Get Updates
Get notified of breaking news, exclusive insights, and must-see stories!

Yelahanka Elections: ಬಿಜೆಪಿಯ ಗೆಲುವಿನ ಓಟಕ್ಕೆ ತಡೆ ಹಾಕಲು ಜೆಡಿಎಸ್‌ ತಯಾರಿ

ಬೆಂಗಳೂರು ನಗರದ ಉತ್ತರ ಭಾಗದಲ್ಲಿರುವ, ಭೂಮಿಗೆ ಬಂಗಾರದ ಬೆಲೆ ಇರುವ ವಿಧಾನಸಭಾ ಕ್ಷೇತ್ರ ಯಲಹಂಕ. ಕರ್ನಾಟಕದ ರಾಜಧಾನಿ ಬೆಂಗಳೂರಿನ ಉಪ ನಗರವಾದರೂ ಹಲವಾರು ಸಮಸ್ಯೆಗಳನ್ನು ಕ್ಷೇತ್ರ ಎದುರಿಸುತ್ತಿದೆ. ಭಾರತೀಯ ವಾಯುಸೇನೆಯ ನೆಲೆಯನ್ನು ಕ್ಷೇತ್ರ ಒಳಗೊಂಡಿದೆ. ಇಲ್ಲಿ ನಡೆಯುವ ಏರ್‌ ಶೋ ನೋಡಲು ದೇಶ, ವಿದೇಶದ ಜನರು ಆಗಮಿಸುತ್ತಾರೆ. ಇಲ್ಲಿನ ಸಂಚಾರ ದಟ್ಟಣೆಯ ಕಿರಿಕಿರಿಗೆ ಜನರು ಹೈರಾಣಾಗಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮಹತ್ವಾಕಾಂಕ್ಷಿ ಯೋಜನೆಯಾದ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಇದೇ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಬಡಾವಣೆ ನಿರ್ಮಾಣಕ್ಕಾಗಿ ರೈತರು ಜಮೀನುಗಳನ್ನು ನೀಡಿ, ಕೊನೆಗೆ ಭೂ ಸ್ವಾಧೀನ ವಿವಾದ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕೋರ್ಟ್‌ ಸೂಚನೆ ಬಳಿಕ ಈಗ ಬಡಾವಣೆ ನಿರ್ಮಾಣ ಕಾರ್ಯಕ್ಕೆ ಕೋರ್ಟ್‌ ಉಸ್ತುವಾರಿಯಲ್ಲಿಯೇ ಚಾಲನೆ ಕೊಡಲಾಗಿದೆ.

yelahanka assembly contingency map

ಡಾ. ಕೆ. ಶಿವರಾಮ ಕಾರಂತ ಬಡಾವಣೆ ವಿಚಾರ ಈ ಬಾರಿ ಚುನಾವಣೆಯಲ್ಲಿ ಪ್ರಮುಖ ಅಂಶವೂ ಆಗಬಹುದು. ಬೆಂಗಳೂರು ಉತ್ತರ ತಾಲೂಕಿನ 17 ಗ್ರಾಮಗಳ ರೈತರು ಡಾ. ಕೆ. ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿ ಮಾಡಲು ಸ್ವಾಧೀನ ಮಾಡಿಕೊಂಡಿರುವ 3546 ಎಕರೆ 12 ಗುಂಟೆ ಜಮೀನಿಗೆ 2013ರ ಪುನರ್ ವಸತಿ, ಪುನರ್ ವ್ಯವಸ್ಥೆಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯ್ದೆ ಅನ್ವಯ ಪರಿಹಾರ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಯಲಹಂಕ ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ಎಸ್. ಆರ್. ವಿಶ್ವನಾಥ್. ಡಾ. ಕೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕೆ ಭೂಮಿ ನೀಡಿರುವ ರೈತರಿಗೆ ಆದ್ಯತೆ ಮೇಲೆ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಬಡಾವಣೆ ರಚನೆ ಸಂಬಂಧ ಹಿಂದಿನ ಸರ್ಕಾರಗಳು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪುಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದವು. ಇದೀಗ ಆ ನಿರ್ಧಾರಗಳಂತೆ ಬಡಾವಣೆ ನಿರ್ಮಾಣವಾಗುತ್ತಿದೆ ಎಂದು ಹೇಳಿದ್ದಾರೆ.

ರಾಜಕೀಯ ಮಾಹಿತಿ; ಯಲಹಂಕ ಕ್ಷೇತ್ರದಲ್ಲಿ 2004ರಲ್ಲಿ ಕಾಂಗ್ರೆಸ್‌ನ ಪ್ರಸನ್ನ ಕುಮಾರ್ ಬಿ. 144,806 ಮತಗಳನ್ನು ಪಡೆದು ಜಯಗಳಿಸಿದ್ದರು. ಬಿಜೆಪಿಯ ಮುನಿಕೃಷ್ಣ ಸಿ. 130,494 ಮತ ಪಡೆದು ಸೋಲು ಕಂಡಿದ್ದರು. ಆದರೆ 2018ರ ಚುನಾವಣೆಯಲ್ಲಿ ಬಿಜೆಪಿಯ ಎಸ್. ಆರ್. ವಿಶ್ವನಾಥ್ ಕ್ಷೇತ್ರವನ್ನು ಬಿಜೆಪಿಗೆ ತಂದು ಕೊಟ್ಟರು. ಬಳಿಕ ನಡೆದ ಮೂರು ಚುನಾವಣೆಯಲ್ಲಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದ್ದಾರೆ. ಆದರೆ ಅವರು ಎಂದು ಸಚಿವರಾಗಿಲ್ಲ ಎಂಬುದು ಅಭಿಮಾನಿಗಳ ಕೊರಗು.

2008ರಲ್ಲಿ ಬಿಜೆಪಿಯ ಎಸ್. ಆರ್. ವಿಶ್ವನಾಥ್ 60,975 ಮತಗಳನ್ನು ಪಡೆದು ಕಾಂಗ್ರೆಸ್‌ನ ಬಿ. ಚಂದ್ರಪ್ಪ (44,953) ಸೋಲಿಸಿದರು. 2013ರಲ್ಲಿ ಎಸ್. ಆರ್. ವಿಶ್ವನಾಥ್ 75,507 ಮತಗಳನ್ನು ಪಡೆದು ಜೆಡಿಎಸ್‌ನ ಬಿ. ಚಂದ್ರಪ್ಪ (57,110) ಸೋಲಿಸಿದರು. ಕಾಂಗ್ರೆಸ್‌ನ ಎಂ. ಎನ್. ಗೋಪಾಲಕೃಷ್ಣ (52,372) 3ನೇ ಸ್ಥಾನ ಪಡೆದರು. 2018ರ ಚುನಾವಣೆಯಲ್ಲಿ ಎಸ್. ಆರ್. ವಿಶ್ವನಾಥ್ 120,110 ಮತಗಳನ್ನು ಪಡೆದು ಜಯಗಳಿಸುವ ಮೂಲಕ ಹ್ಯಾಟ್ರಿಕ್ ಬಾರಿಸಿದ್ದಾರೆ. ಜೆಡಿಎಸ್‌ನ ಎ. ಎಂ. ಹನುಮಂತೇಗೌಡ 77,607 ಮತಗಳನ್ನು ಪಡೆದು 2ನೇ ಸ್ಥಾನಗಳಿಸಿದರು. ಕಾಂಗ್ರೆಸ್‌ನ ಗೋಪಾಲಕೃಷ್ಣ ಎಂ. ಎನ್. (41,449) ಮೂರನೇ ಸ್ಥಾನ ಪಡೆದರು.

yelahanka bjp mla sr vishwanath

ಹ್ಯಾಟ್ರಿಕ್ ಹಿರೋ ಎಸ್. ಆರ್. ವಿಶ್ವನಾಥ್ ಕಟ್ಟಿಹಾಕಲು ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ರೂಪಿಸಿವೆ. ಅದರಲ್ಲೂ 2008ರಲ್ಲಿ 37,070, 2013ರಲ್ಲಿ 57,110 ಮತ್ತು 2018ರಲ್ಲಿ 77,607 ಮತಗಳನ್ನು ಪಡೆದಿರುವ ಜೆಡಿಎಸ್ ಯಲಹಂಕದಲ್ಲಿ ಪಕ್ಷದ ಬಾವುಟ ಹಾರಿಸಲು ಚಿಂತನೆ ನಡೆಸುತ್ತಿದೆ. ಬಿಜೆಪಿಯಿಂದ ಎಸ್. ಆರ್. ವಿಶ್ವನಾಥ್ ಕಣಕ್ಕಿಳಿಯುವುದು ಖಚಿತವಾಗಿದೆ. ಆದರೆ ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳು ಯಾರು? ಎಂಬುದು ಕುತೂಹಲವಾಗಿದೆ. ಕಾಂಗ್ರೆಸ್ ಟಿಕೆಟ್ ಹಂಚಿಕೆ ಹಲವು ಆಕಾಂಕ್ಷಿಗಳ ಕಾರಣ ಕಗ್ಗಂಟಾಗಿದೆ. ಆದ್ದರಿಂದ 124 ಕ್ಷೇತ್ರಗಳ ಪಟ್ಟಿಯಲ್ಲಿ ಯಲಹಂಕ ಇಲ್ಲ.

