EPFO ಹೊಸ ನಿಯಮ: ಇನ್ಮುಂದೆ 90% ಹಣ ವಿತ್‌ಡ್ರಾಗೆ ಅವಕಾಶ, ಖಾತೆದಾರರು ಮೃತಪಟ್ಟರೇ?

ನವದೆಹಲಿ: ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಹಾಗೂ ನಿವೃತ್ತರಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭರ್ಜರಿ ಸಿಹಿಸುದ್ದಿ ನೀಡಿದೆ. ಪಿಎಫ್ ಹಣವನ್ನ ಅಗತ್ಯವಿದ್ದಾಗ ಸುಲಭವಾಗಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಹಲವು ಮಹತ್ವದ ಸುಧಾರಣೆಗಳಿಗೆ ಇಪಿಎಫ್‌ಒ ಸಂಸ್ಥೆ ಗುರುವಾರ ಅಧಿಕೃತ ಅನುಮೋದನೆ ನೀಡಿದೆ.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರ ಅಧ್ಯಕ್ಷತೆಯಲ್ಲಿ ನಡೆದ ಇಪಿಎಫ್‌ಒ ಕೇಂದ್ರೀಯ ಟ್ರಸ್ಟಿಗಳ ಮಂಡಳಿಯ 240ನೇ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರಗಳನ್ನ ಕೈಗೊಳ್ಳಲಾಗಿದೆ. ಈ ಇಪಿಎಫ್‌ಒ ಹೊಸ ನಿಯಮಗಳ ಅಡಿಯಲ್ಲಿ ಪಿಎಫ್ ಹಣ ಹಿಂಪಡೆಯುವ ಮಿತಿಯನ್ನ ಹೆಚ್ಚಿಸಲಾಗಿದ್ದು, ನಿವೃತ್ತ ಉದ್ಯೋಗಿಗಳಿಗೆ ನಿಯಮಿತ ಆದಾಯ ತರುವ ಹೊಸ ಯೋಜನೆಗೂ ಹಸಿರು ನಿಶಾನೆ ತೋರಲಾಗಿದೆ.

EPFO New Rules 90 PF Withdrawal Allowed SWP Scheme Introduced For Retired Employees

90% ಪಿಎಫ್ ಹಣ ಹಿಂಪಡೆಯುವಿಕೆಗೆ ಅವಕಾಶ

ಇಪಿಎಫ್‌ಒ ಸದಸ್ಯರು ತಮ್ಮ ತುರ್ತು ಆರ್ಥಿಕ ಅಗತ್ಯಗಳಿಗಾಗಿ ಪಿಎಫ್ ಖಾತೆಯಿಂದ ಹಣ ತೆಗೆಯುವ ಪ್ರಕ್ರಿಯೆಯನ್ನ ಈಗ ಮತ್ತಷ್ಟು ಸರಳಗೊಳಿಸಲಾಗಿದೆ. ಈ ಹಿಂದೆ 55 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸದಸ್ಯರು ತಮ್ಮ ಪಿಎಫ್ ಬ್ಯಾಲೆನ್ಸ್‌ನಲ್ಲಿ ಗರಿಷ್ಠ ಶೇ. 75ರಷ್ಟು ಹಣವನ್ನ ಮಾತ್ರ ಭಾಗಶಃವಾಗಿ ಹಿಂಪಡೆಯಲು ಅವಕಾಶವಿತ್ತು.

ಆದರೆ ಹೊಸ ಸುಧಾರಣೆಯ ಪ್ರಕಾರ, ಈ ಮಿತಿಯನ್ನ ಶೇ. 90ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ಉದ್ಯೋಗಿಗಳು ತಮ್ಮ ಖಾತೆಯಲ್ಲಿ ಕಡ್ಡಾಯವಾಗಿ ಉಳಿಸಿಕೊಳ್ಳಬೇಕಿದ್ದ ಕನಿಷ್ಠ ಶುಲ್ಕ ಮಿತಿಯನ್ನ ಶೇ. 25ರಿಂದ ಶೇ. 10ಕ್ಕೆ ಇಳಿಸಲಾಗಿದೆ.

