Bengaluru Rains: ನಗರದಲ್ಲಿಂದು 47 ವಾರ್ಡ್‌ಗಳಲ್ಲಿ ಮಳೆ ಸಿಂಚನ: ನಾಳೆ 10 ಜಿಲ್ಲೆಗಳಲ್ಲಿ ಭಾರೀ ಮಳೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಂದೆರಡು ದಿನಗಳಿಂದ ನಿತ್ಯ ಸಂಜೆ ಮಳೆ ಸುರಿಯುತ್ತಿದ್ದು, ಇಂದು ಸೋಮವಾರ ಸಹ ಸುಮಾರು 47 ವಾರ್ಡ್‌ಗಳಲ್ಲಿ ಮಳೆ ಆಗಿದೆ. ಭಾನುವಾರ ಬ್ರೇಕ್ ನೀಡಿದ್ದ ಮಳೆ ಇಂದು ಬೆಂಗಳೂರು ದಕ್ಷಿಣ ವಲಯ ಹಾಗೂ ಮಹಾದೇವಪುರ ವ್ಯಾಪ್ತಿಯಲ್ಲಿ ಕೆಲ ಕಾಲ ಜೋರಾಗಿ ಸುರಿಯಿತು. ಜುಲೈ 26ರವರೆಗೆ ನಗರದ ಹವಾಮಾನ ಮುನ್ಸೂಚನಾ ವರದಿ ಇಲ್ಲಿದೆ.

ನಗರಾದ್ಯಂತ ಮಬ್ಬು ವಾತಾವರಣ ಮುಂದುವರಿದಿದ್ದು, ಕಳೆದ ನಾಲ್ಕೈದು ದಿನಗಳಿಂದ ತಂಪು ವಾತಾವರಣವೇ ಕಂಡು ಬರುತ್ತಿದೆ. ಕೋರಮಂಗಲ, ಜಕ್ಕೂರು, ಅಟ್ಟೂರು, ಕಾಡುಗೋಡಿ, ಟೌನ್‌ ಹಾಲ್, ಲಾಲ್ ಬಾಗ್, ಹೊಸೂರು ರಸ್ತೆ, ಡೈರಿ ವೃತ್ತ, ಹೆಬ್ಬಾಳ, ಕಾಡುಬೀಸನಹಳ್ಳಿ, ಬಿಟಿಎಂ ಬಡಾವಣೆ, ಹೆಬ್ಬಾಳ, ಯಲಹಂಕ ಚೌಡೇಶ್ವರಿ ಸೇರಿಂತೆ ವಿವಿಧ ಬಡಾವಣೆಗಳಲ್ಲಿ ಸೋಮವಾರ ಮಳೆ ಆಗಿದೆ.

Bengaluru Rains

ಮಳೆಗೆ ನಗರವೆಲ್ಲ ತಂಪಾಗಿದ್ದು, ಹೊರ ವರ್ತುಲ ರಸ್ತೆ, ಹೊಸೂರು ರಸ್ತೆ, ಟೌನ್ ಹಾಲ್, ಕೆ.ಆರ್, ಮಾರುಕಟ್ಟೆ, ಮೆಜೆಸ್ಟಿಕ್ ಸುತ್ತಮುತ್ತಲಿನ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಸೇಂಟ್ ಜಾನ್ಸ್, ಹೆಬ್ಬಾಳ, ಸಿಲ್ಕ್ ಬೋರ್ಡ್ ಜಂಕ್ಷನ್ ಸೇರಿದಂತೆ ಪ್ರಮುಖ ಜಂಕ್ಷನ್‌ಗಳಲ್ಲಿ ಟ್ರಾಫಿಕ್ ಕಂಡು ಬಂತು. ಕಚೇರಿ ಕೆಲಸ ಮುಗಿಸಿ ತೆರಳುತ್ತಿದ್ದ ನೌಕರರು ಜಿಟಿ ಜಿಟಿ ಮಳೆಯಿಂದ ಕಿರಿ ಕಿರಿ ಅನುಭವಿಸಿದೆ.