ಕಾಂಗ್ರೆಸ್‌ ಟಿಕೆಟ್‌ಗಾಗಿ ಕೇಶವ ಬಿ. ರಾಜಣ್ಣ, ನಾಗರಾಜ ಗೌಡ, ಗೋಪಾಲಕೃಷ್ಣ ಎಂ. ಎನ್., ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲಾವಣ್ಯ ನರಸಿಂಹಮೂರ್ತಿ, ಪಿ. ಚಂದ್ರಪ್ಪ, ಗೋಪಿನಾಥ್ ಸೇರಿ 9ಕ್ಕೂ ಅಧಿಕ ಮಂದಿ ಅರ್ಜಿ ಹಾಕಿದ್ದಾರೆ. ಆಂತರಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ, ಟಿಕೆಟ್ ಹಂಚಿಕೆ ಮಾಡುವುದು ಸಹ ಪಕ್ಷದ ಪಾಲಿಗೆ ಸವಾಲಾಗಿದೆ. ಎಸ್. ಆರ್. ವಿಶ್ವನಾಥ್‌ಗೆ ಪ್ರಬಲ ಪೈಪೋಟಿ ಯಾರು? ನೀಡಬಹುದು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ಇದೆ.

ಯಲಹಂಕ ಕ್ಷೇತ್ರದಲ್ಲಿ ವಿವಿಧ ಸಮುದಾಯದ ಜನರಿದ್ದಾರೆ. ಆದರೆ ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಜೆಡಿಎಸ್ ಲೆಕ್ಕಾಚಾರವೇ ಬೇರೆಯಾಗಿದೆ. ಕಳೆದ ಬಾರಿ ಜೆಡಿಎಸ್‌ನ ಎ. ಎಂ. ಹನುಮಂತೇಗೌಡ 77,607 ಮತಗಳನ್ನು ಪಡೆದಿದ್ದರು. ಈ ಬಾರಿ ಪಕ್ಷವನ್ನು ಇನ್ನಷ್ಟು ಸಂಘಟಿಸಿ ಚುನಾವಣೆಗೆ ಹೋಗುವುದು ಜೆಡಿಎಸ್‌ ತಂತ್ರ. ನಿವೃತ್ತ ಡಿವೈಎಸ್ಪಿ ಎನ್. ಕೃಷ್ಣಪ್ಪ, ಮುನೇಗೌಡ ಅವರು ಸಹ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

Yelahanka karnataka elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎಸ್. ಆರ್. ವಿಶ್ವನಾಥ್ (ಬಿಜೆಪಿ) 120,110 ಎ. ಎಂ. ಹನುಮಂತೇ ಗೌಡ (ಜೆಡಿಎಸ್) 77,607
2013 ಎಸ್. ಆರ್. ವಿಶ್ವನಾಥ್ (ಬಿಜೆಪಿ) 75,507 ಬಿ. ಚಂದ್ರಪ್ಪ (ಜೆಡಿಎಸ್) 57,110
2008 ಎಸ್. ಆರ್. ವಿಶ್ವನಾಥ್ (ಬಿಜೆಪಿ) 60,975 ಬಿ. ಚಂದ್ರಪ್ಪ (ಕಾಂಗ್ರೆಸ್) 44,953

ಯಲಹಂಕ ಕ್ಷೇತ್ರದ ಒಟ್ಟು ಮತದಾರರು 4,07,217. ಪುರುಷರು 2,08,075, ಮಹಿಳೆಯರು 1,99,066. ಇತರರು 76.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+