ಇದರೊಂದಿಗೆ, ಪಿಎಫ್ ಖಾತೆಯ ಫೈನಲ್‌ ಕ್ಲೈಮ್‌ ಸ್ಟೇಟ್‌ಮೆಂಟ್‌ನಲ್ಲಿ ಈ ಮೊದಲು ಇದ್ದ 12 ತಿಂಗಳ ಕಾಯುವ ಅವಧಿಯನ್ನ ಕೇವಲ ಎರಡು ತಿಂಗಳಿಗೆ ಕಡಿತಗೊಳಿಸಿರುವುದು ಪಿಎಫ್ ಹಣ ಹಿಂಪಡೆಯುವಿಕೆಯನ್ನ ಅತ್ಯಂತ ಸುಲಭವಾಗಿಸಿದೆ.

EPFO: ಇನ್ಮುಂದೆ ಪಿಎಫ್ ಹಣ ಪಡೆಯುವುದು ಇನ್ನೂ ಸುಲಭ, ಇಲ್ಲಿದೆ ಬಿಗ್ ಅಪ್‌ಡೇಟ್
EPFO: ಇನ್ಮುಂದೆ ಪಿಎಫ್ ಹಣ ಪಡೆಯುವುದು ಇನ್ನೂ ಸುಲಭ, ಇಲ್ಲಿದೆ ಬಿಗ್ ಅಪ್‌ಡೇಟ್

ನಿವೃತ್ತ ಉದ್ಯೋಗಿಗಳಿಗೆ ವರದಾನವಾಗಲಿದೆ ಎಸ್‌ಡಬ್ಲ್ಯೂಪಿ ಯೋಜನೆ

ನಿವೃತ್ತಿಯ ನಂತರದ ಆರ್ಥಿಕ ಭದ್ರತೆಯನ್ನ ಬಲಪಡಿಸುವ ನಿಟ್ಟಿನಲ್ಲಿ ಇಪಿಎಫ್‌ಒ ವ್ಯವಸ್ಥಿತ ಹಿಂಪಡೆಯುವಿಕೆ ಯೋಜನೆಯನ್ನ (SWP - Systematic Withdrawal Plan) ಪ್ರಸ್ತಾಪಿಸಿದೆ. ಈ ಎಸ್‌ಡಬ್ಲ್ಯೂಪಿ ಯೋಜನೆಯಡಿ, ನಿವೃತ್ತಿ ಹೊಂದುವ ಉದ್ಯೋಗಿಗಳು ತಮ್ಮ ಸೇವಾವಧಿಯಲ್ಲಿ ಸಂಗ್ರಹವಾದ ಸಂಪೂರ್ಣ ಪಿಎಫ್ ಮೊತ್ತವನ್ನ ಒಂದೇ ಬಾರಿಗೆ ತೆಗೆದುಕೊಳ್ಳುವ ಬದಲು, ಮಾಸಿಕ, ತ್ರೈಮಾಸಿಕ ಅಥವಾ ಅರ್ಧವಾರ್ಷಿಕ ಕಂತುಗಳ ರೂಪದಲ್ಲಿ ಹಂತಹಂತವಾಗಿ ಹಿಂಪಡೆಯಬಹುದು.

ಇದರ ಲಾಭವೆಂದರೆ, ಖಾತೆಯಲ್ಲಿ ಉಳಿಯುವ ಬ್ಯಾಲೆನ್ಸ್ ಹಣಕ್ಕೆ ಪ್ರಚಲಿತ ಇಪಿಎಫ್ ಬಡ್ಡಿದರದಂತೆ ಬಡ್ಡಿ ಜಮೆಯಾಗುತ್ತಲೇ ಇರುತ್ತದೆ. ಸಂಪೂರ್ಣವಾಗಿ ಐಚ್ಛಿಕವಾಗಿರುವ ಈ ಸೌಲಭ್ಯವು ಪಿಂಚಣಿಯ ಜೊತೆಗೆ ಹೆಚ್ಚುವರಿ ನಿಯಮಿತ ಆದಾಯವನ್ನ ಒದಗಿಸಲಿದೆ.

ಆರಂಭಿಕ ಹಂತದಲ್ಲಿ 5 ಲಕ್ಷ ರೂ.ಗಿಂತ ಹೆಚ್ಚಿನ ಪಿಎಫ್ ಮೊತ್ತ ಹೊಂದಿರುವ 55 ವರ್ಷ ಮೇಲ್ಪಟ್ಟ ಸುಮಾರು 6.32 ಲಕ್ಷ ಸದಸ್ಯರಿಗೆ ಇದರಿಂದ ನೇರ ಲಾಭವಾಗಲಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

ಒಂದು ವೇಳೆ ಹಣ ಹಿಂಪಡೆಯುವ ಅವಧಿಯಲ್ಲಿ ಸದಸ್ಯರು ಮೃತಪಟ್ಟರೆ, ಅವರ ನಾಮಿನಿಗಳು ಅಥವಾ ಅವಲಂಬಿತರು ಅದೇ ನಿಯಮದಡಿ ಉಳಿದ ಮೊತ್ತದಿಂದ ನಿಯಮಿತವಾಗಿ ಹಣ ಪಡೆಯುವುದನ್ನ ಮುಂದುವರಿಸಬಹುದಾಗಿದೆ.

ಗಿಗ್ ಕಾರ್ಮಿಕರು ಮತ್ತು ಸ್ವಯಂ ಪ್ರೇರಿತ ಹೂಡಿಕೆಗೆ ಹೊಸ ದಾರಿ

ಸಭೆಯಲ್ಲಿ ಕೇವಲ ಸಂಘಟಿತ ವಲಯದ ಉದ್ಯೋಗಿಗಳಷ್ಟೇ ಅಲ್ಲದೆ, ಅಸಂಘಟಿತ ಹಾಗೂ ಗಿಗ್ ಕಾರ್ಮಿಕರು ಕೂಡ ಭವಿಷ್ಯ ನಿಧಿಯ ವ್ಯಾಪ್ತಿಗೆ ಬರುವಂತೆ ಮಹತ್ವದ ಚರ್ಚೆ ನಡೆಸಲಾಗಿದೆ. ಉದ್ಯೋಗದಾತರ ವೇತನ ವ್ಯವಸ್ಥೆಯನ್ನ ಅವಲಂಬಿಸದೆ, ಸದಸ್ಯರು ಡಿಜಿಟಲ್ ಮಾಧ್ಯಮಗಳ ಮೂಲಕ ನೇರವಾಗಿ ತಮ್ಮ ಪಿಎಫ್ ಖಾತೆಗೆ ಸ್ವಯಂ ಪ್ರೇರಿತವಾಗಿ ಹಣ ಜಮೆ ಮಾಡಲು ಅವಕಾಶ ನೀಡುವ ಕುರಿತು ಇಪಿಎಫ್‌ಒ ಪರಿಶೀಲನೆ ನಡೆಸಿದೆ.

EPFO WhatsApp Service: ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ PF ಬ್ಯಾಲೆನ್ಸ್, ಪಾಸ್‌ಬುಕ್ ಡೀಟೇಲ್ಸ್!
EPFO WhatsApp Service: ಇನ್ಮುಂದೆ ವಾಟ್ಸಾಪ್‌ನಲ್ಲೇ ಸಿಗಲಿದೆ PF ಬ್ಯಾಲೆನ್ಸ್, ಪಾಸ್‌ಬುಕ್ ಡೀಟೇಲ್ಸ್!

ಅಲ್ಲದೆ, ಗಿಗ್ ಮತ್ತು ಅಸಂಘಟಿತ ಕಾರ್ಮಿಕರಿಗೆ ಗ್ರಾಹಕರಿಂದ ಸಿಗುವ ಟಿಪ್ಸ್, ಉಡುಗೊರೆ ಹಾಗೂ ಗ್ರಾಚ್ಯುಟಿಯಂತಹ ಸಣ್ಣ ಮೊತ್ತವನ್ನ ನೇರವಾಗಿ ಯುಎಎನ್ (UAN) ಲಿಂಕ್ ಆಗಿರುವ ಪಿಎಫ್ ಖಾತೆಗೆ ಜಮೆ ಮಾಡಲು ಅವಕಾಶ ಕಲ್ಪಿಸುವ ಪ್ರಸ್ತಾವನೆಯೂ ಮಂಡಳಿಯ ಮುಂದೆ ಚರ್ಚೆಗೆ ಬಂದಿದೆ.

ಒಟ್ಟಾರೆಯಾಗಿ, ಇಪಿಎಫ್‌ಒ ಕೈಗೊಂಡಿರುವ ಈ ಜನಸ್ನೇಹಿ ಸುಧಾರಣೆಗಳು ಕೋಟ್ಯಂತರ ಉದ್ಯೋಗಿಗಳ ಆರ್ಥಿಕ ಸ್ವಾತಂತ್ರ್ಯವನ್ನು ಹೆಚ್ಚಿಸುವುದರ ಜೊತೆಗೆ, ನಿವೃತ್ತಿಯ ನಂತರದ ಬದುಕಿಗೆ ಭದ್ರ ಬುನಾದಿ ಹಾಕಿಕೊಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+