Kudligi Elections : ಬಿಜೆಪಿ ಕಾಂಗ್ರೆಸ್ ನಡುವೆ ಭಾರೀ ಪೈಪೋಟಿ
ಕೂಡ್ಲಿಗಿ, ಮಾರ್ಚ್ 24: ನೂತನವಾಗಿ ರಚನೆಯಾದ ವಿಜಯನಗರ ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಏಕೈಕ ವಿಧಾನಸಭಾ ಕ್ಷೇತ್ರ ಕೂಡ್ಲಿಗಿ. ಬೆಂಗಳೂರಿಗೆ ಹೋಗುವ ಹೆದ್ದಾರಿಯಲ್ಲಿ ಕಂಡುಬರುವ ಕೂಡ್ಲಿಗಿ ಪಟ್ಟಣ ಧಾರ್ಮಿಕ, ಐತಿಹಾಸಿಕ, ರಾಜಕೀಯವಾಗಿ ಪ್ರಸಿದ್ಧಿ ಪಡೆದ ಸ್ಥಳ. 2023ರ ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಚಿತ್ರಣ ಇಲ್ಲಿದೆ.
ಕೂಡ್ಲಿಗಿ ತಾಲೂಕು ಮಧ್ಯದಲ್ಲಿ ಸಣ್ಣ ಬೆಟ್ಟಗುಡ್ಡಗಳನ್ನು ಹೊಂದಿದ್ದು, ಉಳಿದಂತೆ ಪ್ರಸ್ಥಭೂಮಿಯನ್ನು ಹೊಂದಿದೆ. ಕೆಂಪು-ಬಿಳಿ ಮಿಶ್ರಿತವಾದ ಮಣ್ಣನ್ನೂ ಭೂಮಿ ಹೊಂದಿದೆ. ಕೂಡ್ಲಿಗಿ ಮಹಾನ್ ಸ್ವತಂತ್ರ್ಯ ಪ್ರೇಮಿಗಳ ಕ್ಷೇತ್ರ. 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದುದರಲ್ಲಿ ಬಣಕಾರ ಸಿದ್ದಲಿಂಗಪ್ಪ, ಸುತ್ರಾವೆ ಗೋವಿಂದರಾವ್, ಗೊರ್ಲಿ ಶರಣಪ್ಪ, ಕೆಲಸಿಗರ ತಿಮ್ಮಪ್ಪ, ಪರಶುರಾಮಪ್ಪ, ಅಡವಿಗೌಡ, ಯಲಿಗಾರ ಅಜ್ಜಯ್ಯ, ಸಿರಿಗೆರೆ ರಾಮಶೆಟ್ಟಿ, ಡಾ.ನಂಜಪ್ಪ, ಉಜ್ಜಿನಿ ಸಿದ್ದನಗೌಡ, ಅಯ್ಯನಹಳ್ಳಿ ಕೊಟ್ರಯ್ಯ, ಉಜ್ಜಿನಿ ಮರುಳನಗೌಡ, ಗೂಳೆಪ್ಪ, ರಾಟೆ ರುದ್ರಪ್ಪ, ಹಾರಕಬಾವಿ ಬಸಯ್ಯ, ಮುಂತಾದವರು ಪ್ರಮುಖರು.

ದಿ.ಸುಮಿತ್ರಪ್ಪ ಎಂಬ ಹೋರಾಟಗಾರರು ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಅನುಯಾಯಿಯಾಗಿ ಅವರೊಂದಿಗೆ ಕಾರ್ಯನಿರ್ವಹಿಸಿದವರು. ಆ ಸಂದರ್ಭದಲ್ಲಿ ಭೂಗತರಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರೂ ಇದ್ದಾರೆ. ಕೂಡ್ಲಿಗಿ ಕೇಂದ್ರ ಸ್ಥಳದಿಂದ ಸುಮಾರು ೩ ಕಿ.ಮೀ ದೂರದಲ್ಲಿ ಇರುವ ಪುಟ್ಟ ಗ್ರಾಮ ಅಮರದೇವರಗುಡ್ದ. ಊರಿನ ಬೆಟ್ಟದ ಮೇಲೆ ಅಮರೇಶ್ವರಲಿಂಗವಿದ್ದು ಅದರಿಂದಲೇ ಊರಿಗೆ ಈ ಹೆಸರು ಬರಲು ಕಾರಣವೆಂದು ಜನರ ನಂಬಿಕೆ.
ಕೂಡ್ಲಿಗಿಯಲ್ಲಿ ಹಾಲಿ ಶಾಸಕರಾಗಿ ಬಿಜೆಪಿಯ ಎನ್ ವೈ ಗೋಪಾಲಕೃಷ್ಣ ಇದ್ದಾರೆ. ಕೂಡ್ಲಿಗಿ ಒಂದು ರೀತಿ ಆಚ್ಚರಿಗಳನ್ನು ನೀಡುವ ಕ್ಷೇತ್ರ. ಕೊನೆಯ ಸಂದರ್ಭದಲ್ಲಿ ಚುನಾವಣೆಯಲ್ಲಿ ಆಶ್ಚರ್ಯಕರವಾಗಿ ಪಕ್ಷದ ಅಭ್ಯರ್ಥಿಗಳ ಹೆಸರು ಘೋಷಿಸಿ ಜಯ ಗಳಿಸಿದ ನಿದರ್ಶನಗಳು ಅನೇಕ ಇಲ್ಲಿ ಇವೆ. 2018ರ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಗೆ ಕೆಲವೇ ದಿನಗಳಿರುವಾಗ ಎನ್.ವೈ. ಗೋಪಾಲಕೃಷ್ಣ ಅವರಿಗೆ ಕಾಂಗ್ರೆಸ್ ಟಿಕೆಟ್ ನಿರಾಕರಿಸಿತು. ಆಗ ಅವರು ಕೂಡ್ಲಿಗಿಗೆ ವಲಸೆ ಬಂದು ಬಿಜೆಪಿಯಿಂದ ನಾಮಪತ್ರ ಸಲ್ಲಿಸಿ ಗೆಲುವು ಸಾಧಿಸಿದ್ದರು.

