Astrology: ಮಘಾ ನಕ್ಷತ್ರದ 2ನೇ ಪಾದಕ್ಕೆ ಕೇತು ಪ್ರವೇಶ: ಆ.2ರಿಂದ ಈ ನಾಲ್ಕು ರಾಶಿಗೆ ಲಕ್ ಪಕ್ಕಾ
ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು, ಕೇತು ಸಂಚಾರಕ್ಕೆ ಅತ್ಯಂತ ಪ್ರಾಮುಖ್ಯತೆ ಇರುತ್ತದೆ. ಗ್ರಹಗಳ ಬದಲಾವಣೆಯೊಂದಿಗೆ ನಕ್ಷತ್ರ ಸಂಚಾರವು ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ. ಇಂಥದ್ದೊಂದು ಘಟನೆ ಜ್ಯೋತಿಷ್ಯದಲ್ಲಿ ಆಗಸ್ಟ್ 2ರಂದು ಸಂಭವಿಸಲಿದೆ. ಆ ದಿನ ಮಧ್ಯರಾತ್ರಿ ನಂತರ 12 ಗಂಟೆ 08 ನಿಮಿಷಕ್ಕೆ ಕೇತು ಮಘಾ ನಕ್ಷತ್ರದ ಎರಡನೇ ಪಾದಕ್ಕೆ ಪ್ರವೇಶಿಸುತ್ತಿದ್ದಾನೆ. ಅಕ್ಟೋಬರ್ 3ನೇ ತಾರೀಖಿನವರೆಗೆ ಕೇತು ಇದೇ ಸ್ಥಾನದಲ್ಲಿ ಮುಂದುವರಿಯಲ್ಲಿದ್ದು, ಕೆಲವು ರಾಶಿಗಳ ಮೇಲೆ ಧನಾತ್ಮಕ ಹಾಗೂ ಋಣಾತ್ಮಕ ಪ್ರಭಾವ ಬೀರಲಿದ್ದಾನೆ.
ಈ ಎರಡು ತಿಂಗಳ ಕಾಲ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಯವರಿಗೆ 'ಗೋಲ್ಡನ್ ಪೀರಿಯಡ್' ಶುರುವಾಗಲಿದೆ. ಈ ನಕ್ಷತ್ರ ಸಂಚಾರ ಪ್ರಭಾವದಿಂದ ಅನಿರೀಕ್ಷಿತ ಧನ ಲಾಭದೊಂದಿಗೆ ದೀರ್ಘಕಾಲಿಕ ಸಮಸ್ಯೆಗಳೂ ಗುಡ್ ಬೈ ಹೇಳುವ ಅವಕಾಶ ಒದಗಲಿದೆ. ಅದರಲ್ಲಿಯೂ ಧನಸ್ಸು, ಕನ್ಯಾ, ಮಿಥುನ ಹಾಗೂ ಮೇಷ ರಾಶಿಯವರಿಗೆ ಸುಸಮಯ. ಅಂದು ಕೊಂಡಿದ್ದನ್ನು ಸಾಧಿಸಿ ತೋರಿಸುತ್ತಾರೆ. ಅಲ್ಲದೇ ವಿಜಯಲಕ್ಷ್ಮಿ ಈ ರಾಶಿಯವರ ಕೈ ಹಿಡಿಯೋದು ಗ್ಯಾರಂಟಿ.

ಸಂಸಾರದಲ್ಲಿ ನೆಮ್ಮದಿ ಸಿಗಲಿದ್ದು, ಔದ್ಯೋಗಿಕ ಕ್ಷೇತ್ರದಲ್ಲಿಯೂ ಈ ರಾಶಿಯವರಿಗೆ ಹಣ ಸಿಗುವ ಅವಕಾಶಗಳು ದೊರೆಯಲಿವೆ. ತಾವಂದು ಕೊಂಡಿದ್ದನ್ನು ಸಾಧಿಸಲು ಇದು ಸಕಾಲ. ಎಷ್ಟೋ ದಿನದಿಂದ ರಾತ್ರಿ ನಿದ್ರೆ ಕೆಡಿಸುತ್ತಿದ್ದ ಕಾರ್ಯಗಳು ಸುಸೂತ್ರವಾಗಿ ಮುಗಿಯಲಿದ್ದು, ಇನ್ನು ನೆಮ್ಮದಿಯ ದಿನಗಳು ನಿಮ್ಮದಾಗಲಿವೆ. ಗೊಂದಲಗಳಿಗೆ ಮುಕ್ತಿ ಸಿಗಲಿದ್ದು, ಶಾಂತಿ ನೆಲೆಯೂರುತ್ತದೆ. ಹೊಸ ಹೊಸ ಉದ್ಯೋಗಗಳ ಆಫರ್ಸ್ ನಿಮ್ಮ ಕೈಗೆ ಸೇರಲಿದ್ದು, ಯಾರಿಗೆ ಲಾಭ, ಯಾರಿಗೆ ನಷ್ಟವೆಂದು ತಿಳಿಯೋಣ ಬನ್ನಿ.
ಮೇಷ ರಾಶಿ
ಕೇತುವಿನ ನಕ್ಷತ್ರ ಬದಲಾವಣೆಯಿಂದ ಮೇಷ ರಾಶಿಯವರಿಗೆ ಅತ್ಯಂತ ಶುಭ ಪ್ರದವಾದ ಫಲಿತಾಂಶಗಳು ಬರಲಿವೆ. ಈ ರಾಶಿಯವರು ಕೈಗೆತ್ತಿಕೊಳ್ಳುವ ಪ್ರತಿ ಕೆಲಸದಲ್ಲೂ ಸಫಲರಾಗುತ್ತಾರೆ. ಉದ್ಯೋಗಿಗಳು ತಮ್ಮ ವೃತ್ತಿ ಜೀವನದಲ್ಲಿ ಉನ್ನತ ಸ್ಥಾನವೇರುತ್ತಾರೆ. ಕಚೇರಿಗಳಲ್ಲಿ ಸಹೋದ್ಯೋಗಿಗಳಿಂದ ಪೂರ್ಣ ಬೆಂಬಲ ಸಿಗುತ್ತದೆ. ಹೊಸ ಜವಾಬ್ದಾರಿಗಳು ಅಥವಾ ಹುದ್ದೆಗಳು ಸಿಗುವ ಅವಕಾಶವಿದೆ. ವ್ಯಾಪಾರಸ್ಥರಿಗೆ ಅದ್ಭುತವಾದ ಬೆಳವಣಿಗೆ ಕಾಣಿಸುತ್ತದೆ. ಕುಟುಂಬದಲ್ಲಿನ ಹಳೆಯ ಸಮಸ್ಯೆಗಳು, ಗೊಂದಲಗಳು ದೂರವಾಗಿ, ಶಾಂತಿ ನೆಲೆಯೂರುತ್ತದೆ.