Bengaluru Flood Challanges: ಅಲ್ಪ ಮಳೆಗೂ ಬೆಂಗಳೂರಿನ ಅಸಲಿ ಚಿತ್ರಣ ಬಯಲು, ಸವಾಲೊಡ್ಡುವ ಮಳೆಗಾಲ
Bengaluru Flood Challanges: ಅಲ್ಪ ಮಳೆಗೂ ಬೆಂಗಳೂರಿನ ಅಸಲಿ ಚಿತ್ರಣ ಬಯಲು, ಸವಾಲೊಡ್ಡುವ ಮಳೆಗಾಲ

ಜುಲೈ 26ರವರೆಗೆ ಹವಾಮಾನ ಮುನ್ಸೂಚನೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನೀಡಿರುವ ಇಂದಿನ ಮುನ್ಸೂಚನೆ ಪ್ರಕಾರ, ನಾಳೆಯಿಂದ ಮಳೆ ದುರ್ಬಲಗೊಳ್ಳಲಿದೆ. ಕೆಲವೆಡೆ ಮಾತ್ರವೇ ಹಗುರು ಮಳೆ ಆಗಲಿದ್ದು, ಉಳಿದ ಕಡೆಗಳಲ್ಲಿ ಬಿಸಿಲಿನ ವಾತಾವರಣ ಅಥವಾ ಸಾಮಾನ್ಯ ವಾತಾವರಣ ಕಂಡು ಬರಲಿದೆ.

ಮಂಗಳವಾರದಿಂದ (ಜುಲೈ 21) ಜುಲೈ 26ರವರೆಗೆ ಮೋಡ ಕವಿದ ಮತ್ತು ತಂಪು ವಾತಾವರಣ ಕಂಡು ಬರಲಿದೆ. ಗಂಭೀರ ಸ್ವರೂಪದ ಬದಲಾವಣೆ, ಜೋರು ಮಳೆ ಮುನ್ನೆಚ್ಚರಿಕೆ ಸದ್ಯಕ್ಕಿಲ್ಲ. ಈ ಅವಧಿಯಲ್ಲಿ ನಗರದ ಗರಿಷ್ಠ ತಾಪಮಾನ 30-31ರಿಂದ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಬಹುದು ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಕರ್ನಾಟಕದಲ್ಲಿ ಮಂಗಳವಾರ 10 ಜಿಲ್ಲೆಗಳಲ್ಲಿ ಭಾರೀ ಮಳೆ

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ, ನಾಳೆ ಮಂಗಳವಾರ ಕರಾವಳಿ ಮತ್ತು ಮಲೆನಾಡು ಸೇರಿ ಒಟ್ಟು 10 ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಹಾಗೂ ಅತ್ಯಧಿಕ ಭಾರೀ ಮಳೆ ನಿರೀಕ್ಷೆ ಇದೆ. ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ನೀಡಲಾಗಿದೆ.

ಇನ್ನೂ ಉತ್ತರ ಕರ್ನಾಟಕದ ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಹಾಗೂ ಮಲೆನಾಡಿನ ಚಿಕ್ಕಮಗಳೂರು, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರೀ ಮಳೆ ನಿರೀಕ್ಷೆ ಇದ್ದು, ನಾಳೆ ಒಂದು ದಿನ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಇನ್ನುಳಿದ ಜಿಲ್ಲೆಗಳ ಕೆಲವೆಡೆ ಹಗುರದಿಂದ ಸಾಮಾನ್ಯ ಮಳೆ ಆಗಬಹುದು. ಮೋಡ ಕವಿದ ವಾತಾವರಣ ನಿರ್ಮಾಣಗೊಳ್ಳಬಹುದು ಎಂದು ಐಎಂಡಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+