NEET UG 2026 Result: ಅಜ್ಜಿ ಸಾವಿನಿಂದ ಡಾಕ್ಟರ್‌ ಆಗೋ ಕನಸು ಕಂಡ ಆರ್ಯನ್ ಗುಪ್ತ, ಇಂದು ನೀಟ್‌ ಟಾಪರ್‌

ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂಡರ್‌ಗ್ರಾಜುಯೇಟ್ (ನೀಟ್‌ ಯುಜಿ) ಫಲಿತಾಂಶವನ್ನು ಎನ್‌ಟಿಎ ನಿನ್ನೆ ಅಂದರೆ ಗುರುವಾರ (ಜುಲೈ, 16) ದಂದು ಅಧಿಕೃತವಾಗಿ ಪ್ರಕಟಿಸಿದೆ. ದೇಶಾದ್ಯಂತ ಎಂಬಿಬಿಎಸ್‌ಗೆ ಸೇರಲು ಕನಸು ಕಾಣುತ್ತಿದ್ದ ಸುಮಾರು 20 ಲಕ್ಷ ವಿದ್ಯಾರ್ಥಿಗಳ ಕಾಯುವಿಕೆ ಈ ಫಲಿತಾಂಶ ಅಂತ್ಯ ಹಾಡಿದೆ.

ಪರೀಕ್ಷೆ ಬರೆದ ಅಭ್ಯರ್ಥಿಗಳು ನೀಟ್‌ ಅಧಿಕೃತ ವೆಬ್‌ಸೈಟ್‌ ಆದ neet.nta.nic.in ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಂಜಾಬ್ ಮೂಲದ ನೀಟ್ ಯುಜಿ 2026 ಟಾಪರ್ ಆರ್ಯನ್ ಗುಪ್ತ ಮತ್ತು ಹರಿಯಾಣದ ಪನ್ಶುಲ್ ಬನ್ಸಾಲ್ 720ಕ್ಕೆ 715 ಅಂಕಗಳನ್ನು ಪಡೆಯುವ ಮೂಲಕ ಇಬ್ಬರೂ ದೇಶಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

NEET UG 2026

ಟಾಪರ್ ಆರ್ಯನ್ ಗುಪ್ತ ಯಶಸ್ಸಿನ ಕಥೆ

ಅಖಿಲ ಭಾರತ ಮಟ್ಟದಲ್ಲಿ ಒಂದನೇ ರ‍್ಯಾಂಕ್ ಪಡೆದ ಆರ್ಯನ್ ಗುಪ್ತ ಅವರ ಯಶಸ್ಸಿನ ಹಿಂದೆ ಅವರ ಕಠಿಣ ಶ್ರಮವಿದೆ. ವಿಶೇಷವೆಂದರೆ ಇವರ ಪೋಷಕರಿಬ್ಬರೂ ವೈದ್ಯರೇ. ಫಲಿತಾಂಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ಯನ್, "ನಾನು ಪ್ರತಿದಿನ 16 ರಿಂದ 17 ಗಂಟೆಗಳ ಕಾಲ ಓದುತ್ತಿದ್ದೆ. ಸರಿಯಾಗಿ ನಿದ್ದೆಯೂ ಮಾಡುತ್ತಿರಲಿಲ್ಲ. ಆದರೆ ಇದೀಗ ಕನಸು ನನಸಾದಂತೆ ಭಾಸವಾಗುತ್ತಿದೆ. ನನ್ನ ಈ ಸಾಧನೆಯಿಂದ ಕುಟುಂಬದವರೆಲ್ಲರೂ ತುಂಬ ಖುಷಿಯಾಗಿದ್ದಾರೆ" ಎಂದಿದ್ದಾರೆ.

ಆರ್ಯನ್ ಅವರ ಈ ಸಾಧನೆ ಕೇವಲ ಶೈಕ್ಷಣಿಕ ಗುರಿಯಷ್ಟೇ ಆಗಿರಲಿಲ್ಲ, ಬದಲಾಗಿ ಅದಕ್ಕೊಂದು ಭಾವುಕ ಕಾರಣ ಕೂಡ ಇದೆ. ಹೌದು, ಆರ್ಯನ್‌ ಮೂರನೇ ತರಗತಿಯಲ್ಲಿದ್ದಾಗ ಕ್ಯಾನ್ಸರ್‌ನಿಂದ ಅವರು ತಮ್ಮ ಅಜ್ಜಿಯನ್ನ ಕಳೆದುಕೊಂಡ್ರು. ಆ ಎಳೆ ವಯಸ್ಸಿನಲ್ಲೇ ಕ್ಯಾನ್ಸರ್ ತಜ್ಞ ಆಗಬೇಕೆಂದು ಶಪಥ ಮಾಡಿದ್ದರಂತೆ. ಅಂದು ಮಾಡಿದ ಆ ಶಪಥವೇ ಇಂದು ಅವರನ್ನು ದೇಶಕ್ಕೆ ಪ್ರಥಮ ಸ್ಥಾನ ತಂದುಕೊಡುವಂತೆ ಮಾಡಿದೆ.

ಇನ್ನೂ ಮುಂದಿನ ದಿನಗಳಲ್ಲಿ ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂದೇಶ ನೀಡಿರುವ ಆರ್ಯನ್ ಗುಪ್ತ, "ಯಾವುದೇ ಕಾರಣಕ್ಕೂ ಭರವಸೆ ಕಳೆದುಕೊಳ್ಳಬೇಡಿ. ನಿಮ್ಮ ಈ ನಿರಂತರ ಶ್ರಮ ಯಾವತ್ತೂ ವ್ಯರ್ಥವಾಗುವುದಿಲ್ಲ. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಒಂದಲ್ಲ ಒಂದು ದಿನ ಖಂಡಿತ ಸಿಗುತ್ತೆ" ಎಂದು ಹೇಳಿದ್ದಾರೆ.

ನೀಟ್ ಯುಜಿ ಅಂಕಗಳ ವಿವರ ಮತ್ತು ಪೈಪೋಟಿ

ಈ ವರ್ಷದ ಫಲಿತಾಂಶವು ವಿದ್ಯಾರ್ಥಿಗಳ ನಡುವಿನ ಇದ್ದ ಪೈಪೋಟಿಯನ್ನ ತೋರಿಸುತ್ತಿದೆ. 19 ಅಭ್ಯರ್ಥಿಗಳು 700ಕ್ಕೂ ಹೆಚ್ಚು ಅಂಕ ಪಡೆದಿದ್ದರೆ, 138 ವಿದ್ಯಾರ್ಥಿಗಳು 690ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಇವರಲ್ಲಿ ಶೇಕಡಾ 93ರಷ್ಟು ವಿದ್ಯಾರ್ಥಿಗಳು ಇದೇ ಮೊದಲ ಬಾರಿಗೆ ಪರೀಕ್ಷೆ ಬರೆದವರು. ಒಟ್ಟಾರೆ 10,160 ಅಭ್ಯರ್ಥಿಗಳು 600ಕ್ಕೂ ಹೆಚ್ಚು ಅಂಕಗಳನ್ನ ಹಾಗೂ 90,780 ಅಭ್ಯರ್ಥಿಗಳು 500ಕ್ಕೂ ಹೆಚ್ಚು ಅಂಕಗಳನ್ನ ಪಡೆದಿದ್ದಾರೆ.

ನೀಟ್ 2026 ಕೌನ್ಸೆಲಿಂಗ್ ಪ್ರಕ್ರಿಯೆ

ಫಲಿತಾಂಶ ಪ್ರಕಟವಾಗಿರುವುದರಿಂದ ಶೀಘ್ರದಲ್ಲೇ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ. ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ಶೇಕಡಾ 15ರಷ್ಟು ಅಖಿಲ ಭಾರತ ಕೋಟಾ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಿದ್ದು, ಉಳಿದ ಸೀಟುಗಳಿಗೆ ಆಯಾ ರಾಜ್ಯ ಸರ್ಕಾರಗಳು ಪ್ರಕ್ರಿಯೆ ನಡೆಸಲಿವೆ. ನಕಲಿ ವೆಬ್‌ಸೈಟ್‌ಗಳು, ಮೆಸೇಜ್‌ಗಳು ಹಾಗೂ ಹಣದ ಆಮಿಷವೊಡ್ಡಿ ಸೀಟು ಕೊಡಿಸುವ ವಂಚಕರಿಂದ ಎಚ್ಚರವಾಗಿರುವಂತೆ ಎನ್‌ಟಿಎ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ. ಕೌನ್ಸೆಲಿಂಗ್‌ಗಾಗಿ ಕೇವಲ ಅಧಿಕೃತ ವೆಬ್‌ಸೈಟ್‌ಗಳನ್ನು ಮಾತ್ರ ನೋಡಬೇಕು ಎಂದು ಸೂಚಿಸಿದೆ.

ಎನ್‌ಟಿಎ ನೀಟ್ 2026 ಫಲಿತಾಂಶದ ಮುಖ್ಯಾಂಶಗಳು

ಜೂನ್ 21 ರಂದು ದೇಶದ 551 ನಗರಗಳು ಹಾಗೂ ವಿದೇಶದ 14 ನಗರಗಳ ಒಟ್ಟು 5,440 ಕೇಂದ್ರಗಳಲ್ಲಿ 13 ಭಾಷೆಗಳಲ್ಲಿ ಈ ಪರೀಕ್ಷೆ ನಡೆದಿತ್ತು. ಎನ್‌ಟಿಎ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ಈ ವರ್ಷ 11.21 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಎಂಬಿಬಿಎಸ್, ಬಿಡಿಎಸ್, ಆಯುಷ್ ಹಾಗೂ ಇತರ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ. ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗಬಾರದು ಎಂಬ ಉದ್ದೇಶದಿಂದ ನಿಗದಿತ ಸಮಯಕ್ಕೆ ಸರಿಯಾಗಿ ಫಲಿತಾಂಶವನ್ನು ಪ್ರಕಟಿಸಲಾಗಿದೆ. ವಿಶೇಷವೆಂದರೆ, ಅರ್ಹತೆ ಪಡೆದ ಅಭ್ಯರ್ಥಿಗಳಲ್ಲಿ ಶೇಕಡಾ 58ರಷ್ಟು ವಿದ್ಯಾರ್ಥಿನಿಯರು ಮೇಲುಗೈ ಸಾಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+