ಸೌತೆಕಾಯಿ ಕಹಿಯಾಗಿದೆ ಎನ್ನುವುದನ್ನು ಗುರತಿಸುವುದು ಹೇಗೆ? ಇಲ್ಲಿದೆ ಸುಲಭ ಉಪಾಯ

ಅನೇಕರಿಗೆ ಊಟದ ತಟ್ಟೆಯಲ್ಲಿ ಸೌತೆಕಾಯಿ ಇದ್ದರೆ ಮಾತ್ರ ಅವರ ಭೋಜನ ಕಂಪ್ಲೀಟ್‌ ಎನ್ನುವ ಭಾವ. ಇನ್ನು ಕೆಲವರಿಗೆ ಬೆಳಿಗ್ಗೆ ಸಲಾಡ್‌ ತಿನ್ನುವ ಅಭ್ಯಾಸ ಇರುತ್ತದೆ. ಅಥವಾ ಪಲಾವ್‌, ರೈಸ್‌ ಬಾತ್‌ಗಳ ಜೊತೆ ತಿನ್ನುವ ಮೊಸರು ಬಜ್ಜಿಗೂ ಸೌತೆಕಾಯಿ ಬೇಕೇ ಬೇಕು. ಸೌತೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳು ಕೂಡಾ ಇವೆ.

ಸೌತೆಕಾಯಿಯ ಆರೋಗ್ಯ ಪ್ರಯೋಜನ:

ಆಯುರ್ವೇದದಿಂದ ಆಧುನಿಕ ವಿಜ್ಞಾನದವರೆಗೆ, ಸೌತೆಕಾಯಿ ಸೇವನೆಯು ಬೇಸಿಗೆಯಲ್ಲಿ ಪ್ರಯೋಜನಕಾರಿ ಎಂದೇ ಹೇಳುತ್ತದೆ. ಇದು ಸುಮಾರು 95% ರಿಂದ 96% ದಷ್ಟು ನೀರನ್ನು ಹೊಂದಿರುತ್ತದೆ. ಹೀಗಾಗಿ ಸೌತೆಕಾಯಿ ತಿನುವುದರಿಂದ ದೇಹ ಹೈಡ್ರೇಟೆಡ್‌ ಆಗಿ ಇರುತ್ತದೆ. ಜೊತೆಗ ಕೆಲವೊಂದು ಕಾಯಿಲೆಗಳಿಂದ ಪರಿಹಾರ ನೀಡುತ್ತದೆ ಎಂದು ಕೂಡಾ ಹೇಳಲಾಗುತ್ತದೆ. ಇದನ್ನು ದಿನಾಲೂ ತಿನ್ನುವುದರಿಂದ ದೇಹದಲ್ಲಿ ನೀರಿನ ಅಂಶವನ್ನು ಕಾಪಾಡಿಕೊಳ್ಳಬಹುದು. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

Cucumber

ಕಹಿಯಾಗಿರುತ್ತವೆ ಕೆಲವು ಸೌತೆಕಾಯಿ:

ಆದರೆ ಕೆಲವೊಮ್ಮೆ, ಖರೀದಿಸಿ ತಂದಿರುವ ಸೌತೆಕಾಯಿ ವಿಪರೀತ ಕಹಿಯನ್ನು ಹೊಂದಿರುತ್ತದೆ. ಕಹಿ ಸೌತೆಕಾಯಿಯನ್ನು ಯಾರೂ ತಿನ್ನಲು ಇಷ್ಟಪಡುವುದಿಲ್ಲ. ಆಗ ಬೇರೆ ದಾರಿಯಿಲ್ಲದೆ ಸೌತೆಕಾಯಿಯನ್ನು ಎಸೆಯಬೇಕಾಗುತ್ತದೆ. ಇದರಿಂದ ಊಟಕ್ಕೆ ಸೌತೆಕಾಯಿ ಇಲ್ಲ ಎನ್ನುವುದು ಒಂದಾದರೆ, ಕೊಟ್ಟ ಹಣ ಕೂಡಾ ವೇಸ್ಟ್‌ ಎನ್ನುವುದು ಮತ್ತೊಂದು ಅಂಶ.

