Get Updates
Get notified of breaking news, exclusive insights, and must-see stories!

Yeshwanthpur Constituency ; ಸೋಮಶೇಖರ್‌ಗೆ ಕಾಂಗ್ರೆಸ್, ಜೆಡಿಎಸ್ ಎದುರಾಳಿ!

ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯ ಎಸ್. ಟಿ. ಸೋಮಶೇಖರ್ ಕಟ್ಟಿ ಹಾಕಲು ಜೆಡಿಎಸ್‌, ಕಾಂಗ್ರೆಸ್ ತಂತ್ರ ರೂಪಿಸುತ್ತಿವೆ. ಕ್ಷೇತ್ರದಲ್ಲಿ ಜೆಡಿಎಸ್ ಸಾಕಷ್ಟು ಪ್ರಭಾವವನ್ನು ಹೊಂದಿದೆ.

ಬೆಂಗಳೂರು ನಗರ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಯಶವಂತಪುರ. ಹೆಸರಿಗೆ ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯಲ್ಲಿದೆ. ಆದರೆ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ತನ್ನ ಒಡಲಲ್ಲಿ ಹೊಂದಿರುವ ಕ್ಷೇತ್ರವಿದು.

ಯಶವಂತಪುರ ಕ್ಷೇತ್ರದ ವ್ಯಾಪ್ತಿ ಎಷ್ಟಿದೆ ಎಂದು ತಕ್ಷಣಕ್ಕೆ ಅಂದಾಜಿಸುವುದು ಕಷ್ಟ. ತುಮಕೂರು ರಸ್ತೆಯ ಚಿಕ್ಕಬಿದರಕಲ್ಲು, ಕನಕಪುರ ರಸ್ತೆಯ ಕಗ್ಗಲೀಪುರ ತನಕ ಕ್ಷೇತ್ರವಿದೆ. ಮತ್ತೊಂದು ಕಡೆ ಮಾಗಡಿ ರಸ್ತೆಯ ತಿಪ್ಪಗೊಂಡನಹಳ್ಳಿ ತನಕ ಕ್ಷೇತ್ರದ ವಿಸ್ತಾರ ಹೊಂದಿದೆ.

ಮೊದಲು ಈ ಕ್ಷೇತ್ರ ಉತ್ತರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿತ್ತು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆ ಬಳಿಕ ಯಶವಂತಪುರ ಕ್ಷೇತ್ರವಾಯಿತು. ಕ್ಷೇತ್ರ ಒಂದು ಉಪ ಚುನಾವಣೆ ಮತ್ತು ಮೂರು ಮುಖ್ಯ ಚುನಾವಣೆಗಳನ್ನು ಕಂಡಿದೆ. ಕ್ಷೇತ್ರದ ಹಾಲಿ ಶಾಸಕರು ಎಸ್. ಟಿ. ಸೋಮಶೇಖರ್. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಸಹಕಾರ ಸಚಿವರು.

ಕ್ಷೇತ್ರ ಪುನರ್ ವಿಂಗಡನೆ ಬಳಿಕ ನಡೆದ 2008ರ ಮೊದಲ ಚುನಾವಣೆಯಲ್ಲಿ ಹಾಲಿ ಕೇಂದ್ರ ಸಚಿವೆಯಾಗಿರುವ ಶೋಭಾ ಕರಂದ್ಲಾಜೆ ಯಶವಂತಪುರದಿಂದ ಗೆದ್ದಿದ್ದರು. ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವೆಯಾಗಿದ್ದರು. ಬಳಿಕ ಎಸ್‌. ಟಿ. ಸೋಮಶೇಖರ್ ಕ್ಷೇತ್ರದಲ್ಲಿ ಹಿಡಿತ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್‌ನಿಂದ ಬಿಜೆಪಿಗೆ ಕ್ಷೇತ್ರ

ಕಾಂಗ್ರೆಸ್‌ನಿಂದ ಬಿಜೆಪಿಗೆ ಕ್ಷೇತ್ರ

2008ರ ಮೊದಲ ಚುನಾವಣೆಯಲ್ಲಿ ಎಸ್. ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆದರೆ ಬಿಜೆಪಿಯ ಶೋಭಾ ಕರಂದ್ಲಾಜೆ ಮುಂದೆ ಸೋಲು ಕಂಡಿದ್ದರು. 2013, 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಎಸ್. ಟಿ. ಸೋಮಶೇಖರ್ ಗೆಲುವು ಕಂಡರು. ಎಚ್. ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಕೆಡವಿ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಬಿಜೆಪಿ ಸೇರಿದ ಬಳಿಕ ಎಸ್. ಟಿ. ಸೋಮಶೇಖರ್ ಉಪ ಚುನಾವಣೆಯಲ್ಲಿ ಗೆದ್ದು ಬಂದರು. ಕ್ಷೇತ್ರವೂ ಬಿಜೆಪಿಗೆ ವಾಪಸ್ ಬಂತು. ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ಸೇರಿದರು. ಬಸವರಾಜ ಬೊಮ್ಮಾಯಿ ಸಂಪುಟದಲ್ಲಿಯೂ ಮುಂದುವರೆದರು.

ಜೆಡಿಎಸ್‌ ಪ್ರಾಬಲ್ಯ ಇರುವ ಕ್ಷೇತ್ರ

ಜೆಡಿಎಸ್‌ ಪ್ರಾಬಲ್ಯ ಇರುವ ಕ್ಷೇತ್ರ

ಯಶವಂತಪುರದಲ್ಲಿ ಜೆಡಿಎಸ್ ಪ್ರಬಲವಾಗಿದೆ. ಎಸ್. ಟಿ. ಸೋಮಶೇಖರ್ ಮತ್ತು ಜೆಡಿಎಸ್‌ನ ಜವರಾಯಿ ಗೌಡ ಮೂರು ಬಾರಿ ಮುಖಾಮುಖಿಯಾಗಿದ್ದಾರೆ. ಮೂರು ಬಾರಿಯೂ ಜವರಾಯಿ ಗೌಡ ಸೋಲು ಕಂಡಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಮತ್ತೆ ಜೆಡಿಎಸ್ ಅಭ್ಯರ್ಥಿ.

2008ರ ಚುನಾವಣೆಯಲ್ಲಿ ಜೆಡಿಎಸ್ 32,947, 2013ರ ಚುನಾವಣೆಯಲ್ಲಿ 91,280 ಮತ್ತು 2018ರ ಚುನಾವಣೆಯಲ್ಲಿ 1,04,562 ಮತಗಳನ್ನು ಪಡೆದಿದೆ. 2019ರ ಉಪ ಚುನಾವಣೆಯಲ್ಲಿಯೂ ಎಸ್. ಟಿ. ಸೋಮಶೇಖರ್‌ಗೆ ಪ್ರಬಲ ಪೈಪೋಟಿ ಎದುರಾಗಿತ್ತು. ಅಂತಿಮವಾಗಿ ಅವರು 27,699 ಮತಗಳಿಂದ ಗೆದ್ದರು.

ಕಾಂಗ್ರೆಸ್‌ ಟಿಕೆಟ್‌ಗೆ ಆಕಾಂಕ್ಷಿಗಳ ದಂಡು

ಕಾಂಗ್ರೆಸ್‌ ಟಿಕೆಟ್‌ಗೆ ಆಕಾಂಕ್ಷಿಗಳ ದಂಡು

ಯಶವಂತಪುರ ಕ್ಷೇತ್ರದಲ್ಲಿ 2008, 2013, 2018ರಲ್ಲಿ ಎಸ್. ಟಿ. ಸೋಮಶೇಖರ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. 2019ರ ಉಪ ಚುನಾವಣೆಯಲ್ಲಿ ಪಿ. ನಾಗರಾಜ್ ಕಣದಲ್ಲಿದ್ದರು. ಆದರೆ ಈ ಬಾರಿ ಟಿಕೆಟ್‌ಗೆ ಭಾರೀ ಪೈಪೋಟಿ ಇದೆ. ಚಿತ್ರನಟಿ ಭಾವನಾ, ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜ್‌ಕುಮಾರ್ ಪುತ್ರ ಕೃಷ್ಣಂ ರಾಜು, ಪಕ್ಷದ ಮುಖಂಡ ಬಾಲರಾಜು ಗೌಡ ಟಿಕೆಟ್ ಆಕಾಂಕ್ಷಿಗಳು.

ಬಿಜೆಪಿಯಿಂದ ಎಸ್. ಟಿ. ಸೋಮಶೇಖರ್. ಜೆಡಿಎಸ್‌ನಿಂದ ಜವರಾಯಿ ಗೌಡ ಕಣದಲ್ಲಿರುವುದು ಖಚಿತವಾಗಿದೆ. ಎಸ್. ಟಿ. ಸೋಮಶೇಖರ್‌ ಕಾಂಗ್ರೆಸ್‌ಗೆ ವಾಪಸ್ ಆಗುತ್ತಾರಾ? ಎಂಬ ಚರ್ಚೆಗಳು ಸಹ ನಡೆದಿವೆ. ಎಎಪಿಯಿಂದ ಶಶಿಧರ ಆರಾಧ್ಯ ಅಭ್ಯರ್ಥಿಯಾಗಬಹುದು ಎಂಬುದು ಅಂದಾಜು.

ಮತದಾರರ ವಿವರಗಳು

ಮತದಾರರ ವಿವರಗಳು

ಯಶವಂತಪುರ ಅತಿ ದೊಡ್ಡ ವಿಧಾನಸಭಾ ಕ್ಷೇತ್ರವೂ ಹೌದು. ಒಟ್ಟು ಮತದಾರರು 5,15,716. ಪುರುಷರು 2,64,583, ಮಹಿಳೆಯರು 2,51,075. ಇತರೆ 58.

ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿರುವ ನಟ ಜಗ್ಗೇಶ್‌ 2018ರಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದರು. ಪಡೆದ ಮತಗಳು 59308. ಕಾಂಗ್ರೆಸ್‌ನ ಎಸ್. ಟಿ. ಸೋಮಶೇಖರ್ 115273 ಮತ ಪಡೆದು ಗೆದ್ದರೆ, ಜೆಡಿಎಸ್‌ನ ಜವರಾಯಿ ಗೌಡ 104562 ಮತ ಪಡೆದು ಭಾರೀ ಪೈಪೋಟಿ ನೀಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+