Vande Bharat Sleeper: ಬೆಂಗಳೂರು–ಮುಂಬೈ ವಂದೇ ಭಾರತ್ ಸ್ಲೀಪರ್‌ಗೆ ಏಕೆ ವಿಳಂಬ ಪ್ರಯಾಣಿಕರ ಬೇಸರ

ಭಾರತೀಯ ರೈಲ್ವೆ ಇಲಾಖೆಯ ಬಹುನಿರೀಕ್ಷೆಯ ದೇಶದ ಮೂರನೇ ಬೆಂಗಳೂರು-ಮುಂಬೈ ವಂದೇ ಭಾರತ್ ರೈಲು ಸ್ಲೀಪರ್ ರೈಲು (Sleeper Vande Bharat Express Train) ವಾಣಿಜ್ಯ ಸೇವೆ ಆರಂಭ ವಿಳಂಬವಾಗಿದೆ. ಸೇವೆ ಆರಂಭಿಸುವ ಪ್ರಕ್ರಿಯೆಯನ್ನು ರೈಲ್ವೆ ಅಧಿಕಾರಿಗಳು ಚುರುಕುಗೊಳಿಸುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ವಾಣಿಜ್ಯ ಕಾರ್ಯಾಚರಣೆಯ ವಿಳಂಬಕ್ಕೆ ಕಾರಣವೇನು? ರೈಲು ಮಾರ್ಗ ಮಾರ್ಗ, ಅಧಿಕಾರಿಗಳು ಹೇಳುವುದೇನು ಸಂಪೂರ್ಣ ವಿವರ ಇಲ್ಲಿದೆ.

ರಾಜಧಾನಿ ಬೆಂಗಳೂರಿನಿಂದ ಮಹಾರಾಷ್ಟ್ರ ರಾಜಧಾನಿ ಮುಂಬೈಗೆ ಸಂಪರ್ಕ ಕಲ್ಪಿಸಲಿರುವ ರೈಲು ಇದಾಗಿದೆ. ಕರ್ನಾಟಕದ ಮೊದಲು ವಂದೇ ಭಾರತ್ ಸ್ಲೀಪರ್ ರೈಲಿನ ಮೇಲೆ ಪ್ರಯಾಣಿಕರಿಗೆ ಅಪಾರ ನಿರೀಕ್ಷೆ ಇದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ ಸುಮಾರು ನಾಲ್ಕು ಜಿಲ್ಲೆಗಳು ಸೇರಿದಂತೆ ವಿವಿಧ ಭಾಗಗಳ ಸಾವಿರಾರು ಪ್ರಯಾಣಿಕರಿಗೆ ರಾತ್ರಿ ಸುದೀರ್ಘ ಪ್ರಯಾಣಕ್ಕೆ ಅನುಕೂಲ ಒದಗಿಸಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು-ಮುಂಬೈ ಸ್ಲೀಪರ್ ವಂದೇ ಭಾರತ್ ರೈಲಿನ ಮೇಲೆ ಹೆಚ್ಚಿನ ನಿರೀಕ್ಷೆಗಳು ಸೃಷ್ಟಿಯಾಗಿವೆ.

Bengaluru Mumbai Vande Bharat Sleeper

ಇತ್ತೀಚೆಗೆ ಅಂತಿಮ ತಾಂತ್ರಿಕ ಪರೀಕ್ಷೆಗೆಂದು ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿಗೆ ಆಗಮಿಸಿದ್ದ ಎರಡು ವಂದೇ ಭಾರತ್ ಸ್ಲೀಪರ್ ರೈಲು ಸೆಟ್‌ಗಳು ಸದ್ಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ಬೆಂಗಳೂರು ನಗರ ರೈಲು ನಿಲ್ದಾಣದಲ್ಲಿ ನಿಂತಿದೆ. ಬಿಇಎಂಎಲ್ ನಿರ್ಮಿಸಿದ ರೈಲು ಸೆಟ್‌ಗಳನ್ನು ಕೋಚಿಂಗ್ ಯಾರ್ಡ್‌ಗೆ ಸ್ಥಳಾಂತರಿಸಲಾಗಿದೆ, ಅಲ್ಲಿ ಪ್ರಯಾಣಿಕರ ಸೇವೆಗೆ ಪ್ರವೇಶಿಸುವ ಮೊದಲು ಅವುಗಳನ್ನು ಪ್ರಾಥಮಿಕ ತಪಾಸಣೆ ಇನ್ನಿತರ ಅತ್ಯಗತ್ಯ ಪರೀಕ್ಷೆಗಳನ್ನು ನಡೆಸುವುದು ಬಾಕಿ ಇದೆ.
Bullet Train: ಭಾರತದ ಮೊದಲ ಬುಲೆಟ್ ರೈಲು ಆರಂಭದ ಅಪ್ಡೇಟ್: ಮಾರ್ಗ, ನಿಲ್ದಾಣ, ವೇಳಾಪಟ್ಟಿ
Bullet Train: ಭಾರತದ ಮೊದಲ ಬುಲೆಟ್ ರೈಲು ಆರಂಭದ ಅಪ್ಡೇಟ್: ಮಾರ್ಗ, ನಿಲ್ದಾಣ, ವೇಳಾಪಟ್ಟಿ

ಬೆಂಗಳೂರಿಗೆ ಸ್ಲೀಪರ್ ರೈಲಿನ ರೇಕ್‌ಗಳು ಬಂದಿವೆ. ಸೇವೆ ಆರಂಭಿಸುವ ಮುನ್ನ ಶಾಸನಬದ್ದ ತಪಾಸಣೆ, ಕಾರ್ಯಕ್ಷಮತೆ, ತಾಂತ್ರಿಕ ಪರೀಕ್ಷೆಗಳು ನಡೆಸುವುದು ಬಾಕಿ ಉಳಿದಿವೆ. ಅದೆಲ್ಲ ಮುಗಿದ ಬಳಿಕ ನೈಋತ್ಯ ರೈಲ್ವೆ ಅಧಿಕಾರಿಗಳು ರೈಲ್ವೆ ಇಲಾಖೆಗೆ ಔಪಚಾರಿಕವಾಗಿ ಹಸ್ತಾಂತರಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸಂಚಾರ ಅನುಮತಿ ಬಾಕಿ, ಮಾರ್ಗದ ವಿವರ

ಎಲ್ಲಾ ವಿಧದ ಕಡ್ಡಾಯ ತಾಂತ್ರಿಕ ಪರೀಕ್ಷೆಗಳು ಪೂರ್ಣಗೊಂಡ ಬಳಿಕ ಸರ್ಕಾರದಿಂದ ವಾಣಿಜ್ಯ ಕಾರ್ಯಾಚರಣೆಯ ಅನುಮತಿ ನೀಡುತ್ತಿದ್ದಂತೆ ರೈಲು ಸೇವೆಯ ಅಧಿಕೃತ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಲಿದೆ. ಬಳಿಕವೇ ಬೆಂಗಳೂರು-ಮುಂಬೈ ಪ್ರಯಾಣಿಕರಿಗೆ ಗುಡ್‌ನ್ಯೂಸ್ ಸಿಗಲಿದೆ. ತಾತ್ಕಾಲಿಕ ರೈಲು ಪಟ್ಟಿ ಪ್ರಕಾರ ಈ ರೈಲು ಬೆಂಗಳೂರಿನಿಂದ ಆಂಧ್ರ ಗಡಿ ಮೂಲಕ ಬೀದರ್, ಕಲಬುರಗಿ ಸೇರಿದಂತೆ ಸುಮಾರು ನಾಲ್ಕು ಜಿಲ್ಲೆಗಳ ಮೂಲಕ ಮಹಾರಾಷ್ಟ್ರದ ಮುಂಬೈ ತಲುಪಲಿದೆ. ಸಮಯ, ಮಾರ್ಗ, ನಿಲುಗಡೆಯ ನಿಲ್ದಾಣಗಳನ್ನು ಒಳಗೊಂಡ ಅಂತಿಮ ವೇಳಾಪಟ್ಟಿ ಬಿಡುಗಡೆ ಆಗಬೇಕಿದೆ.