ಇನ್ನು ಸೌತೆಕಾಯಿ ಕಹಿಯಾಗಿದೆಯೇ ಎನ್ನುವುದನ್ನು ತಿಳಿಯಲು ಅದ್ನು ತಿನ್ನಲೇಬೇಕೆಂದಿಲ್ಲ. ಕೆಲವೊಂದು ಅಂಶಗಳನ್ನು ಗಮನಿಸುವ ಮೂಲಕ ಕಹಿ ಸೌತೆಕಾಯಿಯನ್ನು ಸುಲಭವಾಗಿ ಕಂಡುಹಿಡಿಯಬಹುದು.

ಮಳೆಗಾಲಕ್ಕೆ ಮನೆ ಮದ್ದು, ಆರೋಗ್ಯ ಜೋಪಾನ, ಇರಲಿ ಎಚ್ಚರ
ಮಳೆಗಾಲಕ್ಕೆ ಮನೆ ಮದ್ದು, ಆರೋಗ್ಯ ಜೋಪಾನ, ಇರಲಿ ಎಚ್ಚರ

ಬಣ್ಣ ಮತ್ತು ಸಿಪ್ಪೆಯನ್ನು ನೋಡಿ:

ತಜ್ಞರ ಪ್ರಕಾರ, ತಾಜಾ ಮತ್ತು ಉತ್ತಮ ಗುಣಮಟ್ಟದ ಸೌತೆಕಾಯಿಗಳು ಕಡು ಹಸಿರು ಬಣ್ಣದಲ್ಲಿರುತ್ತವೆ. ಇದರ ಸಿಪ್ಪೆ ಕೂಡಾ ಅತ್ಯಂತ ತೆಳುವಾಗಿರುತ್ತದೆ. ಸಿಪ್ಪೆಯು ಹಳದಿ ಬಣ್ಣಕ್ಕೆ ತಿರುಗಿದ್ದರೆ ಅಥವಾ ಸಿಪ್ಪೆಯ ಮೇಲೆ ಹಳದಿ ಕಲೆಗಳು ಕಂಡು ಬಂದರೆ ಸೌತೆಕಾಯಿ ಅತಿಯಾಗಿ ಹಣ್ಣಾಗಿದೆ ಎಂದರ್ಥ. ಅಂತಹ ಸೌತೆಕಾಯಿ ಕಹಿಯಾಗಿರುವ ಸಾಧ್ಯತೆ ಹೆಚ್ಚು.

ಸೌತೆಕಾಯಿ ಗಾತ್ರ: ಗಾತ್ರದಲ್ಲಿ ತುಂಬಾ ದೊಡ್ದಾಗಿರುವ ಅಥವಾ ತುಂಬಾ ಚಿಕ್ಕ ಸೌತೆಕಾಯಿಯನ್ನು ಕೂಡಾ ಖರೀದಿಸಬಾರದು. ಯಾವಾಗಲೂ ಮಧ್ಯಮ ಗಾತ್ರದ ಸೌತೆಕಾಯಿಯನ್ನೇ ಖರೀದಿಸಿ ತರುವುದು ಒಳ್ಳೆಯದು. ಮಧ್ಯಮ ಗಾತ್ರದ ಸೌತೆಕಾಯಿ ಸಾಮಾನ್ಯವಾಗಿ ಕಹಿಯಾಗಿರುವುದಿಲ್ಲ.

ಕಾಂಡದ ಬದಿಯನ್ನು ಪರಿಶೀಲಿಸಿ: ಸೌತೆಕಾಯಿಯ ಕಾಂಡದ ಬಳಿಯಿರುವ ಭಾಗವು ಕೆಲವೊಮ್ಮೆ ಹೆಚ್ಚು ಕಹಿಯಾಗಿರಬಹುದು. ಈ ಭಾಗವು ಹಳದಿ ಅಥವಾ ಮಸುಕಾಗಿದ್ದರೆ ಆ ಸೌತೆಕಾಯಿಯನ್ನು ಖರೀದಿಸದಿರುವುದೇ ಉತ್ತಮ.

