DCET 2026: ಡಿಪ್ಲೊಮಾ ಸಿಇಟಿ ಫಲಿತಾಂಶ ಪ್ರಕಟ; ರ‍್ಯಾಂಕ್ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಲಿಂಕ್

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ರಾಜ್ಯದ ಡಿಪ್ಲೊಮಾ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಕೋರ್ಸ್‌ಗಳ ಎರಡನೇ ವರ್ಷಕ್ಕೆ ಅಥವಾ 3ನೇ ಸೆಮಿಸ್ಟರ್‌ಗೆ ನೇರ ಪ್ರವೇಶ ಕಲ್ಪಿಸುವ ಉದ್ದೇಶದಿಂದ ನಡೆಸಲಾಗಿದ್ದ 'ಡಿಪ್ಲೊಮಾ ಸಾಮಾನ್ಯ ಪ್ರವೇಶ ಪರೀಕ್ಷೆ' ಫಲಿತಾಂಶವನ್ನು ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಈ ಕುರಿತು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಾದ ಹೆಚ್. ಪ್ರಸನ್ನ ಐಎಎಸ್ ಅವರು ಕೆಇಎ ಅಧಿಕೃತ ಎಕ್ಸ್ ಖಾತೆಯ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ಡಿಪ್ಲೊಮಾ ವ್ಯಾಸಂಗ ಮುಗಿಸಿ ಉನ್ನತ ಶಿಕ್ಷಣವಾಗಿ ಎಂಜಿನಿಯರಿಂಗ್ ಪದವಿ ಪಡೆಯುವ ಕನಸು ಕಾಣುತ್ತಿರುವ ಸಾವಿರಾರು ವಿದ್ಯಾರ್ಥಿಗಳು ಈ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿದ್ದರು. ಇದೀಗ ಕೆಇಎಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅಭ್ಯರ್ಥಿಗಳ ರ‍್ಯಾಂಕ್ ಪ್ರಕಟವಾಗಿದ್ದು, ವಿದ್ಯಾರ್ಥಿಗಳು ತಮ್ಮ ಮಾರ್ಕ್ಸ್‌ ಕಾರ್ಡ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

DCET 2026

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಎಂಜಿನಿಯರಿಂಗ್ ಪ್ರವೇಶ

ಸಾಮಾನ್ಯವಾಗಿ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳು ಸಿಇಟಿ ಬರೆದು ಮೊದಲನೇ ವರ್ಷದ ಎಂಜಿನಿಯರಿಂಗ್ ಸೇರುತ್ತಾರೆ. ಆದರೆ, ಮೂರು ವರ್ಷಗಳ ಡಿಪ್ಲೊಮಾ ಕೋರ್ಸ್ ಪೂರೈಸಿದ ವಿದ್ಯಾರ್ಥಿಗಳಿಗೆ ನೇರವಾಗಿ ಎರಡನೇ ವರ್ಷದ ಬಿ.ಇ ಅಥವಾ ಬಿ.ಟೆಕ್ ಕೋರ್ಸ್‌ಗಳಿಗೆ ಸೇರಲು ಅವಕಾಶವಿರುತ್ತದೆ. ಇದಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಪ್ರತಿ ವರ್ಷ DCET ಪರೀಕ್ಷೆಯನ್ನು ನಡೆಸುತ್ತದೆ. ಈ ವರ್ಷದ ಡಿಸಿಇಟಿ-2026 ಪರೀಕ್ಷೆಗಳು ಯಶಸ್ವಿಯಾಗಿ ಮುಗಿದಿದ್ದು, ಇದೀಗ ಮೆರಿಟ್ ಪಟ್ಟಿ ಹಾಗೂ ಫಲಿತಾಂಶ ಪ್ರಕಟವಾಗಿದೆ.

ಫಲಿತಾಂಶ ಮತ್ತು ರ‍್ಯಾಂಕ್ ಪರಿಶೀಲಿಸುವುದು ಹೇಗೆ?

ಅಭ್ಯರ್ಥಿಗಳು ತಮ್ಮ ಡಿಸಿಇಟಿ ರ‍್ಯಾಂಕ್ ಅನ್ನು ಪರಿಶೀಲಿಸಲು ಕೆಇಎ ಒದಗಿಸಿರುವ ಅಧಿಕೃತ ಲಿಂಕ್ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ

1. ಕೆಇಎ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಲಿಂಕ್: https://cetonline.karnataka.gov.in/ugcetrank2025/dcetcheckresult.aspx ಮೂಲಕ ನೇರವಾಗಿ ಲಾಗಿನ್ ಆಗಿ ಫಲಿತಾಂಶ ವೀಕ್ಷಿಸಬಹುದು.

2. ಮುಖಪುಟದಲ್ಲಿರುವ 'DCET-2026 Result' ಅಥವಾ ರ‍್ಯಾಂಕ್ ಕಾರ್ಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ.

3. ನಿಮ್ಮ DCET ನೋಂದಣಿ ಸಂಖ್ಯೆ ಹಾಗೂ ಜನ್ಮ ದಿನಾಂಕವನ್ನು ಹಾಕಿ.

4. 'Submit' ಒತ್ತಿದ ತಕ್ಷಣ ನಿಮ್ಮ ರ‍್ಯಾಂಕ್ ಕಾರ್ಡ್ ಬರುತ್ತದೆ.

5. ಮುಂದಿನ ಪ್ರವೇಶ ಪ್ರಕ್ರಿಯೆಗೆ ಈ ಫಲಿತಾಂಶದ ಪ್ರತಿಯನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಮೆರಿಟ್ ಪಟ್ಟಿ ಲೆಕ್ಕಾಚಾರ ಹೇಗೆ?

ಕೇವಲ ಪ್ರವೇಶ ಪರೀಕ್ಷೆಯ ಅಂಕಗಳನ್ನಷ್ಟೇ ಪರಿಗಣಿಸದೆ, ವಿದ್ಯಾರ್ಥಿಗಳ ಒಟ್ಟಾರೆ ಶೈಕ್ಷಣಿಕ ಸಾಧನೆಗೆ ಒತ್ತು ನೀಡಲಾಗಿದೆ. ಅಭ್ಯರ್ಥಿಗಳು ಡಿಸಿಇಟಿ ಪ್ರವೇಶ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳಿಗೆ ಶೇಕಡಾ 50ರಷ್ಟು ಹಾಗೂ ತಮ್ಮ ಡಿಪ್ಲೊಮಾ ಕೋರ್ಸ್‌ನ ಅಂತಿಮ ವರ್ಷದ (5ನೇ ಮತ್ತು 6ನೇ ಸೆಮಿಸ್ಟರ್) ಪರೀಕ್ಷೆಯಲ್ಲಿ ಪಡೆದ ಅಂಕಗಳಿಗೆ ಶೇಕಡಾ 50ರಷ್ಟು ಪ್ರಾಮುಖ್ಯತೆ ನೀಡಿ ಈ ಅಂತಿಮ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಮುಂದೇನು?

‌ಫಲಿತಾಂಶ ಪ್ರಕಟವಾದ ನಂತರ, ಮುಂದಿನ ಪ್ರಮುಖ ಹಂತವೆಂದರೆ ಸೀಟು ಹಂಚಿಕೆ ಪ್ರಕ್ರಿಯೆ. ಮೆರಿಟ್ ಪಟ್ಟಿಯಲ್ಲಿ ಉತ್ತಮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳು ಆನ್‌ಲೈನ್ ಕೌನ್ಸೆಲಿಂಗ್‌ಗೆ ಭಾಗವಹಿಸಬಹುದು. ಇದಾದ ಕೆಲವೇ ದಿನಗಳಲ್ಲಿ ದಾಖಲಾತಿ ಪರಿಶೀಲನೆ, ಕಾಲೇಜು ಮತ್ತು ಕೋರ್ಸ್ ಆಯ್ಕೆಗೆ ಆಪ್ಷನ್ ಎಂಟ್ರಿ ಹಾಗೂ ಮೊದಲ ಸುತ್ತಿನ ಸೀಟು ಹಂಚಿಕೆಯ ದಿನಾಂಕಗಳನ್ನು ಕೆಇಎ ಬಿಡುಗಡೆ ಮಾಡಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+