Vande Bharat Express: ಸಮಯ, ನಿಲ್ದಾಣ, ಟಿಕೆಟ್ ದರದ ಸಂಪೂರ್ಣ ಮಾಹಿತಿ
ಹೈದರಾಬಾದ ಕಾಚಿಗುಡ ಮತ್ತು ಬೆಂಗಳೂರಿನ ಯಶವಂತಪುರ ಜಂಕ್ಷನ್ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಪ್ರಯಾಣಿಕರಿಗೆ ವೇಗದ ಹಾಗೂ ಆರಾಮದಾಯಕವಾದ ಪ್ರಯಾಣಕ್ಕೆ ಇದು ಉತ್ತಮ ಆಯ್ಕೆ ಎಂದೆ ಹೇಳಬಹುದು. ಸುಮಾರು 610 ಕಿಲೋಮೀಟರ್ ದೂರವನ್ನು ಈ ರೈಲು 8 ಗಂಟೆ 15 ನಿಮಿಷ ಈ ಮಾರ್ಗದಲ್ಲಿ ಸಂಚರಿಸುತ್ತದೆ. ಈ ರೈಲಿನ ವೇಳಾಪಟ್ಟಿ, ನಿಲ್ದಾಣಗಳು, ಟಿಕೆಟ್ ದರ ಹಾಗೂ ಬುಕ್ಕಿಂಗ್ ವಿವರ ಈ ರೀತಿ ಇದೆ.
ರೈಲಿನ ಸಂಖ್ಯೆ
20703- ಕಾಚಿಗುಡದಿಂದ ಯಶವಂತಪುರಕ್ಕೆ
20704- ಯಶವಂತಪುರದಿಂದ ಕಾಚಿಗುಡಕ್ಕೆ
ಪ್ರಧಾನಿ ನರೇಂದ್ರ ಮೋದಿಯವರು 2023ರ ಸೆಪ್ಟೆಂಬರ್ 24ರಂದು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆಯನ್ನು ನೀಡಿದ್ದರು. ಈ ವಂದೇ ಭಾರತ್ ಎಕ್ಸ್‌ಪ್ರೆಸ್ ದೇಶದ 29ನೇ ರೈಲು ಸೇವೆ ಆಗಿದೆ.

ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುವ ವೇಳಾಪಟ್ಟಿ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 20703 ಕಾಚಿಗುಡ ನಿಲ್ದಾಣದಿಂದ ಬೆಳಿಗ್ಗೆ ಹೊರಡುತ್ತದೆ. ಯಶವಂತಪುರ ಜಂಕ್ಷನ್ ಮಧ್ಯಾಹ್ನ 2:00ಕ್ಕೆ ತಲುಪುತ್ತದೆ. ಬುಧವಾರ ಹೊರತುಪಡಿಸಿ ವಾರದ ಉಳಿದ ಎಲ್ಲಾ ದಿನಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುತ್ತದೆ.
ಬೆಂಗಳೂರಿನಿಂದ ಹೈದರಾಬಾದ ವೇಳಾಪಟ್ಟಿ ಹೀಗಿದೆ
ಈ ರೈಲು ಸಂಖ್ಯೆ 20704 ಯಶವಂತಪುರ ಜಂಕ್ಷನ್್ನಿಂದ ಮಧ್ಯಾಹ್ನ 2:45ಕ್ಕೆ ಹೊರಟು ರಾತ್ರಿ 11:00ಕ್ಕೆ ಕಾಚಿಗುಡ ತಲುಪುತ್ತದೆ. ಈ ಪ್ರಯಾಣಕ್ಕೂ ಸುಮಾರು 8 ಗಂಟೆ 15 ನಿಮಿಷ ಬೇಕಾಗುತ್ತದೆ. ಈ ಸೇವೆ ಬುಧವಾರ ಹೊರತುಪಡಿಸಿ ವಾರದಲ್ಲಿ ಇನ್ನುಳಿದ ದಿನ ಸಂಚರಿಸುತ್ತದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾರ್ಗ ಮತ್ತು ನಿಲ್ದಾಣಗಳು
ಹೈದರಾಬಾದ ಮತ್ತು ಬೆಂಗಳೂರು ನಡುವೆ ಸಂಚರಿಸುವ ಈ ರೈಲು ಒಟ್ಟು ಐದು ನಿಲ್ದಾಣಗಳಲ್ಲಿ ನಿಲ್ಲಿಸುತ್ತದೆ.
