EPFO: ಇನ್ಮುಂದೆ ಪಿಎಫ್ ಹಣ ಪಡೆಯುವುದು ಇನ್ನೂ ಸುಲಭ, ಇಲ್ಲಿದೆ ಬಿಗ್ ಅಪ್‌ಡೇಟ್

EPFO: ಕಂಪನಿಗಳು ಅಥವಾ ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿ ಮಹತ್ವದ ಸುದ್ದಿಯೊಂದಿದೆ. ನಿಮ್ಮ ಪಿಎಫ್ ಖಾತೆಯಲ್ಲಿ ಹಣವಿದೆಯೇ? ಹಾಗಿದ್ದರೆ ಅದನ್ನು ಹಿಂಪಡೆಯುವುದು ಇನ್ಮುಂದೆ ಜಿ-ಪೇ ಅಥವಾ ಫೋನ್ ಪೇನಲ್ಲಿ ಹಣ ಕಳುಹಿಸಿದಷ್ಟೇ ಸುಲಭ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ದೇಶದ ಕೋಟ್ಯಂತರ ಉದ್ಯೋಗಿಗಳಿಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ಡಿಜಿಟಲ್ ಮೂಲಸೌಕರ್ಯವನ್ನು ಆಧುನೀಕರಿಸುವ ಭಾಗವಾಗಿ ಕೇಂದ್ರ ಸರ್ಕಾರವು 'ಇಪಿಎಫ್‌ಒ 3.0' ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೆ ತರಲು ಸಜ್ಜಾಗಿದೆ. ಇದರಿಂದಾಗಿ ದೀರ್ಘಕಾಲದ ಕಾಗದ ಪತ್ರಗಳ ಕಿರಿಕಿರಿಯಿಲ್ಲದೆ, ಉದ್ಯೋಗಿಗಳು ನೇರವಾಗಿ ಯುಪಿಐ ಅಥವಾ ಯುಪಿಐ ಆಧಾರಿತ ಎಟಿಎಂ ಮೂಲಕ ತಮ್ಮ ಪಿಎಫ್ ಹಣವನ್ನು ಹಿಂಪಡೆಯಬಹುದು. 2026ರ ಆರ್ಥಿಕ ವರ್ಷಕ್ಕೆ ಶೇಕಡ 8.25ರಷ್ಟು ಬಡ್ಡಿದರವನ್ನು ನಿಗದಿಪಡಿಸಿದ ಬೆನ್ನಲ್ಲೇ ಈ ತಾಂತ್ರಿಕ ಬದಲಾವಣೆಯನ್ನು ತರಲಾಗುತ್ತಿದೆ.

EPFO 3 0 Withdraw PF Money via UPI amp amp ATM Know 5 Big Changes and New Withdrawal Rules Know details

ಏನಿದು ಇಪಿಎಫ್‌ಒ 3.0 ವ್ಯವಸ್ಥೆ?

ಕ್ಲೇಮ್ ಇತ್ಯರ್ಥದ ಅವಧಿಯನ್ನು ಗಣನೀಯವಾಗಿ ಕಡಿತಗೊಳಿಸುವುದು ಹಾಗೂ ಎಲ್ಲಾ ಸೇವೆಗಳನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಪ್ರಕಾರ, ಇಪಿಎಫ್‌ಒ ತನ್ನ ಸಂಪೂರ್ಣ ಡೇಟಾಬೇಸ್ ಅನ್ನು 'ಕೇಂದ್ರೀಕೃತ ಐಟಿ-ಸಕ್ರಿಯ ವ್ಯವಸ್ಥೆ' ಪ್ಲಾಟ್‌ಫಾರ್ಮ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಿದೆ. ಇದರಿಂದ ಏಕೀಕೃತ ರಾಷ್ಟ್ರೀಯ ಡೇಟಾಬೇಸ್ ಸೃಷ್ಟಿಯಾಗಿದ್ದು, ಯುಪಿಐ ಮೂಲಕ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆಗೆ ಹಾದಿ ಸುಗಮವಾಗಿದೆ.

ಇಪಿಎಫ್‌ಒ 3.0ನ ಪ್ರಮುಖ 5 ಬದಲಾವಣೆಗಳ ವಿವರ

ಯುಪಿಐ ಹಾಗೂ ಎಟಿಎಂ ಮೂಲಕ ಹಣ ಹಿಂಪಡೆಯುವಿಕೆ: ಚಂದಾದಾರರು ತಮ್ಮ ಒಟ್ಟು ಇಪಿಎಫ್ ಬ್ಯಾಲೆನ್ಸ್‌ನಲ್ಲಿ ಶೇಕಡ 50 ರಿಂದ 75 ರಷ್ಟು ಹಣವನ್ನು ಯುಪಿಐ ಅಥವಾ ಯುಪಿಐ-ಸಕ್ರಿಯ ಎಟಿಎಂಗಳ ಮೂಲಕವೇ ನೇರವಾಗಿ ಡ್ರಾ ಮಾಡಿಕೊಳ್ಳಬಹುದು. ಬ್ಯಾಂಕ್ ಖಾತೆಗೆ ವರ್ಗಾಯಿಸಬಹುದಾದ ಅರ್ಹ ಮೊತ್ತವನ್ನು ಮೊಬೈಲ್‌ನಲ್ಲೇ ಪರಿಶೀಲಿಸಿ, ಯುಪಿಐ ಪಿನ್ ಬಳಸಿ ತಕ್ಷಣವೇ ವರ್ಗಾಯಿಸಿಕೊಳ್ಳಬಹುದು.

ಆಟೋ-ಸೆಟಲ್‌ಮೆಂಟ್ ಮಿತಿ ₹5 ಲಕ್ಷಕ್ಕೆ ಏರಿಕೆ

ವೈದ್ಯಕೀಯ ತುರ್ತು ಚಿಕಿತ್ಸೆ, ಉನ್ನತ ಶಿಕ್ಷಣ, ಮದುವೆ ಅಥವಾ ಮನೆ ನಿರ್ಮಾಣದಂತಹ ಅಗತ್ಯಗಳಿಗಾಗಿ ಈ ಹಿಂದೆ ಇದ್ದ ₹1 ಲಕ್ಷದ ಆಟೋ-ಸೆಟಲ್‌ಮೆಂಟ್ ಮಿತಿಯನ್ನು 5 ಲಕ್ಷ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಇಂತಹ ಕ್ಲೇಮ್‌ಗಳು ಕೇವಲ 3 ದಿನಗಳಲ್ಲಿ ಸ್ವಯಂಚಾಲಿತವಾಗಿ ಪ್ರಕ್ರಿಯೆಗೊಂಡು ಖಾತೆಗೆ ಜಮೆಯಾಗಲಿವೆ.

ಉಮಂಗ್ ಆ್ಯಪ್‌ನಲ್ಲಿ ಫೇಸ್ ಅಥೆಂಟಿಕೇಷನ್

ಚಂದಾದಾರರು ಉಮಂಗ್ ಆ್ಯಪ್‌ನಲ್ಲಿ ಮುಖ ಗುರುತಿಸುವ ತಂತ್ರಜ್ಞಾನದ ಮೂಲಕವೇ ಮನೆಯಲ್ಲೇ ಕುಳಿತು ಯುಎಎನ್ ಜನರೇಟ್ ಅಥವಾ ಆಕ್ಟಿವೇಟ್ ಮಾಡಿಕೊಳ್ಳಬಹುದು. ಜೊತೆಗೆ ಪಾಸ್‌ಬುಕ್ ಪರಿಶೀಲನೆ ಹಾಗೂ ಆನ್‌ಲೈನ್ ಕ್ಲೇಮ್ ಸಲ್ಲಿಕೆಯನ್ನೂ ಬೇಗನೇ ಮಾಡಬಹುದು.

ಹಳೆಯ ವ್ಯವಸ್ಥೆಯಲ್ಲಿ ಹಿಂಪಡೆಯಲು ಅರ್ಹವಿರುವ ನಿಖರ ಮಾಹಿತಿ ಇರದ ಕಾರಣ ಹೆಚ್ಚುವರಿ ಮೊತ್ತ ನಮೂದಿಸಿ ಕ್ಲೇಮ್‌ಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ ಹೊಸ ವ್ಯವಸ್ಥೆಯಲ್ಲಿ ಸದಸ್ಯರು ಹಿಂಪಡೆಯಬಹುದಾದ ನಿಖರ ಅರ್ಹ ಮೊತ್ತವೇ ಮೊದಲೇ ಸ್ಕ್ರೀನ್ ಮೇಲೆ ಕಾಣಿಸುತ್ತದೆ.

ಕ್ಲೇಮ್ ಪ್ರಕ್ರಿಯೆ ವೇಳೆ ಹೆಚ್ಚುವರಿ ವಿವರ ಅಥವಾ ದಾಖಲೆಗಳ ಅಗತ್ಯವಿದ್ದರೆ, ಸದಸ್ಯರು ಅದನ್ನು ಡಿಜಿಟಲ್ ರೂಪದಲ್ಲೇ ಆನ್‌ಲೈನ್ ಮೂಲಕ ನೇರವಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಒಟ್ಟಿನಲ್ಲಿ ಹೇಳುವುದಾದರೆ ಇಪಿಎಫ್‌ಒ 3.0 ಜಾರಿಯಾದರೆ ಪಿಎಫ್ ಹಣ ಪಡೆಯಲು ಕಚೇರಿಗಳಿಗೆ ಅಲೆಯುವ ಮತ್ತು ತಿಂಗಳುಗಟ್ಟಲೆ ಕಾಯುವ ಸಂಕಷ್ಟಕ್ಕೆ ಶಾಶ್ವತ ತೆರೆ ಬಿದ್ದಂತಾಗಲಿದೆ. ಒಟ್ಟಿನಲ್ಲಿ ಪಿಎಫ್‌ ಹಣ ಬಿಡಿಸಿಕೊಳ್ಳುವವರಿಗೆ ಇದು ತುಂಬಾ ಉಪಯುಕ್ತವಾಗಿದೆ ಅಂತಲೇ ಹೇಳಬಹುದು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+