Get Updates
Get notified of breaking news, exclusive insights, and must-see stories!

Vijayapura City Constituency ; ಯತ್ನಾಳ್‌ಗೆ ಟಿಕೆಟ್ ತಪ್ಪಿಸಲು ಬಿಜೆಪಿಗರ ಪ್ರಯತ್ನ

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಬಸನಗೌಡ ಪಾಟೀಲ್ ಯತ್ನಾಳ್. ಆದರೆ ಅವರಿಗೆ ಟಿಕೆಟ್ ತಪ್ಪಿಸಲು ಬಿಜೆಪಿಯವರೇ ಪ್ರಯತ್ನ ನಡೆಸಿದ್ದಾರೆ ಎಂಬುದು ಸುದ್ದಿ.

ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದ ಗಮನ ಸೆಳೆದಿರುವ ಕ್ಷೇತ್ರ ವಿಜಯಪುರ ಜಿಲ್ಲೆಯ ವ್ಯಾಪ್ತಿಯ ವಿಜಯಪುರ ನಗರ ವಿಧಾನಸಭಾ ಕ್ಷೇತ್ರ. ಈ ಹಿಂದೆ ಕಾಂಗ್ರೆಸ್ ವಶದಲ್ಲಿದ್ದ ಕ್ಷೇತ್ರ ಈಗ ಬಿಜೆಪಿ ಕೈಯಲ್ಲಿ ಇದೆ. ಆದರೆ ಹಾಲಿ ಶಾಸಕರಿಗೆ ಟಿಕೆಟ್ ತಪ್ಪಿಸಲು ಬಿಜೆಪಿ ನಾಯಕರೇ ಪ್ರಯತ್ನ ಪಡುತ್ತಿದ್ದಾರೆ ಎಂಬುದು ಕುತೂಹಲದ ವಿಚಾರವಾಗಿದೆ.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರು ಬಸನಗೌಡ ಪಾಟೀಲ್ ಯತ್ನಾಳ್. ಕರ್ನಾಟಕ ಬಿಜೆಪಿ ಹಿಂದುತ್ವದ ಫೈರ್‌ ಬ್ರಾಂಡ್. ಯತ್ನಾಳ್ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸುವ ಮೂಲಕ ಹಲವರ ವಿರೋಧ ಕಟ್ಟಿಕೊಂಡಿದ್ದಾರೆ. ಆದರೆ ವಿಜಯನಗರ ಪಾಲಿಕೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಿಸಿಕೊಂಡು ಬಂದು, ಪಂಚಮಸಾಲಿ 2ಎ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು, ಹಿಂದುತ್ವ, ಅಭಿವೃದ್ಧಿ ಹೆಸರಿನಲ್ಲಿ ಮತ್ತೆ ಟಿಕೆಟ್ ಪಡೆದು ಗೆಲ್ಲುವ ಉತ್ಸಾಹದಲ್ಲಿದ್ದಾರೆ.

ರಾಜ್ಯ ರಾಜಕೀಯಕ್ಕೆ ಮರಳಲು ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಭಾರೀ ಪ್ರಯತ್ನ ನಡೆಸಿದರು. 2008, 2013ರ ಚುನಾವಣೆಯಲ್ಲಿ ಅವರ ಹೋರಾಟ ವ್ಯರ್ಥವಾಯಿತು. ಬಳಿಕ ವಿಧಾನ ಪರಿಷತ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿ ಪಕ್ಷೇತರರಾಗಿ ಕಣಕ್ಕಿಳಿದು, ಆಯ್ಕೆಯಾದರು. ಬಳಿಕ ಬಿಜೆಪಿ ನಾಯಕರ ವಿಶ್ವಾಸಗಳಿಸಿದರು.

2018ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಪಡೆದು 76308 ಮತಗಳನ್ನು ಪಡೆದು ಬಸನಗೌಡ ಪಾಟೀಲ್ ಯತ್ನಾಳ್ ಆಯ್ಕೆಯಾದರು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವರ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪಕ್ಷದ ರಾಜ್ಯ, ಕೇಂದ್ರ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟಿಕೆಟ್ ತಪ್ಪಿಸಲು ತೆರೆಮರೆಯ ಪ್ರಯತ್ನ

ಟಿಕೆಟ್ ತಪ್ಪಿಸಲು ತೆರೆಮರೆಯ ಪ್ರಯತ್ನ

ವಿಜಯಪುರ ನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಟಿಕೆಟ್ ತಪ್ಪಿಸಲು ತೆರೆಮರೆಯ ಪ್ರಯತ್ನ ನಡೆದಿದೆ ಎಂಬುದು ಸುದ್ದಿ. ಪಕ್ಷದ ಪ್ರಮುಖ ನಾಯಕರ ಮೇಲೆ ಸದಾ ವಾಗ್ದಾಳಿ ನಡೆಸುವ ಮೂಲಕ ಸರ್ಕಾರ ಮತ್ತು ಪಕ್ಷಕ್ಕೆ ಮುಜುಗರ ಉಂಟು ಮಾಡುವ ಯತ್ನಾಳ್‌ಗೆ ಟಿಕೆಟ್ ಕೊಡಬಾರದು ಎಂದು ಹೈಕಮಾಂಡ್ ಮಟ್ಟದ ತನಕ ಪ್ರಯತ್ನ ನಡೆಸಲಾಗುತ್ತಿದೆ ಎಂಬುದು ಸುದ್ದಿ.

ಯತ್ನಾಳ್‌ಗೆ ಟಿಕೆಟ್ ಕೊಡಬೇಕೆ?, ಕೊಟ್ಟರೆ ಆಗುವ ಲಾಭವೇನು?, ಟಿಕೆಟ್ ಕೊಡದಿದ್ದರೆ ಆಗುವ ನಷ್ಟವೇನು? ಎಂಬ ಲೆಕ್ಕಾಚಾರ ಹೈಕಮಾಂಡ್ ನಾಯಕರದ್ದು. ಟಿಕೆಟ್ ಕೊಟ್ಟು ಅವರನ್ನು ಸೋಲಿಸುವ ತಂತ್ರಗಾರಿಕೆ ಕೂಡಾ ನಡೆಯುತ್ತಿದೆ ಎಂಬ ಮಾತುಗಳಿವೆ. ಹೆಚ್ಚಿನ ವಿವರಕ್ಕೆ ಕೆಲವು ದಿನ ಕಾದರೆ ಸಾಕು.

ಬಿಜೆಪಿ ಟಿಕೆಟ್‌ ಯಾರಿಗೆ?

ಬಿಜೆಪಿ ಟಿಕೆಟ್‌ ಯಾರಿಗೆ?

ಬಸನಗೌಡ ಪಾಟೀಲ್ ಯತ್ನಾಳ್‌ ಬದಲು ವಿಜಯಪುರ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು?. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣ ಶೆಟ್ಟಿ, ಚಂದ್ರಶೇಖರ ಕವಟಗಿ, ಸುರೇಶ ಬಿರಾದಾರ, ರಾಜಶೇಖರ ಮಗಿಮಠ ಸೇರಿ ಹಲವರು ಆಕ್ಷಾಂಕ್ಷಿಗಳು. ಆದರೆ ಹೈಕಮಾಂಡ್ ಒಪ್ಪಿ ಯತ್ನಾಳ್‌ಗೆ ಟಿಕೆಟ್ ಕೈ ತಪ್ಪಬೇಕು ಅಷ್ಟೇ.

ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ವಿವಿಧ ನಾಯಕರ ವಿರುದ್ಧ ತಿರುಗಿ ಬಿದ್ದಿರುವ. ತಮ್ಮ ಹೇಳಿಕೆಗಳಿಂದ ಪಕ್ಷಕ್ಕೆ ಮುಜುಗರ ತರುವ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಟಿಕೆಟ್ ನಿರಾಕರಿಸುವುದು ಸಹ ಸುಲಭದ ಮಾತಲ್ಲ. ಆದರೆ ಮುಂದೆ ಏನಾಗಲಿದೆ? ಎಂಬುದೇ ಕುತೂಹಲವಾಗಿದೆ.

ಕಾಂಗ್ರೆಸ್‌ ಟಿಕೆಟ್‌ಗೆ 2 ಡಜನ್ ಆಕಾಂಕ್ಷಿಗಳು

ಕಾಂಗ್ರೆಸ್‌ ಟಿಕೆಟ್‌ಗೆ 2 ಡಜನ್ ಆಕಾಂಕ್ಷಿಗಳು

ಬಸನಗೌಡ ಪಾಟೀಲ್ ಯತ್ನಾಳ್ ಎದುರಾಳಿ ಯಾರು?. ವಿಜಯಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನೇರ ಎದುರಾಳಿಗಳು ಎಂಬುದು ಸತ್ಯ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅಧಿಕ. ಆದ್ದರಿಂದ ಕಾಂಗ್ರೆಸ್ ಟಿಕೆಟ್ ಮುಸ್ಲಿಂಮರಿಗೆ ಎನ್ನುವುದು ಲೆಕ್ಕಾಚಾರವಾಗಿದೆ.