ಸಂಚಾರ ಸಮಯ 7 ಗಂಟೆ ಉಳಿತಾಯ

ಬೆಂಗಳೂರಿನಿಂದ ಮುಂಬೈ ತಲುಪಲು ಸದ್ಯದ ಎಕ್ಸ್‌ಪ್ರೆಸ್‌ ರೈಲುಗಳು ಗರಿಷ್ಠ 22 ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತದೆ. ಈ ಸ್ಲೀಪರ್ ವಂದೇ ಭಾರತ್ ರೈಲು ಆರಂಭವಾದ ಬಳಿಕ ಗರಿಷ್ಠ ಸುಮಾರು 15 ಗಂಟೆಗಳಲ್ಲಿ ತಲುಪಲಿದೆ. ಸಂಚಾರ ಸಮಯ ಗಮನಾರ್ಹವಾಗಿ ಕಡಿಮೆ ಆಗಲಿದೆ. ರಾತ್ರಿ ಪ್ರಯಾಣಿಸುವ, ಸುದೀರ್ಘ ಮಾರ್ಗದ (800-1200 ಕಿ.ಮೀ ವರೆಗಿನ ಮಾರ್ಗಕ್ಕೆ ಆದ್ಯತೆ) ಪ್ರಯಾಣಿಕರು, ಮಾರ್ಗವನ್ನು ಗಮನದಲ್ಲಿಟ್ಟುಕೊಂಡು ದೂರದ ಮಹಾನಗರಗಳ ಮಧ್ಯ ಈ ರೈಲನ್ನು ಪರಿಚಯಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಈ ಹಿಂದೆಯೇ ತಿಳಿಸಿದ್ದರು.

ಪ್ರಯಾಣಿಕರಿಗೆ ಆರಾಮದಾಯಕ, ಸುರಕ್ಷಿತ ಮತ್ತು ವೇಗದ ಸೇವೆ ನೀಡಲಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ರೈಲು ಸಂಪರ್ಕ ಸುಧಾರಿಸಲಿದೆ. ಕರ್ನಾಟಕದ ದಕ್ಷಿಣ ಭಾಗದಿಂದ ಮತ್ತು ಮಹಾರಾಷ್ಟ್ರ ಮತ್ತು ಉತ್ತರ ಭಾರತದ ಕಡೆಗೆ ಸಾಗುವವರಿಗೆ ಈ ರೈಲು ಅನುಕೂಲ ಸೇವೆ ನೀಡಲಿದೆ. ಪ್ರವಾಸೋದ್ಯಮ, ಶೈಕ್ಷಣಿಕ, ಔದ್ಯೋಗಿಕ ವಲಯದ ಬೆಳವಣಿಗೆಗೂ ಈ ರೈಲು ಪೂರಕವಾಗಲಿದೆ ಎಂದು ರೈಲ್ವೆ ಇಲಾಖೆ ವಿಶ್ವಾಸ ವ್ಯಕ್ತಪಡಿಸಿದೆ.

ವಿಳಂಬ ಆಗುತ್ತಿರುವುದೇಕೆ?

ಬೆಂಗಳೂರಿನಲ್ಲಿರುವ ಪ್ರಸ್ತುತ ರೈಲಿನ ಕೊನೆ ಹಂತದ ತಪಾಸಣೆ, ಪರೀಕ್ಷೆ ಮುಗಿದ ಬಳಿಕ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುತ್ತದೆ. ಬಳಿಕ ರೈಲ್ವೆ ಮಂಡಳಿ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಂದ ಅಂತಿಮ ಅನುಮೋದನೆ ನೀಡಬೇಕಾಗುತ್ತದೆ. ಅದಕ್ಕೆ ಇನ್ನಷ್ಟು ತಿಂಗಳುಗಳ ಕಾಲ ಸಮಯ ಬೇಕಾಗಬಹುದು. ಈ ವಿಳಂಬಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಮೊದಲ ಸ್ಲೀಪರ್ ವಂದೇ ಭಾರತ್ ರೈಲು ಹೌರಾ ಮತ್ತು ಕಾಮಾಕ್ಯ ಮಾರ್ಗದಲ್ಲಿ (972 ಕಿ.ಮೀ) ಈಗಾಗಲೇ ಸಂಚಾರ ಆರಂಭಿಸಿದೆ. ಸಂತ ರವಿದಾಸ್ ಹೆಸರಿನ ವಾರಣಾಸಿ-ಚೆಹರ್ತಾ ಸ್ಲೀಪರ್ ವಂದೇ ಭಾರತ್ ರೈಲು ದೇಶದ ಎರಡನೇ ಸ್ಲೀಪರ್ ರೈಲಾಗಿ ಇದೇ ಜುಲೈ 18ರಿಂದ ಸೇವೆ ಆರಂಭಿಸಿದೆ.

