ಕಡಿಮೆ ವೇತನ, ಕಾರು, ಜಮೀನಿಲ್ಲ! ನನ್ನ ಮದುವೆ ಆಗ್ತೀರಾ; ಯುವಕನ ಫ್ಲೆಕ್ಸ್ ಇಂಟರ್‍ನೆಟ್‌ನಲ್ಲಿ ವೈರಲ್
Viral News: ಇತ್ತೀಚಿನ ದಿನಗಳಲ್ಲಿ ಮದುವೆ ಹುಡುಗಿ ಸಿಗುತ್ತಿಲ್ಲ. ಸಿಕ್ಕರೂ ಅವಳಿಗೆ, ಮತ್ತವಳ ಕುಟುಂಬಕ್ಕೆ ಹುಡುಗನ ಬಳಿಕ ಕಾರು, ಆಸ್ತಿ, ಜಮೀನು, ಕೈತುಂಬ ಸಂಬಳ ಉದ್ಯೋಗ ಇರಲೇಬೇಕೆಂದು ಬಯಸುತ್ತಿದ್ದಾರೆ. ಇಂತಹ ಡಿಮ್ಯಾಂಡ್‌ಗಳಿಂದಾಗಿ ಅದೆಷ್ಟೋ ಯುವಕರ ಮದುವೆ ವಿಳಂಬವಾಗುತ್ತಿದೆ. ಪರಿಸ್ಥಿತಿ ಹೀಗಿರುವಾಗ ಇಲ್ಲೊಬ್ಬ ಯುವಕ ಅಚ್ಚರಿಯ ಫ್ಲೆಕ್ಸ್ (ಪೊಸ್ಟರ್) ಹಾಕಿಸಿ ತನ್ನುನ್ನು ಮದುವೆ ಆಗುವಿರಾ? ಎಂದು ಕೇಳಿದ್ದಾನೆ. ಅವನ ಫ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿದೆ.
ಮಹಾರಾಷ್ಟ್ರದ ಪುಣೆಯಲ್ಲಿ 30 ವರ್ಷದ ಯುವಕನೊಬ್ಬ ರಸ್ತೆ ಬದಿ, ಜಂಕ್ಷನ್‌ಗಳಲ್ಲಿ ತನ್ನ ಬಳಿ ಏನು ಇಲ್ಲ ಮದುವೆ ಆಗ್ತಿರಾ? ಎಂದು ಪೋಸ್ಟರ್ ಹಾಕಿದ್ದು, ವೈರಲ್ ಆಗಿದೆ. ಮದುವೆಗೆ ಸಾಕಷ್ಟು ಷರತ್ತು, ಬೇಡಿಕೆ ಇಡುವ ಇಂದಿನ ಕಾಲದಲ್ಲಿ ಈತ ಜಗತ್ತಿಗೆ ತಿಳಿಯುವಂತೆ ಪಿಂಪ್ರಿ ಚಿಂಚ್ ವಾಡ್‌ನ ಪಿಂಪಲ್ ಸೌದಾಗರ್ ಜಂಕ್ಷನ್ ಹಾಗೂ ಕೇಟ್ ಪಾಟೀಲ್ ಚೌಕ್ ಬಳಿ ಯುವಕನ ಅಚ್ಚರಿಯ ಫ್ಲೆಕ್ಸ್ ಹಾಕರಿವು ಫೋಟೋ, ವಿಡಿಯೋಗಳು ವೈರಲ್ ಆಗಿದೆ.

ಪೋಸ್ಟರ್‌ನಲ್ಲಿ ಏನಿದೆ?
'ನನಗೆ 30 ವರ್ಷದ ಯುವಕ. ಮಾಸಿಕ ಆದಾಯ ಕೇವಲ 25,000 ವೇತನ. ನನಗೆ ಓಡಾಡಲು ಕಾರಿಲ್ಲ, ಕೃಷಿ ಜಮೀನು ಇಲ್ಲ, ಯಾರಾದರೂ ನನ್ನ ಮದುವೆ ಆಗುವಿರಾ' ಎಂದು ಕೇಳಿದ್ದಾನೆ.
ಯುವಕ ತನ್ನ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಬರೆದುಕೊಂಡಿದ್ದಾನೆ. ಜೊತೆಗೆ ಈ ಮಾಹಿತಿಗೆ ತಕ್ಕುದಾದ ಹುಡುಗಿ ಇದ್ದಲ್ಲಿ ದಯವಿಟ್ಟು ತಿಳಿಸಿ ಎಂದು ಕೋರಿದ್ದಾರೆ. ಇದು ನನ್ನ ಮಾಹಿತಿ ಮದುವೆ ಆಗ್ತಿರಾ ಎಂದಿದ್ದಾನೆ. ಈ ಪೋಸ್ಟರ್ ಜನರಲ್ಲಿ ಅಚ್ಚರಿ ಮೂಡಿಸಿದೆ. ತನ್ನ ಕುರಿತು ವಸ್ತುಸ್ಥಿತಿ ಕುರಿತು ಮುಲಾಜಿಲ್ಲದೇ ಸತ್ಯ ಹೇಳಿದ್ದಾನೆ. ಜೊತೆಗೆ ಮದುವೆಗಾಗಿ ವಿನೂತನ ಪ್ರಯತ್ನ ಮಾಡಿದ್ದಾನೆಂದು ಕೆಲವರು ಮೆಚ್ಚಿಕೊಂಡಿದ್ದಾರೆ.
ಅವಿವಾಹಿತ ಕಾಲೆಳೆದ ನೆಟ್ಟಿಗರು!
ಸಾಮಾಜಿಕ ಜಾಲತಾಣ ಬಳಕೆದಾರರು ಈತನ ಕಾಲೆಳೆದು ಕಾಮೆಂಟ್ ಮಾಡಿದ್ದಾರೆ. ನಿನಗೆ ಬರುವ 25 ಸಾವಿರ ಬರುವ ಹಣದಲ್ಲಿ ಬಹುತೇಕ ಪೋಸ್ಟರ್ ಗೆ ಖರ್ಚಾಗಿರಬೇಕಲ್ಲವೇ ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವು ಅವಿವಾಹಿತ ಸ್ನೇಹಿತರು ತಮಗೂ ಈ ರೀತಿಯ ಬ್ಯಾನರ್ ಹಾಕಿಕೊಡುವಂತೆ ತಿಳಿಸಿದ್ದಾರೆ.
ಇತ್ತೀಚೆಗೆ ಮರಾಠಿ ಧಾರವಾಹಿ ಮತ್ತು ಸಿನಿಮಾಗಳ ಪ್ರಮೋಷನ್ ಪೋಸ್ಟರ್ ಗಳನ್ನು ಇದೇ ರೀತಿಯಾಗಿ ಪ್ರಚಾರ ಮಾಡಲಾಗಿತ್ತು. ವ್ಯಕ್ತಿಯೊಬ್ಬರ ತನ್ನ ಪ್ರೇಯಸಿಗೆ ಕ್ಷಮೆ ಕೇಳಲು ಇದೇ ಪುಣೆ ನಗರದಲ್ಲಿ ನೂರಾರು ಕ್ಷಮಾಪಣೆ ಪೋಸ್ಟರ್/ಬ್ಯಾನರ್ ಗಳನ್ನು ಹಂಚಿಕೊಂಡಿದ್ದ. ಆಗಲೂ ಈ ಫ್ಲೆಕ್ಸ್ ವಿಚಾರ ಹೆಚ್ಚು ಸದ್ದು ಮಾಡಿತ್ತು. ಇದೀಗ ಅವಿವಾಹಿತನ ಮದುವೆಯ ಪೋಸ್ಟರ್ ವೈರಲ್ ಆಗುತ್ತಿದೆ.


Click it and Unblock the Notifications
