14ನೇ ವಯಸ್ಸಿಗೆ ಬುರ್ಜ್ ಖಲೀಫಾದಲ್ಲಿ ಆಫೀಸ್! ದುಬೈನಲ್ಲಿ ಎಐ ಸ್ಟಾರ್ಟ್ಅಪ್ ಶುರು ಮಾಡಿದ ಭಾರತೀಯ ಬಾಲಕನ ಯಶೋಗಾಥೆ

ಹದಿನಾಲ್ಕು ವರ್ಷದ ಮಕ್ಕಳು ಸಾಮಾನ್ಯವಾಗಿ ಹತ್ತನೇ ತರಗತಿ ಓದುತ್ತಿರಬಹುದು. ಅದರಲ್ಲೂ ಹೆಚ್ಚೆಂದರೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಯಾರಿಯಲ್ಲಿ ಬ್ಯುಸಿ ಇರಬಹುದು. ಆಟ, ಪಾಠ ಬಿಟ್ಟರೆ ಅವರಿಗೆ ಪ್ರಪಂಚದ ಬೇರೆ ಯಾವುದೇ ತೊಂದರೆ ಇರುವುದಿಲ್ಲ. ಆದರೆ, ಇಲ್ಲೊಬ್ಬ 14 ವರ್ಷದ ಪುಟ್ಟ ಹುಡುಗ ದುಬೈನಲ್ಲಿ ತನ್ನದೇ ಆದ ಎಐ ಸ್ಟಾರ್ಟ್‌ಅಪ್ ಆರಂಭಿಸುವ ಮೂಲಕ ಇಡೀ ಜಗತ್ತೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈ ಪುಟ್ಟ ಉದ್ಯಮಿಯ ಹೆಸರು ಜೈನಮ್ ಜೈನ್. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಅತ್ಯಂತ ಕಿರಿಯ ಎಐ ಉದ್ಯಮಿ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಇನ್ನೂ ವಿಶೇಷವೆಂದರೆ ಈತ, ವಿಶ್ವದ ಅತಿ ಎತ್ತರದ ಕಟ್ಟಡ ಎಂದು ಖ್ಯಾತಿ ಪಡೆದಿರುವ ದುಬೈನ ಬುರ್ಜ್ ಖಲೀಫಾದಲ್ಲಿ ತನ್ನ ಆಫೀಸ್‌ ತೆರೆದಿದ್ದಾನೆ.

'ಮೆಂಗೋ ಇಂಜಿನ್' ಎಂಬ ಎಐ ಸ್ಟಾರ್ಟಪ್‌

ದುಬೈನಲ್ಲಿ 'ಮೆಂಗೋ ಇಂಜಿನ್' ಎನ್ನುವ ಎಐ ಸ್ಟಾರ್ಟ್‌ಅಪ್ ಆರಂಭಿಸಿರುವ ಜೈನಮ್ ಜೈನ್. ಇದು ವ್ಯವಹಾರಗಳನ್ನ ಸುಲಭಗೊಳಿಸುವ ಮತ್ತು ಆಟೋಮೇಷನ್ ಮಾಡುವ ಉದ್ದೇಶದಿಂದ ತಯಾರಿಸಲಾಗಿದೆ. ಇದು ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಪ್ಲಾಟ್‌ಪಾರ್ಮ್‌ಗಳಲ್ಲಿ ಒಂದಾಗಿದೆ. ಮಾರ್ಕೆಟಿಂಗ್, ಗ್ರಾಹಕರೊಂದಿಗಿನ ಮಾತುಕತೆ, ಸೇಲ್ಸ್ ಸಪೋರ್ಟ್ ಮತ್ತು ಕಂಟೆಂಟ್ ಕ್ರಿಯೇಷನ್‌ನಂತಹ ಪ್ರಮುಖ ಕೆಲಸಗಳನ್ನಾ ಸುಲಭವಾಗಿ ಮತ್ತು ವೇಗವಾಗಿ ಮಾಡಲು ಈ ವೇದಿಕೆ ವ್ಯಾಪಾರಸ್ಥರಿಗೆ ಸಹಾಯ ಮಾಡುತ್ತದೆ. ಇಷ್ಟು ಚಿಕ್ಕ ವಯಸ್ಸಿಗೆ ಇಂತಹದ್ದೊಂದು ಕಂಪನಿಯನ್ನು ಸ್ಥಾಪಿಸುವ ಮೂಲಕ ಜೈನಮ್ ಜೈನ್, ದುಬೈನ ಅತ್ಯಂತ ಕಿರಿಯ ಎಐ ಸ್ಟಾರ್ಟ್‌ಅಪ್ ಸಂಸ್ಥಾಪಕರಲ್ಲಿ ಒಬ್ಬನೆಂದು ಗುರುತಿಸಿಕೊಂಡಿದ್ದಾನೆ.

14 Year Old Boy

6ನೇ ವಯಸ್ಸಿಗೇ ಮೊಳಕೆಯೊಡೆದ ಸ್ವಂತ ಉದ್ಯಮ ಕಟ್ಟುವ ಕನಸು

ಜೈನಮ್ ಜೈನ್ ಅವರ ಈ ಕನಸು ನಿನ್ನೆ ಮೊನ್ನೆಯದ್ದಲ್ಲ. ಆತನಿಗೆ ಕೇವಲ ಆರು ವರ್ಷವಿದ್ದಾಗ ಉದ್ಯಮದ ಬಗ್ಗೆ ಆಸಕ್ತಿ ಮೂಡಿತ್ತು . ಒಮ್ಮೆ ತನ್ನ ತಂದೆಯ ಜೊತೆ ವ್ಯಾಪಾರ ಮಾತುಕತೆಗೆ ಹೋಗಿದ್ದಾಗ, ಅಲ್ಲಿನ ವಾತಾವರಣ ಆತನ ಮನಸ್ಸಿನ ಮೇಲೆ ಪ್ರಭಾವ ಬೀರಿತು. ಅಂದಿನಿಂದ ಆತ ಶಾಲಾ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತಗೊಳಿಸಿಕೊಳ್ಳಲಿಲ್ಲ.ಇದರ ಜೊತೆಗೆ ಯಶಸ್ವಿ ಉದ್ಯಮಿಗಳನ್ನು ಭೇಟಿಯಾಗುವುದು ಮತ್ತು ನೈಜ ಪ್ರಪಂಚದ ಅನುಭವಗಳ ಮೂಲಕ ಕಲಿಯುವುದರತ್ತ ಹೆಚ್ಚಿನ ಗಮನ ಹರಿಸಿದನು. ಈ ಕಲಿಕೆಯೇ ಆತನನ್ನು ಇಂದು ದುಬೈನ ಪ್ರತಿಷ್ಠಿತ ಬುರ್ಜ್ ಖಲೀಫಾದಲ್ಲಿ ಕಚೇರಿ ತೆರೆಯುವ ಮಟ್ಟಕ್ಕೆ ಬೆಳೆಸಿದೆ ನೋಡಿ.

ಕೇವಲ 105 ದಿನಗಳಲ್ಲಿ 10ನೇ ತರಗತಿ ಪಾಸ್

ವ್ಯಾಪಾರದ ಕಡೆಗೆ ಹೆಚ್ಚು ಒಲವು ಹೊಂದಿದ್ದ ಜೈನಮ್, ತನ್ನ ಸಮಯವನ್ನೇಲ್ಲ ಉಳಿಸುವ ಸಲುವಾಗಿ ಶೈಕ್ಷಣಿಕ ವಿಭಾಗದಲ್ಲೂ ದಾಖಲೆ ಬರೆದಿದ್ದಾನೆ. ತನ್ನ 13ನೇ ವಯಸ್ಸಿನಲ್ಲಿ, ಐಜಿಸಿಎಸ್‌ಇ 10ನೇ ತರಗತಿಯ ಪಠ್ಯವನ್ನಾ ಕೇವಲ 105 ದಿನಗಳಲ್ಲಿ ಓದಿ ಮುಗಿಸುವ ಮೂಲಕ ಸಾಧನೆ ಮಾಡಿದ್ದಾನೆ. ತನ್ನ ಕಂಪನಿಯನ್ನು ಕಟ್ಟಲು ಮತ್ತು ಹೊಸ ವಿಚಾರಗಳನ್ನು ಅರಿಯಲು ಹೆಚ್ಚಿನ ಸಮಯವನ್ನು ಮೀಸಲಿಡುವ ಉದ್ದೇಶದಿಂದ ಆತ ಬೇಗ ಓದಲು ಶುರುಮಾಡಿಕೊಂಡ. ಜೈನಮ್ ಪ್ರಕಾರ, ತರಗತಿಯ ಶಿಕ್ಷಣ ಎಷ್ಟು ಮುಖ್ಯವೋ, ಪ್ರಾಯೋಗಿಕ ಜ್ಞಾನ ಮತ್ತು ಅನುಭವ ಕೂಡ ಅಷ್ಟೇ ಮುಖ್ಯ.

ಜೈನಮ್ ಜೈನ್ ಬಹುಮುಖ ಪ್ರತಿಭೆ. ಏಕೆಂದರೆ ಆತ ಈಗಾಗಲೇ ಪ್ರಸಿದ್ಧ ಟೆಡ್ ಎಕ್ಸ್‌ನಲ್ಲಿ ಭಾಷಣ ಮಾಡಿದ್ದಾನೆ. ಎರಡು ಪೇಟೆಂಟ್‌ಗಳನ್ನು ಹೊಂದಿರುವ ಆತ, ಪುಸ್ತಕವೊಂದನ್ನೂ ಬರೆದಿದ್ದಾನೆ. ಇದಲ್ಲದೆ, ಆತನ ಯೂಟ್ಯೂಬ್ ಚಾನೆಲ್ 1.45 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದೆ. ತನಗೆ 10 ವರ್ಷವಿದ್ದಾಗ, 50 ದಿನಗಳ ಸವಾಲುಗಳನ್ನು ಹಾಕಿಕೊಳ್ಳಲು ಪ್ರಾರಂಭಿಸಿದ್ದನು.

ಇದರ ಭಾಗವಾಗಿ, 50 ಪುಸ್ತಕಗಳನ್ನು ಓದುವುದು, 50 ವ್ಯಾಪಾರ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಮತ್ತು ವಿವಿಧ ವಲಯಗಳ ವೃತ್ತಿಪರರನ್ನು ಭೇಟಿಯಾಗಲು ಭಾರತದಾದ್ಯಂತ ಸುಮಾರು 6,000 ಕಿಲೋಮೀಟರ್ ಪ್ರಯಾಣಿಸುವಂತಹ ಕಠಿಣ ಸವಾಲುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾನೆ.

ಎನ್ನನ್ನಾದರೂ ಸಾಧಿಸಲು ವಯಸ್ಸು ಮುಖ್ಯವಲ್ಲ, ಬದಲಾಗಿ ಹೊಸ ಆಲೋಚನೆಗಳು, ನಿರಂತರ ಪ್ರಯತ್ನ ಮತ್ತು ಶಿಸ್ತು ಮುಖ್ಯ ಎಂದು ಜೈನಮ್‌ ನಂಬಿದ್ದಾನೆ. ಸಾಮಾಜಿಕ ಜಾಲತಾಣಗಳು ಹಾಗೂ ಉದ್ಯಮ ವಲಯದಲ್ಲಿ ಆತನ ಈ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+