Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಧನಲಾಭ, ಹೆಚ್ಚಾಗುವುದು ಆದಾಯದ ಮೂಲ, ಪ್ರತಿ ಕೆಲಸದಲ್ಲಿ ಸಿಗುವುದು ಜಯ
ಜ್ಯೋತಿಷ್ಯದ ಪ್ರಕಾರ, ಜುಲೈ ತಿಂಗಳ ನಾಲ್ಕನೆ ವಾರ ನಿಮಗೆ ಹೇಗಿರುತ್ತದೆ? ನಿಮ್ಮ ವೃತ್ತಿ, ಆರೋಗ್ಯ, ಉದ್ಯೋಗ ಮತ್ತು ಪ್ರೇಮ ಜೀವನ ಹೇಗಿರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇರುತ್ತದೆ. ಜುಲೈ ಮೂರನೇ ವಾರದ ಸಾಪ್ತಾಹಿಕ ಜಾತಕ ಫಲ ಹೇಗಿದೆ ಎಂದು ನೋಡೋಣ.
ಮೇಷ ರಾಶಿ (Aries):
ಈ ರಾಶಿಯವರಿಗೆ ಈ ವಾರ ಸಾಧಾರಣವಾಗಿರುತ್ತದೆ. ಆರೋಗ್ಯ, ಸಂಬಂಧಗಳು ಮತ್ತು ಸಂಪತ್ತಿನ ಬಗ್ಗೆ ವಿಶೇಷ ಗಮನ ಹರಿಸಬೇಕಾಗುತ್ತದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ತೋರಬೇಡಿ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಪೂರ್ಣಗೊಳಿಸಿ, ಇಲ್ಲದಿದ್ದರೆ ಮೇಲಧಿಕಾರಿಗಳ ಕೋಪಕ್ಕೆ ಗುರಿಯಾಗಬೇಕಾಬಹುದು. ಉದ್ಯಮಿಗಳು ಮತ್ತು ಉದ್ಯೋಗದಲ್ಲಿರುವವರಿಗೆ ವಾರದ ಉತ್ತರಾರ್ಧದಲ್ಲಿ ಸ್ವಲ್ಪ ಪರಿಹಾರ ಸಿಗುವ ಸಾಧ್ಯತೆಯಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಎಚ್ಚರಿಕೆ ಅಗತ್ಯ. ಪ್ರತಿ ಹಂತದಲ್ಲೂ ನಿಮ್ಮ ಸಂಗಾತಿಯ ಬೆಂಬಲ ಸಿಗುತ್ತದೆ.

ವೃಷಭ ರಾಶಿ (Taurus):
ಈ ವಾರ ವೃಷಭ ರಾಶಿಯವರಿಗೆ ಶುಭ ಮತ್ತು ಅದೃಷ್ಟ ತರುತ್ತದೆ. ಪ್ರತಿಯೊಂದು ಪ್ರಯತ್ನದಲ್ಲೂ ಅಪೇಕ್ಷಿತ ಯಶಸ್ಸು ಮತ್ತು ಪ್ರಗತಿ ಸಿಗುವುದು. ಉದ್ಯಮಿಗಳು ನಿರೀಕ್ಷೆಗಿಂತ ಹೆಚ್ಚಿನ ಲಾಭವನ್ನು ಪಡೆಯುವ ನಿರೀಕ್ಷೆಯಿದೆ. ದೀರ್ಘಕಾಲದಿಂದ ಸ್ಥಗಿತಗೊಂಡ ಯೋಜನೆಗಳು ನಿರೀಕ್ಷೆಯಂತೆ ಪ್ರಗತಿ ಸಾಧಿಸುವುದು. ಆರ್ಥಿಕವಾಗಿ, ಈ ವಾರ ನಿಮಗೆ ಅತ್ಯಂತ ಶುಭವಾಗಿರುತ್ತದೆ. ಉದ್ಯೋಗಿಗಳಿಗೆ ಹೆಚ್ಚುವರಿ ಆದಾಯದ ಮೂಲಗಳು ಹುಟ್ಟಿಕೊಳ್ಳುವುದು. ನ್ಯಾಯಾಲಯ ಪ್ರಕರಣಗಳಲ್ಲಿ ಅನಿರೀಕ್ಷಿತ ಯಶಸ್ಸು ಸಿಗುವ ಸಾಧ್ಯತೆಯಿದೆ.
ಮಿಥುನ ರಾಶಿ (Gemini):
ಮಿಥುನ ರಾಶಿಯವರು ತಮ್ಮ ವೃತ್ತಿ ಮತ್ತು ವ್ಯವಹಾರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಈ ವಾರ ಹೆಚ್ಚು ಶ್ರಮಿಸಬೇಕಾಗಬಹುದು. ನಿಮ್ಮ ಪ್ರಯತ್ನಗಳು ಅಂತಿಮವಾಗಿ ಯಶಸ್ವಿಯಾಗುತ್ತವೆ. ಖ್ಯಾತಿ ಹೆಚ್ಚಾಗುತ್ತದೆ. ವಾರದ ಮೊದಲಾರ್ಧ ಸಂತೋಷದಿಂದಲೇ ಕಳೆಯುವಿರಿ. ನಂತರ ಸಮಯ ಸವಾಲಿನಿಂದ ಕೂಡಿರುವುದು. ಈ ಸಮಯದಲ್ಲಿ ವಿವಾದಗಳು ಹೆಚ್ಚಾಗಬಹುದು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವುದು. ವೃತ್ತಿ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ.
ಕರ್ಕಾಟಕ ರಾಶಿ (Cancer):
ಈ ವಾರ ಅತ್ಯಂತ ಶುಭವಾಗಿರುತ್ತದೆ. ಬಹಳ ದಿನಗಳಿಂದ ಪೂರ್ಣಗೊಳಿಸಲು ಕಾಯುತ್ತಿದ್ದ ಕೆಲಸದಲ್ಲಿ ಯಶಸ್ಸು ಸಿಗುವುದು. ಈ ವಾರ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಿರಲಿದೆ. ಉದ್ಯೋಗದಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುವ ಸಾಧ್ಯತೆಗಳಿವೆ. ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗುವುದು. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರುತ್ತದೆ.
ಸಿಂಹ ರಾಶಿ (Leo):
ಈ ವಾರ ಫಲಪ್ರದವಾಗಿರುತ್ತದೆ . ಕುಟುಂಬ ಮತ್ತು ಹಿತೈಷಿಗಳ ಬೆಂಬಲದೊಂದಿಗೆ, ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಏರಿಳಿತಗಳು ಇರುತ್ತವೆ. ಎಲ್ಲಾ ಅಡೆತಡೆಗಳನ್ನು ನಿವಾರಿಸಿ ಯಶಸ್ಸಿನ ಹಾದಿಯನ್ನು ಕಂಡುಕೊಳ್ಳುವಿರಿ. ಹಿಂದಿನ ಹೂಡಿಕೆಗಳು ಲಾಭದಾಯಕವಾಗಿರುವುದು. ವಿದ್ಯಾರ್ಥಿಗಳು ತಮ್ಮ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಯತ್ನ ಮತ್ತು ಶ್ರಮವನ್ನು ಪಡಬೇಕಾಗುತ್ತದೆ.
