Kollegala Constituency: ಮತ್ತೆ ಗೆಲ್ತಾರಾ ಹಾಲಿ ಶಾಸಕ ಎನ್. ಮಹೇಶ್?
1956 ರವರೆಗೆ ಕೊಳ್ಳೇಗಾಲವು ಮದ್ರಾಸ್ ಪ್ರೆಸಿಡೆನ್ಸಿಯ ಕೊಯಮತ್ತೂರು ಜಿಲ್ಲೆಯ ಭಾಗವಾಗಿತ್ತು. 1956ರ ರಾಜ್ಯಗಳ ಮರುಸಂಘಟನೆ ಕಾಯಿದೆಯು ಕೊಳ್ಳೇಗಾಲವನ್ನು ಕರ್ನಾಟಕಕ್ಕೆ ಸೇರಿಸಿತು.
ಚಾಮರಾಜನಗರ, ಮಾರ್ಚ್ 15: ಚಾಮರಾಜನಗರ ಜಿಲ್ಲೆಯಲ್ಲಿ ಬಹು ಮಹತ್ವದ ಕ್ಷೇತ್ರವಾದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರವು ಹಲವು ರಾಜಕೀಯ ಬೆಳವಣಿಗೆಗೆಗಳಿಂದ ಪ್ರಮುಖ್ಯತೆಯಲ್ಲಿ ಪಡೆದಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಾಲಿ ಶಾಸಕರು ಮತ್ತೆ ಗೆಲ್ಲುತ್ತಾರಾ, ಅಲ್ಲದೆ ಜನರ ಚಿತ್ತ ಹೇಗಿದೆ ಎಂಬುದರ ಕುರಿತ ವಿಶ್ಲೇಷಣೆ ಇಲ್ಲಿದೆ.
1956 ರವರೆಗೆ ಕೊಳ್ಳೇಗಾಲವು ಮದ್ರಾಸ್ ಪ್ರೆಸಿಡೆನ್ಸಿಯ ಕೊಯಮತ್ತೂರು ಜಿಲ್ಲೆಯ ಭಾಗವಾಗಿತ್ತು. 1956ರ ರಾಜ್ಯಗಳ ಮರುಸಂಘಟನೆ ಕಾಯಿದೆಯು ಕೊಳ್ಳೇಗಾಲವನ್ನು ಕರ್ನಾಟಕಕ್ಕೆ ಸೇರಿಸಿತು. ಇದನ್ನು ಪ್ರಾಥಮಿಕವಾಗಿ ಭಾಷಾವಾರು ರೀತಿಯಲ್ಲಿ ಸಂಘಟಿಸಿತು. ಕೊಳ್ಳೇಗಾಲವು ಕೊಳ್ಳೇಗಾಲದ ಅಭಿವೃದ್ಧಿಗೆ ಸಹಕಾರಿ ಎಂದು ನಂಬಲಾದ 'ಕೌಹಲ' ಮತ್ತು 'ಗಾಲವ' ಎಂಬ ಇಬ್ಬರು ವಿರಕ್ತರ ಹೆಸರಿನಿಂದ ಬಂದ ಹೆಸರಾಗಿದೆ.
