Yellapur Constituency : ಹೆಬ್ಬಾರ್ Vs ಪಾಟೀಲ್, ಮತದಾರನ ಚಿತ್ತ ಎತ್ತ? ವರದಿ, ವಿಶ್ಲೇಷಣೆ
ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಲ್ಲಾಪುರ ಕ್ಷೇತ್ರವು ಕಳೆದ ಬಾರಿ ವಿಶೇಷ ರೀತಿಯಲ್ಲಿ ಮುನ್ನಲೆಗೆ ಬಂದಿದ್ದು ಆಪರೇಶನ್ ಕಮಲದಿಂದಾಗಿ. ಕಾಂಗ್ರೆಸ್ ಮೂಲದವರಾದ ಶಿವರಾಂ ಹೆಬ್ಬಾರ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ನಂತರ ಇಲ್ಲಿನ ರಾಜಕೀಯ ಲೆಕ್ಕಾಚಾರ
ಪಶ್ಚಿಮ ಘಟ್ಟಗಳ ಸೆರಗಿನಲ್ಲಿರುವ, ಹೇರಳ ಝರಿ-ತೊರೆಗಳಿಂದ ಕೂಡಿದ, ಹತ್ತು ಹಲವು ಜಲಪಾತಗಳನ್ನು ತನ್ನ ಒಡಲೊಳಗೆ ಇಟ್ಟುಕೊಂಡಿರುವ, ನೈಸರ್ಗಿಕ ರಮಣೀಯ ಕ್ಷೇತ್ರ ಯಲ್ಲಾಪುರ. ಅಡಿಕೆ ಇಲ್ಲಿನ ಆರ್ಥಿಕ ಮೂಲ ಮತ್ತು ಭತ್ತ, ತೆಂಗು, ಕಬ್ಬು, ಏಲಕ್ಕಿ, ವೆನಿಲ್ಲಾವನ್ನೂ ಕೂಡಾ ಉಪಬೆಳೆಯನ್ನಾಗಿ ಇಲ್ಲಿನ ಜನ ಅವಲಂಬಿಸಿದ್ದಾರೆ.
ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯಲ್ಲಾಪುರ ಕ್ಷೇತ್ರ, ಜಿಲ್ಲಾ ಕೇಂದ್ರ ಕಾರವಾರದಿಂದ ಸುಮಾರು ನೂರು ಕಿಲೋಮೀಟರ್ ದೂರದಲ್ಲಿದೆ. ದಕ್ಷಿಣಕ್ಕೆ ಶಿರಸಿ, ನೈಋತ್ಯಕ್ಕೆ ಅಂಕೋಲ, ಪಶ್ಚಿಮ ಮತ್ತು ವಾಯುವ್ಯಕ್ಕೆ ಕಾರವಾರ, ಉತ್ತರಕ್ಕೆ ಹಳಿಯಾಳ, ಈಶಾನ್ಯದಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಈ ಕ್ಷೇತ್ರವನ್ನು ಸುತ್ತುವರಿದಿವೆ.
ಸಾತೊಡ್ಡಿ, ಮಾಗೋಡು, ಅಜ್ಜಿಗುಂಡಿ, ಬೆಣ್ಣೆಜಡ್ಡಿ, ಕಂಚಿನಗದ್ದೆ, ದಬ್ಬೇಸಾಲು ಜಲಪಾತಗಳು ಕ್ಷೇತ್ರದಲ್ಲಿವೆ. ಆದರೆ, ಇನ್ನೂ ಎಲೆ ಮರೆಯ ಕಾಯಿಗಳಂತೆ ಇರುವುದಕ್ಕೆ ಕಾರಣ, ಇವುಗಳನ್ನು ಪ್ರವಾಸಿ ತಾಣವನ್ನಾಗಿ ಮಾಡಲು ಜನಪ್ರತಿನಿಧಿಗಳಿಗಿರುವ ಇಚ್ಚಾಶಕ್ತಿಯ ಕೊರತೆ.

2008ರ ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಸಂದರ್ಭದಲ್ಲಿ ಯಲ್ಲಾಪುರ-ಮುಂಡಗೋಡು ಕ್ಷೇತ್ರ ರೂಪುಗೊಂಡಿದೆ. ಅದಕ್ಕೂ ಮುನ್ನ ಮುಂಡಗೋಡು, ಹಳಿಯಾಳ ಕ್ಷೇತ್ರದ ಭಾಗವಾಗಿತ್ತು. ಯಲ್ಲಾಪುರ, ಅಂಕೋಲಾ ಕ್ಷೇತ್ರದಲ್ಲಿತ್ತು. ಯಲ್ಲಾಪುರ, ಮುಂಡಗೋಡ ತಾಲೂಕುಗಳ ಜತೆ ಈ ಕ್ಷೇತ್ರ ರಚಿಸಲಾಗಿದೆ.
ಯಲ್ಲಾಪುರ ಕ್ಷೇತ್ರ ಬಹು ಪ್ರಚಲಿತಕ್ಕೆ ಬಂದಿದ್ದು 2019ರಲ್ಲಿ. ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದ ಶಿವರಾಂ ಹೆಬ್ಬಾರ್ ಅವರು ಮತ್ತು ಬಾಂಬೆ ಫ್ರೆಂಡ್ಸ್, ಬಿಜೆಪಿಯ ಆಪರೇಶನ್ ಕಮಲಕ್ಕೆ ಒಳಗಾಗಿದ್ದರಿಂದ ಮತ್ತೆ ಇಲ್ಲಿ ಚುನಾವಣೆ ಎದುರಾಗಿತ್ತು. ಶಾಸಕರ ನಡೆ ಪರವಿರೋಧ ಚರ್ಚೆಗೂ ಕಾರಣವಾಗಿತ್ತು.
2013, 2018ರಲ್ಲಿ ಕಾಂಗ್ರೆಸ್ ಟಿಕೆಟಿನಿಂದ ಗೆದ್ದಿದ್ದ ಅರಬೈಲ್ ಶಿವರಾಂ ಹೆಬ್ಬಾರ್, 2019ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿದ್ದರು. ಭೀಮಣ್ಣ ನಾಯಕ್ ವಿರುದ್ದ ಸುಮಾರು 31ಸಾವಿರ ಭರ್ಜರಿ ಲೀಡ್ ಮೂಲಕ ಹೆಬ್ಬಾರ್ ಜಯಶೀಲರಾಗಿದ್ದರು. ಆಗಿದ್ದ ಪರಿಸ್ಥಿತಿಯೇ ಬೇರೆ, ಈಗಿನ ರಾಜಕೀಯ ಪರಿಸ್ಥಿತಿಯೇ ಬೇರೆ ಎನ್ನುವುದು ಸದ್ಯಕ್ಕಿರುವ ಕ್ಷೇತ್ರದ ಚಿತ್ರಣ.
ಸಮ್ಮಿಶ್ರ ಸರಕಾರ ಪತನಗೊಳ್ಳಲು ಕಾರಣೀಕರ್ತರಾದವರಿಗೆ ಹೇಗಾದರೂ ಖೆಡ್ಡಾ ತೋಡಬೇಕು ಎನ್ನುವ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಅಳೆದು ತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮುಂದಾಗಿದೆ. ಈ ನಿಟ್ಟಿನಲ್ಲಿ ಸಾಗುತ್ತಿರುವ ಕಾಂಗ್ರೆಸ್ಸಿಗೆ ಶುಭ ಸೂಚನೆ ಸಿಕ್ಕಿದೆ. ಸ್ಥಳೀಯ ಪ್ರಭಾವೀ ಬಿಜೆಪಿ ಮುಖಂಡ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ.
ಕನ್ನಡ ಮತ್ತು ಕೊಂಕಣಿ ಮಾತನಾಡುವವರ ಸಂಖ್ಯೆ ಕ್ಷೇತ್ರದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಆಫ್ರಿಕದ ಬುಡಕಟ್ಟು ಜನಾಂಗದ ಹಲವರು ಹಲವು ದಶಕಗಳ ಹಿಂದೇ ಇಲ್ಲಿಗೆ ಬಂದು ನೆಲೆಸಿದ್ದಾರೆ. ಹವ್ಯಕ, ಒಕ್ಕಲಿಗ, ಗೌಡ, ಸಿದ್ದಿ ಜನಾಂಗದವರೂ ಇಲ್ಲಿ ವಾಸವಾಗಿದ್ದಾರೆ. ಹವ್ಯಕ ಸಮುದಾಯದ ಮತ ನಿರ್ಣಾಯಕ ಪಾತ್ರ ವಹಿಸಲಿದೆ.
ನಾನು ಮಾಡಿರುವ ಅಭಿವೃದ್ದಿ ಕೆಲಸಗಳೇ ನನಗೆ ಶ್ರೀರಕ್ಷೆ ಎನ್ನುವ ವಿಶ್ವಾಸದಲ್ಲಿರುವ ಶಿವರಾಂ ಹೆಬ್ಬಾರ್ ಅವರಿಗೆ ಒಂದು ಕಾಲದ ತಮ್ಮಾಪ್ತ ವಿ.ಎಸ್.ಪಾಟೀಲ್ ಅವರು ಕಾಂಗ್ರೆಸ್ ಟಿಕೆಟಿನಿಂದ ಠಕ್ಕರ್ ಕೊಡುವ ಸಾಧ್ಯತೆ ದಟ್ಟವಾಗಿರುವುದು ಸದ್ಯದ ಇಲ್ಲಿನ ಮುನ್ನೋಟ. ಜೊತೆಗೆ, ಹೆಬ್ಬಾರ್ ಅವರು ಮತ್ತೆ ಕಾಂಗ್ರೆಸ್ ಕಡೆ ವಾಲುತ್ತಾರಾ ಎನ್ನುವ ಚರ್ಚೆಯೂ ನಡೆಯುತ್ತಿದೆ.

