ವಾಷಿಂಗ್ ಮೆಷಿನ್ ನಿಂದ ವಾಸನೆ ಬರುತ್ತಿದೆಯೇ? ಕಾರಣ ಮತ್ತು ಸ್ವಚ್ಛಗೊಳಿಸುವ ಸರಿಯಾದ ಮಾರ್ಗ ಇಲ್ಲಿದೆ

ವಾಷಿಂಗ್‌ ಮೆಶಿನ್‌ ಬಹುತೇಕ ಪ್ರತಿದಿನ ಬಳಸುವ ಗೃಹೋಪಯೋಗಿ ಉಪಕರಣಗಳಲ್ಲಿ ಒಂದಾಗಿದೆ. ನಮ್ಮ ನಿತ್ಯದ ಗಲೀಜು ಬಟ್ಟೆಗಳನ್ನು ಈ ಮೆಶಿನ್‌ನಲ್ಲಿ ಹಾಕಿ ಸ್ವಚ್ಛಗೊಳಿಸಲಾಗುತ್ತದೆ. ಆದರೆ, ಈ ಮೆಶಿನ್‌ನ ಸ್ವಚ್ಛತೆ ಬಗ್ಗೆ ಹೆಚ್ಚಾಗಿ ಯಾರೂ ತಲೆ ಕೆಡಿಸಿಕೊಳ್ಳುವುದಿಲ್ಲ. ವಾಷಿಂಗ್‌ ಮೆಶಿನ್‌ನಲ್ಲಿ ಆಗಾಗ ಒಂದು ರೀತಿಯ ಕೆಟ್ಟ ವಾಸನೆ ಬರುತ್ತಿರುವುದನ್ನು ನೀವು ಗಮನಿಸಿರಬಹುದು. ಫ್ರಂಟ್‌ ಲೋಡಿಂಗ್ ಮೇಶಿನ್‌ನಲ್ಲಿ ಈ ಸಮಸ್ಯೆ ಬಹಳ ಸಾಮಾನ್ಯವಾಗಿರುತ್ತದೆ. ಮೆಶಿನ್‌ನೊಳಗೆ ತೇವಾಂಶ ಸಂಗ್ರಹವಾಗುವುದು, ಡಿಟರ್ಜೆಂಟ್ ಶೇಷ ಮತ್ತು ನಿಯಮಿತವಾಗಿ ಇದನ್ನು ಶುಚಿಗೊಳಿಸದಿರುವುದೇ ಇದಕ್ಕೆ ಮುಖ್ಯ ಕಾರಣ.

ಈ ಸಮಸ್ಯೆ ತೀರಾ ಚಿಕ್ಕದು ಎಂದೆನಿಸಿದರೂ ಇದು ಮೆಶಿನ್‌ನಲ್ಲಿ ಹಾಕುವ ಬಟ್ಟೆಯಿಂದಲೂ ವಾಸನೆ ಬರುವಂತೆ ಮಾಡುವ ಸಾಧ್ಯತೆ ಇರುತ್ತದೆ.ಮೆಶಿನ್‌ ಒಳಗೆ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಕೂಡಾ ಇದು ಕಾರಣವಾಗುತ್ತದೆ. ಇದು ನಿಮ್ಮ ಬಟ್ಟೆಗಳ ಮೇಲೂ ಪರಿಣಾಮ ಬೀರುತ್ತದೆ. ಕೆಲವು ಸರಳ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

Washing Machine

ವಾಷಿಂಗ್ ಮೆಷಿನ್‌ನಿಂದ ವಾಸನೆ ಬರುವುದೇಕೆ?:

ನಿಮ್ಮ ಮೆಷಿನ್‌ನಲ್ಲಿ ವಾಸನೆ ಬರುತ್ತಿದ್ದರೆ, ಡ್ರಮ್, ರಬ್ಬರ್ ಗ್ಯಾಸ್ಕೆಟ್, ಡಿಟರ್ಜೆಂಟ್ ಟ್ರೇ ಮತ್ತು ಡ್ರೈನ್ ಪ್ರದೇಶದಲ್ಲಿ ಸಂಗ್ರಹವಾದ ನೀರು ಮತ್ತು ಕೊಳಕು ಇದಕ್ಕೆ ಕಾರಣವಿರಬಹುದು. ಇದು ಬ್ಯಾಕ್ಟೀರಿಯಾ ಬೆಳಣಿಗೆಗೂ ಕಾರಣವಾಗಬಹುದು. ಮೆಶಿನ್‌ ಒಳಗಿನಿಂದ ಕೆಟ್ಟ ವಾಸನೆ ಬರುವುದಕ್ಕೆ ಇದೂ ಕಾರಣವಾಗಬಹುದು. ರಬ್ಬರ್ ಸೀಲ್‌ಗಳಲ್ಲಿ ನೀರು ಸಿಲುಕಿಕೊಳ್ಳುವುದು ಫ್ರಂಟ್‌ ಲೋಡಿಂಗ್‌ ಮೆಷಿನ್‌ನಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯಾಗಿದೆ.

ಮಳೆಗಾಲದಲ್ಲಿ ಸುಲಭವಾಗಿ ಮತ್ತು ವೇಗವಾಗಿ ಬಟ್ಟೆ ಒಣಗಿಸಲು ಈ ಟ್ರಿಕ್‌ ಬಳಸಿ
ಮಳೆಗಾಲದಲ್ಲಿ ಸುಲಭವಾಗಿ ಮತ್ತು ವೇಗವಾಗಿ ಬಟ್ಟೆ ಒಣಗಿಸಲು ಈ ಟ್ರಿಕ್‌ ಬಳಸಿ

ಮೆಷಿನ್‌ ಅನ್ನು ಸ್ವಚ್ಛಗೊಳಿಸುವುದು ಹೇಗೆ ?:

ಮೊದಲು, ಡ್ರೈನ್ ಫಿಲ್ಟರ್ ಅನ್ನು ಪರಿಶೀಲಿಸಿ. ಅಲ್ಲಿ ಯಾವುದಾದರೂ ಕಸ ಸಿಲುಕಿ ಹಾಕಿದ್ದರೆ ತೆಗೆದುಹಾಕಿ. ನಂತರ, ಡಿಟರ್ಜೆಂಟ್ ಟ್ರೇ ಅನ್ನು ತೆಗೆದು ಸ್ವಚ್ಛಗೊಳಿಸಿ. ಇದಾದ ಬಳಿಕ ಡ್ರಮ್, ರಬ್ಬರ್ ಗ್ಯಾಸ್ಕೆಟ್ ಮತ್ತು ಯಂತ್ರದ ಇತರ ಭಾಗಗಳನ್ನು ಶುಚಿಗೊಳಿಸುವ ದ್ರಾವಣದಿಂದ ಸ್ವಚ್ಛಗೊಳಿಸಿ. ಅಂತಿಮವಾಗಿ, ಮೆಷಿನ್‌ನ ಸೆಲ್ಫ್‌ ಕ್ಲೀನ್‌ ಅಥವಾ ಅತ್ಯಂತ ಬಿಸಿಯಾದ ವಾಶ್‌ ಸೈಕಲ್‌ ಅನ್ನು ಚಲಾಯಿಸಿ. ಶುಚಿಗೊಳಿಸುವಿಕೆಯು ಪೂರ್ಣಗೊಂಡ ನಂತರ, ಮೆಶಿನ್‌ ಡೋರ್‌ ಮತ್ತು ಟ್ರೇ ಅನ್ನು ಸಂಪೂರ್ಣವಾಗಿ ಒಣಗಲು ತೆರೆದಿಡಿ. ಇದು ಮತ್ತೆ ಮತ್ತೆ ವಾಸನೆ ಬರುವುದನ್ನು ತಡೆಯುತ್ತದೆ.

ಗಂಟೆಗಟ್ಟಲೆ ಉಜ್ಜುವ ಅಗತ್ಯವೇ ಇಲ್ಲ: ಅಡುಗೆಮನೆ ಸಿಂಕ್ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ 7 ಟಿಪ್ಸ್
ಗಂಟೆಗಟ್ಟಲೆ ಉಜ್ಜುವ ಅಗತ್ಯವೇ ಇಲ್ಲ: ಅಡುಗೆಮನೆ ಸಿಂಕ್ ಪಳಪಳ ಹೊಳೆಯುವಂತೆ ಮಾಡಲು ಇಲ್ಲಿದೆ 7 ಟಿಪ್ಸ್

ವಾಸನೆ ಬಾರದಂತೆ ತಡೆಯುವ ಸುಲಭ ಮಾರ್ಗಗಳು:

ವಾಷಿಂಗ್‌ ಮೆಶಿನ್‌ ಡೋರ್‌ ಮತ್ತು ಡಿಟರ್ಜೆಂಟ್ ಟ್ರೇಯನ್ನು ತೆರೆದಿಡಿ. ಇದರಿಂದ ತೇವಾಂಶ ಒಣಗಲು ಅವಕಾಶ ಸಿಗುತ್ತದೆ. ಬಟ್ಟೆ ವಾಶ್‌ ಮಾಡಿದ ತಕ್ಷಣ ಮೆಶಿನ್‌ ಒಳಗಿನಿಂದ ಬಟ್ಟೆಯನ್ನು ತೆಗೆಯಿರಿ. ರಬ್ಬರ್ ಸೀಲುಗಳು ಮತ್ತು ಗ್ಯಾಸ್ಕೆಟ್‌ಗಳನ್ನು ನಿಯಮಿತವಾಗಿ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ಮೆಷಿನ್‌ಗೆ ಸರಿಯಾದ ಪ್ರಮಾಣದ ಡಿಟರ್ಜೆಂಟ್ ಬಳಸಿ. ಕನಿಷ್ಠ ತಿಂಗಳಿಗೊಮ್ಮೆ ಮೆಷಿನಿನ ಡೀಪ್‌ ಕ್ಲೀನಿಂಗ್‌ ಮಾಡಿ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+