ಮಣ್ಣಿನೊಳಗಿರುವ ಕೀಟಗಳನ್ನು ತೆಗೆದು ತಯಾರಿಸಲಾಗುತ್ತದೆ ಈ ವಿಶೇಷ ವೈನ್‌: ತಯಾರಿಕಾ ಪ್ರಕ್ರಿಯೆ ದಂಗು ಬಡಿಸುವುದು

ನಮ್ಮಲ್ಲಿ ವೈನ್‌ ಪ್ರಿಯರು ಹಲವರಿರಬಹುದು. ವೈನ್‌ಗಳಲ್ಲಿಯೂ ಅನೇಕ ವಿಧಗಳಿರುತ್ತವೆ. ಎಲ್ಲಾ ವೈನ್‌ಗಳು ಅಲ್ಕೋಹಾಲ್‌ಯುಕ್ತವಾಗಿರುವುದಿಲ್ಲ. ವಿವಿಧ ಬಗೆಯ ಹಣ್ಣುಗಳಿಂದ, ತರಕಾರಿ ಸಿಪ್ಪೆಯಿಂದ, ಹೂವಿನಿಂದ, ವೀಳ್ಯದೆಲೆಯಿಂದ ಹೀಗೆ ಅನೇಕ ಬಗೆಯ ವೈನ್‌ಗಳನ್ನು ತಯಾರಿಸಲಾಗುತ್ತದೆ. ಆಲ್ಕೋಹಾಲ್‌ ರಹಿತ ವೈನ್‌ ಕುಡಿಯುವುದರಿಂದ ಆರೋಗ್ಯಕ್ಕೆ, ಚರ್ಮಕ್ಕೆ ಪ್ರಯೋಜನವಾಗುತ್ತದೆ ಎಂದು ಕೂಡಾ ಹೇಳಲಾಗುತ್ತದೆ.

ಆಶ್ಚರ್ಯ ಹುಟ್ಟು ಹಾಕಿದ ವೈನ್‌:

ಆದರೆ ಇಲ್ಲಿ ಹಣ್ಣು, ತರಕಾರಿ, ಎಲೆಗಳಿಂದ ಅಲ್ಲ ಬದಲಿಗೆ ಓಂದು ಕೀಟವನ್ನು ಬಳಸಿ ವೈನ್‌ ತಯಾರಿಸಲಾಗುತ್ತದೆ. ಹೌದು, ಈ ಕೀಟದಿಂದ ವೈನ್‌ ತಯಾರಿಸಿ ಸೇವಿಸುವ ವಿಡಿಯೋವೊಂದು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಮಣ್ಣಿನ ಅಡಿಯಲ್ಲಿ ಅಡಗಿಕೊಂಡಿರುವ ಸಣ್ಣ ಕೀಟವನ್ನು ಹೊರ ತೆಗೆದು ಅದರಿಂದ ವೈನ್‌ ತಯಾರಿಸಲಾಗುತ್ತದೆ.

Worm Wine

ಇದು ಸಾಂಪ್ರದಾಯಿಕ ಪಾನೀಯವಂತೆ:

ಈ ವಿಧಾನವು ಮೊದಲ ನೋಟಕ್ಕೆ ವಿಚಿತ್ರವೆನಿಸಬಹುದು. ಆದರೆ, ಚೀನಾದ ಕೆಲವು ಪ್ರದೇಶಗಳಲ್ಲಿ ಇದನ್ನು ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಪಾನೀಯ ಎಂದು ಹೇಳಲಾಗುತ್ತದೆ. ಈ ವೈನ್‌ ಇದೀಗ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಇದನ್ನು ಚೀನಾದ ವಿಶಿಷ್ಟ ಆಹಾರ ಸಂಸ್ಕೃತಿಯ ಭಾಗ ಎಂದು ಕರೆದರೆ, ಇನ್ನು ಕೆಲವರು ಈ ರೀತಿಯ ವೈನ್‌ ಬಗ್ಗೆ ಹಿಂದೆದೂ ಕೇಳಿಯೇ ಇರಲಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಣ್ಣಿನಡಿ ಸಿಗುವ ಕೀಟವೇ ಬೇಕು:

