Nippani Assembly Constituency: ಹ್ಯಾಟ್ರಿಕ್ ಹೊಡೆಲಿದ್ದಾರಾ ಸಚಿವೆ ಜೊಲ್ಲೆ?
ಮರಾಠಿಗ ಮತದಾರರು ಹೆಚ್ಚು ಸಂಖ್ಯೆಯಲ್ಲಿರುವ ನಿಪ್ಪಾಣಿ ಕ್ಷೇತ್ರದಲ್ಲಿ ಶಶಿಕಲಾ ಜೊಲ್ಲೆ ಅವರು ಕಳೆದ ಎರಡು ಅವಧಿಗಳಿಂದ ಜಯಶೀಲರಾಗುತ್ತಾ ಬಂದಿದ್ದಾರೆ.
ಬೆಳಗಾವಿ, ಫೆಬ್ರವರಿ 22: ಕರ್ನಾಟಕ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಕೂಡ ಪ್ರಮುಖವಾದ ಕ್ಷೇತ್ರವಾಗಿದೆ. ಇದು ಹಾಲಿ ಮುಜುರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಪ್ರತಿನಿಧಿಸುವ ಕ್ಷೇತ್ರವಾಗಿದೆ.
ಮರಾಠಿಗ ಮತದಾರರು ಹೆಚ್ಚು ಸಂಖ್ಯೆಯಲ್ಲಿರುವ ಇಲ್ಲಿ ಶಶಿಕಲಾ ಜೊಲ್ಲೆ ಅವರು ಕಳೆದ ಎರಡು ಅವಧಿಗಳಿಂದ ಜಯಶೀಲರಾಗುತ್ತಾ ಬಂದಿದ್ದಾರೆ. ಶಿಕ್ಷಣ ಮತ್ತು ವಾಣಿಜ್ಯ ಚಟುವಟಿಕೆಗೆ ಹೆಸರುವಾಸಿಯಾಗಿರುವ ಕ್ಷೇತ್ರ ಇದಾಗಿದೆ. ಇಲ್ಲಿ ಉತ್ಕೃಷ್ಟ ಮಟ್ಟದ ತಂಬಾಕು ಉತ್ಪಾದನೆ ಹಾಗೂ ಬೀಡಿಯನ್ನು ತಯಾರಿಸಲಾಗುತ್ತದೆ.
2018ರಲ್ಲಿ ನಿಪ್ಪಾಣಿ ತಾಲೂಕಾಗಿ ಮಾರ್ಪಟ್ಟಿದೆ. ತಂಬಾಕು ಅಲ್ಲದೆ ನಿಪಾನಿಯು ತಂಬಾಕು ವ್ಯಾಪಾರ, ಬೀಡಿ ಕಾರ್ಖಾನೆಗಳು, ತಂಬಾಕು ಗಿರಣಿಗಳು, ಫೌಂಡ್ರಿ ವ್ಯಾಪಾರ, ಜವಳಿ ವ್ಯಾಪಾರ, ಮರದ ವ್ಯವಹಾರಗಳು ಮತ್ತು ಅಲ್ಯೂಮಿನಿಯಂ ಮಡಕೆ ತಯಾರಿಕೆ ಕಾರ್ಖಾನೆಗೆ ಹೆಸರುವಾಸಿಯಾಗಿದೆ. ನಿಪ್ಪಾಣಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಬರುತ್ತದೆ. ಈಗ ಪ್ರಸ್ತುತ ಸಂಸದರು ಸಚಿವೆ ಶಶಿಕಲಾ ಜೊಲ್ಲೆ ಅವರ ಪತಿ ಅಣ್ಣಬಾಹೇಬ್ ಜೊಲ್ಲೆಯಾಗಿದ್ದಾರೆ. ಹಾಗಾಗಿ ನಿಪ್ಪಾಣಿ ಪೂರ್ತಿ ಬಿಜೆಪಿ ಪ್ರಾಬಲ್ಯವಿರುವ ಕ್ಷೇತ್ರವಾಗಿದೆ.
ಕಳೆದ 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆದಿದ್ದ ಹಾಲಿ ಸಚಿವೆ ಶಶಿಕಲಾ ಜೊಲ್ಲೆ ಅವರು 87,006 ಮತಗಳನ್ನು ಪಡೆದು ಜಯಶೀಲರಾಗಿದ್ದರು. ಇದೇ ಕಾಂಗ್ರೆಸ್‌ನಿಂದ ಕಾಕಾಸಾಹೇಬ ಪಾಟೀಲ್ ಅವರು 78,500 ಮತಗಳನ್ನು ಪಡೆದು 9,000 ಮತಗಳ ಅಂತರದಿಂದ ಸೋಲು ಕಂಡಿದ್ದರು. ನಿಪ್ಪಾಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೇ ಪಕ್ಷಗಳು ಪ್ರಬಲವಾಗಿವೆ. ಉಳಿದಂತೆ ಅಲ್ಲಲ್ಲಿ ಬಿಎಸ್‌ಪಿ ಕೂಡ ಇದೆ. 2018ರ ಚುನಾವಣೆಯಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ರಮೇಶ್ ಈಶ್ವರ್ ಅವರು 2,476 ಮತಗಳನ್ನು ಪಡೆದಿದ್ದರು.

