Kalaghatagi elections: ಕಲಘಟಗಿಯಲ್ಲಿ ಗೆಲುವಿಗಿಂತ ಟಿಕೆಟ್‌ಗಾಗಿ ಕೈ-ಕಮಲದಲ್ಲಿ ಬಾರೀ ಪೈಪೋಟಿ! ಯಾರಿಗೆ ಗೆಲುವು?
ಮಲೆನಾಡು-ಅರೆಮಲೆನಾಡು ವಿಭಿನ್ನ ಭೌಗೋಳಿಕ ಗುಣಲಕ್ಷಣಗಳ ವಿಧಾನಸಭಾ ಕ್ಷೇತ್ರ ಕಲಘಟಗಿ.ಇದೊಂದು ಇತಿಹಾಸ ಪ್ರಸಿದ್ಧ ಸ್ಥಳ. ಇಲ್ಲಿ ಐದು ಶಿಲಾಶಾಸನಗಳು ದೊರೆತಿದ್ದು ಅವುಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಚಾಳುಕ್ಯ ದೊರೆ ಆರನೆಯ ವಿಕ್ರಮಾದಿತ್ಯನಿಗೆ (1077-1127) ಸೇರಿದ್ದು, ಕಲಘಟಗಿಯಲ್ಲಿ 18 ನೇ ಶತಮಾನದ ಮುಸ್ಲಿಂ ಸಂತ ರುಸ್ತುಂ ಶಹೀದನ ಗೋರಿಯಿದೆ. ಪ್ರತಿವರ್ಷ ಯುಗಾದಿಯ ಅನಂತರ ಇಲ್ಲಿ ಉರುಸು ನಡೆಯುತ್ತದೆ.
ಕಲಘಟಗಿಯ ಮುಖ್ಯ ಆಕರ್ಷಣೆಯ೦ದರೆ ಇಲ್ಲಿಯ ತೊಟ್ಟಿಲು. ಕಟ್ಟಿಗೆಯಿ೦ದ ಮಾಡಲಾದ ಈ ತೊಟ್ಟಿಲುಗಳಿಗೆ ಬಣ್ಣದಿ೦ದ ಚಿತ್ರ ಬಿಡಿಸಲಾಗುತ್ತದೆ. ನೋಡಲು ಬಹಳ ಆಕರ್ಶಕವಾಗಿರುತ್ತವೆ.ಸಾಹುಕಾರ್ ಮನೆತನದವರ ಕುಲಕಸುಬಿದು. ಬಣ್ಣಬಣ್ಣದ ಚಿತ್ತಾರಗಳ ತೊಟ್ಟಿಲುಗಳಿಗೆ ಬಹಳ ಬೇಡಿಕೆ ಇತ್ತು. ಈ ಬಣ್ಣವನ್ನು ಸಾಹುಕಾರ್ ಕುಟುಂಬದವರೆ ತಯಾರಿಸುತ್ತಾರೆ. ನೂರಾರು ವರ್ಷದವರೆಗೆ ಈ ಬಣ್ಣ ಮಾಸದಿರುವುದು ವಿಶೇಷವಾಗಿದೆ. ಪ್ರೋತ್ಸಾಹವಿಲ್ಲದೆ ತೊಟ್ಟಿಲುಗಳ ತಯಾರಿಕೆ ಈಗ ಕಡಿಮೆಯಾಗಿದ್ದರೂ ಪ್ರಖ್ಯಾತಿ ಮಾತ್ರ ಮಾಸಿಲ್ಲ!

ಕಲಘಟಗಿ ಕ್ಷೇತ್ರದ ರಾಜಕೀಯ ಇತಿಹಾಸ!
