Belur Constituency: ಶಿಲ್ಪಕಲೆಯ ತವರೂರಿನಲ್ಲಿ ಜೆಡಿಎಸ್‌ನದ್ದೇ ಪ್ರಾಬಲ್ಯ! ದಳ ಕೋಟೆ ಭೇದಿಸ್ತಾವಾ ಕಾಂಗ್ರೆಸ್, ಬಿಜೆಪಿ!
ಜೆಡಿಎಸ್ ಭದ್ರಕೋಟೆಯಾಗಿದ್ದ ಹಾಸನ ಜಿಲ್ಲೆಯ ಬೇಲೂರಿನಲ್ಲಿ ಈ ಬಾರೀ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಜಿದ್ದಾಜಿದ್ದಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ವರದಿ, ವಿಶ್ಲೇಷಣೆ ಓದಿ
ಹಾಸನ ಜಿಲ್ಲೆಯ ಐತಿಹಾಸಿಕ ಕ್ಷೇತ್ರ ಬೇಲೂರು. ಕನ್ನಡ ಪ್ರಥಮ ಶಿಲಾ ಶಾಸನ ದೊರೆತ ಕ್ಷೇತ್ರ ಎಂಬ ಹೆಗ್ಗಳಿಕೆ ಬೇಲೂರಿನದ್ದು. ಚೆನ್ನಕೇಶವ ದೇಗುಲ, ಹಳೆಬೀಡಿನ ಶಿಲ್ಪಕಲೆಯಿಂದ ಪ್ರಸಿದ್ಧಿ ಪಡೆದಿವೆ. ಹೀಗಾಗೇ ಇದು ಪ್ರವಾಸಿಗರು, ಇತಿಹಾಸ ತಜ್ಞರು, ಇಷ್ಟಪಟ್ಟು ಕಾಲಿಡುವ ತಾಣಗಳಾಗಿ ಇದೀಗ ದಿನಗಳಲ್ಲಿ ಮಾರ್ಪಟ್ಟಿವೆ. ಮಲೆನಾಡು-ಬಯಲು ಸೀಮೆ ಎರಡನ್ನೂ ಹೊಂದಿರುವುದು ವಿಶೇಷ.
ಯಗಚಿ ನದಿ ತೀರದಲ್ಲಿದ್ದರೂ ಬೇಲೂರಿನ ರೈತರಿಗೆ ನೀರಾವರಿ ಸಮಸ್ಯೆ ಮಾತ್ರ ತಪ್ಪಿಲ್ಲ. ಪ್ರಮುಖ ಕೈಗಾರಿಕೆಗಳ ಕೊರತೆ, ಶಾಲಾ, ಕಾಲೇಜುಗಳಿಗೆ ಹಾಸನ ಅಥವಾ ಚಿಕ್ಕಮಗಳೂರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಪರಿಶಿಷ್ಟರೇ ಅಧಿಕವಿರುವ ಇಲ್ಲಿ 1952ರಲ್ಲಿ ಒಮ್ಮೆ ಸಾಮಾನ್ಯ ಕ್ಷೇತ್ರದಡಿ ಬೋರಣ್ಣಗೌಡರು ಶಾಸಕರಾಗಿದ್ದರು. ನಂತರ ಈ ಕ್ಷೇತ್ರ ಮೀಸಲು ಕ್ಷೇತ್ರವಾಗಿ ಬದಲಾಯಿತು. ಆದರೆ 2008ರಲ್ಲಿ ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು.

ಇಲ್ಲಿಯವರೆಗೆ ಬೇಲೂರಿನಲ್ಲಿ 15 ವಿಧಾನಸಭಾ ಚುನಾವಣೆಗಳಾಗಿವೆ. 8 ಶಾಸಕರನ್ನು ಕಂಡಿರುವ ಬೇಲೂರು ವಿಧಾನಸಭಾ ಕ್ಷೇತ್ರ ವಿಧಾನಸಭೆ ಅಸ್ತಿತ್ವಕ್ಕೆ ಬಂದ 1952ರ ಆರಂಭದಲ್ಲಿ ಬೇಲೂರು-ಸಕಲೇಶಪುರ ತಾಲೂಕು ಹಾಗೂ ಹಾಸನ ತಾಲೂಕು ಸಾಲಗಾಮೆ ಹೋಬಳಿ ಸೇರಿಕೊಂಡಂತೆ ಮೀಸಲು ಮತ್ತು ಸಾಮಾನ್ಯ ಮೀಸಲಿನಡಿ ದ್ವಿಸದಸ್ಯ ಕ್ಷೇತ್ರವಾಗಿ ಮಾರ್ಪಟ್ಟು ಸಾಮಾನ್ಯ ವಿಧಾನಸಭಾ ಕ್ಷೇತ್ರದ ಪ್ರಥಮ ಶಾಸಕರಾಗಿ ಕಾಂಗ್ರೆಸ್ಸಿನ ಬೋರಣ್ಣಗೌಡರು, ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಕಾಂಗ್ರೆಸ್ಸಿನ ಸಿದ್ದಯ್ಯ ಶಾಸಕರಾಗಿದ್ದರು.
