ಭುಗಿಲೆದ್ದ ದೆಹಲಿ NEET ಪ್ರತಿಭಟನೆ! ಪರೀಕ್ಷಾ ಅಕ್ರಮಕ್ಕೆ ಕೇಂದ್ರವೇ ಹೊಣೆ: ಬಿಜೆಪಿ ವಿರುದ್ಧ ರೆಡ್ಡಿ-ಖರ್ಗೆ ವಾಗ್ದಾಳಿ

ಬೆಂಗಳೂರು: ಸಂಸತ್ ಅಧಿವೇಶನದ ಮೊದಲ ದಿನವೇ ದೆಹಲಿಯಲ್ಲಿ NEET ಪರೀಕ್ಷಾ ಅಕ್ರಮ ವಿರುದ್ಧ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ 'ಕಾಂಕ್ರೋಚ್ ಜನತಾ ಪಾರ್ಟಿ' ವತಿಯಿಂದ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆಯಿತು. ಸಂಸತ್‌ ಭವನದತ್ತ ಬರುತ್ತಿದ್ದಂತೆ ಪ್ರತಿಭಟನಾಕಾರರು ಮತ್ತು ಭದ್ರತಾ ಪಡೆ ನಡುವೆ ಸಂಘರ್ಷ ಏರ್ಪಟ್ಟಿತು. ಇದೇ ದೆಹಲಿ ಇಂದು ವಿಶ್ವದ ಗಮನ ಸೆಳೆಯುವಂತಾಯಿತು. ಈ ಪ್ರತಿಭಟನೆ ಬೆಂಬಲಿಸಿ, ಕೇಂದ್ರ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ನಾಯಕರು ಕಿಡಿ ಕಾರಿದ್ದಾರೆ.

ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ರಾಮಲಿಂಗಾ ರೆಡ್ಡಿ ಅವರು ಎಕ್ಸ್ ಖಾತೆ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು. ನೀಟ್ ಅಕ್ರಮ ಹಾಗೂ ಇಂದಿನ ಸಾವು ನೋವುಗಳಿಗೆ ಕೇಂದ್ರ ಸಚಿವರೇ ಕಾರಣವೆಂದು ದೂರಿದರು. ರಾಜ್ಯ ಬಿಜೆಪಿ ನಾಯಕರ ವಿರುದ್ಧವು ಟೀಕಾ ಪ್ರಹಾರ ನಡೆಸಿದರು.

NEET Protest in Delhi

ಇಂದಿನ ಜೀವಹಾನಿಗೆ ಶಿಕ್ಷಣ ಸಚಿವಾಲಯ ಹೊಣೆ

ರಾಮಲಿಂಗಾ ರೆಡ್ಡಿ ಅವರು, NEET ಸೇರಿದಂತೆ ಪ್ರಮುಖ ರಾಷ್ಟ್ರೀಯ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳು ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಶ್ರಮವನ್ನು ಮಣ್ಣುಪಾಲು ಮಾಡಿವೆ ಹಾಗೂ 20ಕ್ಕೂ ಹೆಚ್ಚು ಯುವಜೀವಗಳು ಬಲಿಯಾಗಿವೆ. ಇದಕ್ಕೆ ನೇರ ಹೊಣೆ ಶಿಕ್ಷಣ ಸಚಿವಾಲಯ ಎಂದರು.

ನ್ಯಾಯ ಕೇಳಲು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳು ಮತ್ತು ಯುವಜನರ ಧ್ವನಿಯನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ಬದಲು, ಅವರ ಮೇಲೆ ಪೋಲಿಸ್ ಬಲಪ್ರಯೋಗ ನಡೆಸಿರುವುದು ಕೇಂದ್ರ ಬಿಜೆಪಿ ಸರ್ಕಾರದ ಭೀರುತ್ವ ಹಾಗೂ ದಮನಕಾರಿ ನೀತಿಯನ್ನು ತೋರಿಸುತ್ತದೆ. ದೇಶದ ಭವಿಷ್ಯವಾಗಿರುವ ಭಾರತ ಮಾತೆಯ ಮಕ್ಕಳ ಮೇಲೆಯೇ ಈ ಮಟ್ಟದ ಕ್ರೌರ್ಯವೇ? ಎಂದು ಪ್ರಶ್ನಿಸಿದರು.

ಅಧಿಕಾರದ ಮದದಲ್ಲಿ ಯುವಜನರ ಧ್ವನಿಯನ್ನು ಅಡಗಿಸಲು ಹೊರಟಿರುವ ಬಿಜೆಪಿ ಸರ್ಕಾರಕ್ಕೆ ಈ ದೇಶದ ಜನತೆ ಹಾಗೂ ವಿದ್ಯಾರ್ಥಿ ಸಮುದಾಯ ಮುಂಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

ಬಿಜೆಪಿ ನಾಯಕರ ಮನೆಯ ಮಕ್ಕಳಿಂದ ಕೇಂದ್ರಕ್ಕೆ ಪ್ರಶ್ನೆ?

ಇನ್ನೂ ಪ್ರಿಯಾಂಕ್ ಖರ್ಗೆಯವರು, ಬಿಜೆಪಿಗರೇ, ನಿರ್ಲಜ್ಜತನವನ್ನು ಬಿಡದಿದ್ದರೆ ಹೋರಾಟಗಾರರು ನಿಮ್ಮ ಮನೆಯಲ್ಲೇ ಹುಟ್ಟಿಕೊಳ್ಳುತ್ತಾರೆ. ಬಿಜೆಪಿ ನಾಯಕರ ಮನೆಯ ಮಕ್ಕಳು ಬಿಜೆಪಿಯ ಅನೈತಿಕತೆಯನ್ನು ಪ್ರಶ್ನಿಸತೊಡಗಿದ್ದಾರೆ. ಅಮಾನವೀಯ, ಅನಾಗರಿಕ ಮತ್ತು ಅನೈತಿಕ ಧೋರಣೆಯ ಕೇಂದ್ರ ಸರ್ಕಾರದಿಂದಾಗಿ ಬಿಜೆಪಿಯವರ ಮಕ್ಕಳು ಸಮಾಜಕ್ಕೆ ಮುಖ ತೋರಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಟೀಕಿಸಿದರು.

ಕರ್ನಾಟಕ ಬಿಜೆಪಿ ನಾಯಕರೇ, ನಿಮ್ಮ ಮಕ್ಕಳನ್ನು ಮಾತಾಡಿಸಿ ನೋಡಿ, ಅವರೂ ನಿಮ್ಮ ಪಕ್ಷದ ಹೆಸರು ಹೇಳಿದರೆ ಅಸಯ್ಯಪಡುತ್ತಾರೆ!. ಈ ಹೆಣ್ಣುಮಗಳು ಯುವಜನರ ನೈತಿಕ ಪ್ರಜ್ಞೆಯ ಪ್ರತಿನಿಧಿಯಾಗಿ ಮಾತನಾಡಿದ್ದಾಳೆ, ಯುವಜನರು ಭವಿಷ್ಯದ ಹಿತದ ಬಗ್ಗೆ ಮಾತ್ರ ಮುನ್ನೋಟ ಹೊಂದಿದ್ದಾರೆಯೇ ಹೊರತು ನಿಮ್ಮ ಕಲುಷಿತ ಸಿದ್ದಾಂತ, ನಿಮ್ಮ ಕೊಳಕು ರಾಜಕೀಯ, ನಿಮ್ಮ ಧರ್ಮಾಂಧತೆ, ನಿಮ್ಮ ಪ್ರೊಪೆಗಂಡಾ, ನಿಮ್ಮ ಸುಳ್ಳುಗಳ ಭರವಸೆ, ನಿಮ್ಮ ನಕಲಿ ಇಮೇಜ್, ಇದ್ಯಾವುದೂ ಯುವಜನರಿಗೆ ಬೇಕಿಲ್ಲ.

ಭಾರತದ ಯುವ ಶಕ್ತಿ ಇಂದು ಬೀದಿಯಲ್ಲಿದ್ದಾರೆ, ತಮ್ಮ ಭವಿಷ್ಯಕ್ಕಾಗಿ, ಭಾರತದ ಹಿತಕ್ಕಾಗಿ, ಅವರನ್ನು ಲಾಠಿಗಳಿಂದ ಹತ್ತಿಕ್ಕುತ್ತೇವೆ ಎಂಬ ಭ್ರಮೆಯಲ್ಲಿರುವ 56 ಇಂಚು ಎದೆಯ ನಕಲಿ ವಿಶ್ವಗುರುವಿನ ಭ್ರಮೆ ಕಳಚುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.

ಗಮನ ಸೆಳೆದ ರಾಷ್ಟ್ರ ದೆಹಲಿ ಪ್ರತಿಭಟನೆ

ಕಾಕ್ರೋಚ್ ಜನತಾ ಪಾರ್ಟಿ ಸಾಮಾಜಿಕ ಜಾಲತಾಣ ಮೂಲಕ ಅಸ್ತಿತ್ವಕ್ಕೆ ಬಂದಾಗಲೂ ಸಾಕಷ್ಟು ಹವಾ ಎಬ್ಬಿಸಿತ್ತು. ನೀಟ್ ಅನ್ಯಾಯ ಕುರಿತು ಕೇಂದ್ರವನ್ನು ಪ್ರಶ್ನಿಸುತ್ತಲೇ ಬಂದಿತ್ತು. ಇಂದು ವಿದ್ಯಾರ್ಥಿಗಳು ಸೇರಿದಂತೆ ಪಕ್ಷದ ಸದಸ್ಯರು ಸೇರಿದಂತೆ ಸಾವಿರಾರು ಪ್ರತಿಭಟನಾಕಾರರು ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಸಂಸತ್ ಅಧಿವೇಶನ ಆರಂಭವಾದ ಮೊದಲ ದಿನವೇ ನೀಟ್ ಅಕ್ರಮ ವಿರುದ್ಧ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದರು.

ನೋಡ ನೋಡುತ್ತಿದ್ದಂತೆ ಜಂತರ್ ಮಂತರ್, ಸಂಸತ್ ಭವನ ವ್ಯಾಪ್ತಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಿಂಸಾತ್ಮಕ ಸ್ವರೂಪ ಪಡೆದುಕೊಂಡಿತು. ಭದ್ರತಾ ಪಡೆ ಅಶ್ರುವಾಯು ಸಿಡಿಸಿದರು. ನೆರೆದಿದ್ದ ಸುಮಾರು 10 ಸಾವಿರಕ್ಕೂ ಅಧಿಕ ಪ್ರತಿಭಟನಾಕಾರರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ದೆಹಲಿ ಇಂದು ಅಕ್ಷರಶಃ ರಣಾಂಗಣವಾದಂತಿತ್ತು. ಪ್ರತಿಭಟನಾಕಾರನ್ನು ಬಂಧಿಸಲಾಯಿತು. ಈ ಗಲಾಟೆಯಲ್ಲಿ ಸುಮಾರು 20ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಈ ವೇಳೆ ಇಂಟರ್‌ನೆಟ್ ಬಂದ್ ಮಾಡಲಾಯಿತು. ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಯಿತು. ಈ ಪ್ರತಿಭಟನೆಯನ್ನು ಕಾಂಗ್ರೆಸ್ ಸೇರಿದಂತೆ ಕೆಲವು ಪಕ್ಷದ ನಾಯಕರು ಬೆಂಬಲಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+