TTD: ತಿರುಪತಿಯಲ್ಲಿ ಮೈಸೂರು ರಾಜಮನೆತನದ ವೈಭವ! ಜುಲೈ 22ರಂದು ತಿರುಮಲದಲ್ಲಿ ಅಪರೂಪದ "ಪಲ್ಲವೋತ್ಸವ'

ತಿರುಮಲ: ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಶ್ರೀ ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಇದೇ ಜುಲೈ 22ರಂದು ಕರ್ನಾಟಕದ ಪ್ರಸಿದ್ಧ ಮೈಸೂರು ರಾಜಮನೆತನದ ಸ್ಮರಾಣರ್ಥ ಅದ್ಧೂರಿ 'ಪಲ್ಲವೋತ್ಸವ' ಕಾರ್ಯಕ್ರಮವು ಜರುಗಲಿದೆ. ಅಂದು 'ತಿರುಮಲ ತಿರುಪತಿ ದೇವಸ್ಥಾನಂ' (TTD) ವತಿಯಿಂದ ವಿವಿಧ ಧಾರ್ಮಿಕ ಕೈಂಕರ್ಯಗಳು, ಪೂಜೆ, ಆರತಿಗಳು ಜರುಗಲಿವೆ ಎಂದು ಟಿಟಿಡಿ ತಿಳಿಸಿದೆ.

ಕರ್ನಾಟಕದ ಮೈಸೂರು ಮಹಾರಾಜರು, ಮುಖ್ಯಮಂತ್ರಿಗಳಿಗೆ ಇದ್ದ ತಿರುಪತಿ ವೆಂಕಟೇಶ್ವರನ ನಿತ್ಯದ ಮೊದಲ ಆರತಿ ಸ್ವೀಕರಿಸುತ್ತಾರೆ. ಅದನ್ನು ಇತರ ಶಾಸಕರು, ಸಂಸದರು ಸೇರಿದಂತೆ ಜನಪ್ರತಿನಿಧಿಗಳಿಗೆ ಲಭಿಸುವಂತೆ ಮಾಡಲು ಅದೇಶಿಸುವುದಾಗಿ ಸಿಎಂ ಡಿಕೆ ಶಿವಕುಮಾರ್ ಹೇಳುತ್ತಿದ್ದಂತೆ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು.

Tirumala Tirupati

ಇದರ ಬೆನ್ನಲ್ಲೇ ಮೈಸೂರು ಮಹಾರಾಜರ ಜನ್ಮ ನಕ್ಷತ್ರವಾದ ಉತ್ತರಾಭಾದ್ರ ನಕ್ಷತ್ರದ ಸ್ಮರಣಾರ್ಥ ಅಪರೂಪದ ಉತ್ಸವವು ನಡೆಯಲಿದೆ. ಅಂದು ಮಲಯಪ್ಪ ಸ್ವಾಮಿಯು ತಿರುಮಲದ ಕರ್ನಾಟಕ ಛತ್ರಕ್ಕೆ ಹೋಗಲಿದೆ. ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ. ಸಹಸ್ರ ದೀಪಾಲಂಕಾರ ಸೇವೆಯ ಬಳಿಕ ಶ್ರೀದೇವಿ, ಭೂದೇವಿ ಸಮೇತ ಮಲಯಪ್ಪ ಸ್ವಾಮಿಯು ತಿರುಮಲದಲ್ಲಿರುವ ಕರ್ನಾಟಕದ ಚೌಲ್ಟ್ರಿಗೆ (ಛತ್ರ) ಮೆರವಣಿಗೆ ಮೂಲಕ ಸಾಗಲಿದೆ. ಇದು ಅತ್ಯಂತ ಪ್ರಮುಖ ಆಕರ್ಷಣೀಯ ಆಚರಣೆಗಳಲ್ಲಿ ಒಂದಾಗಿದೆ.

ಟಿಟಿಡಿಯಲ್ಲಿ 3 ಶತಮಾನಗಳಿಂದ ಪಲ್ಲವೋತ್ಸವ

ಮೈಸೂರು ಮಹಾರಾಜರ ಸ್ಮರಣಾರ್ಥ ಕಳೆದ 300 ವರ್ಷಗಳಿಂದ ಈ ಪಲ್ಲವೋತ್ಸವವನ್ನು ತಿರುಮಲದಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಹಿಂದೆ ಇದನ್ನು 'ತೋಟೋತ್ಸವ' ಅಂತಲೂ ಕರೆಯಲಾಗುತ್ತಿತ್ತು. ಕರ್ನಾಟಕದ ಪ್ರತಿನಿಧಿಗಳು ಹಾಗೂ ಮೈಸೂರು ಸಂಸ್ಥಾನದ ಪ್ರಮುಖರು ಶ್ರೀಕೃಷ್ಣ ಹಾಗೂ ದೇವಿಗೆ ವಿಶೇಷ ಆರತಿ ಬೆಳಗಿ ಭಕ್ತಿಪೂರ್ವಕವಾಗಿ ಸ್ವಾಗತಿಸುವುದು ವಾಡಿಕೆ, ಅದು ಈ ವರ್ಷವು ನಡೆಯುತ್ತದೆ.

