NASA Mission: ಭಾರತೀಯರಿಗೆ ಐತಿಹಾಸಿಕ ಕ್ಷಣ: ಇಂಡಿಯಾ ಮೂಲದ ಅನಿಲ್ ಮೆನನ್ ಜುಲೈ 14ಕ್ಕೆ ಮೊದಲ ಬಾರಿಗೆ ಬಾಹ್ಯಾಕಾಶಕ್ಕೆ

NASA Mission: ಭಾರತೀಯರು ಮತ್ತೊಂದು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿ ಆಗಲಿದ್ದಾರೆ. ಭಾರತೀಯ ಮೂಲದ ಅನಿಲ್ ಮೆನನ್ ಮೊದಲ ಬಾಹ್ಯಾಕಾಶ ಹಾರಾಟವು ಇದೇ ತಿಂಗಳು 14ರಂದು ಪ್ರಾರಂಭವಾಗಲಿದೆ. ಭಾರತೀಯ ಮೂಲದ ಗಗನಯಾತ್ರಿ ಅನಿಲ್ ಮೆನನ್ ಅವರು ಇದೇ ಮೊದಲ ಬಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಪ್ರಯಾಣ ಬೆಳೆಸಲಿದ್ದಾರೆ. ಇವರ ಬಾಹ್ಯಾಕಾಶ ಹಾರಾಟ ಹಾಗೂ ಬಾಹ್ಯಾಕಾಶ ನಿಲ್ದಾಣ ತಲುಪುವ ಕ್ಷಣಗಳನ್ನು ನಾಸಾ ತನ್ನ NASA+ ಹಾಗೂ ಯೂಟ್ಯೂಬ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾಗಳಲ್ಲಿ ನೇರಪ್ರಸಾರ ಮಾಡುವುದಾಗಿ ಹೇಳಿದೆ. ಅನಿಲ್ ಮೆನನ್ ಮೊದಲ ಬಾಹ್ಯಾಕಾಶ ಹಾರಾಟವು ಹಲವು ಕಾರಣಗಳಿಗೆ ವಿಶೇಷವಾಗಿದೆ.

ಬಾಹ್ಯಾಕಾಶಕ್ಕೆ ಇತರರನ್ನು ಕಳುಹಿಸಿದ ನಂತರ ಇದೇ ಮೊದಲ ಬಾಹ್ಯಾಕಾಶ ಹಾರಾಟ ನಡೆಸಲು ಭಾರತೀಯ ಮೂಲದ ನಾಸಾ ವೈದ್ಯ ಅನಿಲ್ ಮೆನನ್ ಅವರನ್ನು ಕಳುಹಿಸಲಾಗುತ್ತಿದೆ. ಗಗನಯಾತ್ರಿಗಳು ಸುರಕ್ಷಿತವಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸಬಹುದು ಹಾಗೂ ಹಿಂದಿರುಗಿಬರಬಹುದು ಎನ್ನುವ ಯೋಜನೆಗೆ ಸಂಬಂಧಿಸಿದಂತೆ ಅನಿಲ್ ಮೆನನ್ ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಭಾರತೀಯ ಮೂಲದ ನಾಸಾ ವೈದ್ಯ ಅನಿಲ್ ಮೆನನ್ ಅವರು ಬಾಹ್ಯಾಕಾಶ ಪಯಣಕ್ಕೆ ಎಲ್ಲವೂ ಸಿದ್ಧವಾಗಿದೆ.

NASA Mission

49ನೇ ವಯಸ್ಸಿ ಮೆನನ್ ಅವರು ರಷ್ಯಾದ ಸೋಯುಜ್ ಎಂಎಸ್ -29 ಬಾಹ್ಯಾಕಾಶ ನೌಕೆಯಲ್ಲಿ ತಮ್ಮ ಮೊದಲ ಬಾಹ್ಯಾಕಾಶ ಹಾರಾಟವನ್ನು ನಡೆಸಲಿದ್ದಾರೆ. ತುರ್ತು ವೈದ್ಯಕೀಯ, ಮಿಲಿಟರಿ ಸೇವೆ, ಏರೋಸ್ಪೇಸ್ ವೈದ್ಯಕೀಯ ಹಾಗೂ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನಿಲ್ ಮೆನನ್ ಅವರ ದೀರ್ಘ ಅವಧಿಯ ಅನುಭವಕ್ಕೆ ಈ ಬಾಹ್ಯಾಕಾಶ ಯಾನವು ಮಹತ್ವದ ಹೆಜ್ಜೆಯಾಗಿದೆ ಎಂದೇ ಗುರುತಿಸಲಾಗಿದೆ. ಅನಿಲ್ ಮೆನನ್ ಅವರ ತಂದೆ ಮತ್ತು ತಾಯಿ ಭಾರತೀಯ ಮತ್ತು ಉಕ್ರೇನ್ ಮೂಲದವರಾಗಿದ್ದಾರೆ. ಅನಿಲ್ ಮೆನನ್ ಅವರು ಅಮೆರಿಕದ ಮಿನ್ನಿಯಾಪೋಲಿಸ್‌ನಲ್ಲಿ ಜನಿಸಿದರು. ಅವರ ಗಗನಯಾತ್ರಿಯ ಪಯಣ ವಿಭಿನ್ನವಾಗಿದೆ. ನಾಸಾದ ಗಗನಯಾತ್ರಿ ಆಗುವ ಮೊದಲು ಅವರು ಬಾಹ್ಯಾಕಾಶ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.