1957ರಿಂದ 2008ರವರೆಗಿನ 11 ಚುನಾವಣೆಗಳಲ್ಲಿಚರ್ಚ್‌ನ ಪಾದ್ರಿಯೊಬ್ಬರು ಅನಿರೀಕ್ಷಿವಾಗಿ ಚುನಾಯಿತರಾದದ್ದು ಬಿಟ್ಟರೆ ಉಳಿದೆಲ್ಲ ಬಾರಿ ಲಿಂಗಾಯತರೆ ಶಾಸಕರಾಗಿದ್ದಾರೆ. 2008ರ ಕ್ಷೇತ್ರಗಳ ಭೌಗೋಳಿಕ ಪರಿಧಿ ಪುನರ್‌ರಚನೆವರೆಗೂ ಕಲಘಟಗಿಯಲ್ಲಿ ಲಿಂಗಾಯತರಿಗೆ ಪೈಪೋಟಿ ಕೊಡುವ ಪ್ರಬಲ ಜಾತಿಯೂ ಇರಲಿಲ್ಲ. ದ್ವಿತೀಯ ಬಹುಸಂಖ್ಯಾತರಾದ ಮುಸ್ಲಿಮರಿಗೆ ರಾಜಕೀಯ ಪ್ರಜ್ಞೆ ಬಂದಿದ್ದು 1994ರ ನಂತರ ಎಂಬ ವಿಶ್ಲೇಷಣೆಗಳಿವೆ.
2023 ರ ವಿಧಾನಸಭಾ ಚುನಾವಣೆಗೆ ಕಲಘಟಗಿ ಕ್ಷೇತ್ರದಲ್ಲಿ ರಾಜಕೀಯ ಬಿಸಿ ಹೆಚ್ಚಾಗುವ ಎಲ್ಲ ಲಕ್ಷಣಗಳು ಗೋಚರವಾಗುತ್ತಿದೆ. ಹೊರಗಿನ ಅಭ್ಯರ್ಥಿಗಳಿಗೆ ಹೆಚ್ಚು ಮಣೆ ಹಾಕಿರುವ ಇತಿಹಾಸ ಹೊಂದಿರುವ ಕ್ಷೇತ್ರದಲ್ಲಿಈ ಬಾರಿಯೂ ಸ್ಥಳೀಯರಿಗಿಂತ ಹೊರಗಿನವರ ನಡುವೆಯೇ ಪೈಪೋಟಿ ಜೋರಾಗಲಿದೆ.

1999ರಿಂದ ಈಚೆಗೆ ಬಿಜೆಪಿ ಹಾಗೂ ಕಾಂಗ್ರೆಸ್ ಬಿಟ್ಟರೆ ಬೇರಾವ ಪಕ್ಷಗಳಿಗೆ ಕ್ಷೇತ್ರದಲ್ಲಿ ನೆಲೆ ಇಲ್ಲದಾಗಿದೆ. ಜಿಲ್ಲೆಯಲ್ಲಿ ಜೆಡಿಎಸ್ ಇಲ್ಲಿ ಅಷ್ಟಾಗಿ ವರ್ಚಸ್ಸನ್ನ ಹೊಂದಿಲ್ಲ, ಇನ್ನೂ ಆಮ್ ಆದ್ಮಿ ಪಾರ್ಟಿ, ಎಐಎಂಐಎಂ ಪಕ್ಷಗಳು ಕಣಕ್ಕಿಳಿಯಲು ಸಿದ್ಧತೆ ನಡೆಸಿವೆ. ಆದರೆ, ಈ ಚುನಾವಣೆಯಲ್ಲಿ ಯಾರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಾಗುತ್ತಾರೆ ಎನ್ನುವುದೇ ತೀವ್ರ ಕುತೂಹಲ ಕೆರಳಿಸಿದೆ.
1985 ರಿಂದ 1994 ರವರೆಗೆ ಜನತಾ ಪಕ್ಷ, ಜನತಾ ದಳದಿಂದ ಸತತ ಮೂರು ಬಾರಿ ಪಿ.ಸಿ.ಸಿದ್ದನಗೌಡರ ಶಾಸಕರಾಗಿದ್ದರೆ, 1999 ಹಾಗೂ 2004ರಲ್ಲಿ ಬಿಜೆಪಿಯ ಎಸ್.ಐ.ಚಿಕ್ಕನಗೌಡರ, 2008 ಮತ್ತು 2013ರಲ್ಲಿ ಕಾಂಗ್ರೆಸ್‌ನ ಸಂತೋಷ ಲಾಡ್, 2018ರಲ್ಲಿ ನಿಂಬಣ್ಣವರ ಶಾಸಕರಾಗಿದ್ದಾರೆ.