1957ರಲ್ಲಿ ಶಾಸಕ ಅವಧಿ ಇರುವಾಗಲೇ ಶಾಸಕ ಸಿದ್ದಯ್ಯ ಅವರು ಮೃತಪಟ್ಟರು. ಈ ಸ್ಥಾನಕ್ಕೆ ನಡೆದ ಮರು ಚುನಾವಣೆಯಲ್ಲಿ ಸಿದ್ದಯ್ಯ ಅವರ ಸಂಬಂಧಿ ಬಿ. ಎಚ್. ಲಕ್ಷ್ಮಣಯ್ಯ ಅವಿರೋಧ ಆಯ್ಕೆಯಾದರು. ನಂತರ 1962ರಲ್ಲಿ ಕ್ಷೇತ್ರ ವಿಭಜನೆಗೊಂಡು ಸಕಲೇಶಪುರ ಸಾಮಾನ್ಯ ಕ್ಷೇತ್ರವಾಗಿ ಬೇಲೂರು ಮೀಸಲು ಕ್ಷೇತ್ರವಾಗಿ ಪ್ರತ್ಯೇಕವಾಯಿತು. ಇಲ್ಲಿ ಮತ್ತೊಮ್ಮೆ ಮೀಸಲು ಕ್ಷೇತ್ರದಿಂದ ಬಿ.ಎಚ್.ಲಕ್ಷಮಣಯ್ಯ ಕಾಂಗ್ರೆಸ್ ಪಕ್ಷದಿಂದ ಪುನರಾಯ್ಕೆಗೊಂಡಿದ್ದರು.

1968ರಲ್ಲಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿದ್ದ ಎಸ್. ಎಚ್. ಪುಟ್ಟರಂಗನಾಥ್ ಜಯ ಗಳಿಸಿದ್ದರು. ಮುಂದೆ 1972ರಲ್ಲೂ ಆಡಳಿತ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ ಪುಟ್ಟರಂಗನಾಥ್ ಮತ್ತೆ ಜಯ ಗಳಿಸಿದರು. ಇದಾದ ನಂತರ 1978ರಲ್ಲಿ ಬಿ.ಎಚ್.ಲಕ್ಷ್ಮಣಯ್ಯ ಜನತಾ ಪಕ್ಷದಿಂದ ಮತ್ತೆ ಶಾಸಕರಾದರು. 1983ರಲ್ಲಿ ಜನತಾ ಪಕ್ಷ ದಿಂದ ಡಿ.ಮಲ್ಲೇಶ್ ಹಾಗೂ 1985ರಲ್ಲಿ ಜೆಡಿಎಸ್ ನಿಂದ ಎಚ್.ಕೆ.ಕುಮಾರಸ್ವಾಮಿ ಜಯ ಗಳಿಸಿದರು. 1989ರಲ್ಲಿ ಜನತಾದಳ ಇಬ್ಬಾಗವಾದಾಗ ಬಿ.ಎಚ್.ಲಕ್ಷ್ಮಣಯ್ಯ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಮತ್ತೆ ಜಯಶಾಲಿಯಾದರು.
ಜನತಾದಳ ಒಗ್ಗೂಡಿದ ನಂತರ 1994ರಲ್ಲಿ ನಡೆದ ಚುನಾವಣೆಯಲ್ಲಿ ಎಚ್. ಕೆ. ಕುಮಾರಸ್ವಾಮಿ ಶಾಸಕರಾದರೆ, 1999ರಲ್ಲಿ ಬಿಜೆಪಿಯಿಂದ ಎಸ್.ಎಚ್.ಪುಟ್ಟರಂಗನಾಥ್ ಶಾಸಕರಾದರು. 2004ರಲ್ಲಿ ಮತ್ತೆ ಎಚ್.ಕೆ.ಕುಮಾರಸ್ವಾಮಿ ಮೀಸಲು ಕ್ಷೇತ್ರದಡಿ ಜನತಾದಳದಿಂದ ಶಾಸಕರಾದರು. ಇನ್ನು 2008ರಲ್ಲಿ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿ ಪರಿವರ್ತನೆಗೊಂಡಿತು. ವೈ.ಎನ್.ರುದ್ರೇಶಗೌಡರು ಬದಲಾದ ಸಾಮಾನ್ಯ ಕ್ಷೇತ್ರದಡಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿ ಶಾಸಕರಾದರು. 2013ರಲ್ಲೂ ಕಾಂಗ್ರೆಸ್ ಪಕ್ಷದಿಂದಲೇ ಮತ್ತೆ ಸ್ಪರ್ಧಿಸಿದ ರುದ್ರೇಶಗೌಡರು ಮತ್ತೆ ಜಯಗಳಿಸಿದರು.
2018ರ ವಿಧಾನಸಭಾ ಚುನಾವಣೆಯಲ್ಲಿ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ನ ಕೆ.ಎಸ್. ಲಿಂಗೇಶ್, ಬಿಜೆಪಿಯ ಎಚ್ ಕೆ ಸುರೇಶ್ರನ್ನು 19,690 ಮತಗಳ ಅಂತರದಿಂದ ಸೋಲಿಸಿದ್ದರು. ಕಳೆದ ಚುನಾವಣೆಯಲ್ಲಿ ಕೆ.ಎಸ್. ಲಿಂಗೇಶ್ 64,268 ಮತಗಳನ್ನ ಪಡೆದಿದ್ದರೇ, ಕಾಂಗ್ರೆಸ್ ನಿಂದ ಕೀರ್ತನಾ ರುದ್ರ ಗೌಡ 39,519 ಮತಗಳನ್ನ್ ಪಡೆದಿದ್ದರು. ಇನ್ನೂ ಬಿಜೆಪಿಯಿಂದ ಎಚ್.ಕೆ ಸುರೇಶ್ ಸ್ಪರ್ಧೆ ಮಾಡಿ 44,578ಗಳನ್ನ ಪಡೆದಿದ್ದರು
ಇನ್ನೂ ಈ ಬಾರಿ ಜೆಡಿಎಸ್ ಪ್ರಾಬಲ್ಯ ಹೊಂದಿರುವ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಹಿಡಿತವನ್ನ ಸಾಧಿಸಲು ಕಾಂಗ್ರೆಸ್ ಹಾಗೂ ಬಿಜೆಪಿ ತಯಾರಿ ನಡೆಸಿದ್ದು, ಜೆಡಿಎಸ್ ಭದ್ರಕೋಟೆಯನ್ನ ಛಿದ್ರಗೊಳಿಸಲು ಭರ್ಜರಿ ತಯಾರಿ ನಡೆಸಿವೆ. ಈಗಾಗಲೇ ಜೆಡಿಎಸ್ ಅಭ್ಯರ್ಥಿಯನ್ನ ಘೋಷಣೆ ಮಾಡಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಹಲವು ನಾಯಕರು ಲಾಭಿ ನಡೆಸಿದ್ದಾರೆ.
ಇನ್ನೂ ಜೆಡಿಎಸ್ ಪಕ್ಷದಿಂದ ಕೆ.ಎಸ್.ಲಿಂಗೇಶ್ ಅಭ್ಯರ್ಥಿಯಾದರೇ, ಕಾಂಗ್ರೆಸ್ ನಿಂದ ಟಿಕೆಟ್ ಗಾಗಿ ಬಿ.ಶಿವರಾಮು, ರಾಜಶೇಖರ್, ಕೃಷ್ಣೇಗೌಡ ಅವರು ಅರ್ಜಿ ಸಲ್ಲಿಸಿ ಲಾಭಿ ನಡೆಸಿದ್ದಾ೦ರೆ. ಇನ್ನು ಬಿಜೆಪಿ ಪಕ್ಷದಿಂದ ಹುಲ್ಲಹಳ್ಳಿ ಸುರೇಶ್, ಕೊರಟಗೆರೆ ಪ್ರಕಾಶ್, ಸಿದ್ದೇಶ್ ನಾಗೇಂದ್ರ, ಸಂತೋಷ್ ಕೆಂಚಾಂಬ, ಸುರಭಿ ರಘು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಒಟ್ಟು 1,79,330 ಮತದಾರರಿರುವ ಬೇಲೂರು ಕ್ಷೇತ್ರದಲ್ಲಿ 91,236 ಪುರುಷ ಮತದಾರರಿದ್ದು, 88,094 ಮಹಿಳಾ ಮತದಾರರಿದ್ದಾರೆ. ಅಲ್ಲದೇ 4 ಇತರೆ ಮತದಾರರಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications