Amruthadhaare Serial: ಅಮೃತಧಾರೆ: ಭೂಮಿಕಾ ಪಾತ್ರ ಅಂತ್ಯವಾಗಲಿದೆಯೇ, ವಿಚಿತ್ರ ತಿರುವಿಗೆ ವೀಕ್ಷಕರು ಶಾಕ್!

Amruthadhaare Serial: ಅಮೃತಧಾರೆ ಸೀರಿಯಲ್ ರೋಚಕ ತಿರುವು ಪಡೆದುಕೊಂಡಿದೆ. ಈಚೆಗೆ ಅದ್ಭುತವಾಗಿ ಮೂಡಿ ಬರುತ್ತಿದ್ದ ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು ಎದುರಾಗಿದೆ. ಆದರೆ, ಅಮೃತಧಾರೆಯ ಜೀವಾಳವಾಗಿರುವ ಹಾಗೂ ಮುಖ್ಯ ಪಾತ್ರಧಾರಿ ಭೂಮಿಕಾಳ ಪಾತ್ರ ಅಂತ್ಯವಾಗಲಿದೆಯೇ ಎನ್ನುವ ಚರ್ಚೆ ಶುರುವಾಗಿದೆ. ಹೊಸ ಟ್ವಿಸ್ಟ್‌ಗಳು ವೀಕ್ಷಕರನ್ನು ಕಂಗಾಲಾಗಿಸಿವೆ. ಅಮೃತಧಾರೆಯಲ್ಲಿ ಭೂಮಿಕಾ ಹಾಗೂ ಗೌತಮ್ ಸಾಲು ಸಾಲು ಸವಾಲುಗಳನ್ನು ಎದುರಿಸಿದ್ದಾರೆ. ಇವರಿಬ್ಬರ ಜೀವನ ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ಎನ್ನುವಂತಾಗಿದೆ. ಇತ್ತೀಚಿನ ದಿನಗಳಲ್ಲಿ ಅಮೃತಧಾರೆಯಲ್ಲಿ ಮೂಡಿಬರುತ್ತಿರುವ ಹೊಸ ಎಪಿಸೋಡ್‌ಗಳು ಪ್ರೇಕ್ಷಕರು ಆಘಾತವನ್ನುಂಟು ಮಾಡಿದೆ.

Amruthadhaare Serial: ಗೌತಮ್ ಪ್ರೀತಿಗೆ ಭೂಮಿ ಸಾವು ಗೆಲ್ಲಲೇಬೇಕು!

ಅಮೃತಧಾರೆ ಸೀರಿಯಲ್‌ನಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್‌ನಿಂದ ಸೊರಗಿದ್ದಾರೆ. ಗೌತಮ್ ಪ್ರೀತಿಗೆ ಭೂಮಿ ಸಾವು ಗೆಲ್ಲಲೇಬೇಕು ಎನ್ನುವ ಸಾಲುಗಳೊಂದಿಗೆ ಹೊಸ ಪ್ರೋಮೋ ಹಂಚಿಕೊಳ್ಳಲಾಗಿದೆ. ನೋವಿನಲ್ಲಿರುವ ಭೂಮಿಕಾ ಅವರು, ಗೌತಮ್ ಅವರೊಂದಿಗೆ ಸುಂದರ ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ನೀವು ಖುಷಿಯಾಗಿರುವುದನ್ನ ನನ್ನ ದುಃಖ ಕಸಿದುಕೊಳ್ಳಬಾರದು ಎಂದು ಈ ಹಿಂದೆ ಗೌತಮ್ ಅವರು ಹೇಳಿದ್ದ ಮಾತುಗಳನ್ನು ಭೂಮಿಕಾ ಅವರು ನೆನಪಿಸಿಕೊಂಡಿದ್ದಾರೆ. ನಮಗೆ ಎಷ್ಟೇ ಕಷ್ಟ ಬಂದರೂ ನಮ್ಮವರ ಸುಖಕ್ಕಾಗಿ ಅದನ್ನು ಮರೆಯಬೇಕಾಗುತ್ತದೆ ಎಂದು ಈ ಹಿಂದೆ ಗೌತಮ್ ಹೇಳಿದ್ದರು. ಅಲ್ಲದೆ ನೀವು ನನ್ನ ಬಾಳಿನಲ್ಲಿ ಬರುವ ವರೆಗೂ ನಾನು ತುಂಬಾ ಬಡವನಾಗಿದ್ದ ಎಂದಿದ್ದ ಮಾತುಗಳನ್ನು ಭೂಮಿಕಾ ಮೆಲುಕು ಹಾಕಿದ್ದಾಳೆ. ಭೂಮಿಕಾ ಅವರ ಪಾತ್ರ ಬರುತ್ತಿರುವ ವಿಧಾನವನ್ನು ನೋಡಿ ವೀಕ್ಷಕರು ಈ ಪಾತ್ರ ಅಂತ್ಯವಾಗಲಿದೆಯೇ ಎಂದು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