ಈ ಬಾರಿ ಬಿಜೆಪಿಯಲ್ಲಿ ಹೊಸ ಮುಖ?
ಎಲ್ಲಾ ಕ್ಷೇತ್ರದಲ್ಲೂ ಸಹ ಟಿಕೆಟ್ ಗಾಗಿ ಬಾರೀ ಪೈಪೋಟಿ ಏರ್ಪಟ್ಟಿದ್ರೆ, ಕಲಘಟಗಿ ಕ್ಷೇತ್ರದಲ್ಲಿ ಮಾತ್ರ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದ್ದರೂ ಗಂಭೀರ ಪ್ರಯತ್ನ ಮಾತ್ರ ಯಾರಿಂದಲೂ ನಡೆಯುತ್ತಿಲ್ಲ. ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಸಹ ನನಗೆ ಟಿಕೆಟ್ ಬೇಕು ಎಂದು ಎಲ್ಲಿಯೂ ಹೇಳಿಕೊಂಡಿಲ್ಲ.
ಇನ್ನು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಘೋಷಿಸಿದ್ದ ಬಿಜೆಪಿ, ಕೊನೆ ಗಳಿಗೆಯಲ್ಲಿ ನಿಂಬಣ್ಣವರ ಅವರಿಗೆ ನೀಡಿತು. ಈ ಬಾರಿ ಮಹೇಶ ಟೆಂಗಿನಕಾಯಿ ಅವರಿಗೆ ಟಿಕೆಟ್ ಪಕ್ಕಾ ಎನ್ನುವ ಮಾತು ಕೇಳಿ ಬಂದರೂ, ಅವರು ಸಹ ಕ್ಷೇತ್ರದಲ್ಲಿಅಷ್ಟಾಗಿ ಓಡಾಡುತ್ತಿಲ್ಲ ಇನ್ನೂ ಬಿಜೆಪಿಯಲ್ಲಿಯೂ ಮಾಜಿ ಮೇಯರ್ ಶಿವು ಹಿರೇಮಠ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯುವ ವೈದ್ಯ ಡಾ. ಮಹೇಶ ತಿಪ್ಪಣ್ಣವರ, ಜಯತೀರ್ಥ ಕಟ್ಟಿ ಅವರು ಸಹ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಸಿದ್ದು ಹಾಗೂ ಡಿ ಕೆ ಶಿ ಬೆಂಬಲಿಗರ ನಡುವೆ ಟಿಕೆಟ್ ಗಾಗಿ ಪೈಪೋಟಿ
ಕಲಘಟಗಿ ಕ್ಷೇತ್ರದಲ್ಲಿ ಯಾವ ಪಕ್ಷಕ್ಕೆ ಗೆಲುವು ಸಿಗಲಿದೆ ಎನ್ನುವ ವಿಚಾರಕ್ಕಿಂತ ಕಾಂಗ್ರೆಸ್‌ನಲ್ಲಿ ಯಾರಿಗೆ ಟಿಕೆಟ್ ಸಿಗಲಿದೆ ಎಂಬುದರ ಬಗೆಗಿನ ಚರ್ಚೆಯೇ ಜೋರಾಗಿದೆ. ಕಳೆದ ಬಾರಿ ಪರಾಭವಗೊಂಡ ಸಂತೋಷ ಲಾಡ್ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ್ ಛಬ್ಬಿ ಅರ್ಜಿ ಸಲ್ಲಿಸಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ನಾನೇ ಕಾಂಗ್ರೆಸ್ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಮಾಡುತ್ತಿದ್ದಾರೆ. ಇನ್ನೂ ಸಂತೋಷ್ ಲಾಡ್ ಬೆಂಬಲಕ್ಕೆ ಸಿದ್ದರಾಮಯ್ಯ, ಛಬ್ಬಿ ಬೆಂಬಲಕ್ಕೆ ಡಿ.ಕೆ.ಶಿವಕುಮಾರ್ ಇದ್ದಾರೆ. ಹೀಗಾಗಿ ಟಿಕೆಟ್ ಪಡೆಯುವಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು ನಿಗೂಢವಾಗಿದೆ.
ಇನ್ನೂ ಪ್ರಾದೇಶಿಕ ಪಕ್ಷ ಜೆಡಿಎಸ್ ನಲ್ಲಿಯೂ ಟಿಕೆಟ್ ಗಾಗಿ ಸಾಕಷ್ಟು ಅಭ್ಯರ್ಥಿಗಳು ಲಾಭಿ ನಡೆಸುತ್ತಿದ್ದು, ಜೆಡಿಎಸ್ ನಿಂದ ಡಾ.ವೀರಣ್ಣ ಶಿಗಿಗಟ್ಟಿ, ಆನಂದ ಹಬೀಬ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.ಈ ನಡುವೆ ಎಐಎಂಐಎಂ ಕೂಡಾ ಸ್ಪರ್ಧೆಗೆ ಇಳಿಯಲು ಸಿದ್ಧತೆ ಮಾಡಿಕೊಂಡಿದೆ.
ಈ ಕ್ಷೇತ್ರದಲ್ಲಿ ಗೆದ್ದವರಲ್ಲಿ ಹೊರಗಿನವರೇ ಹೆಚ್ಚು
ಕಲಘಟಗಿ ಕ್ಷೇತ್ರದಲ್ಲಿ ಗೆದ್ದವರಲ್ಲಿ ಬಳ್ಳಾರಿ ಮೂಲದ ಗಣಿ ಉದ್ಯಮಿ ಸಂತೋಷ ಲಾಡ್, ಕೇರಳ ಮೂಲದ ಫಾದರ್ ಎಫ್. ಜಾಕೋಬ್, ಪಿ.ಸಿ. ಸಿದ್ದನಗೌಡರ, ಎಸ್.ಐ.ಚಿಕ್ಕನಗೌಡರ ಪ್ರಮುಖರು. ಸಿದ್ದನಗೌಡರ, ಚಿಕ್ಕನಗೌಡರ ಮೂಲತಃ ಕಲಘಟಗಿ ತಾಲೂಕಿನವರಲ್ಲ. ಶಾಸಕ ಸಿ.ಎಂ. ನಿಂಬಣ್ಣವರ ಮಾತ್ರ ಸ್ಥಳೀಯರು. ಕಳೆದ ಚುನಾವಣೆಯಲ್ಲಿ ಸ್ಥಳೀಯರು ಮತ್ತು ಹೊರಗಿನವರು ಎನ್ನುವ ವಿಚಾರವೇ ಪ್ರಮುಖವಾಗಿತ್ತು. ಕೊನೆಗೆ ಮತದಾರರು ನಿಂಬಣ್ಣನವರಿಗೆ ಅವಕಾಶ ನೀಡಿತ್ತು.
2018 ಸಿ.ಎಂ. ನಿಂಬಣ್ಣವರ್ ಬಿಜೆಪಿ 83,267
ಸಂತೋಷ್ ಎಸ್ ಲಾಡ ಕಾಂಗ್ರೆಸ್ 57,270
2013 ಸಂತೋಷ್ ಎಸ್. ಲಾಡ್ ಕಾಂಗ್ರೆಸ್ 76,802
ನಂಬಣ್ಣವರ್ ಚನ್ನಪ್ಪ ಮಲ್ಲಪ್ಪ ಕೆಜೆಪಿ 31,141
2008 ಸಂತೋಷ್ ಎಸ್. ಲಾಡ್ ಕಾಂಗ್ರೆಸ್ 49,733
ಚನ್ನಪ್ಪ ಮಲ್ಲಪ್ಪ ನಿಂಬಣ್ಣನವರ್ ಬಿಜೆಪಿ 38,091
ಮತದಾರರ ವಿವರ
ಪುರುಷರು: 98,231
ಮಹಿಳೆಯರು 92,354
ಒಟ್ಟು: 1,90,591
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications