Namma Metro ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ: 1,274 ಕೋಟಿ ರೂ. ವೆಚ್ಚದಲ್ಲಿ ಬರಲಿದೆ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್

ಬೆಂಗಳೂರು: ನಗರದ ಪ್ರಮುಖ ಸಾರ್ವಜನಿಕ ಸಾರಿಗೆಯಲ್ಲಿ ಒಂದಾಗಿರುವ ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಮಹತ್ವದ ಹೆಜ್ಜೆಯಿಟ್ಟಿದೆ. ಮೆಟ್ರೋ ನಿಲ್ದಾಣಗಳಲ್ಲಿ ನಡೆಯುತ್ತಿರುವ ಹಳಿ ದುರಂತ ಹಾಗೂ ಆತ್ಮಹತ್ಯೆ ಪ್ರಕರಣಗಳಿಗೆ ಬ್ರೇಕ್ ಹಾಕಲು, ಇಗಾಗಲೇ ಇರುವ ಮತ್ತು ಮುಂದಾಗವ ಒಟ್ಟು 177 ಮೆಟ್ರೋ ನಿಲ್ದಾಣಗಳಲ್ಲಿ ಬರೋಬ್ಬರಿ 1,274 ಕೋಟಿ ರೂ. ವೆಚ್ಚದಲ್ಲಿ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್ ಅಳವಡಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಹೊಸದಾಗಿ ಸಿದ್ಧಪಡಿಸಿರುವ ಹೆಬ್ಬಾಳ-ಸರ್ಜಾಪುರ ಮಾರ್ಗದ 3ನೇ ಹಂತದ 'ಎ' ವಿಸ್ತೃತ ಯೋಜನಾ ವರದಿಯ ಭಾಗವಾಗಿ ಈ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಪ್ರಸ್ತುತ ಪಿಂಕ್ ಲೈನ್‌ನಲ್ಲಿರುವ 12 ಸುರಂಗ ನಿಲ್ದಾಣಗಳು ಮತ್ತು 2 ವಿಮಾನ ನಿಲ್ದಾಣ ಮಾರ್ಗದ (ಬ್ಲೂ ಲೈನ್) ನಿಲ್ದಾಣಗಳು ಸೇರಿದಂತೆ ಒಟ್ಟು 14 ನಿಲ್ದಾಣಗಳಲ್ಲಿ ಈಗಾಗಲೇ ಈ ಗೇಟ್‌ಗಳ ಅಳವಡಿಸಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ.

Bengaluru

ಹೆಚ್ಚುತ್ತಿರುವ ಮೆಟ್ರೋ ಹಳಿ ದುರಂತ ತಡೆಗೆ ಕ್ರಮ

ಪ್ರತಿದಿನ ನಮ್ಮ ಮೆಟ್ರೋದಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸುಮ್ಮನೆ ಮೆಟ್ರೋ ಹಳಿ ಪ್ರವೇಶಿಸುವುದು, ಆಕಸ್ಮಿಕವಾಗಿ ಹಳಿಗೆ ಬೀಳುವುದು ಮತ್ತು ಹಳಿಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ.

ಡಿಪಿಆರ್ ವರದಿಯ ಅಂಕಿ-ಅಂಶಗಳ ಪ್ರಕಾರ, 2024ರಲ್ಲಿ 8 ಅನಧಿಕೃತ ಹಳಿ ಪ್ರವೇಶ, 7 ಆತ್ಮಹತ್ಯೆ ಸಾವು, 2 ಆತ್ಮಹತ್ಯೆ ಯತ್ನ ಹಾಗೂ 2 ಆಕಸ್ಮಿಕವಾಗಿ ಹಳಿಗೆ ಬಿದ್ದ ಪ್ರಕರಣಗಳು ದಾಖಲಾಗಿವೆ. ಇನ್ನೂ
2025ರಲ್ಲಿ ಈ ಡಿಪಿಆರ್ ತಯಾರಿಸುವ ವೇಳೆಗೆ 5 ಅನಧಿಕೃತ ಪ್ರವೇಶ, 5 ಆತ್ಮಹತ್ಯೆ, 2 ಆತ್ಮಹತ್ಯೆ ಯತ್ನ ಮತ್ತು ಒಂದು ವಿದ್ಯುತ್ ಸ್ಪರ್ಶದ ಪ್ರಕರಣ ವರದಿಯಾಗಿತ್ತು. ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್ಸ್ ಅಳವಡಿಸಿದರೆ ಇಂತಹ ಘಟನೆಗಳನ್ನ ತಡೆಯಬಹುದು.

ಚಾಲಕ ರಹಿತ ಮೆಟ್ರೋಗೆ ಇದು ಕಡ್ಡಾಯ

ಈ ಸ್ವಯಂಚಾಲಿತ ಗಾಜಿನ ಬಾಗಿಲುಗಳು ಕೇವಲ ಪ್ರಯಾಣಿಕರ ಸುರಕ್ಷತೆಗಷ್ಟೇ ಅಲ್ಲ, ಭವಿಷ್ಯದಲ್ಲಿ ಬರಲಿರುವ 'GoA4' ಅಂದರೆ ಚಾಲಕ ರಹಿತ ರೈಲು ಸಂಚಾರಕ್ಕೂ ಕಡ್ಡಾಯವಾಗಿದೆ. ಇದು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತವೆ. ರೈಲು ಬಂದು ನಿಂತಾಗ ಮಾತ್ರ ಈ ಬಾಗಿಲುಗಳು ತೆರೆಯುತ್ತದೆ. ಇದರಿಂದ ರೈಲು ಬರುವಾಗ ಉಂಟಾಗುವ ಅತಿಯಾದ ಗಾಳಿ ಮತ್ತು ಶಬ್ದದ ಪ್ರಮಾಣವೂ ಕಡಿಮೆಯಾಗಿ ಪ್ರಯಾಣಿಕರಿಗೆ ಆರಾಮದಾಯಕ ಅನುಭವ ಸಿಗಲಿದೆ. ಅಲ್ಲದೆ, ಈ ಡೋರ್‌ಗಳ ಮೇಲೆ ಡಿಜಿಟಲ್ ಜಾಹೀರಾತುಗಳನ್ನು ಪ್ರದರ್ಶಿಸುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಗುರಿಯನ್ನೂ ಮೆಟ್ರೋ ನಿಗಮ ಹೊಂದಿದೆ.

1,274 ಕೋಟಿ ರೂ. ಬೃಹತ್ ಯೋಜನೆ

ಈ ಪ್ರಸ್ತಾವನೆಯು ನಮ್ಮ ಮೆಟ್ರೋದ 1ನೇ ಹಂತ, 2ನೇ ಹಂತ, ಹಂತ-2ಎ, 2ಬಿ, 3 ಮತ್ತು 3ಎ ಮಾರ್ಗಗಳನ್ನು ಒಳಗೊಂಡಿದೆ. ಡಿಪಿಆರ್ ಪ್ರಕಾರ, ಎಲೇವೆಟೆಡ್‌ ನಿಲ್ದಾಣಗಳಲ್ಲಿ ಅರ್ಧ ಎತ್ತರ ಮತ್ತು ಸುರಂಗ ನಿಲ್ದಾಣಗಳಲ್ಲಿ ಪೂರ್ಣ ಎತ್ತರದ ಗೇಟ್‌ಗಳನ್ನು ಅಳವಡಿಸಲಾಗುತ್ತದೆ. ಒಟ್ಟು 1,274 ಕೋಟಿ ರೂ. ಅಂದಾಜು ವೆಚ್ಚದಲ್ಲಿ, 747 ಕೋಟಿ ರೂ. ಉಪಕರಣಗಳ ಖರೀದಿಗೆ, 317 ಕೋಟಿ ರೂ. ಸಿವಿಲ್ ಕಾಮಗಾರಿಗೆ ಹಾಗೂ 210 ಕೋಟಿ ರೂ. ಸಿಗ್ನಲಿಂಗ್ ಮತ್ತು ಟೆಲಿಕಾಂಗಳಿಗೆ ಇಡಲಾಗಿದೆ.

ಹೊಸದಾಗಿ ನಿರ್ಮಾಣವಾಗುತ್ತಿರುವ ನಿಲ್ದಾಣಗಳಿಗಿಂತ, ಈಗಾಗಲೇ ಕಾರ್ಯಾಚರಣೆಯಲ್ಲಿರುವ ಹಳೆಯ ನಿಲ್ದಾಣಗಳಲ್ಲಿ ಇದನ್ನು ಅಳವಡಿಸುವುದು ದೊಡ್ಡ ಸವಾಲಾಗಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ. ಏಕೆಂದರೆ, ಮೆಟ್ರೋ ಸಂಚಾರ ಮುಗಿದ ಬಳಿಕ ರಾತ್ರಿ ವೇಳೆ ಕಾಮಗಾರಿಗೆ ಕೇವಲ ಕೆಲವೇ ಗಂಟೆಗಳ ಕಾಲಾವಕಾಶ ಸಿಗುತ್ತದೆ. ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಸ್ವದೇಶಿ ಖರೀದಿ ಮಾರ್ಗಸೂಚಿಗಳ ಅನ್ವಯ ಈ ಯೋಜನೆ ರೂಪುಗೊಂಡಿದ್ದು, 'ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್' ಜೊತೆ ಬಿಎಂಆರ್‌ಸಿಎಲ್ ಈಗಾಗಲೇ ಪ್ರಾಥಮಿಕ ಹಂತದ ಮಾತುಕತೆ ನಡೆಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+