Afzalpur Elections: ಗುತ್ತೇದಾರ ಸಹೋದರರ ಗುದ್ದಾಟದಲ್ಲಿ ಮತ್ತೆ ಕಾಂಗ್ರೆಸ್‌ಗೆ ಲಾಭ?

ಕಲಬುರಗಿ, ಮಾರ್ಚ್‌ 24: ಅಫಜಲಪುರ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದ್ದು ಗುಲ್ಬರ್ಗ ಲೋಕಸಭಾ ಕ್ಷೇತ್ರದ ಭಾಗವಾಗಿದೆ. 1951 ಈ ವಿಧಾನಸಭಾ ಕ್ಷೇತ್ರವು ಅಸ್ತಿತ್ವಕ್ಕೆ ಬಂದಿದೆ.

ಇದು ಸಾಮಾನ್ಯ ವರ್ಗದ ವಿಧಾನಸಭಾ ಕ್ಷೇತ್ರವಾಗಿದೆ. ಇದು ಕಲಬುರಗಿ ಜಿಲ್ಲೆಯಲ್ಲಿದೆ ಮತ್ತು ಇದು ಕಲಬುರಗಿ ಸಂಸತ್ತಿನ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ.

afjalpur constituency map

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಎಸ್‌ಸಿ ಮತದಾರರು ಸರಿ ಸುಮಾರು 44,068 ಆಗಿದ್ದು, ಜನಗಣತಿಯ ಪ್ರಕಾರ ಇದು ಸುಮಾರು ಶೇ 19.79 ರಷ್ಟಿದ್ದಾರೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ST ಮತದಾರರು ಸರಿ ಸುಮಾರು 3,006 ರಷ್ಟಿದ್ದು, ಜನಗಣತಿಯ ಪ್ರಕಾರ, ಶೇ 1.3 ರಷ್ಟಿದ್ದಾರೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಸರಿ ಸುಮಾರು 36,296 ರಷ್ಟಿದ್ದಾರೆ. ಇದು ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು ಶೇ 16.3 ರಷ್ಟಿದೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ಗ್ರಾಮೀಣ ಮತದಾರರು ಸರಿ ಸುಮಾರು 2,00,855 ರಷ್ಟಿದ್ದಾರೆ. ಇದು ಜನಗಣತಿಯ ಪ್ರಕಾರ ಶೇ 90.2 ರಷ್ಟಿದ್ದಾರೆ.

ಅಫಜಲಪುರ ವಿಧಾನಸಭೆ ಕ್ಷೇತ್ರದಲ್ಲಿ ನಗರ ಮತದಾರರು ಸರಿ ಸುಮಾರು 21,822 ರಷ್ಟಿದ್ದಾರೆ. ಇದು ಜನಗಣತಿಯ ಪ್ರಕಾರ ಶೇ 9.8 ರಷ್ಟಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ವಿಧಾನಸಭೆಯ ಒಟ್ಟು ಮತದಾರರು ಸಂಖ್ಯೆ 2,22,677 ರಷ್ಟಾಗಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ವಿಧಾನಸಭೆಯ ಮತಗಟ್ಟೆಗಳ ಸಂಖ್ಯೆ 251 ರಷ್ಟಿದೆ.

2019 ರ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರ ವಿಧಾನಸಭೆಯ ಮತದಾರರ ಮತದಾನ ಶೇ 62.48 ರಷ್ಟಾಗಿದೆ.

2018 ರ ಅಸೆಂಬ್ಲಿ ಕ್ಷೇತ್ರದ ಚುನಾವಣೆಯಲ್ಲಿ ಅಫಜಲಪುರ ವಿಧಾನಸಭೆಯ ಮತದಾರರ ಮತದಾನ ಶೇ 68.09 ರಷ್ಟಾಗಿದೆ.

ಈ ಕ್ಷೇತ್ರದಲ್ಲಿ ಮಾಲಿಕಯ್ಯ ಗುತ್ತೇದಾರ ಪ್ರಭಾವವಿದೆ. ಅವರು ಕಾಂಗ್ರೆಸ್‌ನಿಂದ ಆರು ಬಾರಿ ಆಯ್ಕೆಯಾಗಿದ್ದಾರೆ. 1985, 1989, 1994, 1999 ರಲ್ಲಿ ಮಾಲಿಕಯ್ಯ ಗುತ್ತೇದಾರ ಅವರು ಸತತ ನಾಲ್ಕು ಬಾರಿ ಆಯ್ಕೆಯಾದರು. 2004 ರಲ್ಲಿ ಜನತಾದಳದಿಂದ ಎಂ ವೈ ಪಾಟೀಲ್‌ ಅವರು ಆಯ್ಕೆಯಾದರು. ಆ ನಂತರ ನಡೆದ 2008 ಹಾಗೂ 2013ರ ಚುನಾವಣೆಯಲ್ಲಿ ಮತ್ತೆ ಮಾಲಿಕಯ್ಯ ಗುತ್ತೇದಾರ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದರು. 2018 ರಲ್ಲಿ ಮಾಲಿಕಯ್ಯ ಗುತ್ತೇದಾರ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರ್ಪಡೆಗೊಂಡರು. ಎಂ ವೈ ಪಾಟೀಲ್‌ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದರು. ಕಳೆದ ಬಾರಿಯ ಚುನಾವಣೆಯಲ್ಲಿ ಎಂ ವೈ ಪಾಟೀಲ್‌ ಅವರು ಕಾಂಗ್ರೆಸ್‌ನಿಂದ ಆಯ್ಕೆಯಾದರು.

Afzalpur Karnataka Elections

ವರ್ಷ ಗೆದ್ದವರು ಮತಗಳು ಸೋತವರು ಮತಗಳು
2018 ಎಂ ವೈ ಪಾಟೀಲ್‌ ( ಕಾಂಗ್ರೆಸ್‌ ) 71,735 ಮಾಲಿಕಯ್ಯ ಗುತ್ತೇದಾರ ( ಬಿಜೆಪಿ ) 61,141
2013 ಮಾಲಿಕಯ್ಯ ಗುತ್ತೇದಾರ ( ಕಾಂಗ್ರೆಸ್‌ ) 32855 ಎಂ ವೈ ಪಾಟೀಲ್‌ ( ಕೆಜೆಪಿ ) 38093
208 ಮಾಲಿಕಯ್ಯ ಗುತ್ತೇದಾರ ( ಕಾಂಗ್ರೆಸ್‌) 50082 ಎಂ ವೈ ಪಾಟೀಲ್‌ ( ಬಿಜೆಪಿ ) 42216

ಅಫಜಲಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಕೇಸರಿ ಪಕ್ಷದ ಟಿಕೆಟ್‌ಗಾಗಿ ಗುತ್ತೇದಾರ ಸಹೋದರರು ತೀವ್ರ ಯತ್ನ ನಡೆಸಿದ್ದಾರೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಹಾಗಾಊ ಅವರು ಕಿರಿಯ ಸಹೋದರ ನಿತಿನ್ ಗುತ್ತೇದಾರ ಮಧ್ಯೆ ತೀವ್ರ ಹಣಾಹಣಿ ಇದೆ. ಕಿರಿಯ ಸಹೋದರ ನಿತಿನ್‌ ಗುತ್ತೇದಾರ ಅವರ ಪರ ಮತ್ತೊಬ್ಬ ಸಹೋದರ ಸತೀಶ್ ಗುತ್ತೇದಾರ ಬ್ಯಾಟ್‌ ಬೀಸಿದ್ದಾರೆ. ಹೀಗಾಗಿ, ಅಫಜಲಪುರ ರಣಕಣ ಭಾರೀ ಸ್ಪರ್ಧೆಗೆ ಸಾಕ್ಷಿಯಾಗಲಿದೆ. ಖರ್ಗೆ ಅವರ ಶಿಷ್ಯರ ಬಳಗದಲ್ಲಿ ಕಾಣಿಸಿಕೊಂಡಿದ್ದ ಮಾಲಕಯ್ಯ ಗುತ್ತೇದಾರ ಅವರು ಮತ್ತೆ ಕಾಂಗ್ರೆಸ್‌ಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಎಂ ವೈ ಪಾಟೀಲ್‌ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+