Amruthadhaare Serial

ಮಲ್ಲಿ ಎಂಟ್ರಿ; ಎಲ್ಲ ಸರಿ ಹೋಗುತ್ತೆ ಎಂದ ವೀಕ್ಷಕರು

ಇನ್ನು ಅಮೃತಧಾರೆ ಸೀರಿಯಲ್‌ನಲ್ಲಿ ಬಹಳ ದಿನಗಳ ನಂತರ ಮಲ್ಲಿ ಕಾಣಿಸಿಕೊಂಡಿದ್ದಾಳೆ. ಮಲ್ಲಿ ರೀ ಎಂಟ್ರಿಯನ್ನು ನೋಡಿ ವೀಕ್ಷಕರು ಇನ್ಮುಂದೆ ಎಲ್ಲವೂ ಸರಿ ಹೋಗಲಿದೆ ಎಂದಿದ್ದಾರೆ. ಮಲ್ಲಿ ಮದುವೆಯ ನಂತರ ಕಾಣಿಸಿಕೊಂಡಿರಲಿಲ್ಲ. ಭೂಮಿಕಾಳ ಕಷ್ಟದ ಸಮಯದಲ್ಲಿ ಜೊತೆಗಿದ್ದ ಮಲ್ಲಿ ಎಂಟ್ರಿಯನ್ನು ನೋಡಿ ವೀಕ್ಷಕರು ಖುಷಿಯಾಗಿದ್ದಾರೆ. ಭೂಮಿಕಾಗೆ ಮಲ್ಲಿ ಸರ್‌ಪ್ರೈಸ್ ಕೊಟ್ಟಿದ್ದಾಳೆ.

ಸಾವಿನಂಚಿನಲ್ಲಿರೋ ಭೂಮಿಕಾ ಮಾತುಗಳು ಗೌತಮ್‌ಗೆ ಒಗಟಾಗಿ ಕಾಡ್ತಿದೆ!

ಜೀ ಕನ್ನಡದಲ್ಲಿ ಸಾವಿನಂಚಿನಲ್ಲಿರೋ ಭೂಮಿಕಾ ಮಾತುಗಳು ಗೌತಮ್‌ಗೆ ಒಗಟಾಗಿ ಕಾಡ್ತಿದೆ! ಎನ್ನುವ ಸಾಲುಗಳೊಂದಿಗೆ ಅಮೃತಧಾರೆಯ ಹೊಸ ಎಪಿಸೋಡ್ ಶೇರ್ ಮಾಡಿಕೊಳ್ಳಲಾಗಿದ್ದು, ವೀಕ್ಷಕರಲ್ಲಿ ಈ ಅನುಮಾನ ಮೂಡುವುದಕ್ಕೆ ಮುಖ್ಯ ಕಾರಣವಾಗಿದೆ.

ಸುಖಾಂತ್ಯ ಕೊಡಿ ಎಂದ ವೀಕ್ಷಕರು

ಇತ್ತೀಚಿನ ದಿನಗಳಲ್ಲಿ ಅಮೃತಧಾರೆ ಸೀರಿಯಲ್‌ನಲ್ಲಿ ನೋವು ಹೆಚ್ಚಾಗಿದೆ. ಭೂಮಿಕಾಗೆ ಬ್ರಸ್ಟ್‌ಕ್ಯಾನ್ಸರ್‌ ಇದೆ ಎಂದು ತೋರಿಸಿದ ಮೇಲೆ ಬರುತ್ತಿರುವ ಹಾಗೂ ಇದೆ ಎಂದು ವೈದ್ಯರು ಹೇಳಿರುವಾಗಲಿಂದಲೂ ಬಂದಿರುವ ಎಪಿಸೋಡ್‌ಗಳಿಗೆ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಸೀರಿಯಲ್‌ನ ಸ್ಟೋರಿ ಬಹುತೇಕ ಮುಕ್ತಾಯವಾಗಿದೆ. ಭೂಮಿಕಾ ಪಾತ್ರವನ್ನು ಅಂತ್ಯ ಮಾಡಬೇಡಿ, ಸುಖಾಂತ್ಯ ಕೊಡಿ ಎಂದು ವೀಕ್ಷಕರು ಹೇಳಿದ್ದಾರೆ. ಭೂಮಿಕಾ ಅವರ ಕಾಯಿಲೆಗೆ ಚಿಕಿತ್ಸೆ ಕೊಟ್ಟು ಗುಣಪಡಿಸಿ ಸುಖಾಂತ್ಯದಲ್ಲಿ ಧಾರಾವಾಹಿಯನ್ನು ಮುಕ್ತಾಯ ಮಾಡಿ ಅಂತ ವೀಕ್ಷಕರು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+