ಈ ವೈನ್ ತಯಾರಿಸುವ ಪ್ರಕ್ರಿಯೆಯು ಹೊಲಗಳು ಮತ್ತು ಕಾಡುಗಳಲ್ಲಿ ಪ್ರಾರಂಭವಾಗುತ್ತದೆ. ಇಲ್ಲಿ ಮಣ್ಣಿನಡಿಯಲ್ಲಿ ಅಡಗಿ ಕುಳಿತಿರುವ ಕೀಟಗಳನ್ನು ಹೊರ ತೆಗೆಯಲಾಗುತ್ತದೆ. ಈ ಕೀಟವನ್ನು ಹೊರ ತೆಗೆಯುವಾಗ ಅದು ಸಾಯಬಾರದು. ಹಾಗಾಗಿ ಅದನ್ನು ಬಹಳ ಎಚ್ಚರಿಕೆಯಿಂದ ಹೊರ ತೆಗೆಯಬೇಕಾಗುತ್ತದೆ. ಅದರ ಸುತ್ತಲೂ ಆವರಿಸಿರುವ ಮಣ್ಣನ್ನು ತೆಗೆಯುವ ಸಲುವಾಗಿ ಜನರು ತೆಳುವಾದ ಸ್ಟ್ರಾವನ್ನು ಬಳಸುತ್ತಾರೆ. ಈ ಸ್ಟ್ರಾ ಸಹಾಯದಿಂದ ಗಾಳಿ ಊದಿ ಸುತ್ತಲಿನ ಮಣ್ಣನ್ನು ತೆಗೆಯುತ್ತಾರೆ. ನಂತರ ಅವುಗಳನ್ನು ಸ್ವಚ್ಛಗೊಳಿಸಲಾಗುತ್ತದೆ. ಅಂದ ಹಾಗೆ ಈ ವೈನ್‌ಗೆ ಒಂದು ನಿರ್ದಿಷ್ಟ ರೀತಿಯ ಕೀಟವನ್ನು ಮಾತ್ರ ಬಳಸಲಾಗುತ್ತದೆ. ಮಣ್ಣಿನಡಿಯಲ್ಲಿ ಸಿಗುವ ಎಲ್ಲಾ ಕೀಟಗಳನ್ನು ಇದಕ್ಕೆ ಬಳಸಲಾಗುವುದಿಲ್ಲ.

996 ವರ್ಕ್‌ ಕಲ್ಚರ್‌ನಿಂದ ಬೇಸರ: ಕುರಿ ಮೇಯಿಸುವತ್ತ ವಾಲುತ್ತಿರುವ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳು
996 ವರ್ಕ್‌ ಕಲ್ಚರ್‌ನಿಂದ ಬೇಸರ: ಕುರಿ ಮೇಯಿಸುವತ್ತ ವಾಲುತ್ತಿರುವ ಸಾವಿರಾರು ಕಾರ್ಪೊರೇಟ್ ಉದ್ಯೋಗಿಗಳು

ಸಂಪೂರ್ಣ ಪ್ರಕ್ರಿಯೆ ಹೀಗಿರುತ್ತದೆ :

ಈ ಕೀಟಗಳನ್ನು ಹೊರ ತೆಗೆದ ನಂತರ, ಅವುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಜೀವಂತ ಕೀಟವನ್ನೇ ತವಾದ ಮೇಲೆ ಹಾಕಿ ಹುರಿಯಲಾಗುತ್ತದೆ. ನಂತರ ಅವುಗಳನ್ನು ಕೈಯಿಂದಲೇ ಹಿಸುಕಿ ಪುಡಿ ಮಾಡಲಾಗುತ್ತದೆ. ಈ ಪುಡಿಯನ್ನು ಅಕ್ಕಿ ವೈನ್ ಅಥವಾ ಅಲ್ಕೋಹಾಲ್ ಬೇಸ್‌ನೊಂದಿಗೆ ಬೆರೆಸಲಾಗುತ್ತದೆ. ಕೆಲವು ಸ್ಥಳಗಳಲ್ಲಿ,ಕೇವಲ ಬಿಸಿನೀರನ್ನು ಮಾತ್ರ ಬಳಸಲಾಗುತ್ತದೆ. ಈ ಸಂಪೂರ್ಣ ಪ್ರಕ್ರಿಯೆಯು ಬಹಳ ಸಮಯವನ್ನು ತೆಗೆದುಕೊಳ್ಳುತ್ತದೆ.

ಸಾಂಪ್ರದಾಯಿಕ ಚೀನೀ ಔಷಧದಲ್ಲಿ ವಿವಿಧ ಕೀಟಗಳು ಮತ್ತು ಲಾರ್ವಾಗಳನ್ನು ಬಹಳ ಹಿಂದಿನಿಂದಲೂ ಬಳಸಲಾಗುತ್ತಿದೆ. ಅದಕ್ಕಾಗಿಯೇ ಈ ವೈನ್ ಅನ್ನು ಕೇವಲ ಆಲ್ಕೊಹಾಲ್ಯುಕ್ತ ಪಾನೀಯವೆಂದು ಪರಿಗಣಿಸಲಾಗುವುದಿಲ್ಲ. ಹಲವರು ಇದನ್ನು ಶಕ್ತಿ ಹೆಚ್ಚಿಸುವ ಪಾನೀಯವೆಂದು ಕರೆಯುತ್ತಾರೆ.

ವಿಪರೀತ ಬಂದ ಕರೆಂಟ್ ಬಿಲ್‌ ನೀಡಿದ ಸುಳಿವು: ಮನೆಯೊಳಗೆ ಪತ್ತೆಯಾಯಿತು 300ಕ್ಕೂ ಹೆಚ್ಚು ಹೆಬ್ಬಾವು
ವಿಪರೀತ ಬಂದ ಕರೆಂಟ್ ಬಿಲ್‌ ನೀಡಿದ ಸುಳಿವು: ಮನೆಯೊಳಗೆ ಪತ್ತೆಯಾಯಿತು 300ಕ್ಕೂ ಹೆಚ್ಚು ಹೆಬ್ಬಾವು

ಈ ವೈನ್‌ ಬಗ್ಗೆಯೇ ಚರ್ಚೆ:

ಈ ವೈನ್‌ನ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಆಯಾ ಸ್ಥಳಕ್ಕೆ ಅನುಗುಣವಾಗಿ ಬೇರೆ ಬೇರೆ ಸಂಸ್ಕ್ರತಿ ಇರುತ್ತದೆ. ನಾವು ವಿವಿಧ ದೇಶಗಳ ಸಂಸ್ಕೃತಿಗಳನ್ನು ಗೌರವಿಸಬೇಕು ಎಂದು ವಿಡಿಯೋ ನೋಡಿದ ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಏಕೆಂದರೆ ಪ್ರತಿಯೊಂದು ಸಮಾಜವು ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದೆ. ಕೆಲವರು ಈ ವೈನ್‌ ಬಗ್ಗೆ ಮೊದಲೇ ತಿಳಿದಿದ್ದರೆ, ಕುಡಿಯುವ ಧೈರ್ಯವೇ ಮಾಡುತ್ತಿರಲಿಲ್ಲ ಎಂದು ಬರೆದಿದ್ದಾರೆ. ಕೆಲವರು ಇದನ್ನು ವಿಶ್ವದ ವಿಚಿತ್ರವಾದ ವೈನ್ ಎಂದೂ ಕರೆದಿದ್ದಾರೆ.

ಚೀನಾದ ಆಹಾರ ಸಂಸ್ಕೃತಿ ಭಿನ್ನ:

ಚೀನಾದ ಆಹಾರ ಸಂಸ್ಕೃತಿ ಯಾವಾಗಲೂ ಸುದ್ದಿಯಲ್ಲಿರುತ್ತದೆ. ಇತರ ದೇಶಗಳಲ್ಲಿ ಜನರು ಮುಟ್ಟಲೂ ಇಷ್ಟಪಡದ ವಸ್ತುಗಳನ್ನು ಇಲ್ಲಿ ಜನರು ತಿನ್ನುತ್ತಾರೆ ಮತ್ತು ಕುಡಿಯುತ್ತಾರೆ. ಕೀಟಗಳು, ಹಾವುಗಳು, ಚೇಳುಗಳು ಮತ್ತು ಇತರ ಅನೇಕ ಸಾಂಪ್ರದಾಯಿಕ ಆಹಾರಗಳಿಂದ ಮಾಡಿದ ಭಕ್ಷ್ಯಗಳು ಈ ಹಿಂದೆ ಅಂತರರಾಷ್ಟ್ರೀಯ ಚರ್ಚೆಗೆ ಗ್ರಾಸವಾಗಿತ್ತು. ಅದಕ್ಕಾಗಿಯೇ ಈ ಬಾರಿ ಕೀಟ ವೈನ್‌ನ ವೀಡಿಯೊ ಕೂಡ ಗಮನ ಸೆಳೆಯಿತು.

ಈ ಕೀಟವನ್ನು ಬಳಸಿ ತಯಾರಿಸುವ ವೈನ್ ಪ್ರಪಂಚದಾದ್ಯಂತ ಹಲವರಿಗೆ ಆಶ್ಚರ್ಯವುಂಟು ಮಾಡಬಹುದು. ಚೀನಾದ ಕೆಲವು ಭಾಗಗಳಲ್ಲಿ, ಇದನ್ನು ಶತಮಾನಗಳಷ್ಟು ಹಳೆಯ ಸಂಪ್ರದಾಯದ ಭಾಗವೆಂದು ಪರಿಗಣಿಸಲಾಗಿದೆ. ಸ್ಥಳೀಯರು ಇದನ್ನು ವಿಶೇಷ ಸಂದರ್ಭಗಳಲ್ಲಿ ಕುಡಿಯುತ್ತಾರೆ. ಅನೇಕ ಕುಟುಂಬಗಳು ಇಂದಿಗೂ ಹಳೆಯ ವಿಧಾನಗಳನ್ನು ಬಳಸಿಕೊಂಡು ಇದನ್ನು ತಯಾರಿಸುತ್ತಾರೆ. ಸಾಮಾಜಿಕ ಮಾಧ್ಯಮದ ಭರಾಟೆ ಜೋರಾಗಿರುವ ಇಂದಿನ ಕಾಲದಲ್ಲಿ ಇಂಥಹ ಸಾಂಪ್ರದಾಯಿಕ ವಸ್ತುಗಳು ಇಡೀ ಜಗತ್ತನ್ನು ತಲುಪುತ್ತಿವೆ. ಈ ಕಾರಣದಿಂದಲೇ ಈ ವಿಶಿಷ್ಟ ಚೀನೀ ವೈನ್ ಕುತೂಹಲವನ್ನು ಹುಟ್ಟುಹಾಕಿದೆ.

(ಬರಹ: ರಂಜಿತಾ ಆರ್.ಕೆ.)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+