NASA Mission: ಅನಿಲ್ ಮೆನನ್ ಸ್ಫೂರ್ತಿದಾಯ ಪಯಣ

ಅನಿಲ್ ಮೆನನ್ ಅವರದ್ದು ಸ್ಫೂರ್ತಿದಾಯಕ ಪಯಣ. ಮೆನನ್ ಅವರು 2014ರಲ್ಲಿ ಫ್ಲೈಟ್ ಸರ್ಜನ್ ಆಗಿ ನಾಸಾಗೆ ಸೇರಿದರು. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ದೀರ್ಘಾವಧಿಯ ಕಾರ್ಯಾಚರಣೆಗಳ ಮೊದಲು ಮತ್ತು ನಂತರ ಗಗನಯಾತ್ರಿಗಳ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಇವರ ಮೇಲಿತ್ತು. 2018ರಲ್ಲಿ ಅವರು ಸ್ಪೇಸ್‌ಎಕ್ಸ್ ಕಂಪನಿಯು ಮೊದಲ ಬಾರಿಗೆ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ತಯಾರಿ ನಡೆಸುತ್ತಿದ್ದಾಗ ಒಂದು ಪ್ರಮುಖ ಕ್ಷಣದಲ್ಲಿ ಅದರ ಮೊದಲ ವಿಮಾನ ಶಸ್ತ್ರಚಿಕಿತ್ಸಕರಾಗಿದ್ದರು. ಸ್ಪೇಸ್‌ಎಕ್ಸ್‌ನಲ್ಲಿ ವೈದ್ಯಕೀಯ ವಿಭಾಗವನ್ನು ಆರಂಭಿಸಿದ ಅನಿಲ್ ಮೆನನ್ ಅವರು, ಬಾಹ್ಯಾಕಾಶ ಯಾನಗಳಿಗೆ ಅಗತ್ಯವಾದ ಆರೋಗ್ಯ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿದ್ದರು. ಅಲ್ಲದೆ, ಐತಿಹಾಸಿಕ ಡೆಮೊ-2 ಕಾರ್ಯಾಚರಣೆಗೆ ಗಗನಯಾತ್ರಿಗಳಿಗೆ ನೆರವಾಗುವಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಸ್ಪೇಸ್‌ಎಕ್ಸ್‌ನ ಖಾಸಗಿ ಗಗನಯಾತ್ರಿ ಕಾರ್ಯಕ್ರಮವನ್ನು ನಿರ್ಮಿಸಲು ಸಹಾಯ ಮಾಡಿದ್ದರು.

ಅಲ್ಲದೆ ವೈದ್ಯಕೀಯ ಸಂಶೋಧನೆಗೆ ಹೊಸ ಯೋಜನೆಗಳನ್ನು ಆರಂಭಿಸಿದರು. ಚಂದ್ರ ಮತ್ತು ಮಂಗಳ ಗ್ರಹಗಳಿಗೆ ಭವಿಷ್ಯದಲ್ಲಿ ಹೋಗಲಿರುವ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯ ಅಭಿವೃದ್ಧಿಗೂ ತಮ್ಮ ಕೊಡುಗೆ ನೀಡಿದರು. ಇಷ್ಟು ವರ್ಷಗಳ ಕಾಲ ಇತರರು ಬಾಹ್ಯಾಕಾಶಕ್ಕೆ ಹೋಗಲು ನೆರವಾದ ಬಳಿಕ, ಅನಿಲ್ ಮೆನನ್ ತಮ್ಮದೇ ಬಾಹ್ಯಾಕಾಶ ಪಯಣಕ್ಕಾಗಿ ತರಬೇತಿ ಆರಂಭಿಸಿದ್ದಾರೆ.

2021ರಲ್ಲಿ ನಾಸಾದ ಗಗನಯಾತ್ರಿ ಅಭ್ಯರ್ಥಿಯಾಗಿ ಅವರು ಆಯ್ಕೆಯಾಗಿದ್ದರು. ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಇದೀಗ ಮೊದಲ ಬಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS)ಕ್ಕೆ ದೀರ್ಘಾವಧಿಯ ಪಯಣವನ್ನು ಪ್ರಾರಂಭಿಸುತ್ತಿದ್ದಾರೆ. ಇದು ಭಾರತೀಯರಿಗೂ ವಿಶೇಷ ಕ್ಷಣವಾಗಿದೆ ಎಂದೇ ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+