ರೇಷ್ಮೆ ನಗರ ಎಂದೂ ಕರೆಯಲ್ಪಡುವ ಕೊಳ್ಳೇಗಾಲವು ಕೈಮಗ್ಗದ ರೇಷ್ಮೆ ಸೀರೆ ಉದ್ಯಮಕ್ಕೆ ಹೆಸರುವಾಸಿಯಾಗಿದೆ. ಕೊಳ್ಳೇಗಾಲವು ಕರ್ನಾಟಕದ ದೊಡ್ಡ ತಾಲೂಕುಗಳಲ್ಲಿ ಒಂದಾಗಿದೆ. ಕೊಳ್ಳೇಗಾಲವು ಈ ಪ್ರದೇಶದಲ್ಲಿ ಪೂರ್ವ ಯೂನಿವರ್ಸಿಟಿ ಶಿಕ್ಷಣದ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. ಕೊಳ್ಳೇಗಾಲದ ಸಿಂಗಾನಾಲ್ಲೂರು ಕನ್ನಡದ ಖ್ಯಾತ ನಟ ಡಾ.ರಾಜ್‌ಕುಮಾರ್ ಅವರ ತವರೂರು. ಕೊಳ್ಳೇಗಾಲವು ಶ್ರೀಗಂಧದ ಮರವನ್ನು ಕಳ್ಳಸಾಗಣೆ ಮಾಡುವ ಮತ್ತು ದಂತಕ್ಕಾಗಿ ಆನೆಗಳನ್ನು ಬೇಟೆಯಾಡುವ ಕುಖ್ಯಾತ ಡಕಾಯಿತ ವೀರಪ್ಪನ್‌ನ ಚಟುವಟಿಕೆಗಳಿಗೆ ಆತಿಥ್ಯ ವಹಿಸಿದ ಪ್ರದೇಶಗಳಲ್ಲಿ ಒಂದಾಗಿದೆ.
ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್, ಬಿಎಸ್‌ಪಿ ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಪ್ರಚಾರ ಈಗ ಜೋರಾಗಿದೆ. ಕಳೆದ ಬಾರಿ ಬಿಎಸ್‌ಪಿಯಿಂದ ಗೆಲುವು ಸಾಧಿಸಿದ್ದ ಎನ್. ಮಹೇಶ್ ಅವರು ಬಿಎಸ್‌ಪಿಯಿಂದ ಉಚ್ಚಾಟನೆಗೊಂಡ ಬಳಿಕ ಬಿಎಸ್ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದರು. ಆದರೆ ಈಗ ಅಲ್ಲಿ ಮತ್ತೆ ಗೆಲ್ಲಲು ತಯಾರಿ ಮಾಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಈ ಬಾರಿ ನೇರ ಕಾದಾಟ ಇದೆ. ಆದರೆ ಇಲ್ಲಿ ಬಿಎಸ್‌ಪಿ ಹಾಗೂ ಜೆಡಿಎಸ್ ಪಡೆಯುವ ಮತಗಳ ಆಧಾರದ ಮೇಲೆ ಈ ಎರಡು ಪಕ್ಷಗಳ ಅಭ್ಯರ್ಥಿ ಗೆಲುವು ನಿರ್ಧಾರವಾಗಲಿದೆ.
ಬಿಎಸ್‌ಪಿಯಲ್ಲಿದ್ದು ಈಗ ಬಿಜೆಪಿ ಸೇರಿರುವ ಶಾಸಕ ಎನ್ ಮಹೇಶ್ ಅವರು ಈಗ ಆರ್‌ಎಸ್‌ಎಸ್ ಪ್ರೇರಿತ ಅಭ್ಯರ್ಥಿ ಆಗಿದ್ದಾರೆ. ಅವರು ಬಿಎಸ್‌ಪಿಯಲ್ಲಿದ್ದಾಗ ಹೇಗೆ ಆರ್‌ಎಸ್‌ಎಸ್, ಬಿಜೆಪಿ, ಸಂಘ ಪರಿವಾರದ ಮೇಲೆ ವಾಗ್ದಾಳಿ ನಡೆಸುತ್ತಿದ್ದರೋ ಹಾಗೆ ಬಿಜೆಪಿ ಸೇರಿದ ಮೇಲೆ ಈಗ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಬಿಜೆಪಿಗೆ ಬರುವ ಮುನ್ನವೇ ಅವರಿಗೆ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಪಕ್ಕ ಎನ್ನಲಾಗಿದ್ದು, ಸದ್ಯ ಈ ಚುನಾವಣೆಯಲ್ಲಿ ಅವರ ಹೊರತಾಗಿ ಬೇರೆ ಯಾರಿಗೂ ಟಿಕೆಟ್ ಸಿಗುವ ಸಾಧ್ಯತೆ ಇಲ್ಲ. ಅವರ ಬೆಂಬಲಿಗರು ಕ್ಷೇತ್ರದಲ್ಲಿ ಕೆಲವರು ಅವರ ಜೊತೆಗೆ ಇದ್ದರೆ ಮತ್ತೆ ಕೆಲವರು ಬಿಎಸ್‌ಪಿಯಲ್ಲೇ ಇದ್ದಾರೆ.

ನೀಲಿ ಧ್ವಜ ಬಿಟ್ಟು ಕೇಸರಿ ಧ್ವಜ
ಮಹೇಶ್ ಅಣ್ಣ ಎಂದೇ ಖ್ಯಾತರಾಗಿದ್ದ ಅವರು ನೀಲಿ ಧ್ವಜ ಬಿಟ್ಟು ಕೇಸರಿ ಧ್ವಜ ಹಿಡಿದಿರುವುದು ನಿಜಕ್ಕೂ ಅರಗಿಸಿಕೊಳ್ಳಲು ಸಿದ್ಧಾಂತವಾದಿಗಳಿಗೆ, ಅಂಬೇಡ್ಕರ್‌ವಾದಿಗಳಿಗೆ ನಿಜಕ್ಕೂ ನಂಬಲು ಆಗುತ್ತಿಲ್ಲ. ಇವರು ಮಹೇಶ್ ಅವರ ಗೆಲುವಿಗೆ ನೇರವಾಗಿ ಕಾರಣವಾಗಿದ್ದರು. ಈಗ ಮಹೇಶ್ ಬಿಜೆಪಿಯಲ್ಲಿರುವುದರಿಂದ ಅವರ ಬೆಂಬಲ ಸಿಗುವುದು ಬಹುತೇಕ ಇಲ್ಲ.

ಮಹೇಶ್ ಅವರಿಗೆ ಟಿಕೆಟ್ ಸಿಗುವುದು ಖಚಿತ
ಇದಲ್ಲದೆ ಬಿಜೆಪಿ ನಾಯಕ ದಂಡು ಚಾಮರಾನಗರದಲ್ಲಿ ನಡೆಸಿದ ವಿಜಯಸಂಕಲ್ಪ ಯಾತ್ರೆಯಲ್ಲಿ ಮಹೇಶ್ ಅವರಿಗೆ ಟಿಕೆಟ್ ಸಿಗುವುದು ಖಚಿತವಾಗುತ್ತಿದ್ದಂತೆ ಕೊಳ್ಳೇಗಾಲದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಜಿಎನ್ ನಂಜುಂಡಸ್ವಾಮಿ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ಮಾಜಿ ಶಾಸಕ ಎಆರ್ ಕೃಷ್ಣಮೂರ್ತಿ, ಎಸ್. ಜಯಣ್ಣ ಹಾಗೂ ಎಸ್ ಬಾಲರಾಜ್ ಅವರ ನಡುವೆ ಟಿಕೆಟ್‌ಗೆ ಪೈಪೋಟಿ ಇದೆ.

ಎಆರ್‌ಕೆ, ಬಾಲರಾಜ್ ನಡುವೆ ಟಿಕೆಟ್‌ಗೆ ಅರ್ಜಿ
ಇದರೊಂದಿಗೆ ಈಗ ಜಿಎನ್ ನಂಜುಂಡಸ್ವಾಮಿ ಸೇರಿಕೊಂಡಿದ್ದಾರೆ, ಆದರೆ ಜಿಎನ್ ನಂಜುಂಡಸ್ವಾಮಿ ಇಲ್ಲಿ ಟಿಕೆಟ್ ಕೇಳಿದಂತೆ ಇಲ್ಲ. ಇಲ್ಲಿ ಟಿಕೆಟ್ ಬೇಕೇ ಬೇಕು ಎಂದು ಎಆರ್ ಕೃಷ್ಣಮೂರ್ತಿ ಹಾಗೂ ಬಾಲರಾಜ್ ನಡುವೆ ತೀವ್ರ ಪೈಪೋಟಿ ಇದೆ. ಕೊಳ್ಳೇಗಾಲದಲ್ಲಿ ಕೇವಲ 1 ಓಟಿನಿಂದ ಹಿಂದೆ ಧ್ರುವನಾರಾಯಣ ಅವರು ಗೆಲುವು ಸಾಧಿಸಿದ್ದರು, ಅವರ ಬಳಿಕ ಅಂತಹ ಪ್ರಹಸನಗಳು ಇಲ್ಲಿ ನಡೆದಿಲ್ಲ, ಇಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ತಮಗೆ ಒಂದು ಅವಕಾಶ ನೀಡಿ ಎಂದು ಎಆರ್ ಕೃಷ್ಣಮೂರ್ತಿ ಕೇಳಿಕೊಂಡಿದ್ದಾರೆ. ಅದರಂತೆ ಬಾಲರಾಜ್ ಮತ್ತು ಜಯಣ್ಣ ಕೂಡ ತಮಗೆ ಟಿಕೆಟ್ ನೀಡಬೇಕು ಎಂದು ಕೇಳಿದ್ದಾರೆ.

ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಗಳಿಂದ ಪೈಪೋಟಿ
ಕೊಳ್ಳೇಗಾಲದಲ್ಲಿ ಜೆಡಿಎಸ್‌ನಿಂದ ಟಿಕೆಟ್ ಆಕಾಂಕ್ಷಿಗಳಿಂದ ಪೈಪೋಟಿ ಇದೆ. ಕ್ಷೇತ್ರದಲ್ಲಿ ಪಕ್ಷಕ್ಕೆ ಆಪಾರ ಜನ ಬೆಂಬಲ ಇಲ್ಲದಿದ್ದರೂ ಒಂದಷ್ಟು ಮತಗಳನ್ನು ಪಡೆಯುವ ಉಮೇದಿನಲ್ಲಿ ಪಕ್ಷ ಇದೆ. ಇಲ್ಲಿ ಟಿಕೆಟ್ ಆಕಾಂಕ್ಷಿಯಾಗಿ ಓಲೆ ಮಹದೇವ ಅವರು ಇದ್ದರೆ ಮತ್ತೋರ್ವ ಟಿಕೆಟ್ ಆಕಾಂಕ್ಷಿಯಾಗಿ ಇನ್‌ಸ್ಪೆಕ್ಷರ್ ಹುದ್ದೆಗೆ ರಾಜೀನಾಮೆ ನೀಡಿ ಪುಟ್ಟಸ್ವಾಮಿ ಕಣಕ್ಕೆ ಇಳಿದಿದ್ದಾರೆ. ಇವರ ಬಿಜೆಪಿಯಿಂದ ಟಿಕೆಟ್ ಬಯಸಿ ಬಂದಿದ್ದರು, ಆದರೆ ಎನ್ ಮಹೇಶ್‌ಗೆ ಟಿಕೆಟ್ ಪಕ್ಕ ಆದ್ದರಿಂದ ಅವರು ಜೆಡಿಎಸ್‌ಗೆ ಬಂದರು. ಮೊದಲಿನಿಂದಲೂ ಬಿಎಸ್‌ಗೆ ಭದ್ರನೆಲೆ ಒದಗಿದ್ದ ಕೊಳ್ಳೇಗಾಲ ಕ್ಷೇತ್ರದಲ್ಲಿ ಈ ಬಾರಿ ಕಮಲ್‌ನಾಗರಾಜು ಒಬ್ಬರೇ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.












Click it and Unblock the Notifications