ದೇವಸ್ಥಾನಕ್ಕೆ ನಗ್ನವಾಗಿ ಹೋಗಿ, ದೇವಿ ಮೂರ್ತಿ ಎತ್ತಿದ ಮಾಜಿ ಬೆಂಗಳೂರು ಟೆಕ್ಕಿ, ಸಾವಿಗೆ ಶರಣು
ಹೈದರಾಬಾದ್: ಹೈದರಾಬಾದ್‌ನ ದೇವಸ್ಥಾನವೊಂದಕ್ಕೆ ನಗ್ನವಾಗಿ ತೆರಳಿದ ಮಹಿಳೆಯೊಬ್ಬಳು ದೇವಿ ಮೂರ್ತಿಯನ್ನು ಎತ್ತಿ, ನಂತರ ಸಮೀಪದ ಕೆರೆಗೆ ಹಾರಿ ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದ್ದು, ಮಾನಸಿಕ ಆರೋಗ್ಯದ ಬಗ್ಗೆ ಕಳವಳ ವ್ಯಕ್ತವಾಗಿದೆ.
25 ವರ್ಷದ ಮಾಜಿ ಟೆಕ್ಕಿಯೊಬ್ಬರು ನಗ್ನವಾಗಿ ದೇವಸ್ಥಾನವೊಂದಕ್ಕೆ ತೆರಳಿ, ನಂತರ ಕೆರೆಗೆ ಹಾರಿ ಪ್ರಾಣ ಕಳೆದು ಕೊಂಡಿದ್ದಾರೆ. ಈ ಮಧ್ಯೆ ದೇವಸ್ಥಾನದಲ್ಲಿ ದೇವಿ ಮೂರ್ತಿಯನ್ನು ಎತ್ತಿಟ್ಟಿದ್ದರೆಂದು ಪೊಲೀಸರು ಹೇಳಿದ್ದಾರೆ. ಈ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ ಮಹಿಳೆ, ನಂತರ ವಿಶಾಖಪಟ್ಟಣಂಗೆ ಸ್ಥಳಾಂತರಗೊಂಡಿದ್ದರು.

ಜುಲೈ 17ರಂದು ನಡೆದಿದ್ದೇನು?
ಈ ಮಹಿಳೆಯ ಪೋಷಕರಲ್ಲಿ ವೈಮನಸ್ಸಿತ್ತು. ತಂದೆ ವಿಶಾಖಪಟ್ಟಣದಲ್ಲಿಯೂ ಹಾಗೂ ಮಹಿಳೆ ತಮ್ಮ ತಾಯಿಯೊಂದಿಗೆ ಹೈದರಾಬಾದ್‌ನ ಪೀರ್ಜಾದಿಗುಡದಲ್ಲಿ ನೆಲೆಸಿದ್ದರು. ಮೃತ ಮಹಿಳೆ ತಮ್ಮ ತಾಯಿಯೊಂದಿಗೆ ಜುಲೈ 17ರಂದು ಅಮ್ಮನೊಂದಿಗೆ ಡಬಲ್ ಬೆಡ್‌ರೂಂ ಅಪಾರ್ಟ್‌ಮೆಂಟ್ ನೋಡಲು ತೆರಳಿದ್ದರು. ಮನೆ ಕೊಳ್ಳುವ ಯೋಚನೆಯಲ್ಲಿದ್ದ ಅಮ್ಮ-ಮಗಳು. ಆಮೇಲೆ ಮನಗೆ ಮರಳಿ, ತಮ್ಮ ತಮ್ಮ ಕೋಣೆಯಲ್ಲಿ ಮಲಗಿದ್ದರು. ತಡ ರಾತ್ರಿ ಅಮ್ಮ ಮಲಗಿದ್ದ ಕೊಠಡಿಯನ್ನು ಲಾಕ್ ಮಾಡಿ, ಬರೀ ಮೈಯಲ್ಲಿಯೇ ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಅಮ್ಮನವರ ಮೂರ್ತಿಯನ್ನು ಎತ್ತಿ, ಮತ್ತೆ ಎಲ್ಲಿಯೇ ಇಟ್ಟಿದ್ದರಂತೆ. ನಂತರ ಸಮೀಪದ ಕೆರೆಯಲ್ಲಿ ಮುಳುಗಿ, ಪ್ರಾಣ ಬಿಟ್ಟಿದ್ದಾರೆ.
ಮರಣೋತ್ತರ ಪರೀಕ್ಷೆ ನಂತರ ಶವವನ್ನು ಆಕೆಯ ತಾಯಿಗೆ ಹಸ್ತಾಂತರಿಸಲಾಗಿದೆ. ಘಟನೆಯ ಬಗ್ಗೆ ಮಹಿಳೆಯ ತಂದೆಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹಿಳೆ ಮತ್ತು ಆಕೆಯ ತಾಯಿ ಇಬ್ಬರೂ ಫೋಬಿಯಾ ಅಂದ್ರೆ ಯಾವುದೋ ಭ್ರಮಾ ಭಯದಿಂದ ಬಳಲುತ್ತಿದ್ದರು ಎಂದು ಆ ಅಧಿಕಾರಿ ಸೇರಿಸಿ ಹೇಳಿದ್ದಾರೆ.
ಮಾನಸಿಕ ಒತ್ತಕ್ಕೆ ಒಳಗಾಗಿ ಮಹಿಳೆ
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿದ್ದು, 25 ವರ್ಷದ ಮಹಿಳೆ ಸಾವಿಗೆ ಕಾರಣ ಏನಿರಬಹುದೆಂದು ತನಿಖೆ ನಡೆಸುತ್ತಿದ್ದಾರೆ. ತಾವು ಅನುಭವಿಸುತ್ತಿದ್ದ ಮಾನಸಿಕ ಒತ್ತಡವೇ ಈ ಘಟನೆಗೆ ಕಾರಣವೆಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಮನುಷ್ಯನ ಸಮಸ್ಯೆಗಳಿಗೆ ಸಾವು ಒಂದೇ ಅಂತಿಮ ಪರಿಹಾರವಲ್ಲ. ಬದಲಿಗೆ ಇಂಥ ಮಾನಿಸಿಕ ತೊಳಲಾಟ, ಗೊಂದಲಗಳಿದ್ದರೆ ಮಾನಸಿಕ ತಜ್ಞರನ್ನು ಭೇಟಿಯಾಗಿ ಸೂಕ್ತ ಪರಿಹಾರ ಅಥವಾ ವೈದ್ಯಕೀಯ ನೆರವು ಪಡೆದುಕೊಳ್ಳಬಹುದು. ಅಥವ ಆಪ್ತ ಸಲಹೆಗಾರರನ್ನು ಭೇಟಿಯಾಗಿ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಬಹುದು.
Helplines: COOJ Mental Health Foundation (COOJ)- 0832-2252525, ಪರಿವರ್ತನ್- +91 7676 602 602, Connecting Trust- +91 992 200 1122/+91-992 200 4305 or Sahai- 080-25497777/ [email protected]
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಇಂತಹ ಸಾವುಗಳ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ಸ್ನೇಹಾ ಫೌಂಡೇಷನ್ ಸಹಾಯವಾಣಿ ಇಂತಿದೆ: 04424640050, ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ 02225521111ಗೆ ಕರೆ ಮಾಡಬಹುದು.


Click it and Unblock the Notifications
