Meta: ಹೊಸ ಎಐ ಇಮೇಜ್ ಫೀಚರ್‌ಗೆ ವಿರೋಧ: ಆಕ್ರೋಶದ ಬೆನ್ನಲ್ಲೇ ವಾಪಸ್ ಹಿಂಪಡೆದ ಮೆಟಾ

ಜಾಗತಿಕ ತಂತ್ರಜ್ಞಾನ ದೈತ್ಯ 'ಮೆಟಾ' ಸಂಸ್ಥೆ ತನ್ನ ಇನ್‌ಸ್ಟಾಗ್ರಾಮ್ ಬಳಕೆದಾರರ ಸಾರ್ವಜನಿಕ ಪ್ರೊಫೈಲ್ ಡೇಟಾ ಬಳಸಿಕೊಂಡು ಕೃತಕ ಬುದ್ಧಿಮತ್ತೆ (ಎಐ) ಮೂಲಕ ನಕಲಿ ಚಿತ್ರಗಳನ್ನು ಸೃಷ್ಟಿಸಲು ಅವಕಾಶ ನೀಡಿದ್ದ ಹೊಸ ಫೀಚರ್ ಅನ್ನು ದಿಢೀರ್‌ ಸ್ಥಗಿತಗೊಳಿಸಿದೆ. ಈ ಫೀಚರ್‌ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಜಗತ್ತಿನಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಗೌಪ್ಯತೆಯ ರಕ್ಷಣೆಯ ಕುರಿತು ದೊಡ್ಡ ಮಟ್ಟದ ಚರ್ಚೆಗಳು ಆರಂಭವಾದ ಹಿನ್ನೆಲೆ ಮೆಟಾ ಈ ಮಹತ್ವದ ತೀರ್ಮಾನ ಕೈಗೊಂಡಿದೆ.

ಏನಿದು 'ಮ್ಯೂಸ್ ಇಮೇಜ್' ತಂತ್ರಜ್ಞಾನ?

ಇತ್ತೀಚೆಗೆ ಮೆಟಾ ಸಂಸ್ಥೆ ಇನ್‌ಸ್ಟಾಗ್ರಾಮ್ ಬಳಕೆದಾರರಿಗಾಗಿ 'ಮ್ಯೂಸ್ ಇಮೇಜ್' (Muse Image) ಹೆಸರಿನ ಹೊಸ ಎಐ ಇಮೇಜ್ ಜನರೇಷನ್ ಟೂಲ್ ಪರಿಚಯಿಸಿತ್ತು. ಇದು ಮೆಟಾ ಸಂಸ್ಥೆಯ ಎಐ ತಂತ್ರಜ್ಞಾನದ ಮೊದಲ ಹೆಜ್ಜೆಯಾಗಿತ್ತು. ಇದರಲ್ಲಿ ಮೆಟಾ ಎಐ ಚಾಟ್‌ಬಾಟ್ ಬಳಸುವ ಯಾವುದೇ ವ್ಯಕ್ತಿ, ಇನ್‌ಸ್ಟಾಗ್ರಾಮ್‌ನಲ್ಲಿ ಸಾರ್ವಜನಿಕವಾಗಿ ಲಭ್ಯವಿರುವ ಬೇರೆ ಬಳಕೆದಾರರ ಖಾತೆಗಳನ್ನು ಟ್ಯಾಗ್ ಮಾಡುವ ಮೂಲಕ, ಅವರ ಪ್ರೊಫೈಲ್‌ನಲ್ಲಿರುವ ಫೋಟೋ ಅಥವಾ ವಿಷಯಗಳನ್ನು ಆಧರಿಸಿ ಹೊಸದಾದ ಅಥವಾ ಮಾರ್ಪಡಿಸಿದ ಎಐ ಚಿತ್ರಗಳನ್ನು ಕೆಲವೇ ನಿಮಿಷಗಳಲ್ಲಿ ಸೃಷ್ಟಿಸಬಹುದಾಗಿತ್ತು.

Meta

ವಿರೋಧ ಏಕೆ?

ಈ ಫೀಚರ್ ಬಿಡುಗಡೆಯಾಗುತ್ತಿದ್ದಂತೆ ಇಂಟರ್ನೆಟ್ ಜಗತ್ತಿನಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಇದಕ್ಕೆ ಮುಖ್ಯ ಕಾರಣ ಇನ್‌ಸ್ಟಾಗ್ರಾಮ್ ತನ್ನೆಲ್ಲ ಸಾರ್ವಜನಿಕ ಖಾತೆದಾರರಿಗೆ ಈ ಆಯ್ಕೆಯನ್ನು ಸ್ವಯಂಚಾಲಿತವಾಗಿ ಸಕ್ರಿಯಗೊಳಿಸಿದ್ದು. ಒಬ್ಬ ಬಳಕೆದಾರನ ಅನುಮತಿ ಅಥವಾ ಕನಿಷ್ಠ ಜ್ಞಾನವೂ ಇಲ್ಲದೆ, ಅವರ ಮುಖಚಹರೆ ಹಾಗೂ ಫೋಟೋಗಳನ್ನು ಯಾರು ಬೇಕಾದರೂ ಎಐ ಮೂಲಕ ದುರ್ಬಳಕೆ ಮಾಡಿಕೊಳ್ಳುವ ಮುಕ್ತ ಅವಕಾಶ ಇದರಲ್ಲಿತ್ತು. ಇದು ವೈಯಕ್ತಿಕ ಗೌಪ್ಯತೆಯ ಸಂಪೂರ್ಣ ಉಲ್ಲಂಘನೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದರು.

ಹಾಲಿವುಡ್‌ನ ಪ್ರಮುಖ ಕಲಾ ಸಂಘಟನೆಯಾದ 'ಸಾಗ್-ಅಫ್ಟ್ರಾ' (Sag-Aftra), ಮೆಟಾದ ಈ ನೂತನ ಫೀಚರ್‌ ವಿರುದ್ಧ ತನ್ನ ಸದಸ್ಯರು ಹಾಗೂ ಇನ್‌ಸ್ಟಾಗ್ರಾಮ್ ಬಳಕೆದಾರರು ತಕ್ಷಣವೇ ಧ್ವನಿ ಎತ್ತುವಂತೆ ಕರೆ ನೀಡಿತ್ತು. ಸಾರ್ವಜನಿಕ ಭಾವನೆಗಳನ್ನು ಹಾಗೂ ಇದರಿಂದ ಎದುರಾಗಬಹುದಾದ ಗಂಭೀರ ಅಪಾಯಗಳನ್ನು ಅರಿಯುವಲ್ಲಿ ಮೆಟಾ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿತ್ತು. ಸದ್ಯ ಮೆಟಾ ಈ ಫೀಚರ್ ಹಿಂಪಡೆದಿರುವುದನ್ನು ಒಕ್ಕೂಟವು ದೊಡ್ಡ ಗೆಲುವು ಎಂದು ಕರೆದಿದೆ.

Meta: ವಾಟ್ಸಾಪ್ 'ಯೂಸರ್‌ನೇಮ್' ಫೀಚರ್ ಸುರಕ್ಷತೆ ಕೇಳಿದ ಕೇಂದ್ರ ಸರ್ಕಾರ: ಮೆಟಾಗೆ ನೋಟಿಸ್ ಜಾರಿ
Meta: ವಾಟ್ಸಾಪ್ 'ಯೂಸರ್‌ನೇಮ್' ಫೀಚರ್ ಸುರಕ್ಷತೆ ಕೇಳಿದ ಕೇಂದ್ರ ಸರ್ಕಾರ: ಮೆಟಾಗೆ ನೋಟಿಸ್ ಜಾರಿ

