Bengaluru Flood Challanges: ಅಲ್ಪ ಮಳೆಗೂ ಬೆಂಗಳೂರಿನ ಅಸಲಿ ಚಿತ್ರಣ ಬಯಲು, ಸವಾಲೊಡ್ಡುವ ಮಳೆಗಾಲ

Bengaluru Flood Challenges: ಉದ್ಯಾನ ನಗರಿ ಬೆಂಗಳೂರು ಸಾಕಷ್ಟು ವಿಸ್ತರಣೆ ಆಗುತ್ತಲೇ ಇದೆ. ಐಟಿ ಕೇಂದ್ರ, ಸಿಲಿಕಾನ್ ವ್ಯಾಲಿ ಎಂದೆಲ್ಲ ಖ್ಯಾತಿಗೆ ಪಾತ್ರವಾಗಿರುವ ನಗರದಲ್ಲಿ ವಾಹನಗಳು ಮತ್ತು ಜನಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಪಾವಧಿ ಮಳೆಗೂ ನಲುಗುವ ಪರಿಸ್ಥಿತಿ ನಗರದಲ್ಲಿದೆ. ಪ್ರತಿ ಮಳೆಗೆ ನಗರದ ಜನರು ಸಾಕಷ್ಟು ಅಡ್ಡಿ, ಆತಂಕಗಳನ್ನು ಎದುರಿಸುವಂತಾಗಿದೆ. ಪೀಕ್ ಸಮಯದಲ್ಲಿ ಮಳೆ ಆದಾಗ ರಸ್ತೆ ಮೂಲಸೌಕರ್ಯ ಸಮಸ್ಯೆ, ಸಂಚಾರ ವಿಳಂಬ ಒಳಗೊಂಡಂತೆ ಅನೇಕ ತೊಂದರೆಗಳು ಎದುರಾಗುತ್ತಲೇ ಇವೆ. ಮಳೆಗಾಲವು ನಗರದ ನೈಜತೆ, ವಾಸ್ತವ ಚಿತ್ರಣ ಮೇಲೆ ಬೆಳಕು ಚೆಲುತ್ತಿದೆ.

ತ್ವರಿತ ನಗರೀಕರಣ ಜೊತೆಗೆ ಬದಲಾಗುತ್ತಿರುವ ಹವಾಮಾನ ಮಾದರಿಗಳು ಬೆಂಗಳೂರು ನಿರ್ವಹಣೆ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತಿವೆ. ಜನ ಸಂಚಾರಕ್ಕೆ ಅಡಚಣೆ ಮಾತ್ರವಲ್ಲದೇ ಆರ್ಥಿಕತೆ ಮೇಲೂ ಪರಿಣಾಮ ಬೀರುತ್ತಿದೆ. ಹೀಗಾಗಿ ಮೂಲಸೌಕರ್ಯಗಳ ಸುಧಾರಣೆ, ಅಗತ್ಯ ಕ್ರಮಗಳ ಕುರಿತು ತಜ್ಞರು ಎಚ್ಚರಿಸಿದ್ದಾರೆ.

Bengaluru Rain

ಕೊಂಚ ಮಳೆ ಆದರೂ ಸಾಕು ನಗರದ ಅನೇಕ ರಸ್ತೆ-ಜಂಕ್ಷನ್‌ಗಳಲ್ಲಿ ನೀರು ನಿಲ್ಲುತ್ತದೆ. ತಗ್ಗು ಪ್ರದೇಶಗಳ ಪರಿಸ್ಥಿತಿಯಂತೂ ಹೇಳತೀರದಂತಾಗುತ್ತದೆ. ಬೆಳಗ್ಗೆ ಮತ್ತು ಸಂಜೆ ಹೊತ್ತು ಅತೀ ಹೆಚ್ಚು ದಟ್ಟಣೆ ಕಂಡು ಬರುವ (ಪೀಕ್ ಅವರ್) ಸಮಯದಲ್ಲಿ ಮಳೆ ಜನಸಂಚಾರ/ಪ್ರಯಾಣದ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಮಳೆಯಿಂದಾಗಿ ವಾಹನಗಳ ಸಂಚಾರ ನಿಧಾನವಾಗುತ್ತದೆ. ಕೆಲವೇ ನಿಮಿಷಗಳ ಸಂಚಾರಕ್ಕೆ ದೀರ್ಘ ಸಮಯ ಹಿಡಿಯುತ್ತದೆ. ಜನರು ರಸ್ತೆಯಲ್ಲೇ ಕಳೆಯುವಂತಾಗಿದೆ. ಸಾರ್ವಜನಿಕ ಸಾರಿಗೆ ಸೇವೆಗಳ ಮೇಲೂ ಮಳೆ ಪರಿಣಾಮ ಬೀರುತ್ತದೆ.

ಇಂಧನ ಬಳಕೆಯಲ್ಲಿ ಹೆಚ್ಚಳ

ಮಳೆ ನೀರು ಸರಾಗವಾಗಿ ಹರಿದು ಹೋಗದೇ ಎದುರಾಗುವ ಸಂಚಾರ ಅಡಚಣೆಗಳಿಂದ ನಗರದಲ್ಲಿ ಸಂಚಾರ ನಿಧಾನವಾಗುತ್ತಿದೆ. ಇದರಿಂದ ವಾಹನಗಳ ಇಂಧನ ಬಳಕೆ ಹೆಚ್ಚಾಗುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಇಂಧನ ಸುಡುತ್ತದೆ. ಉತ್ಪಾದಕತೆ, ಜನ ಸಂಚಾರ, ಸಾಗಾಟ ಕಡಿಮೆ ಆಗು್ತದೆ. ತುರ್ತು ಸೇವೆಗಳು ಮತ್ತು ಸಾರ್ವಜನಿಕ ಸಾರಿಗೆ ಜಾಲಗಳ ಮೇಲೆ ಹೆಚ್ಚುವರಿ ಒತ್ತಡ ಬೀಳುತ್ತಿದೆ ಎಂಬುದನ್ನು ತಜ್ಞರು ಒತ್ತಿ ಹೇಳಿದ್ದಾರೆ.

ನಗರದ ಒಳಚರಂಡಿ ಮೂಲಸೌಕರ್ಯ ಸುಧಾರಿಸುವುದರಿಂದ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಬಹುದು. ಚಲನಶೀಲತೆ ವೇಗಗೊಂಡು ಆರ್ಥಿಕ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ. ನೀರು ನಿಲ್ಲುವ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ಥವಾಗುತ್ತದೆ. ಮಳೆ ನೀರು ಸಾಗದ ಚರಂಡಿ ಸಮಸ್ಯೆ, ನೀರುಗಾಲುವೆ ಸಮಸ್ಯೆಗಳು ಹೆಚ್ಚಾದಾಗ ಪ್ರವಾಹ ಸ್ಥಿತಿ ಉಂಟಾಗುತ್ತದೆ. ಇದು ಜನರು ಜೀವ ಕೈಲಿ ಹಿಡಿದು ಓಡಾಡುವಂತೆ, ಭಯದ ವಾತಾವರಣ ನಿರ್ಮಿಸುತ್ತದೆ. ಬೆಂಗಳೂರು ನಗರ ಸುರಕ್ಷತೆ ಮೇಲೆ ನಂಬಿಕೆ ಕಡಿಮೆಯಾಗಲೂ ಕಾರಣವಾಗಬಹುದು.