ಕನ್ಯಾ ರಾಶಿ (Virgo):
ಅದೃಷ್ಟದ ಕೊರತೆಯಿಂದ ಸಣ್ಣ ಕೆಲಸಗಳನ್ನು ಪೂರ್ಣಗೊಳಿಸಲು ಕೂಡಾ ಹೆಚ್ಚು ಶ್ರಮ ಪಡಬೇಕಾಗಬಹುದು.ವಾರದ ಮೊದಲಾರ್ಧದಲ್ಲಿ ನ್ಯಾಯಾಲಯದ ಪ್ರಕರಣಗಳಲ್ಲಿ ನಿಧಾನಗತಿಯ ಪ್ರಗತಿಯಾಗುವುದು. ಉದ್ಯೋಗದಲ್ಲಿರುವವರಿಗೆ ವಾರದ ಮಧ್ಯ ಸ್ವಲ್ಪ ಸವಾಲಿನಿಂದ ಕೂಡಿರುವುದು. ಅನಗತ್ಯ ಜವಾಬ್ದಾರಿಗಳಿಂದ ಕಿರಿ ಕಿರಿ ಉಂಟಾಗುವುದು.
ತುಲಾ ರಾಶಿ (Libra):
ಈ ವಾರ ಅತ್ಯಂತ ಶುಭ ಮತ್ತು ಪ್ರಯೋಜನಕಾರಿಯಾಗಲಿದೆ . ಉದ್ಯೋಗದಲ್ಲಿರುವವರು ತಮ್ಮ ಅಪೇಕ್ಷಿತ ಸ್ಥಾನವನ್ನುಅಲಂಕರಿಸುವಿರಿ. ಉದ್ಯೋಗ ಬದಲಾವಣೆ ಅಥವಾ ವರ್ಗಾವಣೆಗಾಗಿ ಕಾಯುತ್ತಿದ್ದರೆ ನಿಮ್ಮ ಆಸೆ ಈಡೇರಬಹುದು. ಹೊಸ ವ್ಯವಹಾರವನ್ನು ಪ್ರಾರಂಭಿಸಲು ಉತ್ತಮ ವಾರ. ವಿದೇಶ ಪ್ರವಾಸದ ಸಾಧ್ಯತೆಯೂ ಇದೆ. ಈ ವಾರ ತಾಳ್ಮೆ ಮತ್ತು ವಿವೇಚನೆಯಿಂದ ಸವಾಲುಗಳನ್ನು ಎದುರಿಸಿದರೆ, ಜೀವನದ ಪ್ರತಿಯೊಂದು ಅಂಶದಲ್ಲೂ ಯಶಸ್ಸು ಸಿಗುವುದು.
ವೃಶ್ಚಿಕ ರಾಶಿ (Scorpio):
ಈ ವಾರ ವೃಶ್ಚಿಕ ರಾಶಿಯವರು ತಮ್ಮ ಕೋಪ ಮತ್ತು ಅಹಂಕಾರವನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು. ಹಾಗಿದ್ದರೆ ಮಾತ್ರ ಜೀವನದ ಪ್ರತಿಯೊಂದು ಅಂಶದಲ್ಲೂ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಸಿಗುವುದು. ಈ ವಾರ ವೃಶ್ಚಿಕ ರಾಶಿಯವರಿಗೆ ಪ್ರಗತಿಗೆ ಹೊಸ ಅವಕಾಶಗಳು ತೆರೆದುಕೊಳ್ಳುವುದು. ವ್ಯವಹಾರವನ್ನು ವಿಸ್ತರಿಸಲು ಉತ್ತಮ ಅವಕಾಶ ಸಿಗುವುದು. ಹಳೆಯ ವಿವಾದಗಳಿಗೆ ಪರಿಹಾರ ಸಿಗುವುದು.
ಧನು ರಾಶಿ (Sagitarius):
ಈ ವಾರ ನಿಮಗೆ ಮಿಶ್ರ ಫಲವನ್ನು ನೀಡುವುದು. ಹಾಗಂತ ಯಾರ ಜೊತೆಗೂ ವಾದಕ್ಕೆ ಇಳಿಯಬೇಡಿ. ನಿಮ್ಮ ವಿರೋಧಿಗಳು ಸಕ್ರಿಯರಾಗಿರುತ್ತಾರೆ ಮತ್ತು ನಿಮ್ಮ ಕೆಲಸಕ್ಕೆ ಅಡ್ಡಿಪಡಿಸಲು ಪ್ರಯತ್ನಿಸುತ್ತಾರೆ. ಅಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ವ್ಯವಹಾರದಲ್ಲಿದ್ದರೆ, ಅನಗತ್ಯ ಪ್ರಯಾಣವನ್ನು ತಪ್ಪಿಸುವುದು ಉತ್ತಮ. ಹಣಕಾಸಿನ ವಹಿವಾಟುಗಳಲ್ಲಿ ತೀವ್ರ ಎಚ್ಚರಿಕೆ ವಹಿಸಿ. ಆರೋಗ್ಯ ಮತ್ತು ಸಂಬಂಧಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ.
ಮಕರ ರಾಶಿ (Capricorn):
ಎಲ್ಲಾ ಕೆಲಸದಲ್ಲಿಯೂ ಎಚ್ಚರಿಕೆ ಅಗತ್ಯ. ವೃತ್ತಿಯಾಗಿರಲಿ ಅಥವಾ ವ್ಯವಹಾರವಾಗಿರಲಿ, ನಿಮ್ಮ ಕೆಲಸಗಳನ್ನು ಎಚ್ಚರಿಕೆಯಿಂದ ಮತ್ತು ಸಮಯಕ್ಕೆ ಸರಿಯಾಗಿ ನಿರ್ವಹಿಸಬೇಕು. ಇಲ್ಲದಿದ್ದರೆ ನಷ್ಟ ಮತ್ತು ಅವಮಾನ ಎರಡನ್ನೂ ಎದುರಿಸಬೇಕಾಗುತ್ತದೆ. ಈ ವಾರ, ಕೆಲಸದಲ್ಲಿ ಹಿರಿಯರು ಮತ್ತು ಕಿರಿಯರೊಂದಿಗೆ ಸಾಮರಸ್ಯದಿಂದ ಕೆಲಸ ಮಾಡಬೇಕಾಗುತ್ತದೆ. ಯಾವುದೇ ಅಪಾಯಕಾರಿ ಹೂಡಿಕೆಗಳಿಂದ ದೂರವಿರಿ.
ಕುಂಭ ರಾಶಿ (Aquarous):
ಕುಂಭ ರಾಶಿಯವರಿಗೆ ಈ ವಾರ ಸರಾಸರಿಯಾಗಿರಲಿದೆ. ಯಾವ ಕೆಲಸದಲ್ಲಿಯೂ ನಿರ್ಲಕ್ಷ್ಯ ವಹಿಸಬೇಡಿ. ಈ ವಾರ ಆರ್ಥಿಕ ಮತ್ತು ಮಾನಸಿಕ ಸಂಕಷ್ಟಕ್ಕೆ ಕಾರಣವಾಗಬಹುದು. ಉದ್ಯಮಿಗಳು ಮತ್ತು ವೃತ್ತಿಪರರಿಗೆ ಪೈಪೋಟಿ ಮುಂದುವರಿಯುವ ಸಾಧ್ಯತೆಯಿದೆ. ಕುಂಭ ರಾಶಿಯವರು ಈ ವಾರ ತಮ್ಮ ಅತ್ತೆ-ಮಾವಂದಿರಿಂದ ವಿಶೇಷ ಬೆಂಬಲವನ್ನು ಪಡೆಯುವ ಸಾಧ್ಯತೆಯಿದೆ.
ಮೀನ ರಾಶಿ (Pisces):
ಈ ವಾರ, ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಈ ವಾರ ನೀವು ಪ್ರಮುಖ ಜವಾಬ್ದಾರಿಗಳನ್ನು ಪಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಗತಿ ಹೊಂದುವ ವಾರ. ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರುವಿರಿ. ನಿಮ್ಮ ಗೌರವ ಹೆಚ್ಚಾಗುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುವುದು. ಪ್ರೇಮ ಸಂಬಂಧಗಳು ಆಳವಾಗುತ್ತವೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.
(ಬರಹ: ರಂಜಿತಾ ಆರ್.ಕೆ.)


Click it and Unblock the Notifications
