತದಾರರಿಗೆ ನೀಡಿರುವ ಎನ್ಯುಮರೇಷನ್ ಫಾರಂ ಗಳನ್ನು ಬಿಎಲ್ಒ ಮುಖಂತರ ಹಿಂಪಡೆಯಲು ಸಹಕರಿಸುವಂತೆ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ತಿಳಿಸಿದರು.

ಭರ್ತಿ ಮಾಡಿದ ಎನ್ಯುಮರೇಷನ್ ಫಾರಂ ಸಂಗ್ರಹಣೆ

ಮತದಾರರಿಗೆ ವಿತರಿಸಿದ ಎನ್ಯುಮರೇಷನ್ ಫಾರಂಗಳನ್ನು ಭರ್ತಿ ಮಾಡಲು ಬಿ ಎಲ್ ಒ ಗಳಿಗೆ ಅಗತ್ಯ ತರಬೇತಿ ನೀಡಲಾಗಿರುತ್ತದೆ. ಅಲ್ಲದೆ BLA ಗಳು ಅಥವಾ ಸ್ಥಳೀಯ ಮಟ್ಟದ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಫಾರಂ ಗಳನ್ನು ಭರ್ತಿ ಮಾಡಲು ಮತದಾರರಿಗೆ ಅಗತ್ಯ ನೆರವು ನೀಡಬಹುದಾಗಿದೆ ಹಾಗೂ ಭರ್ತಿ ಮಾಡಿದ ನಮೂನೆಗಳನ್ನು ಮತದಾರರು ಕಡ್ಡಾಯವಾಗಿ BLO ಗಳಿಗೆ ನೇರವಾಗಿ ಹಿಂದಿರುಗಿಸಲು ಕ್ರಮ ವಹಿಸಬಹುದಾಗಿರುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+