ಲಂಡನ್ ಮೂಲದ ಮಾನವ ಹಕ್ಕುಗಳ ಸಂಸ್ಥೆ ಪ್ರೈವೆಸಿ ಇಂಟರ್ನ್ಯಾಷನಲ್ ಈ ಕುರಿತು ಬಿಬಿಸಿಗೆ ಪ್ರತಿಕ್ರಿಯಿಸಿದ್ದು, ಎಐ ತಂತ್ರಜ್ಞಾನದ ಕಂಪನಿಗಳು ಸಾಮಾನ್ಯ ಜನರ ವೈಯಕ್ತಿಕ ಡೇಟಾ ಮತ್ತು ಫೋಟೋಗಳನ್ನು ಕೇವಲ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಕಚ್ಚಾ ವಸ್ತುವನ್ನಾಗಿ ನೋಡುತ್ತಿವೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಖಂಡಿಸಿದೆ.

ಮೆಟಾ ತಪ್ಪೊಪ್ಪಿಗೆ

ಪ್ರತಿರೋಧಕ್ಕೆ ಮಣಿದಿರುವ ಮೆಟಾ ಸಂಸ್ಥೆ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ. ಈ ಕುರಿತು ಅಧಿಕೃತವಾಗಿ ಪ್ರತಿಕ್ರಿಯಿಸಿರುವ ಮೆಟಾ, ಜನರಿಗೆ ಉಪಯುಕ್ತವಾದ ಫೀಚರ್‌ ನೀಡುವುದು ಮತ್ತು ಅವರ ಸಾರ್ವಜನಿಕ ಕಂಟೆಂಟ್‌ಗಳ ಮೇಲೆ ಅವರದೇ ಆದ ನಿಯಂತ್ರಣ ಇರುವಂತೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಆದರೆ ಜನರ ಪ್ರತಿಕ್ರಿಯೆಗಳು ನಮಗೆ ತಲುಪಿವೆ. ಈ ವಿಷಯದಲ್ಲಿ ನಾವು ಗುರಿ ತಪ್ಪಿದ್ದೇವೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ. ಹೀಗಾಗಿ ಈ ಫೀಚರ್ ಅನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.

ಮೆಟಾ ಸಂಸ್ಥೆಯು ಸದ್ಯಕ್ಕೆ ಈ 'ಮ್ಯೂಸ್ ಇಮೇಜ್' ಫೀಚರ್ ಅನ್ನು ಕೇವಲ ಇನ್‌ಸ್ಟಾಗ್ರಾಮ್‌ಗೆ ಮಾತ್ರ ಸೀಮಿತಗೊಳಿಸಿತ್ತಾದರೂ, ಭವಿಷ್ಯದಲ್ಲಿ ಇದನ್ನು ತನ್ನ ಇತರ ಪ್ರಮುಖ ಅಪ್ಲಿಕೇಶನ್‌ಗಳಾದ ವಾಟ್ಸಾಪ್ (WhatsApp), ಫೇಸ್‌ಬುಕ್‌ಗೆ (Facebook) ವಿಸ್ತರಿಸುವ ಯೋಜನೆಯನ್ನು ಹಾಕಿಕೊಂಡಿತ್ತು. ಇದರೊಂದಿಗೆ ಎಐ ವಿಡಿಯೋ ತಂತ್ರಜ್ಞಾನದ ಮೇಲೂ ಸಂಸ್ಥೆ ಕೆಲಸ ಮಾಡುತ್ತಿದೆ. ಸದ್ಯಕ್ಕೆ ಈ ವಿವಾದದ ಕುರಿತು ಹೆಚ್ಚಿನ ಮಾಹಿತಿ ನೀಡಲು ಮೆಟಾ ನಿರಾಕರಿಸಿದೆ. ತಂತ್ರಜ್ಞಾನದ ಹೆಸರಿನಲ್ಲಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆ ತಂದರೆ ಜಾಗತಿಕ ಮಟ್ಟದಲ್ಲಿ ಎಂತಹ ಪ್ರತಿರೋಧ ವ್ಯಕ್ತವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+