ವಿ. ಎಸ್. ಪಾಟೀಲ್ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಕ್ಷವನ್ನು ಸೇರಿದ ನಂತರ, ಯಲ್ಲಾಪುರ ಕ್ಷೇತ್ರದ ರಾಜಕೀಯದಲ್ಲಿ ಹೊಸ ಲೆಕ್ಕಾಚಾರ ಆರಂಭವಾಗಿದೆ. 2013ರ ಚುನಾವಣೆಯಲ್ಲಿ ಪಾಟೀಲ್ ಅವರು ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಶಿವರಾಂ ಹೆಬ್ಬಾರ್ ವಿರುದ್ದ ಸೋಲುಂಡಿದ್ದರು.
ವಿ. ಎಸ್. ಪಾಟೀಲ್ ಉತ್ತರ ಕರ್ನಾಟಕದ ಸರಳ, ಸಂಭಾವಿತ ರಾಜಕಾರಣಿ. ಎಂದಿಗೂ ದರ್ಪ ತೋರಿದವರಲ್ಲ ಎನ್ನುವುದು ಕ್ಷೇತ್ರದ ಜನತೆಯ ಅಂಬೋಣ. ಉಪ ಚುನಾವಣೆಯಲ್ಲಿ ಶಿವರಾಮ್ ಹೆಬ್ಬಾರ್ ಗೆದ್ದ ಬಳಿಕ ವಿ. ಎಸ್. ಪಾಟೀಲ್‌ಗೆ ಸಿಗಬೇಕಾದ ಗೌರವ ಸಿಗಲಿಲ್ಲ ಎನ್ನುವ ಆರೋಪವೂ ಇದೆ. ಹಾಗಾಗಿ, ಬಿಜೆಪಿ ಮತ್ತು ಕಾಂಗ್ರೆಸ್ ಯಾರಿಗೆ ಟಿಕೆಟ್ ನೀಡುತ್ತೆ ಎನ್ನುವುದರ ಆಧಾರದ ಮೇಲೆ ಮುಂದಿನ ಚುನಾವಣೆಯ ಜಿದ್ದಾಜಿದ್ದು ಗೊತ್ತಾಗಲಿದೆ.
ಜಾತಿವಾರು ಮತ ಲೆಕ್ಕಾಚಾರ (2019ರ ಪ್ರಕಾರ, ಅಂದಾಜು)
ಇಲ್ಲಿ ಹವ್ಯಕರ ಮತಗಳೇ ನಿರ್ಣಾಯಕವಾಗಿದೆ. ಬ್ರಾಹ್ಮಣರು- 26,000
ಮರಾಠ -23,000, ಎಸ್.ಸಿ- 21,000, ಲಿಂಗಾಯತ- 21,000
ನಾಮದಾರಿ-20,000. ಮುಸ್ಲಿಂ-20,000
ಗೌಳಿ- 11,000, ಎಸ್‌ಟಿ- 8,000
ಕ್ರಿಶ್ಚಿಯನ್-3,000, ಗಂಗಾಮತ-3000, ಒಕ್ಕಲಿಗ-2,000
ಕುರುಬ-1,500, ಮಡಿವಾಳ -1,500, ಕುಣಬಿ-1,500
ಜೈನ್ -800, ಸವಿತಾ ಸಮಾಜ-600, ನಾಡವರ-500, ರಜಪೂತ- 500, ಉಪ್ಪಾರ-500

ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು:
ಹಾಲೀ ಶಾಸಕ, ಸಚಿವ ಅರೆಬೈಲ್ ಶಿವರಾಂ ಹೆಬ್ಬಾರ್
ಉದ್ಯಮಿ ನರಸಿಂಹ ಕೋಣೆಮನೆ
ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು:
ಭೀಮಣ್ಣ ನಾಯಕ್
ವಿ.ಎಸ್.ಪಾಟೀಲ್
ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಗಳು:
ಉದ್ಯಮಿ ಸಂತೋಷ್ ರಾಯ್ಕರ್
ಕ್ಷೇತ್ರದ ಮತದಾರ ವಿವರ (2018ರ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಕ್ಷೇತ್ರದ ಕೋಡ್: 81
ಪುರುಷರು: 87,120
ಮಹಿಳೆಯರು: 83,390
ಇತರರು: 00
ಒಟ್ಟು: 1,70,510
-
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ -
Bengaluru: ಶಾಲೆಗಳಿಗೂ BWSSB ನೀರಿನ ಬಿಲ್ ಶಾಕ್; ಡಿಸಿಎಂ ಡಿ.ಕೆ. ಶಿವಕುಮಾರ್ ಮೊರೆ ಹೋದ ಖಾಸಗಿ ಶಿಕ್ಷಣ ಸಂಸ್ಥೆಗಳು -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications