Daily Horoscope: ಮೂರು ರಾಶಿಯವರಿಗೆ ಇಂದು ಧನಲಾಭ, ಪ್ರತಿ ಕೆಲಸದಲ್ಲಿಯೂ ಜೊತೆಗಿರುವುದು ಅದೃಷ್ಟ

Horoscope July 15: ಬುಧವಾರ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯ ಇದಾಗಿದೆ. ಬುಧವಾರ ಮಧ್ಯಾಹ್ನ 12:00 ರಿಂದ 1:30 ರವರೆಗೆ ಇರುತ್ತದೆ. 12 ರಾಶಿಗಳಿಗೆ ಇಂದಿನ ಸಂಪೂರ್ಣ ಭವಿಷ್ಯ, ಫಲಾಫಲ ಮಾಹಿತಿ ಹೇಗಿದೆ ಎಂಬ ಪೂರ್ಣ ವಿವರ ತಿಳಿಯಿರಿ.

ಮೇಷ ರಾಶಿ (Aries):

ನಿಮ್ಮ ಭಾವನೆಗಳನ್ನು ನಿಯಂತ್ರಿಸುವ ಅಗತ್ಯವಿದೆ. ಸುಮ್ಮನೆ ನಿಮ್ಮದಲ್ಲದ ವಿಚಾರಗಳ ವಾದಕ್ಕೆ ಇಳಿಯಬೇಡಿ. ಜಗಳಗಳಿಂದ ದೂರವಿರಿ.ಹೀಗೆ ಮಾಡಿದರೆ ಮಾತ್ರ ನಿಮ್ಮ ಕೆಲಸಗಳು ಸರಾಗವಾಗಿ ನಡೆಯುವುದು. ಆರೋಗ್ಯದಲ್ಲಿ ಚೇತರಿಕೆ ಇರುವುದು.

Horoscope July 15

ವೃಷಭ ರಾಶಿ (Taurus):

ಇಂದು ನಿಮಗೆ ಉತ್ತಮ ದಿನವಾಗಲಿದೆ. ಹೊಸ ಉತ್ಸಾಹದಿಂದಲೇ ದಿನದ ಆರಂಭವಾಗುವುದು. ಹಣಕಾಸಿನ ಸ್ಥಿತಿ ಬಲವಾಗಿರುವುದು. ಆರೋಗ್ಯ ಉತ್ತಮವಾಗಿರುವುದು. ಅಂದುಕೊಂಡ ಕೆಲಸವನ್ನು ಅಂದುಕೊಂಡಂತೆ ನೆರವೇರುವುದು.

ಮಿಥುನ ರಾಶಿ (Gemini):

ಇಂದು ಹೊಸ ಅವಕಾಶ ಒಲಿದು ಬರುವುದು. ಕೆಲಸಗಳನ್ನು ಸಮಯಕ್ಕಿಂತ ಮುಂಚೆಯೇ ಮುಗಿಸುವಿರಿ. ನಿಮ್ಮ ಕೆಲಸಕ್ಕೆ ಮೇಲಧಿಕಾರಿಗಳಿಂದ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಇಂದು ಪ್ರಮುಖವಾದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯ ನಿರ್ಧಾರ ತೆಗೆದುಕೊಳ್ಳಬಹುದು.

ಕರ್ಕಾಟಕ ರಾಶಿ (cancer):

ಇಂದಿನ ದಿನ ಸವಾಲಿನಿಂದ ಕೂಡಿರುವುದು. ಮನೆ ನಿರ್ಮಾಣದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಿರಿ. ಯಾವುದೇ ವಿಷಯದ ಬಗ್ಗೆಯೂ ಹಠ ಮಾಡದಿರುವುದೇ ಒಳ್ಳೆಯದು. ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ.

ಸಿಂಹ ರಾಶಿ (Leo):

ಹಣಕಾಸಿನ ವಿಷಯದಲ್ಲಿ ಲಾಭವಾಗುವುದು. ಹೊಸ ಕೆಲಸ ಆರಂಭಿಸುವ ಮುನ್ನ ಹಿರಿಯರ ಸಲಹೆ ಪಡೆದುಕೊಳ್ಳಿ. ಹಣ ಖರ್ಚು ಮಾಡುವ ಮುನ್ನ ಸರಿಯಾಗಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳಿ. ಆರೋಗ್ಯದ ಬಗ್ಗೆ ಗಮನ ಹರಿಸಿ.

ಕನ್ಯಾ ರಾಶಿ (Virgo):

ಹೊಸ ಅವಕಾಶಗಳ ಬಗ್ಗೆ ಮನೆಯಲ್ಲಿ ಚರ್ಚೆ ನಡೆಯಬಹುದು. ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗುವುದು. ಸಂಗಾತಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯ. ತಂದೆಯಿಂದ ಹಣಕಾಸಿನ ನೆರವು ಸಿಗುವುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗುವುದು.

ತುಲಾ ರಾಶಿ (Libra):

ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗುವ ದಿನ. ಐಷಾರಾಮ ವಸ್ತುಗಳನ್ನು ಖರೀದಿಸಲು ಸರಿಯಾದ ಸಮಯ. ಹೊಸ ಜವಾಬ್ದಾರಿ ನಿಮ್ಮ ಹೆಗಲೇರುವುದು. ಬಾಕಿ ಇರುವ ಕೆಲಸಗಳು ಇಂದು ಪೂರ್ಣಗೊಳ್ಳುತ್ತವೆ. ಆರೋಗ್ಯ ಉತ್ತಮವಾಗಿರುವುದು.

ವೃಶ್ಚಿಕ ರಾಶಿ (Scorpio):

ಇಂದು ನಿಮಗೆ ಒಳ್ಳೆಯ ಸುದ್ದಿ ಸಿಗಬಹುದು. ವೃತ್ತಿಯಲ್ಲಿ ಹೊಸ ಅವಕಾಶ ಸಿಗುವುದು. ಕೆಲವು ಹೊಸ ಜವಾಬ್ದಾರಿ ಕೂಡಾ ಸಿಗಬಹುದು. ಮಾನಸಿಕ ಆರೋಗ್ಯದತ್ತ ಗಮನ ಹರಿಸಿ. ವಿಶ್ರಾಂತಿ ಪಡೆಯುವ ಅವಶ್ಯಕತೆಯಿದೆ.

ಧನು ರಾಶಿ (Sagitarius):

ನಿಮ್ಮ ಜೀವನದ ಸುವರ್ಣ ಕ್ಷಣಗಳಿಗೆ ಈ ದಿನ ಸಾಕ್ಷಿಯಾಗುವುದು. ಹೊಸ ಪ್ರಯತ್ನಗಳಲ್ಲಿ ಅದೃಷ್ಟ ಕೈ ಹಿಡಿಯುವುದು. ಹಳೆಯ ಕೌಟುಂಬಿಕ ವಿವಾದಗಳಿಗೆ ತೆರೆ ಬೀಳುವುದು. ಆರೋಗ್ಯದತ್ತ ಕಾಳಜಿ ವಹಿಸಿ.

ಮಕರ ರಾಶಿ (Capricorn):

ತಾಳ್ಮೆಯಿಂದ ಇದ್ದರೆ ನೆಮ್ಮದಿಯ ದಿನವಾಗಿರುವುದು. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣವಿರುತ್ತದೆ. ಹಣಕಾಸಿನ ವಿಷಯಗಳಲ್ಲಿ ಸಂಯಮದಿಂದ ಇರುವುದು ಮುಖ್ಯ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ.

ಕುಂಭ ರಾಶಿ (Aquarius):

ಇಂದು ಮಾಡುವ ಕೆಲಸ ಭವಿಷ್ಯದಲ್ಲಿ ಲಾಭ ತರುವುದು. ಇಂದು ನೀವು ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಹೊಸ ವ್ಯವಹಾರದಲ್ಲಿ ಹೂಡಿಕೆ ಮಾಡಬೇಕಾಗಬಹುದು. ವ್ಯಾಪಾರದಲ್ಲಿ ಲಾಭವಾಗುವುದು.

ಮೀನ ರಾಶಿ (Pisces):

ಉದ್ಯಮಿಗಳಿಗೆ ಇಂದು ಅನುಕೂಲಕರ ದಿನವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭವಾಗುವುದು. ಕಠಿಣ ಪರಿಶ್ರಮ ಯಶಸ್ವಿಯಾಗುತ್ತದೆ. ದೂರದ ಊರಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+