ಸಮಗ್ರ ನಗರ ಯೋಜನೆ

ಬೆಂಗಳೂರು ವಿಸ್ತರಣೆ, ಹೆಚ್ಚಿನ ಕೈಗಾರಿಕೆ ಹೂಡಿಕೆ, ಸಾರಿಗೆ ಉತ್ತೇಜನ ಇನ್ನಿತರ ಅಭಿವೃದ್ಧಿ ಜೊತೆ ಜೊತೆಯಲ್ಲೇ ಸಮಗ್ರ ನಗರ ಯೋಜನೆಯ ಮೂಲಕ ಮಳೆನೀರು ನಿರ್ವಹಣೆ ಬಲಪಡಿಸಬೇಕು. ಮಳೆಗಾಲದಲ್ಲಿ ಬೆಂಗಳೂರಿನ ಚಿತ್ರಣ ಬದಲಾಗುವಂತೆ ಸಮರೋಪಾಧಿಯಲ್ಲಿ ಕ್ರಮವಾಗಬೇಕು. ಪ್ರವಾಹದ ಅಪಾಯ ತಪ್ಪಿಸಬೇಕು. ಚರಂಡಿಗಳ ಹೂಳು ತೆಗೆಯುವುದು, ಸರೋವರಗಳ ಪುನಃಸ್ಥಾಪನೆ, ನೈಸರ್ಗಿಕ ಜಲಮಾರ್ಗಗಳ ರಕ್ಷಣೆ ಮತ್ತು ಹಸಿರು ಹೊದಿಕೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಪ್ರವಾಹ ನಿರ್ವಹಣೆಯಲ್ಲಿ ಪ್ರಕೃತಿ ಆಧಾರಿತ ಪರಿಹಾರಗಳು ಮುಖ್ಯ. ಜೌಗು ಪ್ರದೇಶಗಳ ನಿರ್ಮಾಣ, ನಗರ ಕಾಡುಗಳು, ಮಳೆ ನೀರು ಹೀರಿಕೊಳ್ಳುವಂತೆ ಪಾದಚಾರಿ ಮಾರ್ಗ ನಿರ್ಮಾಣದಂತಹ ಉಪಕ್ರಮ ಆರಂಭಿಸಬೇಕಿದೆ. ಇದರಿಂದ ಮರಗಳಿಗೆ ನೀರು ಸಿಗುವ ಜೊತೆಗೆ ಅಂತರ್ಜಲ ಮರುಪೂರಣ ಸುಧಾರಣೆ ಆಗುತ್ತದೆ.

ರಸ್ತೆಗಳು, ಒಳಚರಂಡಿ, ಜಲಮೂಲಗಳು ಮತ್ತು ನಗರಾಭಿವೃದ್ಧಿಯ ಜವಾಬ್ದಾರಿ ಹೊತ್ತ ನಾಗರಿಕ ಸಂಸ್ಥೆಗಳ ನಡುವೆ ಸಂಘಟಿತ ಯೋಜನೆಯ ಅಗತ್ಯವನ್ನು ತಜ್ಞರು ಒತ್ತಿ ಹೇಳಿದ್ದಾರೆ. ಪ್ರತಿಕೂಲ ಹವಾಮಾನ ಪರಿಸ್ಥಿತಿ, ಮಳೆಗಾಲದಂತಹ ಸಂದರ್ಭ ಎದುರಿಸಲು ಬೆಂಗಳೂರನ್ನು ಸಜ್ಜುಗೊಳಿಸಬೇಕಿದೆ. ನಾಗರಿಕ ಸಂಸ್ಥೆಗಳು ಕೈಗೊಳ್ಳುವ ಕ್ರಮಗಳು ಜನರಲ್ಲಿ ಸುರಕ್ಷತೆ ಭಾವನೆ ಹೆಚ್ಚಿಸಬೇಕು. ಪ್ರವಾಹ ಭೀತಿ ಕಡಿಮೆ ಮಾಡಬೇಕಿದೆ. ಭವಿಷ್ಯದ ಗಮನದಲ್ಲಿಟ್ಟುಕೊಂಡು ಸರ್ಕಾರ ಸಮಗ್ರ ನಗರ ಯೋಜನೆ ಜಾರಿಗೊಳಿಸುವ ಅಗತ್ಯತೆ, ಸುಸ್ಥಿರ ನಗರದ ಕನಸು ನನಸು ಮಾಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+