ಬಾಲಾಜಿಯ ಪರಮ ಭಕ್ತರಾಗಿದ್ದ ಮೈಸೂರು ಮಹಾರಾಜರು ತಿರುಪತಿ ದೇಗುಲಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಬ್ರಹ್ಮೋತ್ಸವ ಸೇವೆಗಳಲ್ಲಿ ಬಳಸುವ ಗರುಡ, ಸರ್ವಭೂಪಾಲ, ಗಜ, ಅಶ್ವ ವಾಹನಗಳು ಸೇರಿದಂತೆ ಅಮೂಲ್ಯವಾದ ಆನೆ ದಂತದ ಪಲ್ಲಕ್ಕಿಯನ್ನು ಅವರು ಸಮರ್ಪಿಸಿದ್ದಾರೆ. ದೈನಂದಿನ ಸುಪ್ರಭಾತ ಸೇವೆಗೆ ಮೊದಲು ಮೈಸೂರು ಸಂಸ್ಥಾನದ ಹೆಸರಿನಲ್ಲಿ 'ವಿಶೇಷ ಆರತಿ' ಬೆಳಗಲಾಗುತ್ತದೆ. ಉರಿಯುವ ಪ್ರಕಾಶಮಾನ ದೀಪಗಳಿಗೆ 5 ಕೆಜಿ ತುಪ್ಪ ನೀಡುವ ಆಚರಣೆ ಇಂದಿಗೂ ಮುಂದುವರಿದಿದೆ ಎಂದು ಟಿಟಿಡಿ ತಿಳಿಸಿದೆ.

ಪ್ರತಿ ತಿಂಗಳಿಗೊಮ್ಮೆ ಮೈಸೂರು ಮಹಾರಾಜರ ಸ್ಮರಣಾರ್ಥ ಉತ್ತರಾಭಾದ್ರ ನಕ್ಷತ್ರದ ಸಮಯ ಸಂಜೆ 7.30ಕ್ಕೆ ವಿಶೇಷ ಪೂಜೆಗಳು ಜರುಗುತ್ತವೆ. ಅದೇ ರೀತಿ ಪ್ರಮುಖ ಹಬ್ಬಗಳಾದ ಉಗಾದಿ, ದೀಪಾವಳಿ ಸಂದರ್ಭದಲ್ಲಿ ಮಹಾರಾಜರ ಹೆಸರಿನಲ್ಲಿ ಪ್ರತ್ಯೇಕ ಆರತಿ ಬೆಳಗುವ ಸಾಂಪ್ರದಾಯವು ಇದೆ. ತಿರುಪತಿ ಮತ್ತು ಕನ್ನಡ ನಾಡಿನ ರಾಜಮನೆತನದ ನಡುವೆ, ಈ ಆರತಿ ಸಾಂಪ್ರದಾಯ, ಆಚರಣೆಗಳಿಗೆ ಶತಮಾನಗಳ ಇತಿಹಾಸ ಇದೆ.

ತಿರುಪತಿಯಲ್ಲಿ ಹೆಚ್ಚಿದ ಭಕ್ತರು, ಟೋಕನ್ ಇಲ್ಲದೇ ಪರದಾಟ

ಕೋಟಿ ದೇವತೆಗಳ ಆರಾಧ್ಯ ದೈವ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭಕ್ತರ ಸಾಗರವೇ ಹರಿದು ಬಂದಿದೆ. ಮೊನ್ನೆ ಶನಿವಾರ ತಿರುಮಲ ಬೆಟ್ಟವು ಭಕ್ತರಿಂದಲೇ ತುಂಬಿ ತುಳುಕುತ್ತಿತ್ತು. ಕ್ಯೂ ಕಾಂಪ್ಲೆಕ್ಸ್‌ಗಳಲ್ಲಿ ಜನರು ಗಂಟೆಗಟ್ಟಲೆ ಕಾದು ದೇವರ ದರ್ಶನ ಪಡೆದರು. ಒಂದೇ ದಿನದಲ್ಲಿ ಸುಮಾರು 74,096 ಭಕ್ತರು ಶ್ರೀವಾರಿ ದರ್ಶನ ಪಡೆದರು. ಟೋಕನ್ ಇಲ್ಲದ ದೇಗುಲಕ್ಕೆ ಬಂದ ಅಪಾರ ಭಕ್ತರು ಸುಮಾರು 26 ಗಂಟೆ ಕಾದು ತಿಮ್ಮಪ್ಪನನ್ನು ಕಂಡು ಪುನೀತರಾದರು. ದೇವಸ್ಥಾನದಿಂದಲೇ ಎಂದಿನಂತೆ ಅನ್ನಪ್ರಸಾದ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಒಂದೇ ದಿನ 4 ಲಕ್ಷಕ್ಕೂ ಅಧಿಕ ಲಾಡುಗಳು ಮಾರಾಟವಾಗಿದ್ದು, ಶ್ರೀವಾರಿ ಹುಂಡಿಗೆ ಅಂದಾಜು 3.66 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ಟಿಟಿಡಿ ಅಧಿಕೃತ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+