ಮಹಬೂಬ್ ನಗರ, ಕರ್ನೂಲ್ ಸಿಟಿ, ಅನಂತಪುರ, ಧರ್ಮಾವರಂ, ಹಿಂದೂಪುರ ಈ ರೈಲು ತೆಲಂಗಾಣ ಮತ್ತು ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಮೂಲಕ ಸಂಚರಿಸುತ್ತದೆ.
ಹಿಂದೂಪುರದಲ್ಲಿ ಹೊಸ ನಿಲುಗಡೆ
2025ರ ಡಿಸೆಂಬರ್್ನಲ್ಲಿ ದಕ್ಷಿಣ ಪಶ್ಚಿಮ ರೈಲ್ವೆ ಹಿಂದೂಪುರದಲ್ಲಿ ಪ್ರಯೋಗಾತ್ಮಕವಾಗಿ 2 ನಿಮಿಷಗಳ ಕಾಲ ನಿಲುಗಡೆಯನ್ನು ಪ್ರಾರಂಭ ಮಾಡಿತು. ಪರಿಷ್ಕೃತ ವೇಳಾಪಟ್ಟಿಯಂತೆ ಕಾಚಿಗುಡ ಕಡೆಗೆ ತೆರಳುವ ರೈಲು ಮಧ್ಯಾಹ್ನ 12:17ಕ್ಕೆ ಹಿಂದೂಪುರ ತಲುಪಿ 12:19ಕ್ಕೆ ಹೊರಡುತ್ತದೆ.
ಈ ಮಾರ್ಗದ ಪ್ರಯಾಣಿಕರ ಸಾಮರ್ಥ್ಯ
ಇದಕ್ಕೂ ಮೊದಲು 8 ಕೋಚ್‌ಗಳಿದ್ದ ಈ ಮಾರ್ಗದ ರೈಲು ಈಗ ಪ್ರಯಾಣಿಕರ ಸಾಮರ್ಥ್ಯ ಹೆಚ್ಚಾದ ಕಾರಣ, 2025ರಲ್ಲಿ ಜುಲೈ 10ರಿಂದ ಇದೆ ರೈಲಿಗೆ 16 ಕೋಚ್್ಗಳ ರೇಕ್ ಅಳವಡಿಸಲಾಗಿದೆ. ಈ ರೈಲಿನಲ್ಲಿ ಎಸಿ ಚೇರ್ ಕಾರ್, ಎಕ್ಸಿಕ್ಯೂಟಿವ್ ಚೇರ್ ಕಾರ್ ಈ ತರಹದ ಎರಡು ವರ್ಗಗಳ ಸೌಲಭ್ಯವನ್ನು ನೀಡಲಾಗಿದೆ.
ಪ್ರಯಾಣದ ಅಂದಾಜು ಟಿಕೆಟ್ ದರ:
ಎಸಿ ಚೇರ್ ಕಾರ್: ₹1,600
ಎಕ್ಸಿಕ್ಯೂಟಿವ್ ಚೇರ್ ಕಾರ್: 2,915
ಈ ಪ್ರಯಾಣದಲ್ಲಿ ಊಟದ ವೆಚ್ಚವು ಸೇರಿರುತ್ತದೆ. ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್ ವೇಳೆ ಕ್ಯಾಟರಿಂಗ್ ಆಯ್ಕೆಯನ್ನು ತೆಗೆದು ಹಾಕಿದರೆ ಟಿಕೆಟ್ ದರದಲ್ಲಿ ಸ್ವಲ್ಪ ಕಡಿಮೆ ಆಗುತ್ತದೆ.
ಟಿಕೆಟ್ ಬುಕ್ ಮಾಡುವುದು ಹೇಗೆ?
ಪ್ರಯಾಣಿಕರು IRCTC ವೆಬ್‌ಸೈಟ್ ಅಥವಾ ಮೊಬೈಲ್ ಆ್ಯಪ್ ಮೂಲಕ ಪ್ರಯಾಣದ ದಿನಾಂಕಕ್ಕಿಂತ 60 ದಿನಗಳ ಮುಂಚಿತವಾಗಿ ಟಿಕೆಟ್ ಬುಕ್ ಮಾಡಬಹುದು. ತುರ್ತ ಪ್ರಯಾಣಕ್ಕಾಗಿ ತತ್ಕಾಲ ಟಿಕೆಟ್ ಬುಕ್ಕ್ ಮಾಡುವ ಅವಕಾಶ ಇದರಲ್ಲಿ ಲಭ್ಯವಿದೆ.


Click it and Unblock the Notifications