ಧನಸ್ಸು ರಾಶಿ
ಧನಸ್ಸು ರಾಶಿಯವರಿಗೆ ಈ ಕೇತು ಸಂಚಾರದಿಂದ ಅಖಂಡ ವಿಜಯ ಸಿಗಲಿದೆ. ಆರ್ಥಿಕವಾಗಿ ಸದೃಢವಾಗೋ ಟೈಮಿದು. ಧನ ಲಾಭಕ್ಕೆ ಹಲವು ಹೊಸ ಮಾರ್ಗಗಳು ತೆರೆದುಕೊಳ್ಳುತ್ತವೆ. ಉದ್ಯೋಗ ಬದಲಾಯಿಸಬೇಕೆಂದುಕೊಳ್ಳುವವರಿಗೆ ಈ ಸಮಯದಲ್ಲಿ ಒಳ್ಳೆಯ ಆಫರ್ಸ್ ಬರೋದು ನಿಶ್ಚಿತ. ಪ್ರಸ್ತುತ ಮಾಡುತ್ತಿರುವ ಉದ್ಯೋಗದಲ್ಲೇ ಉನ್ನತ ಹುದ್ದೆಗಳ ಜೊತೆ ಜೊತೆಗೆ ಸಂಬಳವೂ ವಿಪರೀತ ಹೆಚ್ಚಾಗುವ ಸೂಚನೆಗಳಿವೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಿಗೆ ಆಗಸ್ಟ್ 2ರಿಂದ ಅದ್ಭುತವಾದ ದೆಸೆ ಬದಲಾಗೋದು ಪಕ್ಕಾ. ಸುದೀರ್ಘ ಕಾಲದಿಂದ ಕಾಡುತ್ತಿರುವ ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. ಸಾಲದ ಸಮಸ್ಯೆಗಳು ನಿರೀಕ್ಷೆಗೂ ಮೀರಿ ಮಂಜಿನಂತೆ ಕರಗುತ್ತವೆ. ಈ ಸಮಯದಲ್ಲಿ ಆಧ್ಯಾತ್ಮಿಕ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ವಿಪರೀತ ಹೆಚ್ಚುತ್ತದೆ. ತಮ್ಮ ವ್ಯಾಪಾರಗಳನ್ನು ಹೊಸ ಪ್ರದೇಶಗಳಿಗೆ ವಿಸ್ತರಿಸುವ ಯೋಜನೆ ಇದ್ದವರು ಖಂಡಿತಾ ತಮ್ಮಿಚ್ಛೆಯಂತೆ ಕಣ್ಣು ಮುಚ್ಚಿ ನಾಲ್ಕು ಹೆಜ್ಜೆ ಮುಂದೆ ಇಡಬಹುದು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಈ ಕೇತು ಸಂಚಾರ ಒಂದು ಸುವರ್ಣ ಅವಕಾಶವಾಗಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮರ್ಯಾದೆಗಳು, ಆತ್ಮವಿಶ್ವಾಸ ವಿಪರೀತ ಹೆಚ್ಚುತ್ತವೆ. ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ಈ ಸಮಯದಲ್ಲಿ ಧೈರ್ಯವಾಗಿ ತೆಗೆದುಕೊಳ್ಳಬಹುದು. ವ್ಯಾಪಾರ ರಂಗದಲ್ಲಿರುವವರಿಗೆ ಅನಿರೀಕ್ಷಿತ ಲಾಭಗಳು ಸಿಗುವ ಸಾಧ್ಯತೆ ಇವೆ. ಸ್ವಲ್ಪ ಸಮಯದಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆಗಳೂ ದೂರವಾಗಿ ಮಾನಸಿಕ ಶಾಂತಿ ಸಿಗಲಿದೆ.
ವಿಶೇಷ ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಜ್ಯೋತಿಷ್ಯ ನಂಬಿಕೆಯನ್ನಾಧರಿಸಿದೆ. ಇದು ಕೇವಲ ಮಾಹಿತಿ ಉದ್ದೇಶಗಳಿಗಾಗಿ ಮಾತ್ರವೇ ನೀಡಲಾಗಿದ್ದು, ಇದನ್ನು ಯಾವುದೇ ವೈಜ್ಞಾನಿಕ ಪುರಾವೆಯಾಗಿ ಪರಿಗಣಿಸಬಾರದು. ಓದುಗರು ಈ ಮಾಹಿತಿಯನ್ನು ವೈಯಕ್ತಿಕ ಅಭಿಪ್ರಾಯವಾಗಿ ಮಾತ್ರ ಪರಿಗಣಿಸಬೇಕು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಸಂಬಂಧಪಟ್ಟ ತಜ್ಞರ ಸಲಹೆ ಪಡೆಯಬೇಕು. ಈ ಲೇಖನದಲ್ಲಿನ ಮಾಹಿತಿಗೆ ಒನ್ ಇಂಡಿಯಾ ಕನ್ನಡ ಹೊಣೆಯಲ್ಲ.


Click it and Unblock the Notifications
