ಜಲಪಾತದ ತುತ್ತ ತುದಿಯಲ್ಲಿ ಸಿಲುಕಿದ್ದ ಯುವಕ, ಸಾವಿನ ದಡವೆಯಿಂದ ರಕ್ಷಿಸಿದ ರೋಚಕ ವಿಡಿಯೋ ವೈರಲ್
Viral News: ಮಳೆಗಾಲ ಶುರುವಾದರೆ ಸಾಕು ಪ್ರವಾಸಿ ತಾಣಗಳು, ಧುಮ್ಮಿಕ್ಕುವ ಜಲಪಾತಗಳು ಕಾಣಬೇಕೆಂಬ ಹಂಬಲ ಅನೇಕರಲ್ಲಿರುತ್ತದೆ. ಪ್ರವಾಸಿ ಸ್ಥಳಗಳಲ್ಲಿ ಜನರ ಗುಂಪೇ ಕಾಣಿಸುತ್ತದೆ. ಕೆಲವೊಮ್ಮೆ ಹಸಿರಿನಿ ಮಧ್ಯೆ ಹಾಲಿನ ನೊರೆಯಂತೆ ಹರಿಯುವ ಜಲಪಾತ ನೋಡಲು ಹೋಗಿ, ಜೀವಕ್ಕೆ ಆಪತ್ತು ತಂದುಕೊಂಡಿರುತ್ತೇವೆ. ಅಂಥದ್ದೇ ಭಯಾನಕ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದ್ದು, ಜಲಪಾತದ ತುತ್ತ ತುದಿಯಲ್ಲಿ ಸಿಲುಕಿ ಸಾವಿನ ದವಡೆಯಿಂದ ಯುವಕನೋರ್ವ ಪಾರಾಗಿದ್ದಾನೆ. ಆತನ ಸ್ನೇಹಿತರ ಸಾಹಸದ ದೃಶ್ಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಬುದ್ಧಿವಾದ ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದ ಮಾಲ್ಶೇಜ್ ಘಾಟ್‌ನಲ್ಲಿನ ಸುಂದರ ಜಲಪಾತ ನೋಡಲು ಅನೇಕರು ತೆರಳಿದ್ದಾರೆ. ಈ ವೇಳೆ ಯುವಕರ ಗುಂಪು ಸಹ ಜಲಪಾತ ವೀಕ್ಷಣೆಗೆ ಹೋದಾಗ ಈ ಅವಘಡ ನಡೆದಿದೆ. ಒಬ್ಬ ಯುಕವ ಮೇಲಿಂದ ಕೆಳಗ ಬೀಳುವ ಜಲಪಾತದ ತುತ್ತ ತುದಿಯಲ್ಲಿ ಸಿಲುಕಿದ್ದಾನೆ. ನೀರಿನ ರಭಸ ತಡೆದು ನಿಂತಿರುವುದು ವಿಡಿಯೋದಲ್ಲಿ ಕಾಣಿಸುತ್ತದೆ.

ತಪ್ಪಿದ ದುರಂತ!
ಎರಡು ಬಂಡೆಗಳ ನಡುವೆ ಹರಿಯುವ ಜಲಪಾತದ ನಡುವೆ ಸಿಲುಕಿ ಅವಸ್ಥೆ ಪಡುತ್ತಿದ್ದ. ಆತನ ಸ್ನೇಹಿತರು ಜೀವದ ಹಂಗೂ ತೊರೆದು ಸಾವಿನ ದವಡೆಯಲ್ಲಿದ್ದ ಆತನನ್ನು ಕಾಪಾಡಿದ್ದಾರೆ. ತುಂಡು ಹಗ್ಗ, ಕೈಗೆ ಸಿಕ್ಕ ವಸ್ತುಗಳು, ಬಟ್ಟೆ ಸಮೇತ ಬಂದು ಬಂಡೆಗಳ ಮೇಲೆ ನಿಂತು ಒಬ್ಬರಿಗೊಬ್ಬರು ಕೈ ಹಿಡಿದುಕೊಂಡು ಫಾಲ್ಸನ್ ತುದಿಗೆ ನಿಂತವನಿಗೆ ಎಸೆದಿದ್ದಾರೆ. ಆತ ಅದನ್ನು ಹಿಡಿದುಕೊಂಡು ಬಂಡ ಏರಿದ್ದಾನೆ. ಇದೆಲ್ಲವು ವಿಡಿಯೋದಲ್ಲಿ ಸೆರೆಯಾಗಿದೆ. ಅದೃಷ್ಟವಶಾತ್ ಸಂಭನೀಯ ಮಹಾದುರಂತವೊಂದು ತಪ್ಪಿಹೋಗಿದೆ.
ಅಪಾಯಕಾರಿ ತಾಣಗಳಿಗೆ ಬಂದಾಗ ಸಾರ್ವಜನಿಕರಾದವರು ಸಹ ಎಚ್ಚರಿಕೆಯಿಂದ ವರ್ತಿಸಬೇಕು. ಸೆಲ್ಫಿ ಪೋಟೋ, ವಿಡಿಯೋ ಹುಚ್ಚಾಟದಲ್ಲಿ ಮೈ ಮರೆತರೆ ಜೀವಕ್ಕೆ ಅಪಾಯ ತಂದೊಡ್ಡಬಹುದು. ಒಂದು ಕ್ಷಣ ನಿರ್ಲಕ್ಷ್ಯದಿಂದ ಅನಿರೀಕ್ಷಿತ ಘಟನೆಗಳು ಎದುರಾಗಿಬಿಡುತ್ತವೆ. ಪ್ರಸ್ತುತ ಘಟನೆಯಲ್ಲಿ ಈ ಯುವಕ ಜಲಾಪಾತ ತುದಿಗೆ ಹೋಗಿದ್ದೇಗೆ? ಎಂಬ ಕುತೂಹಲ ಎಲ್ಲರನ್ನು ಕಾಡುತ್ತಿದೆ. ದಾಟುವಾಗ ನೀರು ಬಂತಾ, ಅಥವಾ ಎರಡು ಬಂಡೆಗಳ ನಡುವೆ ಕಾಲಿಟ್ಟು ಜಾರಿ ತುದಿಗೆ ಹೋಗಿ ಬ್ಯಾಲೆನ್ಸ್ ಮಾಡಿ ನಿಂತನಾ? ಎಂಬುದು ಗೊತ್ತಾಗಬೇಕಿದೆ.
ದೂರದಿಂದಲೇ ಪ್ರಕೃತಿ ಕಣ್ತುಂಬಿಕೊಳ್ಳಿ, ಆಟವಾಡಬೇಡಿ!: ನೆಟ್ಟಿಗರು
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ದಿ ಬಾಹುಬಲಿ ಐಎನ್‌ಡಿ ಹ್ಯಾಂಡಲ್‌ನಿಂದ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ಹೆಚ್ಚು ವೈರಲ್ ಆಗಿದೆ. 'ಜಲಪಾತದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಯುವಕನನ್ನು ಸುರಕ್ಷಿತವಾಗಿ ರಕ್ಷಿಸಲು ಧೈರ್ಯಶಾಲಿ ರಕ್ಷಕರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ. ಪ್ರಕೃತಿಯನ್ನು ಆನಂದಿಸಿ, ಅದಕ್ಕೂ ಮೊದಲು ಸುರಕ್ಷತೆ ಮುಖ್ಯ' ಎಂದು ಪೋಸ್ಟ್ ಜೊತೆ ಮಾಹಿತಿ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು, 'ಮುಂಗಾರು ಸಮಯದಲ್ಲಿ ನಿಮ್ಮ ಅಜಾಗರೂಕತೆ ಅನೇಕರನ್ನು ಬಲಿ ಪಡೆಯಬಹುದು' ಎಚ್ಚರದಿಂದ ಇರುವಂತೆ ಒಬ್ಬರು ಹೇಳಿದ್ದಾರೆ.
महाराष्ट्र के मालशेज घाट में मौत के मुहाने से वापसी
— Amrendra Bahubali 🇮🇳 (@TheBahubali_IND) July 16, 2026
झरने के तेज बहाव में फंसे युवक को जांबाज़ों ने
अपनी जान जोखिम में डालकर सुरक्षित बचा लिया
मानसून में लापरवाही, जान पर भारी पड़ सकती है
प्रकृति का आनंद लें, लेकिन सुरक्षा पहले 🙏 pic.twitter.com/QJptIJwIGR
'ಇವೆರೆಲ್ಲ ಹೊಸ ಜಾತಿ ಕೋತಿಗಳು. ಭಾರತೀಯರು ನಾವು ಮತ್ತೆ ವಿಕಾಸ ಯುಗದಿಂದ ಹಳೆ ಯುಗಕ್ಕೆ ಹಿಂತಿರುಗುತ್ತಿದ್ದೇವೆ' ಎಂದು ಯುವಕನ ಬೇಜವಾಬ್ದಾರಿಯನ್ನು ಎರಡನೇಯವರು ಟೀಕಿಸಿದ್ದಾರೆ. ಮೂರನೇಯವರು' ಜನರು ಹುಚ್ಚುತನ ಮಿತಿಮೀರುತ್ತದೆ. ಒಬ್ಬರು ಸದ್ದಿಲ್ಲದೆ ಕುಳಿತು ಪ್ರಕೃತಿಯನ್ನು ವೀಕ್ಷಿಸಬೇಕು, ಅರ್ಥ ಮಾಡಿಕೊಳ್ಳಬೇಕು. ಪ್ರಕೃತಿಯೊಂದಿಗೆ ಆಟವಾಡಬಾರದು...ದೇವರು ನಮ್ಮನ್ನು ರಕ್ಷಿಸಿದ್ದಾನೆ' ಎಂದು ಬುದ್ಧಿವಾದ ಹೇಳಿದ್ದಾರೆ. ಹೀಗೆ ಅನೇಕರು ಕಾಮೆಂಟ್ ಮಾಡಿ ತಮ್ಮ ಅಭಿಪ್ರಾಯ ಹೊರ ಹಾಕಿದ್ದಾರೆ.


Click it and Unblock the Notifications