ನಿರೀಕ್ಷೆಯಂತೆ ಎಲ್ಲವು ನಡೆದಿದ್ದರೆ ವಾರಣಾಸಿ-ಚೆಹರ್ತಾ ರೈಲಿಗೂ ಮೊದಲೇ ಬೆಂಗಳೂರು-ಮುಂಬೈ ರೈಲು ಸೇವೆ ಆರಂಭಿಸುವುದಿತ್ತು. ಪರೀಕ್ಷೆ ವಿಳಂಬ ಇನ್ನಿತರ ಕಾರಣಗಳಿಂದ ಈ ಮಾರ್ಗದಲ್ಲಿ ವಾಣಿಜ್ಯ ಕಾರ್ಯಾಚರಣೆ ತಡವಾಗಿದೆ. ಅಗತ್ಯವಾಗಿರುವ ಈ ರೈಲಿನ ಸೇವೆ ಆರಂಭಿಸುವ ಪ್ರಕ್ರಿಯೆಗೆ ರೈಲ್ವೆ ಇಲಾಖೆ ಚುರುಕು ನೀಡುವಂತೆ ಪ್ರಯಾಣಿಕರು ಬೇಡಿಕೆ ಇಟ್ಟಿದ್ದಾರೆ.

Hydrogen Train: ಕರೆಂಟ್-ಇಂಧನವಿಲ್ಲದೇ ಚಲಿಸುವ ಹೈಡ್ರೋಜನ್ ರೈಲಿಗೆ 'ನಮೋ' ಚಾಲನೆ: ಮಾರ್ಗ, ವೈಶಿಷ್ಟ್ಯಗಳು?
Hydrogen Train: ಕರೆಂಟ್-ಇಂಧನವಿಲ್ಲದೇ ಚಲಿಸುವ ಹೈಡ್ರೋಜನ್ ರೈಲಿಗೆ 'ನಮೋ' ಚಾಲನೆ: ಮಾರ್ಗ, ವೈಶಿಷ್ಟ್ಯಗಳು?

ರೈಲು ಕೋಚ್‌ಗಳು, ವಿನ್ಯಾಸ ಮಾಹಿತಿ

ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ಒಟ್ಟು 16 ಬೋಗಿಗಳನ್ನು ಹೊಂದಿದೆ. ಇದರಲ್ಲಿ 11 ಥ್ರೀ ಎಸಿ (3ಎಸಿ) ಟೈರ್, 04 2ಎಸಿ ಟೈರ್‍‌ಗಳು ಮತ್ತು ಒಂದು ಎಸಿ 1ಟೈರ್ ಬೋಗಿಳನ್ನು ಹೊಂದಿದೆ. ಒಂದು ರೈಲು 823 ಪ್ರಯಾಣಿಕರನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಭವಿಷ್ಯದಲ್ಲಿ ಈ ರೈಲುಗಳಿಗೆ ಉತ್ತಮ ಸ್ಪಂದನೆ ವ್ಯಕ್ತವಾದಲ್ಲಿ ಬೋಗಿಗಳ ಸಂಖ್ಯೆ ಹೆಚ್ಚಿಸುವ ಸಾಧ್ಯತೆ ಇದೆ.

ಸಿಸಿಟಿವಿ ಸೌಲಭ್ಯ, ಸ್ವಯಂ ಚಾಲಿತ ಬಾಗಿಲುಗಳು, ಅಗ್ನಿ ಸುರಕ್ಷತಾ ವ್ಯವಸ್ಥೆ, ಸುರಕ್ಷತಾ ಸೆನ್ಸಾರ್, ಬಯೋ-ವ್ಯಾಕ್ಯೂಮ್ ಶೌಚಾಲಯಗಳು, ಸಂವೇದಕ-ಚಾಲಿತ ನೀರಿನ ಟ್ಯಾಪ್, ಮಾಹಿತಿ ಪ್ರದರ್ಶನ, ಸಸ್ಯಾಹಾರಿ ಮತ್ತು ಮಾಂಸಾಹಾರ ಊಟ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಈ ರೈಲು ಒಳಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+