ತಾಜಾತನವನ್ನು ತೂಕದಿಂದ ನಿರ್ಧರಿಸಬಹುದು: ಒಳ್ಳೆಯ ಸೌತೆಕಾಯಿಯು ಅದರ ಗಾತ್ರಕ್ಕೆ ಹೋಲಿಸಿದರೆ ಸ್ವಲ್ಪ ಭಾರವಾಗಿರುತ್ತದೆ. ಹಗುರವಾದ ಸೌತೆಕಾಯಿ ಒಳಗೆ ಟೊಳ್ಳಾಗಿರಬಹುದು ಅಥವಾ ಕೆಟ್ಟು ಹೋಗಿರಬಹುದು ಇಲ್ಲಾ ಕಹಿಯಾಗಿರಬಹುದು.

ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಸೇವಿಸಿದರೆ ಮಧುಮೇಹಿಗಳಿಗೆ ಒಳ್ಳೇದಾ:
ಖಾಲಿ ಹೊಟ್ಟೆಯಲ್ಲಿ ನೆನೆಸಿದ ಬಾದಾಮಿ ಸೇವಿಸಿದರೆ ಮಧುಮೇಹಿಗಳಿಗೆ ಒಳ್ಳೇದಾ:

ಸೌತೆಕಾಯಿ ಕಹಿಯಾಗಿದ್ದರೆ ಏನು ಮಾಡಬೇಕು?:

ಸೌತೆಕಾಯಿ ಕತ್ತರಿಸಿದ ನಂತರ ಕಹಿಯಾಗಿದ್ದರೆ, ಮೊದಲು ಎರಡೂ ತುದಿಗಳನ್ನು ಕತ್ತರಿಸಿ. ನಂತರ ಕತ್ತರಿಸಿದ ಭಾಗವನ್ನು ಸೌತೆಕಾಯಿಯ ಉಳಿದ ಭಾಗದೊಂದಿಗೆ ಚೆನ್ನಾಗಿ ಉಜ್ಜಿ. ಹೀಗೆ ಉಜ್ಜುವಾಗ ಬಿಳಿ ನೊರೆ ಕಾಣಿಸಿಕೊಳ್ಳುತ್ತದೆ. ಅದನ್ನು ತೊಳೆದು ತೆಗೆಯಿರಿ. ಇದು ಕಹಿಯನ್ನು ಕಡಿಮೆ ಮಾಡುತ್ತದೆ.

ಸೌತೆಕಾಯಿ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯ ವರ್ಧಕವೂ ಆಗಿದೆ. ಸೌತೆಕಾಯಿಯಲ್ಲಿರುವ ಸಿಲಿಕಾ ಮತ್ತು ಸಲ್ಫರ್ ಅಂಶವು ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಮತ್ತು ಕೂದಲನ್ನು ಬುಡದಿಂದಲೇ ಗಟ್ಟಿಯಾಗಿಸುತ್ತದೆ. ಸೌತೆಕಾಯಿಯಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಬಿಸಿಲಿನಿಂದ ಉಂಟಾಗುವ ಕಲೆಗಳು, ಟ್ಯಾನಿಂಗ್ ಮತ್ತು ಕಣ್ಣುಗಳ ಕೆಳಗಿನ ಬ್ಲಾಕ್‌ ಸರ್ಕಲ್‌ಗಳನ್ನು ಕಡಿಮೆ ಮಾಡುತ್ತದೆ. ಸೌತೆಕಾಯಿಗಳನ್ನು ತಿನ್ನುವುದು ಮುಖಕ್ಕೆ ಹಚ್ಚಿದಾಗ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+