ಮಧುಮಗಳಿಗಿಂತ ನೀವೇ ಚೆನ್ನಾಗಿ ಕಾಣ್ತೀರ: ಶರ್ಮಿಳಾ ಮದುವೆ ಫೋಟೋ ಹಾಕಿದ ರಮ್ಯಾಗೆ ಅಪ್ಪು ಡೈಲಾಗ್‌ ಹೊಡೆದ ಫ್ಯಾನ್ಸ್‌

ಸ್ಯಾಂಡಲ್‌ವುಡ್‌ನ 'ಮೋಹಕತಾರೆ' ನಟಿ ರಮ್ಯಾ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡು ವರ್ಷಗಳೇ ಕಳೆದಿದ್ದರೂ, ಅವರ ಮೇಲಿರುವ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇಂದಿಗೂ ಅವರ ಒಂದೊಂದು ಫೋಟೋ, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಭಾರಿ ಸಂಚಲನ ಸೃಷ್ಟಿಸುತ್ತವೆ. ಸದ್ಯ ಗೆಳತಿ, ನಟಿ ಶರ್ಮಿಳಾ ಮಾಂಡ್ರೆ ಅವರ ಮದುವೆ ಸಮಾರಂಭದಲ್ಲಿ ರಮ್ಯಾ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಈ ಫೋಟೋ ನೋಡಿ ಆಕಾಶ್‌ ಸಿನಿಮಾದ ಡೈಲಾಗ್‌ ಹೊಡೆದಿರುವುದು ವೈರಲ್‌ ಆಗಿದೆ.

ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಶರ್ಮಿಳಾ ಮಾಂಡ್ರೆ ಅವರ ವಿವಾಹಕ್ಕೆ ರಮ್ಯಾ ಕೂಡ ಸಾಕ್ಷಿಯಾಗಿದ್ರು. ತಮ್ಮ ಆತ್ಮೀಯ ಗೆಳತಿಯ ಮದುವೆಯ ಸುಂದರ ಕ್ಷಣಗಳ ಫೋಟೋವನ್ನು ರಮ್ಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಫೋಟೋದಲ್ಲಿ ಮಧುಮಗಳಿಗಿಂತ ಹೆಚ್ಚಾಗಿ ಅಭಿಮಾನಿಗಳ ಕಣ್ಣು ಬಿದ್ದಿದ್ದೇ ರಮ್ಯಾ ಅವರ ಮೇಲೆ.

Ramya

ರಮ್ಯಾ ಶೇರ್ ಮಾಡಿರುವ ಕ್ಯೂಟ್ ಫೋಟೋಗೆ ಕೇವಲ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆ ಹರಿದಿದೆ. ಅಲ್ಲದೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಮತ್ತು ರಮ್ಯಾ ಕಾಂಬಿನೇಷನ್‌ನ ಎವರ್‌ಗ್ರೀನ್ ಹಿಟ್ ಸಿನಿಮಾ 'ಆಕಾಶ್' ಚಿತ್ರದ ಡೈಲಾಗ್ ನೆನಪಿಸಿ ಅಭಿಮಾನಿಯೊಬ್ಬರು ಮಾಡಿರುವ ಕಾಮೆಂಟ್ ಈಗ ವೈರಲ್ ಆಗುತ್ತಿದೆ.

ನಿಮ್ಮನ್ನ ಒಂಟಿಯಾಗಿ ನೋಡೋಕಾಗ್ತಿಲ್ಲ

ಆಕಾಶ್ ಸಿನಿಮಾದಲ್ಲಿ ಅಪ್ಪು ಅವರು ರಮ್ಯಾ ಅವರಿಗೆ, "ಮದ್ವೆ ಮನೇಲಿ ಜಾಸ್ತಿ ಕಾಣಿಸಿಕೊಳ್ಬೇಡಿ, ಯಾಕಂದ್ರೆ ಮದ್ವೆ ಹೆಣ್ಣಿಗಿಂತ ನೀವೇ ಚೆನ್ನಾಗಿ ಕಾಣ್ತೀರ!" ಎಂದು ತಮಾಷೆಯಾಗಿ ಹೇಳುವ ಡೈಲಾಗ್ ಇದೆ. ಇದನ್ನೇ ಉಲ್ಲೇಖಿಸಿರುವ ಅಭಿಮಾನಿಯೊಬ್ಬರು, "ಅಪ್ಪು ಬಾಸ್ ಅಂದು ಸಿನಿಮಾದಲ್ಲಿ ಹೇಳಿದ ಮಾತು ಇವತ್ತಿಗೂ ನೂರಕ್ಕೆ ನೂರರಷ್ಟು ಸತ್ಯ. ಮದುವೆ ಹೆಣ್ಣಿಗಿಂತ ನೀವೇ ಹೈಲೈಟ್ ಆಗಿ ಕಾಣ್ತಿದ್ದೀರ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಅಭಿಮಾನಿ, "ನೀವೂ ಮದುವೆ ಮಾಡ್ಕೊಳ್ಳಿ, ನಿಮ್ಮನ್ನ ಒಂಟಿಯಾಗಿ ನೋಡೋಕೆ ಆಗ್ತಿಲ್ಲ" ಎಂದು ರಮ್ಯಾಗೆ ನೆನಪಿಸಿದ್ದಾರೆ.

ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?
ಹಸೆಮಣೆ ಏರಲು ಸಜ್ಜಾದ ನವಗ್ರಹ ಬೆಡಗಿ ಶರ್ಮಿಳಾ ಮಾಂಡ್ರೆ: ನಿಶ್ಚಿತಾರ್ಥದ ಡೇಟ್‌ ಫಿಕ್ಸ್‌, ಹುಡುಗ ಯಾರು?

ನನ್ನ ಚಂಪಿಗೆ ಮದುವೆಯಾಯ್ತು

ಶರ್ಮಿಳಾ ಮಾಂಡ್ರೆ ಅವರನ್ನು ಪ್ರೀತಿಯಿಂದ 'ಚಂಪಿ' ಎಂದು ಕರೆಯುವ ರಮ್ಯಾ, ತಮ್ಮ ಪೋಸ್ಟ್‌ನಲ್ಲಿ ಖುಷಿಯ ಸಾಲುಗಳನ್ನು ಬರೆದುಕೊಂಡಿದ್ದಾರೆ. "ನನ್ನ ಮುದ್ದಿನ ಚಂಪಿಗೆ ಮದುವೆಯಾಗಿದೆ. ಶರ್ಮಿಳಾ, ನಾನು ಈ ಮಾತನ್ನು ಹೇಳುತ್ತಿದ್ದೇನೆ ಎಂದರೆ ನನಗೇ ನಂಬಲು ಸಾಧ್ಯವಾಗುತ್ತಿಲ್ಲ. ಕಾಲ ಎಷ್ಟು ವೇಗವಾಗಿ ಓಡುತ್ತದೆ ಅಲ್ವಾ" ಎಂದು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ವೈವಾಹಿಕ ಜೀವನದ ಬಗ್ಗೆ ನಾನೇನೂ ಎಕ್ಸ್‌ಪರ್ಟ್ ಅಲ್ಲ, ಆದ್ರೆ ಪ್ರಸಿದ್ಧ ಕವಿ ಖಲೀಲ್ ಜಿಬ್ರಾನ್ ಅವರು ಆದರ್ಶ ದಾಂಪತ್ಯ ಜೀವನ ಹೇಗಿರಬೇಕು ಎಂಬುದನ್ನು ಅದ್ಭುತವಾಗಿ ವ್ಯಾಖ್ಯಾನಿಸಿದ್ದಾರೆ. ಅದರಂತೆಯೇ ನಿನ್ನ ಬದುಕು ಇರಲಿ ಎಂದಿದ್ದಾರೆ.

"ನನ್ನ ಪ್ರೀತಿಯ ಚಂಪಿ... ನಿನಗೆ ಸಿಗುವ ದಾಂಪತ್ಯ ಜೀವನದಲ್ಲಿ ನೀನು ಸದಾ ಸುರಕ್ಷಿತ ಭಾವನೆಯನ್ನು ಹೊಂದುವಂತಾಗಲಿ. ಇಬ್ಬರೂ ಜೊತೆಯಾಗಿ ಅತ್ಯಂತ ಆಪ್ತವಾದ, ಯಾರಿಗೂ ತೊಂದರೆಯಾಗದ, ಕೇವಲ ನಿಮ್ಮದೇ ಆದ ಸುಂದರ ಪ್ರಪಂಚವನ್ನು ಕಟ್ಟಿಕೊಳ್ಳಿ. ಅಲ್ಲಿ ನೀನು ನಿನ್ನದೇ ಸ್ವಂತ ವ್ಯಕ್ತಿತ್ವದೊಂದಿಗೆ ಸಂಪೂರ್ಣ ಸ್ವತಂತ್ರವಾಗಿರಲು ಸಾಧ್ಯವಾಗಲಿ ಎಂದು ಆಶಿಸುತ್ತೇನೆ. ನಾನು ಯಾವಾಗಲೂ ನಿನ್ನ 'ಸಖಿ'ಯಾಗಿ ನಿನ್ನೊಂದಿಗಿರುತ್ತೇನೆ ಎಂಬುದನ್ನು ಮರೆಯಬೇಡ" ಎಂದು ರಮ್ಯಾ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+