ಶಶಿಕಲಾ ಜೊಲ್ಲೆಗೆ 81,860 ಮತ
2013ರಲ್ಲಿ ನಡೆದ ಚುನಾವಣೆಯಲ್ಲಿ ಶಶಿಕಲಾ ಜೊಲ್ಲೆ ಅವರು 81,860 ಮತಗಳನ್ನು ಪಡೆದರೆ ಕಾಕಾಸಾಹೇಬ ಪಾಟೀಲ್ ಅವರು 63,198 ಮತಗಳನ್ನು ಪಡೆದಿದ್ದರು. ಇಲ್ಲಿ ಕಾಕಾಸಾಹೇಬ ಪಾಟೀಲ್ ಅವರು ಮತಗಳಿಕೆ ಪ್ರಮಾಣ ಹೆಚ್ಚಾಗಿದೆ. ಗಡಿ ಪ್ರದೇಶವಾದ ಇಲ್ಲಿ ಗಡಿ ವಿವಾದ ಸಂಬಂಧ ಗಲಾಟೆಗಳು ಸಹಜವಾಗಿದೆ.

ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಒತ್ತಾಯ
ಬೆಳಗಾವಿ ಮತ್ತು ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸುವಂತೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಒತ್ತಾಯಿಸಿದ್ದರು. ಆದರೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಲ್ಲಿನ ನಿವಾಸಿಗಳು ತಾಲೂಕಿನ 40 ಹಳ್ಳಿಗಳು ಕನ್ನಡ ಮಾತನಾಡುವವರಾಗಿರುವುದರಿಂದ ಕರ್ನಾಟಕಕ್ಕೆ ಸೇರುತ್ತವೆ. ಇಲ್ಲಿಂದ ಒಂದು ಇಂಚು ನೆಲ ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದರು.

ಕಾಕಾಸಾಹೇಬ ಪಾಟೀಲ, ಜೊಲ್ಲೆ ಮಧ್ಯೆ ಪೈಪೋಟಿ
ನಿಪ್ಪಾಣಿ ವಿಧಾನಸಭಾ ಕ್ಷೇತ್ರ ಒಟ್ಟು 2,09,099 ಮತದಾರರು ಇದ್ದಾರೆ. ಇದರಲ್ಲಿ ಪುರುಷ ಮತದಾರರು 1,06,134, ಮಹಿಳಾ ಮತದಾರರು 1,02,342 ಇದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಸಚಿವೆ ಶಶಿಕಲಾ ಜೊಲ್ಲೆ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಕಾಕಾಸಾಹೇಬ ಪಾಟೀಲ ಅವರು 8,506 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬಾರಿಯೂ ಇವರಿಬ್ಬರ ನಡುವೆ ಭಾರೀ ಪೈಪೋಟಿ ಏರ್ಪಡುವ ಸಾಧ್ಯತೆ ಇದೆ. ಶಶಿಕಲಾ ಜೊಲ್ಲೆ ಬಿಜೆಪಿ ಅಭ್ಯರ್ಥಿ ಆಗುವುದು ಬಹುತೇಕ ಖಚಿತವಾಗಿದೆ. ಇನ್ನು ಕಾಂಗ್ರೆಸ್‌ನಿಂದ ಕಾಕಾಸಾಹೇಬ ಪಾಟೀಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಿಪ್ಪಾಣಿ
ಮಹಾರಾಷ್ಟ್ರ ಏಕೀಕರಣ ಸಮಿತಿ ನಂತರ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ನಿಪ್ಪಾಣಿ ವಿಧಾನಸಭಾ ಕ್ಷೇತ್ರ ಈಗ ಬಿಜೆಪಿಯ ಭದ್ರಕೋಟೆಯಂತಿದೆ. 14 ಚುನಾವಣೆಗಳನ್ನು ಎದುರಿಸಿರುವ ಕ್ಷೇತ್ರದಲ್ಲಿ ಪಕ್ಷೇತರರು ಹಾಗೂ ಕಾಂಗ್ರೆಸ್ ತಲಾ ಐದು ಬಾರಿ ಗೆದ್ದಿದ್ದಾರೆ. 1985ರಲ್ಲಿ ಕಾಂಗ್ರೆಸ್‌ನ ವೀರಕುಮಾರ ಪಾಟೀಲ್ ಗೆದ್ದು ಮಹಾರಾಷ್ಟ್ರ ಏಕೀಕರಣ ಸಮಿತಿ ಪ್ರಬಲ್ಯಕ್ಕೆ ಅಂತ್ಯ ಹಾಡಿದರು. 1989 ಹಾಗೂ 1994ರಲ್ಲಿ ಜನತಾದಳದ ಸುಭಾಷ ಜೋಶಿ ಜಯಶೀಲರಾದರು. 1999ರಿಂದ ಸತತ ಮೂರು ಬಾರಿ ಗೆದ್ದು ಕಾಂಗ್ರೆಸ್‌ನ ಕಾಕಾಸಾಹೇಬ ಪಾಟೀಲ ಹ್ಯಾಟ್ರಿಕ್ ಮಾಡಿದರು. 2013 ಹಾಗೂ 2018ರಿಂದ ಇದು ಬಿಜೆಪಿ ಭದ್ರಕೋಟೆಯಾಗಿದೆ. ಹಾಲಿ ಶಾಸಕಿ ಹಾಗೂ ಸಚಿವೆ ಶಶಿಕಲಾ ಜೊಲ್ಲೆ ಹ್ಯಾಟ್ರಿಕ್ ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ.
-
ಮಾರ್ಚ್ 25ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Bengaluru: 50 ವಾರ್ಡ್ಗಳಲ್ಲಿ ಕಸ ವಿಲೇವಾರಿ ಸ್ಥಗಿತ; ವೇತನ ವಿಳಂಬಕ್ಕೆ ಮುನಿದು ಸಾಮೂಹಿಕ ರಜೆ ಹಾಕಿದ ಕಾರ್ಮಿಕರು -
ಮಾರ್ಚ್ 24ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ












Click it and Unblock the Notifications