ಈ ಬಾರಿ ಟಿಕೆಟ್‌ಗಾಗಿ 26 ಜನರು ಕೆಪಿಸಿಸಿಗೆ ಅರ್ಜಿ ಹಾಕಿದ್ದಾರೆ. ಕಳೆದ ಬಾರಿ ಸೋತಿದ್ದ ಅಬ್ದುಲ್ ಹಮೀದ್ ಮುಶ್ರೀಫ್, ಮಾಜಿ ಶಾಸಕ ಡಾ. ಮಕ್ಬೂಲ್ ಬಾಗವಾನ್, ಮಾಜಿ ಸಚಿವ ಶಿವಾನಂದ ಪಾಟೀಲ್ ಪುತ್ರಿ ಸಂಯುಕ್ತಾ ಪಾಟೀಲ್ ಅರ್ಜಿ ಹಾಕಿರುವ ಪ್ರಮುಖರು. ಹಲವು ಆಕಾಂಕ್ಷಿಗಳನ್ನು ಎದುರು ಹಾಕಿಕೊಂಡು ಕಾಂಗ್ರೆಸ್ ಟಿಕೆಟ್ ಹಂಚುವುದು ಸಹ ಸವಾಲಿನ ಕೆಲಸವೇ ಆಗಿದೆ.

ಜೆಡಿಎಸ್ ತಂತ್ರಗಾರಿಕೆ ಏನು?

ಜೆಡಿಎಸ್ ತಂತ್ರಗಾರಿಕೆ ಏನು?

2018ರ ಚುನಾವಣೆಯಲ್ಲಿ ಜೆಡಿಎಸ್‌ ಕ್ಷೇತ್ರದಲ್ಲಿ ಪಡೆದ ಮತಗಳು ಕೇವಲ 2083. ಕಾಂಗ್ರೆಸ್ ಟಿಕೆಟ್ ವಂಚಿತರು ಜೆಡಿಎಸ್ ಬಾಗಿಲು ತಟ್ಟಬಹುದು. ವಿಜಯಪುರ ಪಾಲಿಕೆ ಚುನಾವಣೆಯಲ್ಲಿ ಖಾತೆ ತೆರೆದಿರುವ ಎಐಎಂಐಎಂ ಸಹ ಕಾಂಗ್ರೆಸ್‌ ಟಿಕೆಟ್ ವಂಚಿತರನ್ನು ಸೆಳೆದು ಪಕ್ಷದ ಟಿಕೆಟ್ ಕೊಟ್ಟು ಕಣಕ್ಕಿಳಿಸುವ ಚಿಂತನೆಯಲ್ಲಿದೆ. ಎಎಪಿ ಸಹ ತನ್ನ ಅಭ್ಯರ್ಥಿ ಕಣಕ್ಕಿಳಿಸಬಹುದು.

ಕ್ಷೇತ್ರದಲ್ಲಿ ಲಿಂಗಾಯತ, ಮರಾಠ, ಕ್ಷತ್ರಿಯ, ಬ್ರಾಹ್ಮಣ, ಕುರುಬ, ಮುಸ್ಲಿಂ, ಎಸ್‌ಸಿ/ ಎಸ್‌ಟಿ ಮತಗಳು ನಿರ್ಣಾಯಕ. ಯಾವ ಪಕ್ಷದ ತಂತ್ರಗಾರಿಕೆ ಚುನಾವಣೆಯಲ್ಲಿ ಫಲ ಕೊಡದಲಿದೆ? ಎಂದು ಕಾದು ನೋಡಬೇಕಿದೆ.

ಮತದಾರರ ವಿವಿರಗಳು

ಮತದಾರರ ವಿವಿರಗಳು

ವಿಜಯಪುರ ನಗರ ಕ್ಷೇತ್ರದ ಒಟ್ಟು ಮತದಾರರು 2,64,714. 1,31,459 ಗಂಡು, 1,33,161 ಹೆಣ್ಣು, 94 ಇತರೆ.

2018ರ ಚುನಾವಣೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ 76,308 ಮತಗಳನ್ನು ಪಡೆದು ಗೆದ್ದಿದ್ದಾರೆ. ಕಾಂಗ್ರೆಸ್‌ನ ಅಬ್ದುಲ್ ಹಮೀದ್ ಮುಶ್ರೀಫ್ 69,895 ಮತ ಪಡೆದಿದ್ದರು. ಜೆಡಿಎಸ್‌ನ ಬೆಳ್ಳುಬ್ಬಿ ಸಂಗಪ್ಪ ಕಲ್ಲಪ್ಪ 2083 ಮತ ಪಡೆದಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+