1999ರ ನಂತರ ಕಾಂಗ್ರೆಸ್ ಇಲ್ಲಿ ಗೆದ್ದಿಲ್ಲ. 1999ರ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಕೂಡ್ಲಿಗಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸಿರಾಜ್ ಶೇಖ್ ಜಯ ಗಳಿಸಿದ್ದರು. ಕ್ಷೇತ್ರ ಪುನರ್ ವಿಂಗಡಣೆ ನಂತರ ಈ ಕ್ಷೇತ್ರ ಎಸ್ಟಿಗೆ ಮೀಸಲಾಯಿತು. ಅಲ್ಲಿಂದ ಕಾಂಗ್ರೆಸ್ ಇಲ್ಲಿ ಗೆದ್ದಿಲ್ಲ. ಕಾಂಗ್ರೆಸ್‌ನಿಂದ 2018ರಲ್ಲಿ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗುಜ್ಜಲ್ ರಘು ಸೋತಿದ್ದಾರೆ. ಹೀಗಿದ್ದರೂ ಈ ಸಲ ಅವರು ಟಿಕೆಟ್ ಕೋರಿ ಪುನಃ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಕಷ್ಟ ಎನ್ನಲಾಗಿದೆ.
ಇನ್ನೂ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಲೋಕೇಶ್ ನಾಯಕ, ಜಿ. ನಾಗಮಣಿ, ಕಾವಲಿ ಶಿವಪ್ಪ ನಾಯಕ, ನರಸಿಂಹಗಿರಿ ವೆಂಕಟೇಶ್, ಡಾ. ಎನ್.ಟಿ. ಶ್ರೀನಿವಾಸ್, ಕಮಲಾಪುರದ ಗುರುರಾಜ ನಾಯಕ, ಬಳ್ಳಾರಿ ಪರಮೇಶ್ವರಪ್ಪ, ಹರಪನಹಳ್ಳಿಯ ಪರಮೇಶ್ವರಪ್ಪ ಇದ್ದಾರೆ. ಕಾಂಗ್ರೆಸ್ ಈ ಬಾರಿ ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲಿದೆ ಎಂದು ಮೂಲಗಳು ತಿಳಿಸಿವೆ. ಇನ್ನೂ ಕೂಡ್ಲಿಗಿಯಿಂದ ಟಿಕೆಟ್ ಬಯಸಿದವರಲ್ಲಿ ಮಹಿಳೆ ನಾಗಮಣಿ ಒಬ್ಬರೇ. ಹೀಗಾಗಿ ಅವರಿಗೆ ಟಿಕೆಟ್ ಸಿಕ್ಕರೂ ಆಶ್ಚರ್ಯವಿಲ್ಲ.
Kudligi Karnataka Elections
| ವರ್ಷ | ಗೆದ್ದವರು | ಮತಗಳು | ಸೋತವರು | ಮತಗಳು |
| 2018 | ಎನ್ ವೈ ಗೋಪಾಲಕೃಷ್ಣ(ಬಿಜೆಪಿ) | 50,085 | ಎನ್ ಟಿ ಬೊಮ್ಮಣ್ಣ(ಜೆಡಿಎಸ್) | 39,272 |
| 2013 | ಬಿ ನಾಗೇಂದ್ರ(ಪಕ್ಷೇತರ) | 71,477 | ಎಸ್ ವೆಂಕಟೇಶ್(ಕಾಂಗ್ರೆಸ್) | 46,674 |
| 2008 | ಬಿ ನಾಗೇಂದ್ರ(ಬಿಜೆಪಿ) | 54,443 | ಎಸ್ ವೆಂಕಟೇಶ್(ಕಾಂಗ್ರೆಸ್) | 45,686 |
2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಲೋಕೇಶ್ ನಾಯಕ ಅವರು ಟಿಕೆಟ್ ಸಿಗದಿದ್ದಾಗ ಪಕ್ಷದಿಂದ ಹೊರಬಂದು ಪಕ್ಷೇತರರಾಗಿ ಸ್ಪರ್ಧಿಸಿ 18 ಸಾವಿರ ಮತಗಳನ್ನು ಪಡೆದಿದ್ದರು. ಆದರೆ ಗೆಲ್ಲಲಾಗಲಿಲ್ಲ. ಬಿಜೆಪಿಯಿಂದ ಈ ಬಾರಿಯೂ ಹಾಲಿ ಶಾಸಕ ಎನ್ ವೈ ಗೋಪಾಲಕೃಷ್ಣ ಅವರಿಗೆ ಟಿಕೆಟ್ ಪಕ್ಕ ಎನ್ನಲಾಗುತ್ತಿದೆ. ಆದರೆ ಕೊನೆ ಕ್ಷಣದಲ್ಲಿ ಅಲ್ಲಿಯೂ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದರಿಂದ ಕೊನೆ ಕ್ಷಣದಲ್ಲಿ ಯಾರಿಗೆ ಕೊಟ್ಟರೂ ಅಚ್ಚರಿ ಇಲ್ಲ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications